ಮೇಕೆದಾಟು ಯೋಜನೆ ವಿವಾದ: ತಮಿಳುನಾಡಿನಲ್ಲಿ ಹೊಸ ಸರ್ಕಾರ ಬಂದಿದೆ; ಇದೆಲ್ಲಾ ರಾಜಕೀಯ ಎಂದ ಬಸವರಾಜ ಬೊಮ್ಮಾಯಿ

| Updated By: ganapathi bhat

Updated on: Jul 04, 2021 | 3:03 PM

ಅವರ ಪಾಲಿನ ನೀರಿಗೆ ಯಾವುದೇ ತೊಂದರೆ ಆಗೊಲ್ಲ, ಆದರೂ ಅವರು ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ. ಮಾರ್ಕಂಡೇಯ ವಿಷಯವಾಗಿ ಮೊದಲಿನಿಂದಲೂ ತಗಾದೆ ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಮೇಕೆದಾಟು ಯೋಜನೆ ವಿವಾದ: ತಮಿಳುನಾಡಿನಲ್ಲಿ ಹೊಸ ಸರ್ಕಾರ ಬಂದಿದೆ; ಇದೆಲ್ಲಾ ರಾಜಕೀಯ ಎಂದ ಬಸವರಾಜ ಬೊಮ್ಮಾಯಿ
ಬಸವರಾಜ ಬೊಮ್ಮಾಯಿ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ಮಾರ್ಕೆಂಡೇಯ ಡ್ಯಾಂ ಬಗ್ಗೆ ತಮಿಳುನಾಡು ತಗಾದೆ ವಿಚಾರಕ್ಕೆ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ತಮಿಳುನಾಡು ಹಿಂದಿನಿಂದಲೂ ಕಾವೇರಿ ವಿಚಾರವಾಗಿ, ಹಾಗೂ ಕಾವೇರಿ ಬೇಸಿನ್ ನೀರಿನ ವಿಚಾರವಾಗಿ ತಗಾದೆ ತೆಗೆಯುತ್ತಾ ಬಂದಿದೆ. ಟ್ರಿಬ್ಯೂನಲ್ ತೀರ್ಮಾನ ಆದ ಮೇಲೆ ಅವರಿಗೆ ಸ್ಪಷ್ಟವಾಗಿದೆ. ಮೇಕೆದಾಟು ನಮ್ಮ ವ್ಯಾಪ್ತಿಯಲ್ಲಿ ಮಾಡ್ತಿದ್ದೇವೆ. ಅವರ ಪಾಲಿನ ನೀರಿಗೆ ಯಾವುದೇ ತೊಂದರೆ ಆಗೊಲ್ಲ, ಆದರೂ ಅವರು ಸುಪ್ರೀಂಕೋರ್ಟ್​ಗೆ ಹೋಗಿದ್ದಾರೆ. ಮಾರ್ಕಂಡೇಯ ವಿಷಯವಾಗಿ ಮೊದಲಿನಿಂದಲೂ ತಗಾದೆ ತೆಗೆಯುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೆಲ್ಲ ರಾಜಕೀಯ. ಈಗ ಹೊಸ ಸರ್ಕಾರ ಬಂದಿದೆ. ಸಣ್ಣ ವಿಚಾರ ದೊಡ್ಡದು ಮಾಡ್ತಿದ್ದಾರೆ. ಕಾನೂನಾತ್ಮಕವಾಗಿ ನಾವು ಸರಿಯಾಗಿದ್ದೇವೆ. ನಾವು ಸುಪ್ರೀಂಕೋರ್ಟ್​ನಲ್ಲಿ ಹೋರಾಟ ಮಾಡ್ತಿದ್ದೇವೆ. ಮೇಕೆದಾಟು ವಿಚಾರವಾಗಿ ಸಿಎಂ ಪತ್ರ ಬರೆದಿದ್ದಾರೆ. ತಮಿಳುನಾಡು ಸಿಎಂ ಇದಕ್ಕೆ ಸ್ಪಂದಿಸಬೇಕು. ಮೇಕೆದಾಟು ಯೋಜನೆಯಿಂದ ಇಬ್ಬರಿಗೂ ಅನುಕೂಲವಾಗುತ್ತದೆ. ನಮಗೆ ಕುಡಿಯುವ ನೀರು ಸಿಗುತ್ತೆ, ಮಳೆ ಕಡಿಮೆಯಾದಾಗ ಅವರ ಪಾಲಿನ ನೀರನ್ನ ಕೊಡಲು ಸಾದ್ಯವಾಗುತ್ತೆ. ಎರಡು ರಾಜ್ಯಕ್ಕೆ ಅನುಕೂಲ ಆಗುತ್ತೆ ಎಂದು ಗೊತ್ತಿದ್ರು ಕೂಡ ಅವರು ಸುಪ್ರೀಂ ಕೋರ್ಟ್ ನಲ್ಲಿ ಅಬ್ಜೆಕ್ಷನ್ ಹಾಕಿದ್ದಾರೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.

