ಅತಿವೃಷ್ಟಿ ಕುರಿತಾದ ತಪ್ಪು ವರದಿ, ನಾಲ್ವರು ಅಧಿಕಾರಿಗಳ ಡಿಸ್ಮಿಸ್ ಮಾಡಿದ ಡಿಸಿ
ಬೆಳಗಾವಿ: ಅತಿವೃಷ್ಟಿಯಿಂದ ಹಾನಿಯಾದ ಗ್ಯಾರೇಜ್ ಕಟ್ಟಡಕ್ಕೆ ಮನೆ ಹಾನಿ ಎಂದು ತಪ್ಪು ವರದಿ ನೀಡಿದ್ದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಆದೇಶಿಸಿದ್ದಾರೆ. ಬೆಳಗಾವಿ ತಾಲೂಕಿನ ಅನಗೋಳದ ಗ್ರಾಮಲೆಕ್ಕಿಗ ಎಸ್.ಜಿ.ಜೋಗಳೇಕರ್, ಕಂದಾಯ ನಿರೀಕ್ಷಕ ಜೆ.ಕೆ.ಪಕಾಲೆ, ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಸಿ.ಐ.ಬಿ ಪಾಟೀಲ್, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಎಸ್.ಸಿ.ಮಠಪತಿ ಅಮಾನತುಗೊಂಡಿರುವ ಅಧಿಕಾರಿಗಳು. ಅತಿವೃಷ್ಟಿಯಿಂದ ಅನಗೋಳದ ಅರುಣ್ ಗಾವಡೆ ಎಂಬುವರ ಗ್ಯಾರೇಜ್ ಕಟ್ಟಡ ಹಾನಿಯೊಳಗಾಗಿತ್ತು. ಆದರೆ ಅಧಿಕಾರಿಗಳು ವಾಸದ ಮನೆ ಅತಿವೃಷ್ಟಿಯಿಂದ ಹಾನಿಯಾಗಿದೆ ಎಂದು […]
ಬೆಳಗಾವಿ: ಅತಿವೃಷ್ಟಿಯಿಂದ ಹಾನಿಯಾದ ಗ್ಯಾರೇಜ್ ಕಟ್ಟಡಕ್ಕೆ ಮನೆ ಹಾನಿ ಎಂದು ತಪ್ಪು ವರದಿ ನೀಡಿದ್ದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ಆದೇಶಿಸಿದ್ದಾರೆ. ಬೆಳಗಾವಿ ತಾಲೂಕಿನ ಅನಗೋಳದ ಗ್ರಾಮಲೆಕ್ಕಿಗ ಎಸ್.ಜಿ.ಜೋಗಳೇಕರ್, ಕಂದಾಯ ನಿರೀಕ್ಷಕ ಜೆ.ಕೆ.ಪಕಾಲೆ, ಮಹಾನಗರ ಪಾಲಿಕೆಯ ದ್ವಿತೀಯ ದರ್ಜೆ ಸಹಾಯಕ ಸಿ.ಐ.ಬಿ ಪಾಟೀಲ್, ಲೋಕೋಪಯೋಗಿ ಇಲಾಖೆ ಸಹಾಯಕ ಅಭಿಯಂತರ ಎಸ್.ಸಿ.ಮಠಪತಿ ಅಮಾನತುಗೊಂಡಿರುವ ಅಧಿಕಾರಿಗಳು.
ಅತಿವೃಷ್ಟಿಯಿಂದ ಅನಗೋಳದ ಅರುಣ್ ಗಾವಡೆ ಎಂಬುವರ ಗ್ಯಾರೇಜ್ ಕಟ್ಟಡ ಹಾನಿಯೊಳಗಾಗಿತ್ತು. ಆದರೆ ಅಧಿಕಾರಿಗಳು ವಾಸದ ಮನೆ ಅತಿವೃಷ್ಟಿಯಿಂದ ಹಾನಿಯಾಗಿದೆ ಎಂದು ತಪ್ಪು ವರದಿ ನೀಡಿದ್ದರು. ಗ್ಯಾರೇಜ್ ಮಾಲೀಕನ ಖಾತೆಗೆ ಒಂದು ಲಕ್ಷ ಮೊದಲ ಕಂತಿನ ಪರಿಹಾರ ಹಣ ಜಮೆ ಮಾಡಲಾಗಿತ್ತು. ತಪ್ಪು ವರದಿ ನೀಡಿದ್ದರಿಂದ ಅನರ್ಹರಿಗೆ ಪರಿಹಾರದ ಹಣ ಜಮೆ ಹಿನ್ನೆಲೆ. ತಪ್ಪು ವರದಿ ನೀಡಿದ ನಾಲ್ವರು ಅಧಿಕಾರಿಗಳನ್ನು ಅಮಾನತುಗೊಳಿಸಿ ಡಿಸಿ ಆದೇಶ ನೀಡಿದ್ದಾರೆ.
Published On - 2:36 pm, Mon, 23 December 19