ಬೆಳಗಾವಿ: ಮಲತಾಯಿಯ ಕ್ರೌರ್ಯಕ್ಕೆ ಬಲಿಯಾಯ್ತಾ 3 ವರ್ಷದ ಕಂದಮ್ಮ? ಆಗಿದ್ದೇನು?
ಮೂರು ವರ್ಷದ ಹಸೂಗೂಸು ಹುಟ್ಟುತ್ತಲೇ ಅಮ್ಮನನ್ನು ಕಳೆದುಕೊಂಡಿತ್ತು. ಸದ್ಯ ತನ್ನ ಎರಡನೇ ತಾಯಿಯ ಜತೆಗೆ ಬೆಳಿತಿತ್ತು. ನಿನ್ನೆ ತಡರಾತ್ರಿ ವಾಂತಿ ಭೇದಿಯಿಂದ ಬಳಲುತ್ತಿದ್ದ ಆ ಮಗು ಬೆಳಗ್ಗೆ ಅನ್ನುವಷ್ಟರಲ್ಲಿ ಸಾವನ್ನಪ್ಪಿದೆ. ಆದರೆ ಮಗುವಿನ ಸಾವಿಗೆ ಮಲತಾಯಿಯೇ ಕಾರಣ ಎಂದು ಅಜ್ಜಿ ಹಾಗೂ ಚಿಕ್ಕಪ್ಪನಿಂದ ಆರೋಪಿಸಲಾಗುತ್ತಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದೆ.
ಬೆಳಗಾವಿ, ಮೇ 20: ಮಲತಾಯಿಯ ಕ್ರೌರ್ಯಕ್ಕೆ ಮೂರು ವರ್ಷದ ಕಂದಮ್ಮನ ಕೊಲೆ (murder) ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಬೆಳಗಾವಿಯ ಕಂಗ್ರಾಳಿ ಕೆ.ಹೆಚ್ ಗ್ರಾಮದಲ್ಲಿ ಘಡನೆ ನಡೆದಿದ್ದು, ಮಲತಾಯಿ ಸಪ್ನಾ ನಾವಿ ಮೂರು ವರ್ಷದ ಸಮೃದ್ಧಿ(3) ಕೊಲೆ ಆರೋಪ ಕೇಳಿಬಂದಿದೆ. ಇಂದು ಬೆಳಗ್ಗೆ ಮಗುವಿನ (baby) ಮೇಲೆ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿ ಮೃತ ಸಮೃದ್ದಿ ಅಜ್ಜಿ ಹಾಗೂ ಚಿಕ್ಕಪ್ಪನಿಂದ ಸಪ್ನಾ ವಿರುದ್ಧ ಆರೋಪ ಮಾಡಲಾಗುತ್ತಿದೆ. ಆದರೆ ಕೊಲೆ ಬಳಿಕ ವಾಂತಿ ಮಾಡಿಕೊಂಡು ಮಗು ಮೃತಪಟ್ಟಿದೆ ಎಂದು ಸಪ್ನಾ ಫೋನ್ ಮಾಡಿದ್ದಾಳಂತೆ.
ಮೊದಲ ಪತ್ನಿ ಕೊಲೆ ಆರೋಪ ಎದುರಿಸುತ್ತಿರುವ ಕುಟುಂಬ
ಸಿಆರ್‌ಪಿಎಫ್ ಯೋಧನಾಗಿ ಕಾರ್ಯ ನಿರ್ವಹಿಸುತ್ತಿರುವ ರಾಯಣ್ಣ ನಾವಿ ಮೊದಲ ಪತ್ನಿ ನಿಧನದಿಂದಾಗಿ ಎರಡನೇ ಮದುವೆಯಾಗಿದ್ದರು. ಮೊದಲ ಪತ್ನಿ ಭಾರತಿ ನಾವಿ ಕೊಲೆ ಆರೋಪವನ್ನು ಗಂಡ ರಾಯಣ್ಣ ಕುಟುಂಬ ಎದುರಿಸುತ್ತಿದೆ.
ಪತಿ ರಾಯಣ್ಣ, ತಾಯಿ ಶೋಭಾ, ತಂಗಿ ರೂಪಾ ವಿರುದ್ಧ 2021 ರಲ್ಲಿ ನಾಗಪುರದ ಕಾರದಾ ಠಾಣೆಯಲ್ಲಿ ದೂರು ದಾಖಲಾಗಿದೆ. ಆ ಪ್ರಕಣದಲ್ಲೂ ರಾಯಣ್ಣ ನಾವಿ ಕುಟುಂಬ ಆರೋಪಿಯಾಗಿದೆ. ಅಂದು ತಾಯಿ ಕೊಂದು ಇಂದು ಆಕೆಯ ಮಗಳು ಸಮೃದ್ಧಿಯನ್ನೂ ಕೊಂದ ಆರೋಪ ಕೇಳಿಬಂದಿದೆ. ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದೆ.
