ಮಂಗಳೂರು: ಟಿಪ್ಪರ್ಗೆ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಮಹಿಳೆ ಮೃತಪಟ್ಟಿರುವ ಘಟನೆ ಮಂಗಳೂರಿನ ಕುಂಟಿಕಾನ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಪಂಜಿಮೊಗರು ನಿವಾಸಿ 43 ವರ್ಷ ವಯಸ್ಸಿನ ಬ್ಯೂಟಿಶಿಯನ್ ಆಗಿರುವ ಪ್ರಿಯಾ ಸುವರ್ಣ ಅಪಘಾತದಲ್ಲಿ ಮೃತಪಟ್ಟವರು.
ಹಿಂಬದಿಯಿಂದ ಅತೀ ವೇಗವಾಗಿ ಲಾರಿ ಬಂದಿದೆ ಮುಂದೆ ಸಾಗುತ್ತಿದ್ದ ಪ್ರಿಯಾಳಿಗೆ ಸಾವು ತನ್ನ ಬೆನ್ನ ಹಿಂದೆ ಇರುವುದು ತಿಳಿದಿಲ್ಲ. ವೇಗವಾಗಿ ಬಂದ ಲಾರಿ ಮುಂದೆ ಸಾಗುತ್ತಿದ್ದ ಬ್ಯೂಟಿಶಿಯನ್ ಪ್ರಿಯಾಳ ಸ್ಕೂಟರ್ಗೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ಪ್ರಿಯಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
Published On - 8:18 pm, Wed, 27 November 19