ಏರ್ ಫೋರ್ಸ್​ನಿಂದ 100 ಕೋವಿಡ್ ಬೆಡ್ ಒದಗಿಸಲಾಗಿದೆ, ಆದರೆ ಅದನ್ನೇಕೆ ಬಳಸಿಲ್ಲ; ಬಿಬಿಎಂಪಿಗೆ ಹೈಕೋರ್ಟ್ ತರಾಟೆ

|

Updated on: May 12, 2021 | 5:24 PM

ಬೆಂಗಳೂರು: ಭಾರತೀಯ ವಾಯುಪಡೆಯು 100 ಕೋವಿಡ್ ಬೆಡ್​ಗಳನ್ನು ಒದಗಿಸಲಾಗಿದೆ. ಆದರೆ ಅದನ್ನು ಬಳಸಿಲ್ಲ ಯಾಕೆ ಎಂದು ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಏರ್​ಫೋರ್ಸ್ ಬೆಡ್​ಗಳು, ವೈದ್ಯರು, ಸಿಬ್ಬಂದಿಯನ್ನೂ ನೀಡಿದೆ. ಆದರೆ ಅದನ್ನ ಬಳಸಲು ಬಿಬಿಎಂಪಿ ವಿಫಲವಾಗಿದೆ. ಯಾಕೆ ಹೀಗೆ? ವಿವರಣೆ ನೀಡಿ ಎಂದು ಬಿಬಿಎಂಪಿ ವಕೀಲರಿಗೆ ಹೈಕೋರ್ಟ್ ತಾಕೀತು ಮಾಡಿದೆ. ಕೊರೊನಾ ಸಂಕಷ್ಟ ಕಾಲದಲ್ಲಿ ಸಮಪರ್ಕವಾಗಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಆದರೆ ಏರ್​ಫೋರ್ಸ್ ಮುಂದೆ ಬಂದು ಸಾಕಷ್ಟು ಸೌಕರ್ಯಗಳನ್ನು ಒದಗಿಸಿದೆ. ಆದರೆ ಈವರೆಗೂ ಬಿಬಿಎಂಪಿ ಇದನ್ನು ಬಳಸಿಕೊಂಡಿಲ್ಲ […]

ಏರ್ ಫೋರ್ಸ್​ನಿಂದ 100 ಕೋವಿಡ್ ಬೆಡ್ ಒದಗಿಸಲಾಗಿದೆ, ಆದರೆ ಅದನ್ನೇಕೆ ಬಳಸಿಲ್ಲ; ಬಿಬಿಎಂಪಿಗೆ ಹೈಕೋರ್ಟ್ ತರಾಟೆ
ಕರ್ನಾಟಕ ಹೈಕೋರ್ಟ್
Follow us on

ಬೆಂಗಳೂರು: ಭಾರತೀಯ ವಾಯುಪಡೆಯು 100 ಕೋವಿಡ್ ಬೆಡ್​ಗಳನ್ನು ಒದಗಿಸಲಾಗಿದೆ. ಆದರೆ ಅದನ್ನು ಬಳಸಿಲ್ಲ ಯಾಕೆ ಎಂದು ಬಿಬಿಎಂಪಿಯನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಏರ್​ಫೋರ್ಸ್ ಬೆಡ್​ಗಳು, ವೈದ್ಯರು, ಸಿಬ್ಬಂದಿಯನ್ನೂ ನೀಡಿದೆ. ಆದರೆ ಅದನ್ನ ಬಳಸಲು ಬಿಬಿಎಂಪಿ ವಿಫಲವಾಗಿದೆ. ಯಾಕೆ ಹೀಗೆ? ವಿವರಣೆ ನೀಡಿ ಎಂದು ಬಿಬಿಎಂಪಿ ವಕೀಲರಿಗೆ ಹೈಕೋರ್ಟ್ ತಾಕೀತು ಮಾಡಿದೆ.

ಕೊರೊನಾ ಸಂಕಷ್ಟ ಕಾಲದಲ್ಲಿ ಸಮಪರ್ಕವಾಗಿ ವೈದ್ಯಕೀಯ ಸೌಲಭ್ಯ ಸಿಗುತ್ತಿಲ್ಲ. ಆದರೆ ಏರ್​ಫೋರ್ಸ್ ಮುಂದೆ ಬಂದು ಸಾಕಷ್ಟು ಸೌಕರ್ಯಗಳನ್ನು ಒದಗಿಸಿದೆ. ಆದರೆ ಈವರೆಗೂ ಬಿಬಿಎಂಪಿ ಇದನ್ನು ಬಳಸಿಕೊಂಡಿಲ್ಲ ಎಂದು ಕೇಂದ್ರ ಸರ್ಕಾರದ ಪರ ವಕೀಲ ಎಂ.ಎನ್.ಕುಮಾರ್ ಹೇಳಿದ್ದಾರೆ. ಇದನ್ನು ಆಲಿಸಿದ ಹೈಕೋರ್ಟ್ ತಕ್ಷಣ ಬೆಡ್​ಗಳನ್ನು ಬಳಸಿಕೊಳ್ಳಲು ಸೂಚನೆ ನೀಡಿದೆ. ಇದೆ ವೇಳೆ ಸರ್ಕಾರವೂ ರೈಲ್ವೆ ಇಲಾಖೆ ಒದಗಿಸಿರುವ ಬೆಡ್​ಗಳನ್ನು ಬಳಸಿಕೊಂಡಿಲ್ಲ. ಇದಕ್ಕೂ ವಿವರಣೆ ನೀಡುವಂತೆ ಸೂಚಿಸಿ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

(bbmp and karnataka government not utilizing the services provided by central forces why questions high court)

ಜಾಲಹಳ್ಳಿಯ ವಾಯುಪಡೆ​ ಸ್ಟೇಷನ್ ಈಗ​ ಕೊವಿಡ್ ಕೇರ್​ ಸೆಂಟರ್