ಬಿಬಿಎಂಪಿ ಆಯುಕ್ತ ಎನ್​. ಮಂಜುನಾಥ್ ಪ್ರಸಾದ್​​​ಗೆ ಕೊರೊನಾ ಪಾಸಿಟಿವ್

|

Updated on: Dec 22, 2020 | 10:24 PM

ಮಂಜುನಾಥ್​ ಅವರಿಗೆ ಸೋಮವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ಅವರು ಪರೀಕ್ಷೆಗೆ ಒಳಪಟ್ಟಿದ್ದರು. ಈ ವೇಳೆ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ.

ಬಿಬಿಎಂಪಿ ಆಯುಕ್ತ ಎನ್​. ಮಂಜುನಾಥ್ ಪ್ರಸಾದ್​​​ಗೆ ಕೊರೊನಾ ಪಾಸಿಟಿವ್
ಮಂಜುನಾಥ್​ ಪ್ರಸಾದ್
Follow us on

ಬೆಂಗಳೂರು: ಬೆಂಗಳೂರು ಬೃಹತ್​ ನಗರ ಪಾಲಿಕೆ (ಬಿಬಿಎಂಪಿ) ಆಯುಕ್ತ ಎನ್​ ಮಂಜುನಾಥ್ ಪ್ರಸಾದ್​​ ಅವರಿಗೆ ಕೊರೊನಾ ವೈರಸ್​ ಇರುವುದು ದೃಢಪಟ್ಟಿದೆ. ಹೀಗಾಗಿ, ಅವರು ಸದ್ಯ ಕ್ವಾರಂಟೈನ್​ಗೆ ತೆರಳಿದ್ದಾರೆ.

ಮಂಜುನಾಥ್​ ಅವರಿಗೆ ಸೋಮವಾರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತ್ತು. ಹೀಗಾಗಿ, ಅವರು ಪರೀಕ್ಷೆಗೆ ಒಳಪಟ್ಟಿದ್ದರು. ಈ ವೇಳೆ ಅವರಿಗೆ ಕೊರೊನಾ ಇರುವುದು ದೃಢಪಟ್ಟಿದೆ. ಇನ್ನು, ಆಯುಕ್ತರು ಸಂಪರ್ಕದಲ್ಲಿದ್ದವರು, ಸಭೆಗಳು ಹಾಗೂ ಇತರೆ ಕಾರ್ಯಕ್ರಮಗಳಲ್ಲಿ ಜೊತೆಗಿದ್ದವರು ಮತ್ತು ಇವರ ಸಂಪರ್ಕಕ್ಕೆ ಬಂದ ಮಾಧ್ಯಮದವರು ಕೂಡಲೇ COVID-19 ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಯುಕ್ತರು ಮನವಿ ಮಾಡಿದ್ದಾರೆ.

ಫಿಟ್‌ ಇಂಡಿಯಾ ಅಭಿಯಾನದ ಅಂಗವಾಗಿ ಬಿಬಿಎಂಪಿ ಹಾಗೂ ಬೆಂಗಳೂರು ಸ್ಮಾರ್ಟ್‌ಸಿಟಿ ಲಿಮಿಟೆಡ್‌ ಸಂಸ್ಥೆ ನಗರದಲ್ಲಿ ಭಾನುವಾರ ಸೈಕ್ಲಥಾನ್‌ ಜಾತಾ ಹಮ್ಮಿಕೊಂಡಿತ್ತು. ಈ ಕಾರ್ಯಕ್ರಮದಲ್ಲೂ ಆಯುಕ್ತರು ಭಾಗವಹಿಸಿದ್ದರು. ಅಲ್ಲದೆ, ಸಿಎಂ ಬಿಎಸ್​ ಯಡಿಯೂರಪ್ಪ ಅವರನ್ನು ಕೂಡ ಮಂಜುನಾಥ್​ ಭೇಟಿ ಮಾಡಿದ್ದರು.

ಕೊರೊನಾ ತಡೆಗೆ ಮಾರುಕಟ್ಟೆಗಳಿಗೆ ಹೊಸ ಮಾರ್ಗಸೂಚಿ

ಇಂಗ್ಲೆಂಡ್​ನಲ್ಲಿ ಕೊರೊನಾ ವೈರಸ್​ ಮಾರ್ಪಾಡಾಗಿದೆ ಎನ್ನುವ ವಿಚಾರ ಭಾರತದಲ್ಲೂ ಆತಂಕ ಸೃಷ್ಟಿಸಿದೆ. ಈಗಿರುವ ವೈರಸ್​ಗಿಂತ ಶೇ. 70ರಷ್ಟು ವೇಗವಾಗಿ ಈ ವೈರಸ್​ ಹರಡಲಿದೆ ಎಂದು ಕೂಡ ಹೇಳಾಗುತ್ತಿದೆ. ಈ ಮಧ್ಯೆ ಭಾರತದಲ್ಲಿ ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ ಮಾರುಕಟ್ಟೆಗಳಿಗೆ ಸರ್ಕಾರ ಹೊಸ ಮಾರ್ಗಸೂಚಿ ನೀಡಿದೆ.

ಹೋಲ್​ಸೇಲ್​, ರಿಟೇಲ್​, ಮಾಲ್​ಗಳಲ್ಲಿ ನಿಯಮ ಕಡ್ಡಾಯವಾಗಿ ಪಾಲಿಸಲು ಸೂಚಿಸಲಾಗಿದೆ. ಎಲ್ಲಾ ಮಾರುಕಟ್ಟೆಗಳಲ್ಲಿ 6 ಅಡಿ ದೈಹಿಕ ಅಂತರ ಕಡ್ಡಾಯವಾಗಿ ಪಾಲಿಸಬೇಕು. ಮಾಸ್ಕ್ ಹಾಗೂ ಗ್ಲೌಸ್​ ಕಡ್ಡಾಯವಾಗಿ ಬಳಸಬೇಕು. ಕೆಮ್ಮುವಾಗ, ಸೀನುವಾಗ ತೀವ್ರ ನಿಗಾವಹಿಸಬೇಕು ಎಂದು ಸರ್ಕಾರ ಹೇಳಿದೆ. ಸಾರ್ವಜನಿಕ ಸ್ಥಳಗಳಲ್ಲಿ ಉಗುಳುವುದರ ಮೇಲೆ ನಿಷೇಧ ಹೇರಲಾಗಿದೆ. ಪ್ರತಿದಿನ ಎಲ್ಲಾ ಶಾಪ್​ಗಳ ಮುಂದೆ ಸ್ವಚ್ಛ ಮಾಡುವುದು ಕಡ್ಡಾಯವಾಗಿದೆ. ಮಳಿಗೆಗಳ ಎಂಟ್ರಿ ಪಡೆಯುವ ಸ್ಥಳಗಳಲ್ಲಿ ಸ್ಯಾನಿಟೈಸರ್​ ಇಡೋದು ಕಡ್ಡಾಯವಾಗಿದೆ.

Tv9 Facebook Live | ಕೊವಿಡ್-19 ಎರಡನೇ ಅಲೆ, ಕೊರೊನಾ ವೈರಾಣು ರೂಪಾಂತರ, ತಜ್ಞರ ಅಭಿಪ್ರಾಯವೇನು?

Published On - 10:23 pm, Tue, 22 December 20