ಅಕ್ರಮ ಆಸ್ತಿ ಗಳಿಕೆ ಆರೋಪ: BDA ಭ್ರಷ್ಟ ಅಧಿಕಾರಿ ತಲೆದಂಡ, ಕೆಎಎಸ್ ಅಧಿಕಾರಿ ಸುಧಾ SUSPEND

| Updated By: ganapathi bhat

Updated on: Apr 06, 2022 | 8:50 PM

ಬಿಡಿಎ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸುಧಾ ಮನೆ ಮೇಲೆ, ಇತ್ತೀಚೆಗೆ ಎರಡು ಬಾರಿ ಎಸಿಬಿ ರೇಡ್ ಮಾಡಿತ್ತು. ರೇಡ್ ಮಾಡಿದ್ದ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ ಪತ್ತೆಯಾಗಿತ್ತು.

ಅಕ್ರಮ ಆಸ್ತಿ ಗಳಿಕೆ ಆರೋಪ: BDA ಭ್ರಷ್ಟ ಅಧಿಕಾರಿ ತಲೆದಂಡ, ಕೆಎಎಸ್ ಅಧಿಕಾರಿ ಸುಧಾ SUSPEND
ಕೆಎಎಸ್ ಅಧಿಕಾರಿ ಸುಧಾ
Follow us on

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಕೆಎಎಸ್ ಅಧಿಕಾರಿ ಸುಧಾ ವಿರುದ್ಧ ಸರ್ಕಾರ ಕಟು ನಿರ್ಧಾರ ಕೈಗೊಂಡಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಭ್ರಷ್ಟ ಅಧಿಕಾರಿ ತಲೆದಂಡವಾಗಿದೆ. ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ, ಅಕ್ರಮ ಹಣ ಸಂಪಾದನೆ ಆರೋಪದಡಿಯಲ್ಲಿ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.

ಬಿಡಿಎ ಭೂಸ್ವಾಧೀನ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸುಧಾ ಮನೆ ಮೇಲೆ, ಇತ್ತೀಚೆಗೆ ಎರಡು ಬಾರಿ ಎಸಿಬಿ ರೇಡ್ ಮಾಡಿತ್ತು. ರೇಡ್ ಮಾಡಿದ್ದ ವೇಳೆ ಕೋಟಿ ಕೋಟಿ ಅಕ್ರಮ ಆಸ್ತಿ ದಾಖಲೆ ಪತ್ತೆಯಾಗಿತ್ತು. ಅಲ್ಲದೆ, ಬ್ರೋಕರ್​ಗಳ ಜೊತೆ ಸೇರಿಕೊಂಡು ಅಕ್ರಮ ಹಣ ಸಂಪಾದಿಸಿದ್ದ ಆರೋಪವನ್ನು ಕೂಡ ಸುಧಾ ಹೊತ್ತಿದ್ದರು.

ಈ ಸಂಬಂಧ, ಕೆಲ ವರ್ಷಗಳ ಹಿಂದೆ ಎಸಿಬಿಗೆ ಖಾಸಗಿ ವ್ಯಕ್ತಿಗಳಿಂದ ದೂರು ದಾಖಲಾಗಿತ್ತು. ದೂರಿನ ಅನ್ವಯ ಇತ್ತೀಚೆಗೆ ಎಸಿಬಿ ದಾಳಿ ನಡೆಸಿತ್ತು. ಇದೀಗ, ಅಮಾನತು ಕುರಿತು ದೂರುದಾರ ಟಿ.ಜೆ. ಅಬ್ರಹಾಂ ಮಾಹಿತಿ ನೀಡಿದ್ದಾರೆ. ಡಿಪಿಎಆರ್​ನಿಂದ ಖಚಿತ ಮಾಹಿತಿ ದೊರಕಿದೆ. ಇನ್ನು ಅಮಾನತು ಆದೇಶದ ಪ್ರತಿ ಸುಧಾ ಕೈಸೇರುವೊದೊಂದೇ ಬಾಕಿ ಉಳಿದಿದೆ.

’ನನ್ನದು ರಿಯಲ್ ಎಸ್ಟೇಟ್ ವ್ಯವಹಾರ.. ಸ್ನೇಹ ಹೊರತಾಗಿ BDA ಡಾ.ಸುಧಾ ಜೊತೆ ಯಾವುದೇ ವ್ಯವಹಾರಿಕ ಸಂಬಂಧ ಮಾಡಿಲ್ಲ’

BBMP ಯಲ್ಲಿ ನೂರಾರು ಕೋಟಿ ‘ಬೃಹತ್‘ ಭ್ರಷ್ಟಾಚಾರ, ಅಧಿಕಾರಿಗಳ ವಿರುದ್ಧ ಎಸಿಬಿಯಲ್ಲಿ FIR

Published On - 12:04 pm, Mon, 18 January 21