ಸಿಟಿ ರವಿ ಪ್ರಕರಣ ಮುಗಿದ ಅಧ್ಯಾಯ, ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರ ಹಸ್ತಕ್ಷೇಪ ಸಲ್ಲ: ಹೊರಟ್ಟಿ

ಬೆಳಗಾವಿ ಅಧಿವೇಶನದ ವೇಳೆ ಬಿಜೆಪಿ ಎಂಎಲ್​ಸಿ ಸಿಟಿ ರವಿ ಹಾಗೂ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ನಡುವೆ ನಡೆದಿದೆ ಎನ್ನಲಾದ ವಾಕ್ಸಮರ ವಿಚಾರದಲ್ಲಿ ಪೊಲೀಸರ ಹಸ್ತಕ್ಷೇಪ ಸ್ವೀಕಾರಾರ್ಹವಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದ್ದಾರೆ. ಅಲ್ಲದೆ, ಘಟನೆ ಸಂಬಂಧ ದೂರು ಕೂಡ ಸಲ್ಲಿಕೆಯಾಗಿಲ್ಲ. ದೂರು ಸಲ್ಲಿಕೆಯಾದರೆ ಆ ಬಗ್ಗೆ ಗಮನಹರಿಸುತ್ತೇವೆ ಎಂದದಿದ್ದಾರೆ.

ಸಿಟಿ ರವಿ ಪ್ರಕರಣ ಮುಗಿದ ಅಧ್ಯಾಯ, ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರ ಹಸ್ತಕ್ಷೇಪ ಸಲ್ಲ: ಹೊರಟ್ಟಿ
ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ
Follow us
Anil Kalkere
| Updated By: Ganapathi Sharma

Updated on:Dec 23, 2024 | 11:32 AM

ಬೆಂಗಳೂರು, ಡಿಸೆಂಬರ್ 23: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ಎಂಎಲ್​ಸಿ ಸಿಟಿ ರವಿ ಅವಾಚ್ಯ ಶಬ್ದ ಬಳಸಿ ನಿಂದಿಸಿದ್ದಾರೆ ಎಂಬ ಆರೋಪ ಸಂಬಂಧ ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಪ್ರತಿಕ್ರಿಯಿಸಿದ್ದು, ಅದು ಮುಗಿದುಹೋದ ಅಧ್ಯಾಯ ಎಂದಿದ್ದಾರೆ. ಸದನದಲ್ಲಿ ನಡೆದಿದೆ ಎನ್ನಲಾದ ಘಟನೆ ಬಗ್ಗೆ ಕೂಲಂಕುಷವಾಗಿ ಚರ್ಚೆ ಮಾಡಿದ್ದೇವೆ. ಸದನದವನ್ನು ಅನಿರ್ದಿಷ್ಟವಾಧಿಗೆ‌ ಮುಂದೂಡಿಕೆ ಬಳಿಕ ಸಿಟಿ ರವಿ ಬಂಧನ ಆಗಿತ್ತು. ಸದ್ಯ, ಎರಡೂ ಕಡೆಯಿಂದ ನಮಗೆ ಯಾವುದೇ ದೂರು ಬಂದಿಲ್ಲ. ಹಕ್ಕುಚ್ಯುತಿ ಆಗಿದೆ ಅಂತ ದೂರು ಕೊಟ್ಟರೆ ನಂತರ ಕ್ರಮ ಕೈಗೊಳ್ಳುತ್ತೇವೆ ಎಂದರು.

ಸದನದ ಒಳಗೆ ನಡೆದ ಘಟನೆ ಬಗ್ಗೆ ಪೊಲೀಸರು ಹಸ್ತಕ್ಷೇಪ ಮಾಡಬಾರದು. ಅದು ಅವರ ಅಧಿಕಾರ ಮತ್ತು ಹಕ್ಕು ಎರಡೂ ಇಲ್ಲ. ಎಫ್​ಐಆರ್​​ ಆಗಿದೆ, ನಮ್ಮದೇ ಮೂಲಗಳ ಪ್ರಕಾರ ಚರ್ಚೆ ಮಾಡುತ್ತೇವೆ. ಆದರೆ ಪೊಲೀಸರು ಒಳಗೆ ಬಂದಿಲ್ಲ. ನಮ್ಮಲ್ಲಿ ವೀಡಿಯೋ, ಆಡಿಯೋ ಇದ್ದರೆ ಮಾತ್ರ ಪರಿಗಣನೆ ಮಾಡುತ್ತೇವೆ. ಬೇರೆ ಯಾರಾದರೂ ಕಳುಹಿಸಿದರೆ ಪರಿಶೀಲನೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (ಎಫ್​ಎಸ್​​ಎಲ್) ಕಳುಹಿಸುತ್ತೇವೆ. ಸದನ ಮುಗಿದ ಮೇಲೆ ಯಾವುದೇ ವೀಡಿಯೋ ಚಿತ್ರೀಕರಣ ಆಗಿಲ್ಲ ಎಂದು ಹೊರಟ್ಟಿ ಹೇಳಿದರು.

