ಪೊಲೀಸರೆಂದು ಹೆದರಿಸಿ ಹಣ ವಸೂಲಿ! ಕೊಪ್ಪಳದಲ್ಲಿ ಇಬ್ಬರು ಬಂಧನ
ಆರೋಪಿಗಳು ತಾವು ಪೊಲೀಸ್ ಅಧಿಕಾರಿಗಳೆಂದು ವಾಹನ ತಪಾಸಣೆ ಮಾಡುತ್ತಿದ್ದರು. ಭೀಮೇಶ ಪರ್ಸ್ನಲ್ಲಿದ್ದ 1,000 ರೂ. ಹಣವನ್ನು ವಸೂಲಿ ಮಾಡುತ್ತಾರೆ. ಮಾತ್ರವಲ್ಲದೇ ಅವರ ಎಟಿಎಂ ಕಾರ್ಡ್ ಪಿನ್ ಪಡೆದು 1.500 ರೂ. ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ.
ಕೊಪ್ಪಳ: ಪೊಲೀಸರ ಸೋಗಿನಲ್ಲಿ ಹಣ ವಸೂಲಿ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಗದಗ ಮೂಲದ ಸಂಜಯ ಕೊಪ್ಪದ ಮತ್ತು ನರಗುಂದ ಮೂಲದ ಸಂಜು ಛಲವಾದಿ ಬಂಧಿತ ಆರೋಪಿಗಳು. ಬಂಧಿತರು ಆಗಸ್ಟ್ 15ರಂದು ಭೀಮೇಶ್ ಎಂಬುವವರ ಬೈಕ್ ತಡೆದು 1,000 ರೂ. ವಸೂಲಿ ಮಾಡಿದ್ದರು. ಈ ಘಟನೆ ಕೊಪ್ಪಳ ಹೊರವಲಯದಲ್ಲಿ ನಡೆದಿತ್ತು. ಭೀಮೇಶ್ ಬೈಕ್ನಲ್ಲಿ ಮುನಿರಾಬಾದ್ಗೆ ಹೊರಟಾಗ ಹಣ ವಸೂಲಿ ಮಾಡಿದ್ದರು. ಜೊತೆಗೆ ಎಟಿಎಂ ಪಿನ್ ಪಡೆದು 1,500 ರೂ. ಡ್ರಾ ಮಾಡಿಕೊಂಡಿದ್ದರು. ಸದ್ಯ ಆರೋಪಿಗಳನ್ನು ಕೊಪ್ಪಳ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ
ಆರೋಪಿಗಳು ತಾವು ಪೊಲೀಸ್ ಅಧಿಕಾರಿಗಳೆಂದು ವಾಹನ ತಪಾಸಣೆ ಮಾಡುತ್ತಿದ್ದರು. ಭೀಮೇಶ ಪರ್ಸ್ನಲ್ಲಿದ್ದ 1,000 ರೂ. ಹಣವನ್ನು ವಸೂಲಿ ಮಾಡುತ್ತಾರೆ. ಮಾತ್ರವಲ್ಲದೇ ಅವರ ಎಟಿಎಂ ಕಾರ್ಡ್ ಪಿನ್ ಪಡೆದು 1.500 ರೂ. ಹಣವನ್ನು ಡ್ರಾ ಮಾಡಿಕೊಳ್ಳುತ್ತಾರೆ. ಈ ಕುರಿತು ಭೀಮೇಶ ಕೊಪ್ಪಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆಯ ನಂತರ ಇಬ್ಬರನ್ನು ಬಂಧಿಸಲಾಗಿದೆ. ಈ ಇಬ್ಬರು ಇಂಥ ಹಲವಾರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರೆಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರಂತೆ. ಗದಗ, ಅಣ್ಣಿಗೇರಿ, ಹುಬ್ಬಳ್ಳಿಯ ವಿವಿಧ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ. ಗಾಂಜಾ ಮಾರುತ್ತಿದ್ದ ವ್ಯಕ್ತ ಬಂಧನ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. 25 ವರ್ಷದ ಲಗ್ಗೆರೆ ಶಂಕರ್ ಎಂಬಾತ ಗಾಂಜಾ ಮಾರಾಟ ಮಾಡುತ್ತಿದ್ದ. ಅನುಮಾನ ಬಾರದಂತೆ ಪೀಣ್ಯದ ಎಸ್ಆರ್ಎಸ್ ಪಾರ್ಕ್ನಲ್ಲಿ ಗಾಂಜಾ ಮಾರುತ್ತಿದ್ದ. ಗುಪ್ತವಾಗಿ ಮಧ್ಯಾಹ್ನನದ ವೇಳೆ ಮಾರಾಟ ಮಾಡುತ್ತಿದ್ದ. ಈತನ ಬಳಿ ಗಾಂಜಾ ಖರೀದಿಸಿದ ವ್ಯಕ್ತಿ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದ. ಖಚಿತ ಮಾಹಿತಿ ಮೇರೆಗೆ ಪೊಲೀಸರು ಅರೋಪಿಯನ್ನು ಬಂಧಿಸಿ, 300ಗ್ರಾಂ ಗಾಂಜಾ ಮತ್ತು ನಗದು ಜಪ್ತಿ ಮಾಡಿದ್ದಾರೆ.
ಇದನ್ನೂ ಓದಿ
Temple Tour: ಶ್ರೀರಾಮ, ಸೀತೆ ವನವಾಸಕ್ಕೆ ಬಂದಿದ್ದ ಕಾಲದಲ್ಲಿ ನಿರ್ಮಾಣವಾಯ್ತು ಈ ಮಂದಿರ
Navratri 2021: ನವರಾತ್ರಿಯ ಒಂಭತ್ತು ದಿನಗಳ ಬಣ್ಣಗಳು ಯಾವುದು? ಅವುಗಳ ವಿಶೇಷತೆ ಏನು? ಇಲ್ಲಿ ಓದಿ