ಸ್ಫೋಟಗೊಂಡ ಕಲ್ಲು ತಗುಲಿ ತಂದೆ ಜತೆ ತೆರಳಿದ್ದ ಬಾಲಕ ಸ್ಥಳದಲ್ಲೇ ದುರ್ಮರಣ

|

Updated on: May 19, 2020 | 7:47 PM

ಬೆಳಗಾವಿ: ಕ್ರಷರ್​​ನಲ್ಲಿ ಸ್ಫೋಟಗೊಂಡ ಕಲ್ಲು ತಗುಲಿ 10 ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅಥಣಿ ಪಟ್ಟಣ ಹೊರವಲಯದ ಬುಟಾಳಿ ಬಳಿ ಸಂಭವಿಸಿದೆ. ನಂದಗಾವ ಗ್ರಾಮದ ಮಹಾವೀರ್ ನಾಗನೂರ್(10) ಮೃತ ಬಾಲಕ. ಬುಟಾಳಿ ಸ್ಟೋನ್ ಕ್ರಷರ್​ ಬಳಿ ತಂದೆಯೊಂದಿಗೆ ಮಹಾವೀರ್ ನಾಗನೂರ್ ತೆರಳಿದ್ದ. ಕ್ರಷರ್​ನಲ್ಲಿ ಕೆಲವು ಕಲ್ಲುಗಳನ್ನು ಬ್ಲಾಸ್ಟ್​ ಮಾಡುತ್ತಿದ್ದರು. ಈ ವೇಳೆ ಸ್ಫೋಟಗೊಂಡ ಕಲ್ಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಸ್ಟೋನ್ ಕ್ರಷರ್ ಮಾಲೀಕ ಮತ್ತು ಕಾರ್ಮಿಕರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ […]

ಸ್ಫೋಟಗೊಂಡ ಕಲ್ಲು ತಗುಲಿ ತಂದೆ ಜತೆ ತೆರಳಿದ್ದ ಬಾಲಕ ಸ್ಥಳದಲ್ಲೇ ದುರ್ಮರಣ
Follow us on

ಬೆಳಗಾವಿ: ಕ್ರಷರ್​​ನಲ್ಲಿ ಸ್ಫೋಟಗೊಂಡ ಕಲ್ಲು ತಗುಲಿ 10 ವರ್ಷದ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಅಥಣಿ ಪಟ್ಟಣ ಹೊರವಲಯದ ಬುಟಾಳಿ ಬಳಿ ಸಂಭವಿಸಿದೆ. ನಂದಗಾವ ಗ್ರಾಮದ ಮಹಾವೀರ್ ನಾಗನೂರ್(10) ಮೃತ ಬಾಲಕ.

ಬುಟಾಳಿ ಸ್ಟೋನ್ ಕ್ರಷರ್​ ಬಳಿ ತಂದೆಯೊಂದಿಗೆ ಮಹಾವೀರ್ ನಾಗನೂರ್ ತೆರಳಿದ್ದ. ಕ್ರಷರ್​ನಲ್ಲಿ ಕೆಲವು ಕಲ್ಲುಗಳನ್ನು ಬ್ಲಾಸ್ಟ್​ ಮಾಡುತ್ತಿದ್ದರು. ಈ ವೇಳೆ ಸ್ಫೋಟಗೊಂಡ ಕಲ್ಲು ಬಡಿದು ಬಾಲಕ ಮೃತಪಟ್ಟಿದ್ದಾನೆ. ಘಟನೆ ನಡೆಯುತ್ತಿದ್ದಂತೆ ಸ್ಥಳದಿಂದ ಸ್ಟೋನ್ ಕ್ರಷರ್ ಮಾಲೀಕ ಮತ್ತು ಕಾರ್ಮಿಕರು ಪರಾರಿಯಾಗಿದ್ದಾರೆ. ಘಟನಾ ಸ್ಥಳಕ್ಕೆ ಅಥಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.