ಸಿಟಿ ವಿ ಮೇಲೆ ಹಲ್ಲೆ ಯತ್ನ: 10 ಮಂದಿ ವಿರುದ್ಧ ಎಫ್​ಐಆರ್

ಸುವರ್ಣ ವಿಧಾನ ಸೌಧದಲ್ಲಿ ಎಂಎಲ್​ಸಿ ಸಿಟಿ ರವಿ ಮೇಲೆ ಹಲ್ಲೆಗೆ ಯತ್ನ ಪ್ರಕರಣ ಸಂಬಂಧ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಠಾಣೆಯಲ್ಲಿ 10 ಜನ ಅಪರಿಚಿತರ ವಿರುದ್ಧ ಎಫ್​ಐಆರ್ ದಾಖಲಿಸಲಾಗಿದೆ. ಸೆಕ್ರೆಟರಿ ಕಚೇರಿಯಿಂದ ಕಮಿಷನರ್ ಕಚೇರಿಗೆ ದೂರಿನ ಪತ್ರ ಸಲ್ಲಿಕೆಯಾಗಿತ್ತು. ಎಂಎಲ್​ಸಿ ಡಿಎಸ್.ಅರುಣ್, ಎಸ್​ವಿ ಸಂಕನೂರ, ಕಿಶೋರ್ ಬಿಆರ್ ಬೆಂಗಳೂರಿನ ಸೆಕ್ರೆಟರಿ ಕಚೇರಿಗೆ ದೂರು ಸಲ್ಲಿಸಿದ್ದರು. ಅಲ್ಲಿಂದ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಪತ್ರ ರವಾನೆಯಾಗಿತ್ತು. ಅದರಂತೆ, ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಇದನ್ನೂ ಓದಿ: ಸಿಟಿ ರವಿಯನ್ನ ಫೇಕ್​ ಎನ್​ಕೌಂಟರ್ ಮಾಡುವ ವಿಚಾರ ಪೊಲೀಸರಿಗಿತ್ತು ಅನಿಸುತ್ತೆ: ಪ್ರಲ್ಹಾದ್ ಜೋಶಿ ಆರೋಪ

ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಐಪಿಸಿ ಸೆಕ್ಷನ್ 189(2), 191(2), 126(2), 352, 351(4) ಕಲಂ ಹಾಗೂ 190ರ ಅಡಿ ದೂರು ಎಫ್​ಐಆರ್ ದಾಖಲಿಸಲಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:29 am, Mon, 23 December 24

ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ನಿಜಕ್ಕೂ ಎಲಿಮಿನೇಟ್ ಆದ್ರಾ ತ್ರಿವಿಕ್ರಂ?; ಅಭಿಮಾನಿಗಳಿಗೆ ಬಿಗ್ ಶಾಕ್
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
ಅಯ್ಯಪ್ಪ ಮಾಲೆ ಧರಿಸಿದ ಬಳಿಕ ಈ ತಪ್ಪುಗಳನ್ನು ಮಾಡಲೇಬಾರದು
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
Daily horoscope: ಸೋಮವಾರದ ದಿನ ಭವಿಷ್ಯ ತಿಳಿಯಿರಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ನೆಲಮಂಗಲ ಅಪಘಾತ: ದುರಂತಕ್ಕೂ ಮುನ್ನ ಚಂದ್ರಮ್ ಕೊನೆಯ ದೃಶ್ಯ ಇಲ್ಲಿದೆ ನೋಡಿ
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ತಮ್ಮ ರಾಜಕೀಯ ವೈರಿ ಚಲುವರಾಯಸ್ವಾಮಿ ಕೆಲಸವನ್ನು ಶ್ಲಾಘಿಸಿದ ಕುಮಾರಣ್ಣ..!
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?