Navratri 2021: ನವರಾತ್ರಿಯ ಒಂಭತ್ತು ದಿನಗಳ ಬಣ್ಣಗಳು ಯಾವುದು? ಅವುಗಳ ವಿಶೇಷತೆ ಏನು? ಇಲ್ಲಿ ಓದಿ

Navaratri 2021: ಒಂಭತ್ತು ದಿನಗಳಿಗೆ, ದೇವತಾ ಆರಾಧನೆ ಅನುಸಾರ ಒಂಭತ್ತು ಬಣ್ಣಗಳನ್ನು ಕೂಡ ಗುರುತಿಸಲಾಗಿದೆ. ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಂಭತ್ತು ದಿನಗಳ ಬಣ್ಣಗಳನ್ನು ಹಾಗೂ ಅದರ ವಿಶೇಷತೆಗಳನ್ನು ನಾವು ಇಲ್ಲಿ ನೀಡಿದ್ದೇವೆ.

Navratri 2021: ನವರಾತ್ರಿಯ ಒಂಭತ್ತು ದಿನಗಳ ಬಣ್ಣಗಳು ಯಾವುದು? ಅವುಗಳ ವಿಶೇಷತೆ ಏನು? ಇಲ್ಲಿ ಓದಿ
ನವರಾತ್ರಿ
Follow us
TV9 Web
| Updated By: ಆಯೇಷಾ ಬಾನು

Updated on: Oct 03, 2021 | 8:00 AM

ಹಿಂದೂ ಸಮುದಾಯಕ್ಕೆ ನವರಾತ್ರಿ ಎಂಬುದು ಒಂದು ಮುಖ್ಯ ಹಬ್ಬ. ದೇಶದ ವಿವಿಧ ರಾಜ್ಯಗಳಲ್ಲಿ ಮಾತ್ರವಲ್ಲದೆ ವಿದೇಶಗಳಲ್ಲಿ ಕೂಡ ನವರಾತ್ರಿಯನ್ನು ಆಚರಣೆ ಮಾಡಲಾಗುತ್ತದೆ. ನವರಾತ್ರಿಯನ್ನು ಒಂಭತ್ತು ದಿನಗಳ ಕಾಲ ಆಚರಣೆ ಮಾಡಲಾಗುತ್ತದೆ. ಹತ್ತನೇ ದಿನವನ್ನು ವಿಜಯ ದಶಮಿ ಎಂದು ಕರೆಯಲಾಗುತ್ತದೆ. ಈ ಒಂಭತ್ತು ದಿನಗಳ ಕಾಲದಲ್ಲಿ ಭಕ್ತ ಜನರು ದೇವಿಯ 9 ಅವತಾರಗಳನ್ನು ಪೂಜಿಸುತ್ತಾರೆ. ಶುಕ್ಲ ಪಕ್ಷದಲ್ಲಿ ಈ ಹಬ್ಬ ಆಚರಿಸಲಾಗುತ್ತದೆ.

ಈ ವರ್ಷ ನವರಾತ್ರಿ ಹಬ್ಬವನ್ನು ಅಕ್ಟೋಬರ್ 7 ರಿಂದ ಅಕ್ಟೋಬರ್ 15 ರ ವರೆಗೆ ಆಚರಣೆ ಮಾಡಲಾಗುತ್ತದೆ. ಒಂಬತ್ತು ದಿನಗಳಲ್ಲಿ ಒಂಭತ್ತು ದೇವತೆಗಳನ್ನು ಪೂಜೆ ಮಾಡಲಾಗುತ್ತದೆ. ಈ ಒಂಭತ್ತು ದಿನಗಳಿಗೆ, ದೇವತಾ ಆರಾಧನೆ ಅನುಸಾರ ಒಂಭತ್ತು ಬಣ್ಣಗಳನ್ನು ಕೂಡ ಗುರುತಿಸಲಾಗಿದೆ. ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಒಂಭತ್ತು ದಿನಗಳ ಬಣ್ಣಗಳನ್ನು ಹಾಗೂ ಅದರ ವಿಶೇಷತೆಗಳನ್ನು ನಾವು ಇಲ್ಲಿ ನೀಡಿದ್ದೇವೆ.

