‘ಬಿಜೆಪಿಯಿಂದ 40 ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ’ ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ ರಾಜು ಕಾಗೆ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಮಾತನಾಡಿದ ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಶೀಘ್ರದಲ್ಲೇ ಬಿಜೆಪಿಯಿಂದ 40 ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಾರೆ. -ಮಾಜಿ ಶಾಸಕ ರಾಜು ಕಾಗೆ

‘ಬಿಜೆಪಿಯಿಂದ 40 ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ’ ಹೊಸ ಬಾಂಬ್ ಸಿಡಿಸಿದ ಮಾಜಿ ಶಾಸಕ ರಾಜು ಕಾಗೆ
ಮಾಜಿ ಶಾಸಕ ರಾಜು ಕಾಗೆ
Updated By: ಆಯೇಷಾ ಬಾನು

Updated on: Oct 03, 2021 | 9:27 AM

ಬೆಳಗಾವಿ: ‘ಬಿಜೆಪಿಯಿಂದ 40 ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ’ ಎಂದು ಮದಭಾವಿಯಲ್ಲಿ ಮಾಜಿ ಶಾಸಕ ರಾಜು ಕಾಗೆ ಹೊಸ ಬಾಂಬ್ ಸಿಡಿಸಿದ್ದಾರೆ. ಸಂಪುಟದಿಂದ ಬೆಳಗಾವಿಯ ಕೆಲವರನ್ನು ಕೈಬಿಟ್ಟಿದ್ದಾರೆ. ಹೀಗಾಗಿ ಅಸಮಾಧಾನದಿಂದ ಬಿಜೆಪಿ ತೊರೆಯಲಿದ್ದಾರೆ ಎಂದು ಹೇಳಿದ್ದಾರೆ.

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮದಭಾವಿ ಗ್ರಾಮದಲ್ಲಿ ಮಾತನಾಡಿದ ಕಾಗವಾಡದ ಮಾಜಿ ಶಾಸಕ ರಾಜು ಕಾಗೆ ಶೀಘ್ರದಲ್ಲೇ ಬಿಜೆಪಿಯಿಂದ 40 ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷ ಸೇರುತ್ತಾರೆ. ಮಂತ್ರಿಮಂಡಲ ಬದಲಾವಣೆ ಮಾಡಿದ್ರೂ. ಬೆಳಗಾವಿ ಜಿಲ್ಲೆಯ ಎರಡ್ಮೂರು ಜನರನ್ನ ಸಂಪುಟದಿಂದ ಕೈಬಿಟ್ಟರು. ಇದರಿಂದ ಬೆಳಗಾವಿ ಮೂರು ಜನ ಶಾಸಕರು ಅಸಮಾಧಾನಗೊಂಡು ನಮ್ಮ ಜೊತೆ ಕಾಂಗ್ರೆಸ್ ಬರಲು ರೆಡಿ ಇದ್ದಾರೆ‌. ಬೆಳಗಾವಿ ಮೂವರು ಶಾಸಕರು ಸೇರಿ ಬಿಜೆಪಿಯ ನಲವತ್ತು ಜನ ಕಾಂಗ್ರೆಸ್ಗೆ ಬರಲಿದ್ದಾರೆ.

ಬೆಲೆ ಏರಿಕೆಯಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನಿಗೆ ಜನ ಶಾಪ ಹಾಕುತ್ತಿದ್ದಾರೆ. ಮಾಜಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿಯಾಗಿದ್ದ ವೇಳೆ ನೀನು ತಯಾರಿ ನಡೆಸು ಎಲ್ಲರಿಗೂ ಬೆನ್ನು ಹತ್ತಿದ್ದೇವೆ ನಮ್ಮ ಸರ್ಕಾರ ಬರುತ್ತೆ ಅಂತಾ ಹೇಳಿದ್ದಾರೆ ಎಂದು ರಾಜು ಕಾಗೆ ತಿಳಿಸಿದ್ದಾರೆ.

ಇದನ್ನೂ ಓದಿ: ಪೊಲೀಸರೆಂದು ಹೆದರಿಸಿ ಹಣ ವಸೂಲಿ! ಕೊಪ್ಪಳದಲ್ಲಿ ಇಬ್ಬರು ಬಂಧನ

Viral Video: ಎಟಿಎಂನಿಂದ ಹಣ ಪಡೆದು ಖುಷಿಯಿಂದ ಕುಣಿದು ಕುಪ್ಪಳಿಸಿದ ಹುಡುಗಿ; ಭರ್ಜರಿ ಡಾನ್ಸ್ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್