ಬಸವ ಸಮಿತಿ ವತಿಯಿಂದ ಪ್ರಭಾಕರ್ ಕೋರೆಗೆ ಕಾಯಕ ಪ್ರಶಸ್ತಿ ಪ್ರದಾನ

| Updated By: ವಿವೇಕ ಬಿರಾದಾರ

Updated on: May 10, 2024 | 3:04 PM

ನಮ್ಮ ಸರ್ಕಾರ ಬಸವ ಜಯಂತಿಯನ್ನ ಆಚರಿಸುತ್ತಿದೆ. ಬಸವಣ್ಣನವರ ಹಾದಿಯಲ್ಲೇ ನಮ್ಮ ಸರ್ಕಾರ ನಡೆಯುತ್ತಿದೆ. ಬಸವಣ್ಣ ಇರುವ ಕಡೆ ಭಯವಿಲ್ಲ ಹಾಗೂ ಹಸಿವಿಲ್ಲ. ಬಸವಣ್ಣ ಎಂದರೆ ಬೆಳಕು ಹಾಗೂ ಬದುಕು. ಬಸವಣ್ಣನವರು ಯಾವ ತತ್ವ ಸಿದ್ಧಾಂತವನ್ನು ಕೊಟ್ಟು ಹೋಗಿದ್ದಾರೆ ಅದನ್ನು ಪಾಲಿಸಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್​ ಹೇಳಿದರು.

ಬಸವ ಸಮಿತಿ ವತಿಯಿಂದ ಪ್ರಭಾಕರ್ ಕೋರೆಗೆ ಕಾಯಕ ಪ್ರಶಸ್ತಿ ಪ್ರದಾನ
ವಿಶ್ವ ಬಸವ ಜಯಂತಿ ಕಾರ್ಯಕ್ರಮ
Follow us on

ಬೆಂಗಳೂರು, ಮೇ 10: ಜಗಜ್ಯೋತಿ ಬಸವೇಶ್ವರ ಜಯಂತಿ (Basaveshwar Jayanti) ಹಿನ್ನೆಲೆಯಲ್ಲಿ ಬಸವ ಪುತ್ಥಳಿಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪುಷ್ಪ ನಮನ ಸಲ್ಲಿಸಿದರು. ಬಳಿಕ ಚಾಲುಕ್ಯ ಸರ್ಕಲ್ ಸಮೀಪವಿರುವ ಅನುಭವ ಮಂಟಪದಲ್ಲಿ ಬಸವ ಸಮಿತಿ ವತಿಯಿಂದ ನಡೆದ ವಿಶ್ವ ಬಸವ ಜಯಂತಿ 2024 ಆಚರಣೆ ಸಭಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ರಾಜ್ಯಸಭಾ ಸದಸ್ಯ​ ಪ್ರಭಾಕರ್ ಕೋರೆ (Prabhakar Kore) ಅವರಿಗೆ ಕಾಯಕ ಪ್ರಶಸ್ತಿ ಪ್ರದಾನ ಮಾಡಿದರು.

ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್​, ನಾಡಿನ ಜನತೆಗೆ ಬಸವೇಶ್ವರ್ ಜಯಂತಿಯ ಶುಭಾಶಯಗಳು. ಪ್ರಭಾಕರ್ ಕೋರೆಯವರಿಗೆ ಸಮಿತಿ ಪ್ರಶಸ್ತಿ ನೀಡಿರುವುದು ಖುಷಿ ನೀಡಿದೆ. ಜಗತ್ತಿನಾದ್ಯಂತ ಜಸವ ಜಯಂತಿ ಆಚರಣೆ ಮಾಡಲಾಗುತ್ತಿದೆ. ಇದು ಭಾಗ್ಯ. ಬಸವ ಸಮಿತಿ‌ ಬಸವಣ್ಣನವರ ಆಚಾರ, ವಿಚಾರವನ್ನು ಪರಿಚಯ ಮಾಡುತ್ತಿದೆ. ಬಸವಣ್ಣನವರು ತತ್ವ ದೇಶದಾದ್ಯಂತ ಪ್ರಚಲಿತದಲ್ಲಿವೆ. ಶಾಲೆಯಲ್ಲಿ ಬಸವಣ್ಣನವರ ಬಗ್ಗೆ ಹೆಚ್ಚಾಗಿ ತಿಳಿದುಕೊಳಲು ಆಗಲಿಲ್ಲ. ಹೇಳಿ ಕೊಡುವವರು ಯಾರೂ ಇರಲಿಲ್ಲ ಎಂದರು.