Navratri 2021 Day 1: ಹಳದಿ ನವರಾತ್ರಿಯ ಮೊದಲ ದಿನ ಪ್ರತಿಪಾದವನ್ನು ಈ ಬಾರಿ ಗುರುವಾರ ಆಚರಿಸಲಾಗುತ್ತದೆ. ಆ ದಿನದ ಬಣ್ಣ ಹಳದಿ. ಈ ದಿನದಂದು ಭಕ್ತರು ಶೈಲಪುತ್ರಿ ದೇವಿಯನ್ನು ಪೂಜೆ ಮಾಡುತ್ತಾರೆ,

Navratri 2021 Day 2: ಹಸಿರು ಎರಡನೇ ದಿನವನ್ನು ದ್ವಿತೀಯ ಎಂದು ಹೇಳಲಾಗುತ್ತದೆ. ಈ ದಿನದಂದು ಭಕ್ತರು ಬ್ರಹ್ಮಚಾರಿಣಿಯನ್ನು ಪೂಜಿಸುತ್ತಾರೆ. ಈ ದಿನದ ಆಚರಣೆಗೆ ಹಸಿರು ಬಣ್ಣ ಸೂಕ್ತ. ಹಸಿರು ಪ್ರಕೃತಿ ಹಾಗೂ ಸಮೃದ್ಧಿಯ ಸಂಕೇತವೂ ಹೌದು.

Navratri 2021 Day 3: ಬೂದು ನವರಾತ್ರಿಯ ಮೂರನೇ ದಿನ, ಅಂದರೆ ತ್ರಿತೀಯದಂದು ಬೂದು ಬಣ್ಣ ಆಯ್ಕೆ ಉತ್ತಮ. ಈ ದಿನ ಭಕ್ತರು ಚಂದ್ರಘಂಟಾ ದೇವಿಯನ್ನು ಭಜಿಸುತ್ತಾರೆ.

Navratri 2021 Day 4: ಕೇಸರಿ ನಾಲ್ಕನೇ ದಿನದ ಬಣ್ಣ ಕೇಸರಿ ಆಗಿದೆ. ನಾಲ್ಕನೇ ದಿನ ಅಂದರೆ ಚತುರ್ಥಿಯಂದು ಕೇಸರಿ ಬಣ್ಣದ ಉಡುಪು ಧರಿಸುವುದು ಸೂಕ್ತ. ಈ ದಿನ ಜನರು ಕೂಷ್ಮಾಂಡಾ ದೇವಿಯನ್ನು ಪೂಜೆ ಮಾಡುತ್ತಾರೆ.

Navratri 2021 Day 5: ಬಿಳಿ ಐದನೇ ದಿನ ಅಂದರೆ, ಪಂಚಮಿಯಂದು ದೇವಿಯ ಅನುಗ್ರಹ, ಹಬ್ಬದ ಸಂಭ್ರಮಕ್ಕೆ ಬಿಳಿ ಬಣ್ಣದ ಉಡುಪು ಧರಿಸಬಹುದು. ಬಿಳಿ ಬಣ್ಣವು ಶುದ್ಧತೆ, ಪ್ರಾಮಾಣಿಕತೆಯನ್ನು ಸೂಚಿಸುತ್ತದೆ. ಈ ದಿನದಂದು ಸ್ಕಂದಮಾತಾ ದೇವರನ್ನು ಪೂಜೆ ಮಾಡಲಾಗುತ್ತದೆ.

Navratri 2021 Day 6: ಕೆಂಪು ನವರಾತ್ರಿಯ ಆರನೇ ದಿನ, ಷಷ್ಠಿಯಂದು ಕೆಂಪು ಬಣ್ಣದ ವಸ್ತ್ರ ಉಡುವುದು ಸೂಕ್ತ. ಕೆಂಪು ಆರೋಗ್ಯ, ಜೀವನ, ಧೈರ್ಯವನ್ನು ಸೂಚಿಸುತ್ತದೆ. ಈ ದಿನ ಕಾತ್ಯಾಯಿನಿ ದೇವಿಯನ್ನು ಪೂಜಿಸಲಾಗುತ್ತದೆ.

Navratri 2021 Day 7: ನೀಲಿ ನವರಾತ್ರಿಯ ಏಳನೇ ದಿನ ಅಂದರೆ ಸಪ್ತಮಿಯಂದು ನೀಲಿ ಬಣ್ಣದ ಉಡುಪು ಧರಿಸುವುದು ಸೂಕ್ತ. ನೀಲಿ ಬಣ್ಣವು ಸಮೃದ್ಧು ಹಾಗೂ ಆರೋಗ್ಯವನ್ನು ಕೂಡ ಸೂಚಿಸುತ್ತದೆ. ಈ ದಿನ ಕಾಳರಾತ್ರಿ ಮಾತೆಯನ್ನು ಪೂಜಿಸಲಾಗುತ್ತದೆ.