ಇದೇ ವೇಳೆ, ಹದಿನೈದನೇ ಹಣಕಾಸಿನ ಶಿಫಾರಸ್ಸಿನ ಪ್ರಕಾರ ರಾಜ್ಯಕ್ಕೆ 5500 ಕೋಟಿ ಕೊಡುವಲ್ಲಿ ಹಣಕಾಸು ಸಚಿವರು ತಡೆ ಹಿಡಿದಿದ್ದಾರೆ ಎಂಬ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. 15 ನೇ ಹಣಕಾಸಿನ ಶಿಫಾರಸ್ಸಿನ ಪ್ರಕಾರ ರಾಜ್ಯಕ್ಕೆ ಹಣ ಬರಬೇಕು ನಿಜ. ಆದರೆ ಯುಪಿಎ ಸರ್ಕಾರದಲ್ಲಿ ಆದ ಎಲ್ಲಾ ಶಿಫಾರಸ್ಸಿನ ಪ್ರಕಾರ ಅವರು ಅನುಷ್ಠಾನ ಮಾಡಿಲ್ಲ. ರಾಜ್ಯಕ್ಕೆ ಬರಬೇಕಾದ ಹಣ ಕೊಡಬೇಕೆಂದು ಕೇಂದ್ರಕ್ಕೆ ಸಿಎಂ ಪತ್ರ ಬರೆದು ಒತ್ತಾಯ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ದೆಹಲಿಗೆ ಹೋಗಿ ರಾಜ್ಯದ ಹಕ್ಕನ್ನು ಪಡೆಯುವ ಕೆಲಸ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಪೆಟ್ರೋಲ್, ಡೀಸೆಲ್ ಮೇಲಿನ ಸೆಸ್ ರಾಜ್ಯವೇ ಕಡಿತಗೊಳಿಸಲಿ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆ ವಿಚಾರವಾಗಿ ಬೊಮ್ಮಾಯಿ ಮಾತನಾಡಿದ್ದಾರೆ. ಸೆಸ್ ಎರಡು ಕಡೆ ಇದೆ, ಇದು ಇಡೀ ದೇಶದ ವಿಚಾರ. ಫೆಡರಲ್ ವ್ಯವಸ್ಥೆಯಲ್ಲಿ ಎರಡು ಕಡೆ ಕೂತು ಚರ್ಚೆ ಮಾಡಿ ತೀರ್ಮಾನ ಮಾಡಬೇಕಾಗತ್ತೆ. ಸಾಮಾನ್ಯ ಜನರ ಮೇಲಿನ ಹೊರೆ ಕಡಿಮೆ ಮಾಡುವುದಕ್ಕೆ ಎಲ್ಲರೂ ಒಗ್ಗಟ್ಟಿನಿಂದ ತೀರ್ಮಾನ ಮಾಡುವುದು ಒಳ್ಳೆಯದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಮೇಕೆದಾಟು ಯೋಜನೆಗೆ ಅಡ್ಡಿ ಬೇಡ; ತಮಿಳುನಾಡು ಸಿಎಂ ಸ್ಟಾಲಿನ್​ಗೆ ಪತ್ರ ಬರೆದ ಮುಖ್ಯಮಂತ್ರಿ ಯಡಿಯೂರಪ್ಪ

ಮೇಕೆದಾಟು ಯೋಜನೆ; ರಾಷ್ಟ್ರೀಯ ಹಸಿರು ಪೀಠದಿಂದ ರಾಜ್ಯದ ಪರ ಆದೇಶ