ಹಾಸನ: ಪಾದಚಾರಿಗೆ ಡಿಕ್ಕಿ ಹೊಡೆದ ಕಾರು ಅಡಿಕೆ ತೋಟಕ್ಕೆ ನುಗ್ಗಿರುವ ಘಟನೆ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಹಿರಬೆಳಗುಲಿ ಬಳಿ ನಡೆದಿದೆ. ಅಪಘಾತದಲ್ಲಿ ಪಾದಚಾರಿ ವೃದ್ಧ ಸ್ಥಳದಲ್ಲೇ ದುರ್ಮರಣ ಹೊಂದಿದ್ದಾರೆ. ಹಿರೆಬೆಳಗುಲಿ ಗ್ರಾಮದ ರಾಮಸ್ವಾಮಿ(76) ಮೃತ ದುರ್ದೈವಿ. ವೃದ್ಧನನ್ನು ಕಳೆದುಕೊಂಡ ಆತನ ಕುಟುಂಬಸ್ಥರ ಆಕ್ರಂದರ ಮುಗಿಲುಮುಟ್ಟಿತು. ಅದರಲ್ಲೂ, ತಂದೆಯನ್ನು ಕಳೆದುಕೊಂಡ ಯೋಧ ಮಗನ ದುಃಖ ಹಾಗೂ ಕಣ್ಣೀರು ನೆರೆದವರ ಮನ ಕಲಕಿತು.
ಕಾರು ಹಾಸನದ ಕಡೆಯಿಂದ ವೇಗವಾಗಿ ಬರುವಾಗ ಅವಘಡ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ವಾಹನ ರಾಮಸ್ವಾಮಿಗೆ ಡಿಕ್ಕಿ ಹೊಡೆದು ಪಕ್ಕದಲ್ಲೇ ಇದ್ದ ಅಡಿಕೆ ತೋಟಕ್ಕೆ ನುಗ್ಗಿದೆ. ಹೊಳೆನರಸೀಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಅಡಿಕೆ ತೋಟಕ್ಕೆ ನುಗ್ಗಿದ ಕಾರು
ವೃದ್ಧ ತಂದೆಯ ಶವ ಕಂಡು ಬಿಕ್ಕಿ ಬಿಕ್ಕಿ ಅತ್ತ ಯೋಧ
ಯಾದಗಿರಿ: ವಿದ್ಯುತ್ ತಂತಿ ಸ್ಪರ್ಶಿಸಿ ಯುವಕ ಸಾವು ಗಾಳಿ ಸಹಿತ ಅಕಾಲಿಕ ಮಳೆಗೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ್ ತಾಂಡಾದಲ್ಲಿ ನಡೆದಿದೆ. ಚಾಮನಾಳ್ ತಾಂಡದ ರೆಡ್ಡಿ ರಾಠೋಡ್ ಮೃತ ಯವಕ. ಯುವಕ ಹೊಲದಲ್ಲಿ ಕೆಲಸ ಮುಗಿಸಿ ಮನೆಗೆ ಬರುತ್ತಿದ್ದಾಗ ದುರಂತ ನಡೆದಿದೆ. ಗೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಭವಿಸಿದೆ.
ಶಿವಮೊಗ್ಗದಲ್ಲಿ ರೌಡಿಶೀಟರ್ ದೀಪು ಅಲಿಯಾಸ್ ಡಿಂಗ್ ಮೇಲೆ ಫೈರಿಂಗ್ ಇತ್ತ, ಶಿವಮೊಗ್ಗ ನಗರದ ರೌಡಿಶೀಟರ್ ದೀಪು ಅಲಿಯಾಸ್ ಡಿಂಗ್ ಮೇಲೆ ಖಾಕಿ ಪಡೆಯಿಂದ ಫೈರಿಂಗ್ ನಡೆದಿದೆ. ತುಂಗಾ ನಗರ ಠಾಣೆ ಪೊಲೀಸರಿಂದ ಫೈರಿಂಗ್ ನಡೆದಿದೆ. ನಗರದ ಹೊರವಲಯದ ಅನುಪಿನಕಟ್ಟೆ ಸಮೀಪ ಫೈರಿಂಗ್ ನಡೆದಿದೆ. ದೀಪು ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಾಗ ಖಾಕಿ ಪಡೆ ಫೈರಿಂಗ್ ನಡೆಸಿದೆ. ಆರೋಪಿ ಮೇಲೆ ತುಂಗಾ ನಗರ ಠಾಣೆಯ CPI ದೀಪಕ್ ಫೈರಿಂಗ್ ನಡೆಸಿದ್ದಾರೆ.
ದೀಪು ವಿರುದ್ಧ ಸೆಕ್ಷನ್ 302, 307ರಡಿ ಕೇಸ್ ದಾಖಲಾಗಿತ್ತು. ಈತ ಮೆಂಟಲ್ ಸೀನ, ಮೋಟಿ ವೆಂಕಟೇಶ್ ಕೊಲೆ ಕೇಸ್ನಲ್ಲಿ ಭಾಗಿಯಾಗಿದ್ದ. ಇನ್ನು, ಖಾಕಿ ಫೈರಿಂಗ್ನಲ್ಲಿ ದೀಪು ಎಡಗಾಲಿಗೆ ಗಾಯಗಳಾಗಿದ್ದು ರೌಡಿಶೀಟರ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: BY Vijayendra ಬಸನಗೌಡ ಪಾಟೀಲ್ ಯತ್ನಾಳ್ಗೆ ನನ್ನ ಮೇಲೆ ಬಹಳ ಪ್ರೀತಿ -B.Y.ವಿಜಯೇಂದ್ರ ಟಾಂಗ್