ಬೆಳಗಾವಿ, ಜುಲೈ 15: ನೀಟ್ ಪರೀಕ್ಷೆ (NEET exam) ಬರೆದ ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿ ಕಡಿಮೆ ಅಂಕ ಪಡೆದುಕೊಂಡವರಿಗೆ ಮೆಡಿಕಲ್ ಸೀಟ್ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ (Fraud) ಅಂತಾರಾಜ್ಯ ವಂಚಕನನ್ನು ಬೆಳಗಾವಿ ಮಾರ್ಕೆಟ್ ಪೊಲೀಸರು ಬಂಧಿಸಿದ್ದಾರೆ. ಹೈದರಾಬಾದ್ ಮೂಲದ ಅರವಿಂದ್ ಅರಗೊಂಡ ಬಂಧಿತ ವ್ಯಕ್ತಿ. ಎಂಬಿಎ ಪದವೀಧರನ್ನಾಗಿದ್ದು ಜನರಿಗೆ ವಂಚನೆ ಮಾಡುವುದನ್ನ ವೃತ್ತಿ ಮಾಡಿಕೊಂಡಿದ್ದ. ನಗರದಲ್ಲೇ 10 ಜನರಿಗೆ ಮೋಸ ಮಾಡಿದ್ದು 1 ಕೋಟಿ 8 ಲಕ್ಷ ರೂ. ವಂಚಿಸಿದ್ದಾನೆ.
ಬೆಳಗಾವಿ ಮೂಲದ ಓರ್ವ ವಿದ್ಯಾರ್ಥಿ ತಾಯಿ ನೀಡಿದ ದೂರಿನನ್ವಯ ಆರೋಪಿಯನ್ನು ಬಂಧಿಸಲಾಗಿದೆ. ತಾಂತ್ರಿಕ ಸಾಕ್ಷಿಗಳ ಆಧಾರದ ಮೇಲೆ ಆರೋಪಿಯನ್ನು ಖೆಡ್ಡಾಗೆ ಬೀಳಿಸಲಾಗಿದೆ. ಬಂಧಿತ ಆರೋಪಿಯಿಂದ 12 ಲಕ್ಷ ರೂ. ನಗದು, ಕೃತ್ಯಕ್ಕೆ ಬಳಸಿದ್ದ 12 ಕಂಪ್ಯೂಟರ್, ಒಂದು ಲ್ಯಾಪ್ ಟಾಪ್ ಜಪ್ತಿ ಮಾಡಲಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಲವ್, ಸೆಕ್ಸ್ ದೋಖಾ: ಇಬ್ಬರು ಯುವತಿಯರಿಗೆ ಮೋಸ, ಮತ್ತೊಬ್ಬಳೊಂದಿಗೆ ಯುವಕ ಪರಾರಿ
2023ರಲ್ಲಿ ಬೆಳಗಾವಿಯಲ್ಲಿ ಅರವಿಂದ್ ನೀಟ್ ಕೌನ್ಸೆಲಿಂಗ್ ಸೆಂಟರ್ ಓಪನ್ ಮಾಡಿದ್ದ. ಹತ್ತು ಜನ ಟೆಲಿ ಕಾಲರ್ಸ್ ನೇಮಕ ಮಾಡಿಕೊಂಡು ವಂಚಿಸುತ್ತಿದ್ದ. ಕಡಿಮೆ ಅಂಕ ಪಡೆದವರಿಗೆ ಫೋನ್ ಮೂಲಕ ಸಂಪರ್ಕಿಸಿ ಮೆಡಿಕಲ್ ಸೀಟ್ ಕೊಡಿಸುವುದಾಗಿ ವಿದ್ಯಾರ್ಥಿಗಳು ಸೇರಿದಂತೆ ಪೋಷಕರಿಗೆ ಭರವಸೆ ನೀಡಿ ಮಕ್ಮಲ್ ಟೋಪಿ ಹಾಕಿದ್ದಾನೆ. ಬಳಿಕ ಕಚೇರಿ ಬಂದ್ ಮಾಡಿ ಮುಂಬೈಗೆ ಪರಾರಿಯಾಗಿದ್ದಾನೆ.
ಇದನ್ನೂ ಓದಿ: ಸೈಬರ್ ವಂಚನೆಗೆ ಹೊಸ ದಾರಿ: ಮನೆಗೆ ಬರುತ್ತೆ ಕೂಪನ್, ಸ್ಕ್ಯಾನ್ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಮಾಯ
ಮುಂಬೈನಲ್ಲೂ ನೀಟ್ ಕೌನ್ಸೆಲಿಂಗ್ ಸೆಂಟರ್ ಓಪನ್ ಮಾಡಲು ಸಿದ್ಧತೆ ನಡೆಸಿದ್ದ. ಅಷ್ಟರಲ್ಲೇ ಬಂಧಿಸಲಾಗಿದೆ. ಆ ಮೂಲಕ ಆತನಿಂದ ಮತ್ತಷ್ಟು ಜನರಿಗೆ ವಂಚನೆಯಾಗುವುದು ತಪ್ಪಿದೆ. ಆರೋಪಿ ವಿರುದ್ಧ ಆಂಧ್ರಪ್ರದೇಶ, ಮಧ್ಯಪ್ರದೇಶ ಮತ್ತು ಬೆಂಗಳೂರಿನಲ್ಲಿ ವಂಚನೆ ಪ್ರಕರಣ ದಾಖಲಾಗಿತ್ತು. ಪೋನ್, ವಿಳಾಸ, ಆಧಾರ್ ಕಾರ್ಡ್ ಬದಲಿಸುತ್ತಿದ್ದ.
ಮಂಡ್ಯ: ಜಿಲ್ಲೆಯ ಪಾಂಡವಪುರ ಠಾಣೆ ಪೊಲೀಸರ ಕಾರ್ಯಾಚರಣೆ ನಡೆಸಿ ಅಂತರ್ ಜಿಲ್ಲಾ ಬೈಕ್ ಕಳ್ಳನ ಬಂಧನ ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಆರ್ ಸಾಗರ ಗ್ರಾಮದ ನಿವಾಸಿ ರಾಜಾಚಾರಿ ಬಂಧಿತ ಆರೋಪಿ. ಬಂಧಿತನಿಂದ 5 ಲಕ್ಷ ರೂ ಮೌಲ್ಯದ 13 ಬೈಕ್ಗಳನ್ನು ವಶ ಪಡೆಸಿಕೊಳ್ಳಲಾಗಿದೆ. ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಬೈಕ್ಗಳನ್ನ ಕಳ್ಳತನ ಮಾಡುತ್ತಿದ್ದ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.