ಪತ್ನಿಯನ್ನು ಕೊಲೆ ಮಾಡಿ ಸ್ಟ್ರೋಕ್ ಎಂದು ಬಿಂಬಿಸಿ ತಪ್ಪಿಸಿಕೊಳ್ಳುಲು ಯತ್ನಿಸಿದ ಪತಿ ಅರೆಸ್ಟ್
ಜೂ.29ರಂದು ಪತಿ ಅಜಿತ್, ಸಾನಿಯಾ ಮಧ್ಯೆ ಜಗಳ ನಡೆದಿತ್ತು. ಜಗಳದ ವೇಳೆ ಅಜಿತ್ ತನ್ನ ಪತ್ನಿ ತಲೆಗೆ ಬಲವಾಗಿ ಹೊಡೆದಿದ್ದ. ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸ್ಟ್ರೋಕ್ ಎಂದಿದ್ದ. ಸಾನಿಯಾ ಅಂತ್ಯಕ್ರಿಯೆಗೆ ಬಂದಿದ್ದ ತಾಯಿಗೆ ಈ ಬಗ್ಗೆ ಶಂಕೆ ವ್ಯಕ್ತವಾಗಿತ್ತು.
ಬೆಂಗಳೂರು: ಪತ್ನಿ ಹತ್ಯೆಗೈದು ಸ್ಟ್ರೋಕ್ ಎಂದಿದ್ದ ಪತಿ ನಾಟಕ ಬಯಲಾಗಿದೆ. ಬೆಂಗಳೂರಿನ ಬಿಟಿಎಂ ಲೇಔಟ್ 2ನೇ ಹಂತದಲ್ಲಿ ಜೂನ್ 29ರಂದು ಪತ್ನಿ ಸಾನಿಯಾ ಮೇಲೆ ಹಲ್ಲೆ ಮಾಡಿ ಆಕೆಯನ್ನು ಕೊಂದು ಬಳಿಕ ಸ್ಟ್ರೋಕ್ ಎಂದು ಬಿಂಬಿಸಿದ್ದ ಪತಿಯ ನಾಟಕ ಬಯಲಾಗಿದೆ. ಗೃಹಿಣಿ ಮೃತಪಟ್ಟ ಬಳಿಕ ಸಾವಿನ ರಹಸ್ಯ ಬಯಲಾಗಿದೆ.
ಜೂ.29ರಂದು ಪತಿ ಅಜಿತ್, ಸಾನಿಯಾ ಮಧ್ಯೆ ಜಗಳ ನಡೆದಿತ್ತು. ಜಗಳದ ವೇಳೆ ಅಜಿತ್ ತನ್ನ ಪತ್ನಿ ತಲೆಗೆ ಬಲವಾಗಿ ಹೊಡೆದಿದ್ದ. ಬಳಿಕ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದು ಸ್ಟ್ರೋಕ್ ಎಂದಿದ್ದ. ಸಾನಿಯಾ ಅಂತ್ಯಕ್ರಿಯೆಗೆ ಬಂದಿದ್ದ ತಾಯಿಗೆ ಈ ಬಗ್ಗೆ ಶಂಕೆ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮೈಕೋಲೇಔಟ್ ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದ್ದರು. ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯಾಗಿದ್ದಾಗಿ ಮಾಹಿತಿ ಸಿಕ್ಕಿದೆ. ಬಳಿಕ ಪತಿ ಅಜಿತ್ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೃತ್ಯ ನಡೆದಿರುವುದು ಬಯಲಾಗಿದೆ.
ಆಟೋ ಚಾಲಕ ಅಜಿತ್ ಮತ್ತು ಸಾನಿಯಾ ಪ್ರೀತಿಸಿ ಮದುವೆಯಾಗಿದ್ದರು. ಪತ್ನಿ ಸಾನಿಯಾ ಹೆಚ್ಚಾಗಿ ಹೊರಗೆ ಸುತ್ತಾಡುತ್ತಿದ್ದ ಹಿನ್ನೆಲೆಯಲ್ಲಿ ಮನೆಯಿಂದ ಹೊರಗಡೆ ಹೋಗಿ ಹೆಚ್ಚಾಗಿ ಸುತ್ತಾಡದಂತೆ ಸೂಚಿಸಿದ್ದ. ಇದರ ನಡುವೆ ಇಬ್ಬರಿಗೂ ಮದ್ಯ ಸೇವನೆ ಅಭ್ಯಾಸ ಇತ್ತು. ಹೊರಗೆ ಸುತ್ತಾಟ ವಿಚಾರಕ್ಕೆ ಪತಿ, ಪತ್ನಿ ನಡುವೆ ಜೂನ್ 29ರಂದು ಜಗಳ ನಡೆದಿದೆ. ಈ ವೇಳೆ ಜಗಳ ತಾರಕಕ್ಕೇರಿ ಪತ್ನಿ ಮೇಲೆ ಹಲ್ಲೆ ನಡೆಸಿದ್ದಾನೆ. ಬಳಿಕ ಸ್ಟ್ರೋಕ್ ಎಂದು ಬಿಂಬಿಸಿ ತಪ್ಪಿಸಿಕೊಳ್ಳುವ ಯತ್ನ ಮಾಡಿದ್ದಾನೆ. ಸದ್ಯ ಮೈಕೋಲೇಔಟ್ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.