ವಿಧಾನಸಭೆ, ಡಿ.14: ಬೆಳಗಾವಿ ಅಧಿವೇಶನದಲ್ಲಿ (Belagavi Session) ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅವರು ಬಿಜೆಪಿ ಶಾಸಕ ಬಿಪಿ ಹರೀಶ್ (BP Harish) ಅವರಿಗೆ ಪಕ್ಷಾಂತರದ ಓಪನ್ ಆಫರ್ ಕೊಟ್ಟ ಘಟನೆ ನಡೆದಿದೆ. ಸೂಚನಾ ಕಲಾಪದ ವೇಳೆ ಹರಿಹರ ತಾಲೂಕಿನ ಬೈರನಪಾದ ಏತ ನೀರಾವರಿ ಯೋಜನೆ ಬಗ್ಗೆ ಬಿ.ಪಿ.ಹರೀಶ್ ಸರ್ಕಾರದ ಗಮನ ಸೆಳೆದರು.
ಈ ವೇಳೆ ನಾನು ಮೂರು ಬಾರಿ ಗೆದ್ದಾಗಲೂ ವಿಪಕ್ಷದಲ್ಲೇ ಇದ್ದೆ. ಯೋಜನೆ ಕಾಮಗಾರಿ ಕೆಲಸ ಆಗುತ್ತಿಲ್ಲ ಎಂದು ಹರೀಶ್ ಹೇಳಿದರು. ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ಡಿಕೆ ಶಿವಕುಮಾರ್, ಮೂರು ಬಾರಿ ಶಾಸಕನಾದಾಗಲೂ ವಿಪಕ್ಷದಲ್ಲೇ ಇದ್ದೆ ಎನ್ನುತ್ತಿದ್ದೀಯಾ. ಇದಕ್ಕೆ ಪರಿಹಾರ ನೀನೇ ಕಂಡುಕೊಳ್ಳಬೇಕು. ಆಡಳಿತ ಪಕ್ಷದ ಕಡೆ ಬರುವ ಬಗ್ಗೆ ನಿನಗೆ ಬಿಟ್ಟಿದ್ದು ಎಂದು ಮಾತಿನಲ್ಲೇ ಕಾಲೆಳೆದರು.
ಇದನ್ನೂ ಓದಿ: ಬೆಳಗಾವಿ ಅಧಿವೇಶನ: ಕೋಟ್ ಧರಿಸಿ ತಡವಾಗಿ ಅಧಿವೇಶನಕ್ಕೆ ಬಂದ ಚಲುವರಾಯಸ್ವಾಮಿ ಕಾಲೆಳೆದ ವಿಪಕ್ಷ ನಾಯಕ ಅಶೋಕ
ಮಾತು ಮುಂದುವರಿಸಿದ ಡಿಕೆ ಶಿವಕುಮಾರ್, ಭದ್ರಾ ಮೇಲ್ದಂಡೆ ರಾಷ್ಟ್ರೀಯ ಯೋಜನೆಯಾಗಿ ಘೋಷಿಸಿ ಕೇಂದ್ರ ಸರ್ಕಾರ ಹಣ ಮೀಸಲಿಡದೇ ಇರುವ ಹಿನ್ನೆಲೆ ಪ್ರಧಾನಿ ಭೇಟಿಗೆ ಅವಕಾಶ ಕೋರಿ ಪತ್ರ ಬರೆದಿದ್ದೇನೆ. ಅವಕಾಶ ಸಿಕ್ಕಿದರೆ ದೆಹಲಿಗೆ ನಿಯೋಗ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ ಎಂದರು. ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ದೆಹಲಿಗೆ ಹೋಗುವಾಗ ಪ್ರತ್ಯೇಕವಾಗಿ ಹೋಗಿ, ಜೊತೆಯಾಗಿ ಹೋಗಬೇಡಿ ಎಂದು ಮಾತಿನಲ್ಲೇ ಡಿಕೆಶಿ ಕಾಲೆಳೆದರು.
ನೀರಿನ ಸಮರ್ಥ ನಿರ್ವಹಣೆ ಮತ್ತು ಬಳಕೆಗಾಗಿ ಪ್ರತ್ಯೇಕ ವಿಧೇಯಕವನ್ನು ಮುಂದಿನ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನದಿಗಳ ಹರಿವಿನ ಪಾತ್ರಗಳಲ್ಲಿ ಅಕ್ರಮ ಪಂಪ್‌ಸೆಟ್ ಹಾಕುವುದನ್ನು ತಡೆಗಟ್ಟಲು ಪ್ರತ್ಯೇಕ ಕಾನೂನು ಜಾರಿಗೊಳಿಸುತ್ತೇವೆ ಎಂದರು.
ವಿಧಾನ ಪರಿಷತ್ನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, 1.14 ಕೋಟಿ ವಾಹನಗಳು ಬೆಂಗಳೂರು ನಗರದಲ್ಲಿವೆ. ಪ್ರತಿದಿನ 13000 ದ್ವಿಚಕ್ರ ವಾಹನಗಳ ರಿಜಿಸ್ಟ್ರೇಷನ್ ಆಗುತ್ತಿದೆ. ಪಾಟ್ಹೋಲ್ ತುಂಬಿಸೋದೇ ದೊಡ್ಡ ಕೆಲಸ ಆಗಿಬಿಟ್ಟಿದೆ. ಪಾಟ್ ಹೋಲ್ ತುಂಬಲು ಡಿಸೆಂಟ್ರಲೈಸ್ ಮಾಡಿದ್ದೇವೆ. ಕೇಬಲ್ ಅವರ ದೊಡ್ಡ ಹಾವಳಿ ಆಗಿಬಿಟ್ಟಿದೆ. ಬೆಂಗಳೂರಿನ ಶಾಸಕರನ್ನು ಸಭೆ ಕರೆಯುತ್ತಿದ್ದೇನೆ. ಟ್ಯಾಕ್ಸ್ ಕೂಡ ಎನಹ್ಯಾನ್ಸ್ ಮಾಡುತ್ತಾ ಇದ್ದೇವೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:44 pm, Thu, 14 December 23