ಇದನ್ನೂ ಓದಿ: ಚಿಕ್ಕೋಡಿ: ನದಿಯಲ್ಲಿ ಬಟ್ಟೆ ತೊಳೆಯಲು ಹೋಗಿದ್ದ ನಾಲ್ವರು ನೀರುಪಾಲು
ಇನ್ನೂ ಘಟನೆ ನಡೆಯುತ್ತಿದ್ದಂತೆ ಮಗುವಿನ ಮಲತಾಯಿ ಸಪ್ನಾ ನೇರವಾಗಿ ಎಪಿಎಂಸಿ ಪೊಲೀಸ್ ಠಾಣೆಗೆ ಬಂದಿದ್ದಾರೆ. ಸಪ್ನಾ ಬಾಲಕಿಯ ಆರೋಗ್ಯದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಯೊಂದು ವಿಡಿಯೋವನ್ನು ತನ್ನ ಪತಿ ಸಿಆರ್ ಪಿ ಎಫ್ ಯೋಧ ಛತ್ತಿಸಘಡದಲ್ಲಿರುವ ರಾಯಣ್ಣನಿಗೆ ಕಳಿಸಿದ್ದಾರೆ. ಬಾಲಕಿ ರಾತ್ರಿ ಇಡೀ ವಾಂತಿ ಭೇದಿ ಮಾಡಿಕೊಳ್ಳುವುದು ಹಾಗೂ ಬೇರೆ ಬೇರೆ ಸಮಯದಲ್ಲಿ ಆರೋಗ್ಯದ ತೊಂದರೆಯಿಂದ ಬಳಲ್ತಿರೋ ವಿಡಿಯೋಗಳು ಮತ್ತು ಆಸ್ಪತ್ರೆಗೆ ತೋರಿಸಿದ ಚೀಟಿಗಳು ಸಮೃದ್ಧಿಯ ಎರಡನೇ ತಾಯಿ ಸಪ್ನಾ ಬಳಿ ಇವೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಸಪ್ನಾ ಬಾಲಕಿ ಅಜ್ಜ ಅಜ್ಜಿ ಮಾಡಿದ ಆರೋಪ ತಳ್ಳಿ ಹಾಕಿದ್ದಾರೆ. ಅವಳನ್ನ ಕೊಲೆ ಮಾಡಬೇಕಿದ್ರೇ ಯಾವಾಗಲೋ ಮಾಡಬಹುದಿತ್ತು, ತನ್ನ ಮಗುವಿನಂತೆ ಜೋಪಾನ ಮಾಡಿದ್ದೇನೆ. ತನಗೆ ಅವಳ ಜವಳಿ ಮಕ್ಕಳಾಗಿ ಮೃತಪಟ್ಟಿದ್ದು ಗರ್ಭಪಾತ ಮಾಡಿಸಿಕೊಂಡು ಸಮೃದ್ಧಿಯನ್ನ ಜೋಪಾನ ಮಾಡಿಕೊಂಡು ಬರ್ತಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನ ಪೋಷಣೆ ಮಾಡಿಕೊಂಡು ಬಂದಿದ್ದು ಎಲ್ಲ ವಿಚಾರವನ್ನ ಗಂಡನ ಗಮನಕ್ಕೆ ತಂದಿದ್ದೇನೆ ಅಂತಾ ಸಪ್ನ ಹೇಳ್ತಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಪ್ರೇಯಸಿ ಜತೆ ಹೋಗುತ್ತಿದ್ದವನನ್ನು ಅಡ್ಡಗಟ್ಟಿ ಸ್ಕ್ರೂಡ್ರೈವರ್ನಿಂದ ಚುಚ್ಚಿ ಬರ್ಬರ ಹತ್ಯೆ
ಇತ್ತ ಕೊಲೆ ಆರೋಪ ಕೇಳಿ ಬಂದ ಹಿನ್ನೆಲೆ ಬಿಮ್ಸ್ ನ ಶವಾಗಾರಕ್ಕೆ ಬಾಲಕಿ ಮೃತ ದೇಹ ಶಿಪ್ಟ್ ಮಾಡಿದ್ದು ಮರಣೋತ್ತರ ಪರೀಕ್ಷೆ ಮಾಡ್ತಿದ್ದಾರೆ. ಒಟ್ಟಿನಲ್ಲಿ ಒಂದು ಕಡೆ ಮೃತ ಬಾಲಕಿಯ ಅಜ್ಜಿ ಹಾಗೂ ಸಂಬಂಧಿಕರು ಇದು ಕೊಲೆ ಅಂತ ಆರೋಪಿಸುತ್ತಿದ್ದರೆ ಇತ್ತ ಸಪ್ನಾ ನಾನು ಕೊಲೆ ಮಾಡಿಲ್ಲ ಬಾಲಕಿಗೆ ಆರೋಗ್ಯ ಸಮಸ್ಯೆ ಇತ್ತು ಅದರಿಂದ ಬಾಲಕಿ ತೀರಿ ಹೋಗಿದ್ದಾಳೆ ಅಂತ ಸಪ್ನಾ ಹೇಳ್ತಿದ್ದಾಳೆ.
ಸದ್ಯ ಪೊಲೀಸರು ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು ಬಾಲಕಿ ತಂದೆ ಆಗಮನಕ್ಕೆ ಕಾಯುತ್ತಿದ್ದಾರೆ. ಅವರಿಂದ ದೂರು ಪಡೆದು ತನಿಖೆ ಶುರು ಮಾಡಲಿದ್ದು ಇತ್ತ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಯಾಗಿದೆಯಾ ಅಥವಾ ಅನಾರೋಗ್ಯದಿಂದ ಸಾವನ್ನಪ್ಪಿದೆಯಾ ಅನ್ನೋದು ಗೊತ್ತಾಗಲಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.