ಜನರ ತೆರಿಗೆ ಹಣ ಪೋಲು ಮಾಡುವ ಬಿಬಿಎಂಪಿ ಹಳೆಯ ಚಾಳಿ; ವಿಲ್ಸನ್ ಗಾರ್ಡನ್ ಫುಟ್‌ಪಾತ್ ಮೇಲೆ ಜೆಸಿಬಿ ಘರ್ಜನೆ

BBMP tendersure works: ವಿಲ್ಸನ್ ಗಾರ್ಡನ್ ರಸ್ತೆಯಲ್ಲಿ ಚೆನ್ನಾಗಿದ್ದ ಫುಟ್​ಪಾತ್​ ಅನ್ನು ಜೆಸಿಬಿ ಮೂಲಕ ಅಗೆದು, ಬಿಬಿಎಂಪಿ ಹಾಳು ಮಾಡಿದೆ. ಈ ರಸ್ತೆಯ ಅಕ್ಕಪಕ್ಕದ ರಸ್ತೆಗಳ ಫುಟ್‌ಪಾತ್ ಅನ್ನ ಟೆಂಡರ್ ಶುರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿತ್ತು. ಯುನಿಫಾರ್ಮಿಟಿ ಇರಲಿ... ಇಲ್ಲ ಅಂದ್ರೆ ನೋಡೋಕೆ ಚೆನ್ನಾಗಿ ಇರೋಲ್ಲ... ಎಂಬ ಕಾರಣಕ್ಕೆ ಜನರ ತೆರಿಗೆ ದುಡ್ಡನ್ನ ಬಿಬಿಎಂಪಿ ಈ ರೀತಿ ಹಾಳು ಮಾಡುತ್ತಿದೆ

ಜನರ ತೆರಿಗೆ ಹಣ ಪೋಲು ಮಾಡುವ ಬಿಬಿಎಂಪಿ ಹಳೆಯ ಚಾಳಿ; ವಿಲ್ಸನ್ ಗಾರ್ಡನ್ ಫುಟ್‌ಪಾತ್ ಮೇಲೆ ಜೆಸಿಬಿ ಘರ್ಜನೆ
ಜನರ ತೆರಿಗೆ ಹಣ ಪೋಲು ಮಾಡುವ ಬಿಬಿಎಂಪಿ ಹಳೆಯ ಚಾಳಿ; ವಿಲ್ಸನ್ ಗಾರ್ಡನ್ ಫುಟ್‌ಪಾತ್ ಮೇಲೆ ಜೆಸಿಬಿ ಘರ್ಜನೆ
Edited By:

Updated on: Jun 08, 2021 | 3:38 PM

ಬೆಂಗಳೂರು: ಜನರ ತೆರಿಗೆ ಹಣ ಪೋಲು ಮಾಡುವ ತನ್ನ ಹಳೆಯ ಚಾಳಿಯನ್ನು ಬೃಹತ್​ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದುವರಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಚೆನ್ನಾಗಿರುವ ಸೌಕರ್ಯವನ್ನೇ ಕಿತ್ತು ಹಾಕಿ, ಮತ್ತೆ ಅದನ್ನು ಹೊಸದಾಗಿ ಹಾಕಿ, ಭಾರೀ ಮೊತ್ತದ ಬಿಲ್​ ಎತ್ತುವ ಮಾಮೂಲಿ ಕೆಲಸವನ್ನು ಬಿಬಿಎಂಪಿ  (BBMP) ಈಗಲೂ ಮಾಡುತ್ತಿದೆ.

ಇದೀಗ, ಉತ್ತಮವಾಗಿದ್ದ ಫುಟ್‌ಪಾತ್ ಅಗೆದುಹಾಕಿ, ಹೊಸದಾಗಿ ಫುಟ್‌ಪಾತ್ ಹಾಕುವ ಕಾರ್ಯದಲ್ಲಿ ಬಿಬಿಎಂಪಿ ತೊಡಗಿಸಿಕೊಂಡಿದೆ. ವಿಪರ್ಯಾಸವೆಂದ್ರೆ ಕೆಲ ತಿಂಗಳ ಹಿಂದೆಯಷ್ಟೇ ಇಲ್ಲಿ ಫುಟ್‌ಪಾತ್ ನಿರ್ಮಾಣ ಮಾಡಲಾಗಿತ್ತು. ಅದೂ ಟೆಂಡರ್ ಶ್ಯೂರ್ ಮಾದರಿಯಲ್ಲಿ ಫುಟ್‌ಪಾತ್ ನಿರ್ಮಾಣವಾಗಿತ್ತು. ದುಬಾರಿ ಬೆಲೆಯ ಟೈಲ್ಸ್ ಹಾಕಿ ನಿರ್ಮಾಣ ಮಾಡಲಾಗಿತ್ತು. ಟೆಂಡರ್ ಶ್ಯೂರ್ ಅಂದರೆ ಗುಣಮಟ್ಟದ ಕಾಮಗಾರಿ ಅದು. ಟೆಂಡರ್ ಶ್ಯೂರ್ ಮಾದರಿ ಕಾಮಗಾರಿಯಲ್ಲಿ ದೃಢತೆ ಮತ್ತು ದೀರ್ಘ ಬಾಳಿಕೆಯ ಖಾತ್ರಿಯಿರುತ್ತದೆ.