ನಮ್ಮ ಸರ್ಕಾರ ಬಸವ ಜಯಂತಿಯನ್ನ ಆಚರಿಸುತ್ತಿದೆ. ಬಸವಣ್ಣನವರ ಹಾದಿಯಲ್ಲೇ ನಮ್ಮ ಸರ್ಕಾರ ನಡೆಯುತ್ತಿದೆ. ಬಸವಣ್ಣ ಇರುವ ಕಡೆ ಭಯವಿಲ್ಲ ಹಾಗೂ ಹಸಿವಿಲ್ಲ. ಬಸವಣ್ಣ ಎಂದರೆ ಬೆಳಕು ಹಾಗೂ ಬದುಕು. ಬಸವಣ್ಣನವರು ಯಾವ ತತ್ವ ಸಿದ್ಧಾಂತವನ್ನು ಕೊಟ್ಟು ಹೋಗಿದ್ದಾರೆ ಅದನ್ನು ಪಾಲಿಸಬೇಕು. ಯಾರೆ ಪ್ರಧಾನಿಯಾದರೂ ಬಸವಣ್ಣನವರು ನುಡಿಮುತ್ತುಗಳನ್ನು ಬದಲಿಸಲು ಹೋಗುವುದಿಲ್ಲ. ಅನ್ನ ಭಾಗ್ಯ, ಕ್ಷೀರ ಭಾಗ್ಯ ಎಲ್ಲ ನೀಡಿದ್ದೇವೆ. ಬಸವನ ಬಾಗೇವಾಡಿಯಲ್ಲಿ ಪ್ರಾಧಿಕಾರ ಮಾಡಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಕಾಯಕ ತತ್ವವನ್ನು ಸಾರಿದ ವಿಶ್ವಗುರು ಬಸವಣ್ಣ

ಪ್ರಜಾಪ್ರಭುತ್ವವೇ ಅಪಾಯಕ್ಕೆ ತಲುಪಿದೆ. ಒಬ್ಬ ರಾಜಕಾರಣಿ ಬೆಳೆಯಬೇಕಾದರೆ ತುಂಬಾ ಪರಿಶ್ರಮ ಇರುತ್ತೆ. ಜಾತಿ, ಧರ್ಮ ಯಾವುದಾದರೂ ತತ್ವ ಒಂದೇ, ದೇವನೊಬ್ಬ ನಾಮ ಹಲವು. ಬಸವಣ್ಣನವರ ತತ್ವದ ನಾಡು ನಡೆಯುತ್ತಿದೆ. ಮೊದಲ ಸಂಸತ್ತನನ್ನು ಜಾರಿಗೆ ತಂದವರು ಬಸವಣ್ಣನವರು. ಬಸವಣ್ಣನವ ಸಮ ಬಾಳು, ಸಮ ಪಾಲು ಎಂಬ ತತ್ವದಲ್ಲಿ ಸರ್ಕಾರ ನಡೆಯುತ್ತಿದೆ. ಅಕ್ಷರ ದಾಸೋಹ, ಅನ್ನ ದಾಸೋಹದಂತಹ ನ್ಯಾಯಬದ್ಧ ಕಾರ್ಯಕ್ರಮಗಳು ಸರ್ಕಾರದಲ್ಲಿ ನಡೆಯುತ್ತಿವೆ. ಕಾಂಗ್ರೆಸ್ ಸರ್ಕಾರ, ಸರ್ಕಾರಿ ಕಚೇರಿಗಳಲ್ಲಿ ಬಸವಣ್ಣನ ಪೋಟೋ ಹಾಕುವಂತೆ ಆದೇಶ ಮಾಡಿದೆ. ಬಸವಣ್ಣನವರನ್ನು ಸಾಂಸ್ಕೃತಿಕ ನಾಯಕ ‌ಎಂದು ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್​ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಈಶ್ವರ್ ಖಂಡ್ರೆ, ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

ರಾಜ್ಯದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