AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ

ಮಳೆ ಆರ್ಭಟ: ಉಕ್ಕಿ ಹರಿಯುತ್ತಿರುವ ಮಲಪ್ರಭೆ; ಗಂಗಾಂಬಿಕಾ ಐಕ್ಯ ಸ್ಥಳ ಜಲಾವೃತ

ಸಹದೇವ್​ ಮಾನೆ
| Edited By: |

Updated on:Aug 04, 2026 | 4:34 PM

Share

ಮುಖ್ಯಾಂಶಗಳು

  • ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಮಲಪ್ರಭಾ ನದಿ
  • ಇಟಗಿ ಗ್ರಾಮದ ಬಳಿಯ ಅಕ್ಕ ಗಂಗಾಂಬಿಕಾ ಐಕ್ಯ ಸ್ಥಳ ಸುತ್ತುವರೆದ ನದಿ
  • ಮಲಪ್ರಭಾ ನದಿಗೆ 7 ಸಾವಿರ ಕ್ಯೂಸೆಕ್ ಒಳ ಹರಿವು‌

ಬೆಳಗಾವಿ ಜಿಲ್ಲೆಯಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇಟಗಿ ಗ್ರಾಮದ ಬಳಿ ಇರುವ ಅಕ್ಕ ಗಂಗಾಂಬಿಕಾ ಐಕ್ಯ ಸ್ಥಳ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 7000 ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ನವಿಲುತೀರ್ಥ ಜಲಾಶಯದ ಕಡೆಗೆ ಸಾಗುತ್ತಿದೆ. ಇದರಿಂದ ರೈತ ಸಮುದಾಯ ಹಾಗೂ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ.

ಬೆಳಗಾವಿ, ಆಗಸ್ಟ್​ 04: ಜಿಲ್ಲೆಯ ಖಾನಾಪುರ ಮತ್ತು ಕಣಕುಂಬಿ ಭಾಗದಲ್ಲಿ ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲಪ್ರಭಾ ನದಿಯು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಕಿತ್ತೂರು ತಾಲೂಕಿನ ಇಟಗಿ ಗ್ರಾಮದ ಬಳಿ ಹರಿಯುವ ಮಲಪ್ರಭಾ ನದಿಗೆ ಸದ್ಯ 7000 ಕ್ಯೂಸೆಕ್ ನೀರು ಹರಿದುಬರುತ್ತಿದೆ. ನದಿಯ ತಟದಲ್ಲಿರುವ ಅಕ್ಕ ಗಂಗಾಂಬಿಕಾ ಐಕ್ಯ ಸ್ಥಳವು ಸಂಪೂರ್ಣವಾಗಿ ಮಲಪ್ರಭಾ ನದಿಯಿಂದ ಸುತ್ತುವರೆದಿದೆ. ಒಂದು ತಿಂಗಳ ಹಿಂದೆ ಸಂಪೂರ್ಣವಾಗಿ ಬತ್ತಿ ಹೋಗಿದ್ದ ನದಿಗೆ ಇದೀಗ ಜೀವಕಳೆ ಬಂದಿದೆ. ನದಿ ಪಾತ್ರದಲ್ಲಿರುವ ಕೆಳ ಹಂತದ ಸೇತುವೆಗಳು ಸಹ ಮುಳುಗುವ ಹಂತಕ್ಕೆ ತಲುಪಿವೆ. ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿರುವ ಬ್ರಿಡ್ಜ್ ಕಂ ಬ್ಯಾರೇಜ್ ಗೇಟ್‌ಗಳನ್ನು ತೆರೆದು ನೀರನ್ನು ಹೊರಬಿಡಲಾಗುತ್ತಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Published on: Aug 04, 2026 04:33 PM

Follow Us