AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ? ಎಣಿಸಿ, ರೈತಶ್ರಮದ ಮಹತ್ವ ಸಾರಿದ್ದಕ್ಕೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಮಾನ್ಯತೆ

ರಾಗಿಯನ್ನು ಬೆಳೆಯಲು ರೈತರು ಸಾಕಷ್ಟು ಕಷ್ಟ ಪಟ್ಟು, ಶ್ರಮ ಹಾಕುತ್ತಾರೆ. ಆ ಶ್ರಮ ಎಲ್ಲರಿಗೂ ತಿಳಿಯುವುದಿಲ್ಲ. ಅಲ್ಲದೆ, ರಾಗಿಗೆ ಇಂದಿಗೂ ಬೆಂಬಲ ಬೆಲೆ ಸಿಕ್ಕಿಲ್ಲ. ರಾಗಿಯ ಮಹತ್ವ ತಿಳಿಸಲು ಈ ಕೆಲಸ ಮಾಡಿದ್ದೇನೆ.

ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ? ಎಣಿಸಿ, ರೈತಶ್ರಮದ ಮಹತ್ವ ಸಾರಿದ್ದಕ್ಕೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಮಾನ್ಯತೆ
Follow us
TV9 Web
| Updated By: ganapathi bhat

Updated on:Apr 06, 2022 | 8:50 PM

ರಾಮನಗರ: ಜಿಲ್ಲೆಯಲ್ಲಿ ಎಲ್ಲೆಡೆ ರಾಗಿ ಬೆಳೆಯ ಒಕ್ಕಣೆ ನಡೆಯುತ್ತಿದೆ. ರೈತರು ಮಳೆಯ ಆತಂಕದ ನಡುವೆ ತಾವು ಕಷ್ಟಪಟ್ಟು ಬೆಳೆದ ರಾಗಿಯನ್ನು ಒಕ್ಕಣೆ ನಡೆಸಿ ಬೆಳೆಯನ್ನು ಸಂಗ್ರಹಿಸುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ಮಧ್ಯೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಯುವಕರೊಬ್ಬರು ಒಂದು ಕೆಜಿಯಲ್ಲಿ ಎಷ್ಟು ರಾಗಿ ಕಾಳುಗಳಿವೆ ಎಂಬುದನ್ನು ಎಣಿಸಿ, ರೈತರ ಶ್ರಮಕ್ಕೆ ವಿಭಿನ್ನವಾಗಿ ಧನ್ಯವಾದ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ ಇವರ ಈ ವಿಭಿನ್ನ ಸಾಧನೆ ಕರ್ನಾಟಕ ಬುಕ್ ಆಫ್ ರೆಕಾರ್ಡ್​ನಲ್ಲೂ ಸ್ಥಾನ ಪಡೆದಿರುವುದು ವಿಶೇಷ.

ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಅಬ್ಬೂರು ಗ್ರಾಮದ ದಿವಂಗತ ಮಂಚಶೆಟ್ಟಿ ಹಾಗೂ ದಿವಂಗತ ದೇವಮ್ಮ ಎಂಬವರ ಪುತ್ರ ಶ್ರೀನಿವಾಸ್ ಈ ವಿಭಿನ್ನ ಸಾಧನೆ ಮಾಡಿರುವ ಯುವಕ. ಎಂಎ ಪದವೀಧರನಾಗಿರುವ ಶ್ರೀನಿವಾಸ್ ಅವರು ಸಾಹಿತಿಯಾಗಿ, ಸಾಂಸ್ಕೃತಿಕ ಸಂಘಟಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ರೈತನ ಮಗನಾಗಿ ಹುಟ್ಟಿದ ಶ್ರೀನಿವಾಸ್, ರೈತರು ಕಷ್ಟಪಟ್ಟು ಬೆಳೆಯುವ ಬೆಳೆಯ ಶ್ರಮವನ್ನು ವಿಭಿನ್ನವಾಗಿ ಜನತೆಯ ಮುಂದಿಡಬೇಕು ಎಂಬ ಉದ್ದೇಶದಿಂದ ಈ ಕಾರ್ಯವನ್ನು ಕೈಗೆತ್ತಿಕೊಂಡು ಯಶಸ್ವಿಗೊಂಡಿದ್ದಾರೆ.

ಸಾಮಾನ್ಯವಾಗಿ ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂಬುದು ಎಷ್ಟೋ ಜನರಿಗೆ ಗೊತ್ತಿರುವುದಿಲ್ಲ. ಅದನ್ನು ತಿಳಿದುಕೊಳ್ಳುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಆದರೆ, ಆ ಕೆಲಸವನ್ನು ಶ್ರೀನಿವಾಸ್ ಮಾಡಿ ತೋರಿಸಿದ್ದಾರೆ. ಒಂದು ಕೆಜಿ ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂಬುದನ್ನು ಎಣಿಸಿರುವ ಇವರು, ಪ್ರತಿ ಪ್ಯಾಕೆಟ್​ನಲ್ಲಿ 500 ಕಾಳುಗಳನ್ನು ಬೇರ್ಪಡಿಸಿ, ಅತಿ ಸಣ್ಣದಾದ ರಾಗಿಕಾಳುಗಳನ್ನು ಕೂಡ ಹೆಚ್ಚುಕಡಿಮೆಯಾಗದಂತೆ ಎಣಿಸಿರುವುದು ವಿಶೇಷವಾಗಿದೆ.

