ಬೆಂಗಳೂರು: ನಮ್ಮ ಮೆಟ್ರೋನಿಂದ ಬಿಬಿಎಂಪಿಗೆ ಕೆಟ್ಟ ಹೆಸರು ಬರುತ್ತಿದೆ ಎಂದು BMRCL ವಿರುದ್ಧ ಬಿಬಿಎಂಪಿ ಮೇಯರ್ ಎಂ.ಗೌತಮ್‌ಕುಮಾರ್ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಕೆಲ ದಿನಗಳಿಂದ ಸಿಟಿ ರೌಂಡ್ಸ್ ಹಾಕುತ್ತಿರುವ ಮೇಯರ್. ನಗರದ ರಸ್ತೆ ಗುಂಡಿಗಳನ್ನು ಸ್ವತಃ ತಾವೇ ವಾಹನ ಓಡಿಸುವ ಮೂಲಕ ಪರಿಶೀಲನೆ ನಡೆಸಿದ್ದರು. ಈಗ ನಗರದಲ್ಲಿ ಬಿದ್ದಿರುವ ಗುಂಡಿಗಳಿಗೆ BMRCL ನಿರ್ಲಕ್ಷ್ಯವೇ ಮುಖ್ಯ ಕಾರಣ ಎಂದು ಆರೋಪಿಸಿದ್ದಾರೆ. ಸಿಟಿಯಲ್ಲಿ ರಸ್ತೆಗಳು ಹಾಳಾಗಲು, ಗುಂಡಿ ಬೀಳಲು ಮೆಟ್ರೋ ಕಾರಣ, BMRCL ನಿರ್ಲಕ್ಷ್ಯದಿಂದ ರಸ್ತೆಗಳು ಹಾಳಾಗುತ್ತಿವೆ.
ಮೆಟ್ರೋ ಲೈನ್‌ಟ್ರ್ಯಾಕ್ ನೀರು ನೇರವಾಗಿ ರಸ್ತೆಗೆ ಬಿಡ್ತಿದ್ದಾರೆ ಹಾಗಾಗಿ ಮಳೆ ಬಂದಾಗ ರಸ್ತೆಗಳ ಮೇಲೆಯೇ ನೀರು ಹರಿಯುತ್ತದೆ. ಇದರಿಂದಾಗಿ ನಗರದ ರಸ್ತೆಗಳು ಹಾಳಾಗುತ್ತಿವೆ ಎಂದು ಕಿಡಿ ಕಾರಿದ್ದಾರೆ.ಅಲ್ಲದೆ BMRCL ಮಾಡಬೇಕಿದ್ದ ಕೆಲಸವನ್ನು ಪಾಲಿಕೆ ಮಾಡಬೇಕಾಗಿದೆ.
ಕಳಪೆ ಕಾಮಗಾರಿಯಿಂದ ಪಾಲಿಕೆಗೆ ಕೆಟ್ಟ ಹೆಸರು ಬರ್ತಿದೆ. ಹೈದರಾಬಾದ್ ಮೆಟ್ರೋ ಕಾಮಗಾರಿಗೆ ಹೋಲಿಕೆ ಮಾಡಿದ್ರೆ, ನಮ್ಮ ಮೆಟ್ರೋ ಕಾಮಗಾರಿ ಕಳಪೆಯಾಗಿದೆ ಎಂದು ಬೆಂಗಳೂರಿನಲ್ಲಿ ಮೇಯರ್ M.ಗೌತಮ್‌ಕುಮಾರ್ BMRCL ವಿರುದ್ಧ ಗರಂ ಆಗಿದ್ದಾರೆ.
Published On - 8:01 am, Mon, 11 November 19