Kannada News Karnataka BBMP proposed a huge grant to the state government demanded 8050 crores in the 2024-25 budget
ರಾಜ್ಯ ಸರ್ಕಾರಕ್ಕೆ ಬೃಹತ್ ಅನುದಾನದ ಪ್ರಸ್ತಾವನೆ ಇಟ್ಟ ಬಿಬಿಎಂಪಿ, 2024-25 ನೇ ಬಜೆಟ್ ನಲ್ಲಿ 8050 ಕೋಟಿಗೆ ಡಿಮ್ಯಾಂಡ್
ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್ಗೆ ತಯಾರಿ ನಡೆಸ್ತಿರೋ ಹೊತ್ತಲ್ಲೇ, ಸರ್ಕಾರದ ಮುಂದೆ ಬಿಬಿಎಂಪಿ ಬೃಹತ್ ಮೊತ್ತದ ಪ್ರಸ್ತಾವನೆ ಇಟ್ಟಿದೆ. ಬಜೆಟ್ ಮೇಲೆ ಭಾರೀ ನಿರೀಕ್ಷೆ ಇಟ್ಟಿರೋ ಪಾಲಿಕೆ, ಇಂದಿರಾ ಕ್ಯಾಂಟೀನ್, ನಮ್ಮ ಕ್ಲಿನಿಕ್, ಟ್ರಾಫಿಕ್ ಕಂಟ್ರೋಲ್ ಸೇರಿ ಹಲವು ಸಮಸ್ಯೆಗಳನ್ನ ಮುಂದಿಟ್ಟುಕೊಂಡು 8 ಸಾವಿರದ 50 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಬಿಬಿಎಂಪಿ
Follow us on
ಬೆಂಗಳೂರು, ಫೆ.13: ರಾಜ್ಯ ಸರ್ಕಾರ 2024-25ನೇ ಸಾಲಿನ ಬಜೆಟ್ ಮಂಡನೆಗೆ (Karnataka Budget) ಸಕಲ ಸಿದ್ಧತೆ ನಡೆಸಿದೆ. ಈಗಾಗಲೇ ವಿವಿಧ ಕ್ಷೇತ್ರದ ಪ್ರಮುಖರ ಸಲಹೆ ಪಡೆದು ಬಜೆಟ್ ಮಂಡಿಸಲು ಸಜ್ಜಾಗ್ತಿದೆ. ಇತ್ತ ಬೆಂಗಳೂರಿನ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಲು ಪ್ಲಾನ್ ಮಾಡಿಕೊಂಡ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP), ಇದೀಗ ಸರ್ಕಾರದ ಮುಂದೆ 8050 ಕೋಟಿ ಬೃಹತ್ ಮೊತ್ತದ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಿದೆ.
ಇನ್ನು ಸರ್ಕಾರದ ಬಜೆಟ್ ಮೇಲೆ ಭಾರಿ ನಿರೀಕ್ಷೆ ಇಟ್ಟಿರೋ ಪಾಲಿಕೆ, ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಇಂತಿಷ್ಟು ಅನುದಾನದ ಅವಶ್ಯಕತೆಯಿದೆ ಅಂತಾ ವರದಿ ಸಲ್ಲಿಸಿದೆ. ಸದ್ಯ ಪಾಲಿಕೆ ಸರ್ಕಾರದ ಮುಂದಿಟ್ಟಿರೋ ಪ್ರಮುಖ ಅಭಿವೃದ್ಧಿ ಕಾರ್ಯ ಹಾಗೂ ಅದಕ್ಕೆ ಬೇಕಾದ ಅನುದಾನದ ಮೊತ್ತದ ವಿವರ ಇಲ್ಲಿದೆ.
ಬಜೆಟ್ ಮೇಲೆ ‘ಬೃಹತ್’ ನಿರೀಕ್ಷೆ!
1) ಟ್ರಾಫಿಕ್ ನಿವಾರಣೆಗೆ ಸುರಂಗಮಾರ್ಗ
ಬೆಂಗಳೂರಿನ ಪ್ರಮುಖ ಜಂಕ್ಷನ್ ಗಳಲ್ಲಿ ಸುರಂಗ ಮಾರ್ಗದ ಪ್ರಸ್ತಾವನೆ
4) ರಾಜಕಾಲುವೆ ಬಫರ್ ವಲಯಗಳನ್ನ ಸುಗಮ ಸಂಚಾರಕ್ಕೆ ಬಳಸಲು ಪ್ಲಾನ್
ಮೊದಲ ಹಂತದಲ್ಲಿ 200 ಕೋಟಿ ಅನುದಾನಕ್ಕೆ ಮನವಿ
ಸಂಚಾರದಟ್ಟಣೆ ಇರೋ 75 ಜಂಕ್ಷನ್ ಅಭಿವೃದ್ಧಿಗೆ 100 ಕೋಟಿ
5) ಪ್ರವಾಸಿತಾಣದ ಅಭಿವೃದ್ಧಿಗೆ ಸ್ಕೈಡೆಕ್ ಗೋಪುರ ನಿರ್ಮಾಣಕ್ಕೆ ಪ್ಲಾನ್
6) ಬಿಬಿಎಂಪಿ ಶಾಲಾ-ಕಾಲೇಜುಗಳ ಅಭಿವೃದ್ಧಿ
ಬಿಬಿಎಂಪಿಯಿಂದ ಹೊಸ ಇಂಗ್ಲಿಷ್ ಮೀಡಿಯಂ ಶಾಲೆಗಳ ನಿರ್ಮಾಣಕ್ಕೆ ಬಜೆಟ್ ನಲ್ಲಿ ಅನುದಾನ ನಿರೀಕ್ಷೆ
ಬಿಬಿಎಂಪಿಯ ಹಳೆ ಶಾಲೆಗಳ ನಿರ್ವಹಣೆಗೆ ಸರ್ಕಾರದಿಂದ ಬಜೆಟ್ ನಿರೀಕ್ಷೆ
ಒಟ್ಟಾರೆ ಬ್ರ್ಯಾಂಡ್ ಬೆಂಗಳೂರಿನ ಕನಸು ಹೊತ್ತಿರೋ ಸರ್ಕಾರಕ್ಕೆ, ಇದೀಗ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸುವ ಸಮಯ ಹತ್ತಿರ ಬರ್ತಿದೆ. ಇತ್ತ ಬ್ರ್ಯಾಂಡ್ ಬೆಂಗಳೂರಿನ ಪರಿಕಲ್ಪನೆಯ ಜೊತೆ ಜೊತೆಗೆ ಪಾಲಿಕೆ ವ್ಯಾಪ್ತಿಯ ಅಭಿವೃದ್ಧಿ ಕೆಲಸಗಳನ್ನ ಕೂಡ ಸರ್ಕಾರದ ಮಡಿಲಿಗಿಟ್ಟಿರೋ ಪಾಲಿಕೆಗೆ ಬಜೆಟ್ ನಲ್ಲಿ ನಿರೀಕ್ಷಿತ ಅನುದಾನ ಸಿಗುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ಮಾಡಿ