ಮೊದಲಿಗೆ ಒಂದು ಕೆಜಿ ರಾಗಿ ತೂಕವನ್ನು ಪಡೆದ ಇವರು, ಮೂರು ದಿನಗಳಲ್ಲಿ 37 ಗಂಟೆಗಳ ಸಮಯವನ್ನು ತೆಗೆದುಕೊಂಡು, ರಾಗಿ ಕಾಳುಗಳನ್ನು ಎಣಿಸಿ, ಆನಂತರ 685 ಪ್ಯಾಕೆಟ್​ಗಳಲ್ಲಿ ರಾಗಿಕಾಳುಗಳನ್ನು ತುಂಬಿಸಿದ್ದಾರೆ. ಈ ಒಂದೊಂದು ಪ್ಯಾಕೆಟ್ ರಾಗಿ ಕಾಳುಗಳನ್ನು ಕೂಡ ತೂಕ ಮಾಡಿದ್ದಾರೆ. ಒಂದೊಂದು ರಾಗಿ ಕಾಳಿನ ಪ್ಯಾಕೆಟ್​ಗಳು 2.10ರಿಂದ 15 ಮಿಲಿ ಗ್ರಾಂ ಬರುತ್ತವೆ. ಇವರು ಎಣಿಸಿರುವ ಒಟ್ಟು ಒಂದು ಕೆಜಿ ರಾಗಿಯಲ್ಲಿ 3,42,249 ಕಾಳುಗಳು ಬಂದಿದ್ದು, ಅತಿಕ್ಲಿಷ್ಟಕರವಾದ ಈ ವಿಭಿನ್ನ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಈ ಎಲ್ಲ ಮಾಹಿತಿ ಹಾಗೂ ವಿಡಿಯೋ ಮತ್ತು ಫೋಟೊಗಳನ್ನ ಕರ್ನಾಟಕ ಬುಕ್ ಆಫ್ ರೆಕಾರ್ಡ್​ಗೆ ಕಳುಹಿಸಿಕೊಟ್ಟಿದ್ದಾರೆ. ಅವರಿಗೆ ಕರ್ನಾಟಕ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ ಕೂಡ ಲಭಿಸಿದೆ.

ರಾಜ್ಯದಲ್ಲಿ ರಾಗಿ ಬೆಳೆಗೆ ವಿಶೇಷವಾದ ಮಹತ್ವವಿದೆ. ಗ್ರಾಮೀಣ ಭಾಗದ ಜನರು ರಾಗಿ ಬೆಳೆಯನ್ನು ಸಾಕಷ್ಟು ಅವಲಂಬಿಸಿದ್ದಾರೆ. ಉತ್ತಮ ಆರೋಗ್ಯಕರ ಆಹಾರ ಎಂಬ ಖ್ಯಾತಿಯನ್ನು ರಾಗಿ ಪಡೆದಿದೆ. ಈ ಬೆಳೆಯನ್ನು ಬೆಳೆಯಲು ರೈತರ ಶ್ರಮ ಅಪಾರವಾಗಿದ್ದು, ಒಂದು ಕಾಳು ಬೆಳೆಯ ಹಿಂದೆಯೂ ಮಹತ್ವವಾದ ಪರಿಶ್ರಮವಿರುತ್ತದೆ. ರೈತರ ಶ್ರಮ ಹಾಗೂ ರಾಗಿ ಮಹತ್ವವನ್ನು ಸಾರುವ ಉದ್ದೇಶದಿಂದ ಶ್ರೀನಿವಾಸ್ ಕೈಗೆತ್ತಿಗೊಂಡ ಈ ವಿಭಿನ್ನ ಸಾಧನೆ ಇದೀಗ ಎಲ್ಲರ ಮನಸೂರೆಗೊಂಡಿದೆ.

ಶ್ರೀನಿವಾಸ್, ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಸಾಹಿತ್ಯದ ಕಡೆಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಕುವೆಂಪು ಅವರ ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ ಕಾದಂಬರಿಗಳಿಂದ ಪ್ರಭಾವಿತರಾಗಿ ಸಾಹಿತ್ಯದ ಕಡೆ ವಾಲಿದ್ದಾರೆ. ಪ್ರಸ್ತುತ ಚನ್ನಪಟ್ಟಣ ತಾಲೂಕಿನ ಕಣ್ವ ಹಾಗೂ ಶಾನಭೋಗನ ಹಳ್ಳಿ ಗ್ರಾಮಗಳಲ್ಲಿ ಪ್ರೌಢಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿರುವ ಇವರು, ನೀ ಜಿಗುಟುವಷ್ಟು ಚೂಟಿ ಹಾಗೂ ಹಾಲ್ಗಂಬ ಎಂಬ ಕವನ ಸಂಕಲನವನ್ನು ಬರೆದಿದ್ದಾರೆ. ಅಷ್ಟೇ ಅಲ್ಲದೆ ಹಾವೇರಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ವತಿಯಿಂದ ರಾಮನಗರ ಜಿಲ್ಲೆಯ ಕ್ಷೇತ್ರ ಕಾರ್ಯತಜ್ಞನಾಗಿಯೂ ಕೆಲಸ ನಿರ್ವಹಿಸುತ್ತಿದ್ದಾರೆ.