BBMP at it again destroys newly laid footpath constructed under tendersure works in wilson garden area

ವಿಲ್ಸನ್ ಗಾರ್ಡನ್ ಫುಟ್‌ಪಾತ್ ಮೇಲೆ ಜೆಸಿಬಿ ಘರ್ಟನೆ.. ಜನರ ತೆರಿಗೆ ಹಣ ಪೋಲು ಮಾಡುತ್ತಿರುವ ಬಿಬಿಎಂಪಿ

ಆದರೆ ಮೇಜರ್ ರೋಡ್ ವರ್ಕ್ ನೆಪದಲ್ಲಿ ಅಂದರೆ ಫುಟ್‌ಪಾತ್ ಒಂದೇ ರೀತಿ ಇರಬೇಕೆಂದು ಇತ್ತೀಚಿನ ಹೊಸ ಫುಟ್‌ಪಾತ್ ತೆರವುಗೊಳಿಸಿಸುವ ಕಾರ್ಯ ಇದೀಗ ಭರದಿಂದ ನಡೆದಿದೆ. ಅಂದಹಾಗೆ ಇದೆಲ್ಲ ಕಂಡುಬಂದಿರುವುದು ಬೆಂಗಳೂರಿನ ವಿಲ್ಸನ್ ಗಾರ್ಡ್‌ನಲ್ಲಿರುವ ಫುಟ್‌ಪಾತ್ ಮೇಲೆ. ಈತೆರವು ಕಾರ್ಯಾಚರಣೆ ನಡೆದಿರುವುದು 12, 14ನೇ ಮುಖ್ಯರಸ್ತೆಯಲ್ಲಿರುವ ಫುಟ್‌ಪಾತ್ ಅಂಗಳದಲ್ಲಿ.

ವಿಲ್ಸನ್ ಗಾರ್ಡನ್ ಫುಟ್‌ಪಾತ್ ಮೇಲೆ ಜೆಸಿಬಿ ಘರ್ಟನೆ.. ಜನರ ತೆರಿಗೆ ಹಣ ಪೋಲು ಮಾಡುತ್ತಿರುವ ಬಿಬಿಎಂಪಿ

ವಿಲ್ಸನ್ ಗಾರ್ಡನ್ 4th ಮೇನ್ 12th ಕ್ರಾಸ್ ರಸ್ತೆಯಲ್ಲಿ ಇಂದು ಚೆನ್ನಾಗಿದ್ದ ಫುಟ್​ಪಾತ್​ ಅನ್ನು ಜೆಸಿಬಿ ಮೂಲಕ ಅಗೆದು, ಬಿಬಿಎಂಪಿ ಹಾಳು ಮಾಡಿದೆ. ಈ ರಸ್ತೆಯ ಅಕ್ಕಪಕ್ಕದ ರಸ್ತೆಗಳ ಫುಟ್‌ಪಾತ್ ಅನ್ನ ಟೆಂಡರ್ ಶುರ್ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿದೆ. ಯುನಿಫಾರ್ಮಿಟಿ ಇರಲಿ… ಇಲ್ಲ ಅಂದ್ರೆ ನೋಡೋಕೆ ಚೆನ್ನಾಗಿ ಇರೋಲ್ಲ… ಎಂಬ ಕಾರಣಕ್ಕೆ ಜನರ ತೆರಿಗೆ ದುಡ್ಡನ್ನ ನಮ್ಮ ಬೆಂಗಳೂರು ಮಹಾನಗರ ಪಾಲಿಕೆ ಈ ರೀತಿ ಹಾಳು ಮಾಡುತ್ತಿದೆ ಎಂದು ಸ್ಥಳೀಯರು ಬಿಬಿಎಂಪಿ ಕಾರ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಲ್ಸನ್ ಗಾರ್ಡನ್ ಫುಟ್‌ಪಾತ್ ಮೇಲೆ ಜೆಸಿಬಿ ಘರ್ಟನೆ.. ಜನರ ತೆರಿಗೆ ಹಣ ಪೋಲು ಮಾಡುತ್ತಿರುವ ಬಿಬಿಎಂಪಿ

ವಿಲ್ಸನ್ ಗಾರ್ಡನ್ ಫುಟ್‌ಪಾತ್ ಮೇಲೆ ಜೆಸಿಬಿ ಘರ್ಟನೆ.. ಜನರ ತೆರಿಗೆ ಹಣ ಪೋಲು ಮಾಡುತ್ತಿರುವ ಬಿಬಿಎಂಪಿ

(BBMP at it again destroys newly laid footpath constructed under tendersure works in wilson garden area)

Published On - 2:42 pm, Tue, 8 June 21

TV9 Web

TV9 Kannada

Read More
Loading...
Unable to load recommendations.
Follow Us