Navratri 2021 Day 8: ಪಿಂಕ್ ನವರಾತ್ರಿಯ ಎಂಟನೇ ಅಥವಾ ಅಷ್ಟಮಿಯ ದಿನದಂದು ಪಿಂಕ್ ಆಥವಾ ತಿಳಿ ಕೆಂಪು ಬಣ್ಣದ ವಸ್ತ್ರವನ್ನು ಧರಿಸಬಹುದು. ಈ ಬಣ್ಣವು ವಿಶ್ವ ಪ್ರೇಮ, ವಾತ್ಸಲ್ಯದ ಸಂಕೇತ ಆಗಿದೆ. ಇದು ಸಹಬಾಳ್ವೆಯ ಗುರುತು ಕೂಡ ಹೌದು. ಎಂಟನೇ ದಿನದಂದು ಮಹಾಗೌರಿ ದೇವಿಯ ಪೂಜೆ ಮಾಡಲಾಗುತ್ತದೆ.

Navratri 2021 Day 9: ನೇರಳೆ ನವರಾತ್ರಿಯ ಕೊನೆಯ ಹಾಗೂ ಒಂಭತ್ತನೇ (ನವಮಿ) ದಿನದಂದು ನೇರಳೆ ಬಣ್ಣದ ವಸ್ತ್ರ ಧರಿಸುವುದು ಸೂಕ್ತ. ಈ ಬಣ್ಣವು ಶಕ್ತಿಯನ್ನು ಬಿಂಬಿಸುತ್ತದೆ. ನವಮಿಯ ದಿನದಂದು ಸಿದ್ದಿಧಾತ್ರಿ ದೇವಿಯ ಆರಾಧನೆ ಮಾಡಲಾಗುತ್ತದೆ.

(ಇಲ್ಲಿ ನೀಡಲಾಗಿರುವ ಮಾಹಿತಿಯು ಧಾರ್ಮಿಕ, ಸಾಂಪ್ರದಾಯಿಕ ಅಥವಾ ಆಚರಣೆಯ ನಂಬಿಕೆಗೆ ಅನುಸಾರ ಆಗಿರುವಂಥದ್ದು ಮಾತ್ರ)

ಇದನ್ನೂ ಓದಿ: Navratri 2021: ನವರಾತ್ರಿಯ ಮಹತ್ವವೇನು? ದುರ್ಗಾದೇವಿಗೆ ಅರ್ಪಿತವಾದ ಈ ಹಬ್ಬವನ್ನು ಏಕೆ ಆಚರಿಸಲಾಗುತ್ತೆ?

ಇದನ್ನೂ ಓದಿ: Navaratri 2021: ನವರಾತ್ರಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಭಾರತದ ಪ್ರಮುಖ ದೇವಿಯರ ದೇವಸ್ಥಾನಗಳು ಇಲ್ಲಿವೆ

ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
ತನ್ನೂರಿನ ಸರ್ಕಾರಿ ಶಾಲೆಗೆ ಹೈಕೆಟ್ ಸ್ಪರ್ಷ ನೀಡುತ್ತಿರುವ ಡಾಲಿ: ವಿಡಿಯೋ
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
29 ಎಸೆತಗಳಲ್ಲಿ ಅರ್ಧಶತಕ; 50 ವರ್ಷಗಳ ಹಳೆಯ ದಾಖಲೆ ಮುರಿದ ಪಂತ್
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಮಧ್ಯಪ್ರದೇಶದ ಪಿತಾಂಪುರದಲ್ಲಿ ಪ್ರತಿಭಟನೆ ವೇಳೆ ಬೆಂಕಿ ಹಚ್ಚಿಕೊಂಡ ಇಬ್ಬರು
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಶಾಸಕನ ಜಾತಿಯವರೇ ಕ್ಷೇತ್ರದ ಪದಾಧಿಕಾರಿಗಳಾಗಬಾರದು: KN ರಾಜಣ್ಣ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ: ಕಲಬುರಗಿಯಲ್ಲಿ ಜನಸಾಗರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ವಕ್ಫ್ ವಿರುದ್ಧ ಹೋರಾಟದ ರೂವಾರಿ ಯತ್ನಾಳ್ ಹೆಸರು ಪ್ರಸ್ತಾಪಿಸದ ವಿಜಯೇಂದ್ರ
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