ಪ್ರತಿಯೊಬ್ಬರಿಗೂ ರಾಗಿಯ ಮಹತ್ವ ಗೊತ್ತು.  ರಾಗಿಯನ್ನು ಬೆಳೆಯಲು ರೈತರು ಸಾಕಷ್ಟು ಕಷ್ಟ ಪಟ್ಟು, ಶ್ರಮ ಹಾಕುತ್ತಾರೆ. ಆ ಶ್ರಮ ಎಲ್ಲರಿಗೂ ತಿಳಿಯುವುದಿಲ್ಲ. ಅಲ್ಲದೆ, ರಾಗಿಗೆ ಇಂದಿಗೂ ಬೆಂಬಲ ಬೆಲೆ ಸಿಕ್ಕಿಲ್ಲ. ಹೀಗಾಗಿ ರಾಗಿಯ ಮಹತ್ವ ತಿಳಿಸುವ ನಿಟ್ಟಿನಲ್ಲಿ ಈ ಕೆಲಸ ಮಾಡಿದ್ದೇನೆ ಎಂದು ಶ್ರೀನಿವಾಸ್ ಮಾತನಾಡುತ್ತಾರೆ.

ಕರ್ನಾಟಕ ಬುಕ್ ಆಫ್ ರೆಕಾರ್ಡ್ ಜೊತೆಗೆ ಶ್ರೀನಿವಾಸ್

ಶ್ರೀನಿವಾಸ್ ಅವರಿಗೆ ಸನ್ಮಾನ

ಶ್ರೀನಿವಾಸ್ ಹಾಗೂ ಅವರ ಕವನ ಸಂಕಲನಗಳು

ರೈಲಿನ ಬೋಗಿಯಂತೆ ಕಂಗೊಳಿಸುವ ರಾಗಿ ಮೆದೆ: ಎಲ್ಲಿ ಗೊತ್ತಾ?

Published On - 1:32 pm, Mon, 18 January 21

ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಹೆಂಡತಿಯೊಂದಿಗೆ ಕಾರಲ್ಲಿ ಪ್ರಯಾಣಿಸುತ್ತಿದ್ದ ಸೇಲ್ಸ್ ಮ್ಯಾನೇಜರ್
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ಗುರು ಸಂಚಾರದಿಂದ ವೃಶ್ಚಿಕ ರಾಶಿಯವರಲ್ಲಿ ಭಯದ ವಾತಾವಾರಣ ನಿರ್ಮಾಣವಾಗಲಿದೆ!
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
ತುಲಾ ರಾಶಿಗೆ ಭಾಗ್ಯ ಸ್ಥಾನದಲ್ಲಿ ಗುರು ಸಂಚಾರ; ಅದೃಷ್ಟವೋ ಅದೃಷ್ಟ
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
2025ರ ಗುರು ಸಂಚಾರ ಕನ್ಯಾ ರಾಶಿಯವರ ಮೇಲೆ ಹೇಗೆ ಪ್ರಭಾವ ಬೀರಲಿದೆ?
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ರಾಗಿಣಿ ಹಾಗೂ ಕುರಿ ಸೇರಿದ್ರೆ ‘ಕುರಾಗಿಣಿ’; ಪ್ರತಾಪ್ ಲೆಕ್ಕಾಚಾರ ನೋಡಿ
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ದಲಿತರಿಗೆ ಮೀಸಲಾತಿ ಸಿಕ್ಕಿದ್ದು ಡಾ ಅಂಬೇಡ್ಕರ್ ಪ್ರಯತ್ನಗಳಿಂದ: ಯತ್ನಾಳ್
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಬರೋಬ್ಬರಿ 90.23 ಮೀಟರ್: ಹೊಸ ಇತಿಹಾಸ ನಿರ್ಮಿಸಿದ ನೀರಜ್ ಚೋಪ್ರಾ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ಸೂರ್ಯ ವೃಷಭ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
‘ನನ್ನ ಹೇರ್​ ಕಟಿಂಗ್​ ಬಜೆಟ್ ಒಂದು ಲಕ್ಷ ರೂಪಾಯಿ’: ನಟ ಪ್ರಥಮ್
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ
ಮಳೆಯಲ್ಲಿ ಕೊಚ್ಚಿಹೋಗುತ್ತಿದ್ದ ಶೇಂಗಾ ಉಳಿಸಿಕೊಳ್ಳಲು ಯುವಕನ ಪರದಾಟ