ಬೆಂಗಳೂರು: ಕರ್ನಾಟಕದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಸೋಂಕಿತರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಏರಿಕೆಯಾಗುತ್ತಿದ್ದು, ಅದರಲ್ಲಿ ಬಹುಪಾಲು ಪ್ರಕರಣಗಳು ರಾಜ್ಯ ರಾಜಧಾನಿ ಬೆಂಗಳೂರಿನಲ್ಲೇ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ನಿಟ್ಟಿನಲ್ಲಿ ನಗರದಲ್ಲಿ ಸೋಂಕು ಹರಡಬಾರದೆಂಬ ಕಾರಣಕ್ಕೆ ಸ್ಯಾನಿಟೈಸರ್ ಸಿಂಪಡಿಸುವುದಾಗಿ ಹೇಳುತ್ತಿದ್ದ ಬಿಬಿಎಂಪಿ ತನ್ನ ಕಾರ್ಯವನ್ನು ಆರಂಭಿಸಿದೆ. ಆದರೆ, ಈ ವಿಚಾರದಲ್ಲಿ ಬಿಬಿಎಂಪಿ ಜನರ ಕಣ್ಣಿಗೆ ಮಣ್ಣೆರಚುತ್ತಿದೆ, ಸ್ಯಾನಿಟೈಸರ್ ಬದಲು ಯಂತ್ರಗಳಿಗೆ ನೀರನ್ನು ತುಂಬಿಸಿ ಸಿಂಪಡಿಸುತ್ತಿದೆ ಎಂಬ ಗಂಭೀರ ಆರೋಪ ಕೇಳಿಬಂದಿದ್ದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಸೋಂಕಿನ ಪ್ರಮಾಣ ಹೆಚ್ಚುತ್ತಿದ್ದು ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಓಡಾಡುತ್ತಿರುವಾಗ ಬಿಬಿಎಂಪಿ ಈ ಪ್ರಮಾಣದ ನಿರ್ಲಕ್ಷ್ಯ ತೋರುತ್ತಿರುವುದು ಅಕ್ಷಮ್ಯವಾಗಿದೆ. ಸ್ಯಾನಿಟೈಸೇಶನ್ ಒಳಗುಟ್ಟನ್ನು ಕೆಲ ಸಿಬ್ಬಂದಿ ವರ್ಗದವರೇ ಬಾಯಿಬಿಟ್ಟಿದ್ದು ಒಮ್ಮೊಮ್ಮೆ ಕೆಮಿಕಲ್ ಕೊಡ್ತಾರೆ, ಒಮ್ಮೊಮ್ಮೆ ಕೊಡಲ್ಲ. ಬಿಡಬ್ಲ್ಯೂಎಸ್ಎಸ್ ನೀರನ್ನೇ ಸಿಂಪಡಣೆ ಮಾಡಿ ಎಂದು ಬಿಬಿಎಂಪಿ ಹೇಳುತ್ತಿರುವುದಾಗಿ ತಿಳಿಸಿದ್ದಾರೆ. ಕಂಠೀರವ ಸ್ಟೇಡಿಯಂ ಬಳಿ ಬಿಬಿಎಂಪಿ ಸ್ಯಾನಿಟೈಸೇಶನ್ ಯಂತ್ರ ಹಿಡಿದು ನೀರು ಸಿಂಪಡಿಸಿರುವುದು ಬೆಳಕಿಗೆ ಬಂದಿದ್ದು, ನಗರದೆಲ್ಲೆಡೆ ಹೀಗೇ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆ
ಬೆಂಗಳೂರಿನಲ್ಲಿ ಕೊರೊನಾ ಎರಡನೇ ಅಲೆಯ ಪ್ರಸರಣ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇಂದು ಸಿಲಿಕಾನ್ ಸಿಟಿಯಲ್ಲಿ 21,602 ಕೊವಿಡ್ ಕೇಸ್ ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಜ್ಞರು ಮಾಹಿತಿ ನೀಡಿದ್ದಾರೆ.
ವಿವಿಧ ರಾಜ್ಯಗಳ ಕೊರೊನಾ ಪ್ರಕರಣಗಳ ಪ್ರಮಾಣ:
ಮಹಾರಾಷ್ಟ್ರ- 6,62,640ಸಕ್ರಿಯ ಪ್ರಕರಣಗಳು, 68,813 ಜನ ಬಲಿ
ಕರ್ನಾಟಕ- 3,82,690 ಸಕ್ರಿಯ ಪ್ರಕರಣಗಳು, 15,523 ಜನ ಬಲಿ
ಯುಪಿ- 3,09,237 ಸಕ್ರಿಯ ಪ್ರಕರಣಗಳು, 12238 ಜನ ಬಲಿ
ಕೇರಳ- 2,84,424 ಸಕ್ರಿಯ ಪ್ರಕರಣಗಳು, 5,259 ಜನ ಬಲಿ
ರಾಜಸ್ಥಾನ-1 ,69,519 ಸಕ್ರಿಯ ಪ್ರಕರಣಗಳು, 4,084 ಜನ ಬಲಿ
ಗುಜರಾತ್- 1,37,794 ಸಕ್ರಿಯ ಪ್ರಕರಣಗಳು, 7,010 ಜನ ಬಲಿ
ಛತ್ತೀಸ್ಗಢ- 1,18,958 ಸಕ್ರಿಯ ಪ್ರಕರಣಗಳು, 8,312 ಜನ ಬಲಿ
ಆಂಧ್ರಪ್ರದೇಶ- 1,14,158 ಸಕ್ರಿಯ ಪ್ರಕರಣಗಳು, 7,928 ಜನ ಬಲಿ
ತಮಿಳುನಾಡು- 1,12,556 ಸಕ್ರಿಯ ಪ್ರಕರಣಗಳು, 13,933 ಜನ ಬಲಿ
ಪ.ಬಂಗಾಳ- 1,13,624 ಸಕ್ರಿಯ ಪ್ರಕರಣಗಳು, 11,344 ಜನ ಬಲಿ
ಬಿಹಾರ- 1,00,822, ಸಕ್ರಿಯ ಪ್ರಕರಣಗಳು 2,480 ಜನ ಬಲಿ
ದೆಹಲಿ- 99,361 ಸಕ್ರಿಯ ಪ್ರಕರಣಗಳು, 16,147 ಜನ ಬಲಿ
ಹರಿಯಾಣ- 97,562 ಸಕ್ರಿಯ ಪ್ರಕರಣಗಳು, 4,216 ಜನ ಬಲಿ
ಮಧ್ಯಪ್ರದೇಶ- 92,077 ಸಕ್ರಿಯ ಪ್ರಕರಣಗಳು, 5,519 ಜನ ಬಲಿ
ತೆಲಂಗಾಣ- 77,727 ಸಕ್ರಿಯ ಪ್ರಕರಣಗಳು, 2,261 ಜನ ಬಲಿ
ಉತ್ತರಾಖಂಡ್- 55,886 ಸಕ್ರಿಯ ಪ್ರಕರಣಗಳು, 2,624 ಜನ ಬಲಿ
ಪಂಜಾಬ್- 55,798 ಸಕ್ರಿಯ ಪ್ರಕರಣಗಳು, 9,022 ಜನ ಬಲಿ
ಜಾರ್ಖಂಡ್- 55,877 ಸಕ್ರಿಯ ಪ್ರಕರಣಗಳು, 2,540 ಜನ ಬಲಿ
ಒಡಿಶಾ- 53,084 ಸಕ್ರಿಯ ಪ್ರಕರಣಗಳು, 2,029 ಜನ ಬಲಿ
ಅಸ್ಸಾಂ- 23,826 ಸಕ್ರಿಯ ಪ್ರಕರಣಗಳು, 1,307 ಜನ ಬಲಿ
ಗೋವಾ- 20,898 ಸಕ್ರಿಯ ಪ್ರಕರಣಗಳು, 1,146 ಜನ ಬಲಿ
ಜಮ್ಮು ಕಾಶ್ಮೀರ- 26,144 ಸಕ್ರಿಯ ಪ್ರಕರಣಗಳು, 2,253 ಜನ ಬಲಿ
ಹಿಮಾಚಲಪ್ರದೇಶ- 17,835 ಸಕ್ರಿಯ ಪ್ರಕರಣಗಳು, 1,460 ಜನ ಬಲಿ
ಅರುಣಾಚಲಪ್ರದೇಶ- 1,112 ಸಕ್ರಿಯ ಪ್ರಕರಣಗಳು, 59 ಜನ ಬಲಿ
ಚಂಡಿಗಢ- 6,652 ಸಕ್ರಿಯ ಪ್ರಕರಣಗಳು, 465 ಜನ ಬಲಿ
ಪುದುಚೆರಿ- 8,989 ಸಕ್ರಿಯ ಪ್ರಕರಣಗಳು, 793 ಜನ ಬಲಿ
ಮಣಿಪುರ- 1,225 ಸಕ್ರಿಯ ಪ್ರಕರಣಗಳು, 400 ಜನ ಬಲಿ
ಮೇಘಾಲಯ- 1,531 ಸಕ್ರಿಯ ಪ್ರಕರಣಗಳು, 169 ಜನ ಬಲಿ
ಮಿಜೋರಾಂ- 1,123 ಸಕ್ರಿಯ ಪ್ರಕರಣಗಳು, 14 ಜನ ಬಲಿ
ನಾಗಾಲ್ಯಾಂಡ್- 1,073 ಸಕ್ರಿಯ ಪ್ರಕರಣಗಳು, 100 ಜನ ಬಲಿ
ಸಿಕ್ಕಿಂ- 1,247 ಸಕ್ರಿಯ ಪ್ರಕರಣಗಳು, 146 ಜನ ಬಲಿ
ತ್ರಿಪುರ-1,161 ಸಕ್ರಿಯ ಪ್ರಕರಣಗಳು, 396 ಜನ ಬಲಿ
ಇದನ್ನೂ ಓದಿ:
ದೇಶಾದ್ಯಂತ ಇಂದು ಶುರುವಾಗಿಲ್ಲ 3ನೇ ಹಂತದ ಕೊರೊನಾ ಲಸಿಕೆ ವಿತರಣೆ; ವ್ಯಾಕ್ಸಿನ್ ಇಲ್ಲ ಅಂದ್ರೂ ಕರ್ನಾಟಕದಲ್ಲಿ ಕ್ಯೂ ನಿಂತ ಜನ !