Navratri 2021: ನವರಾತ್ರಿಯ ಮಹತ್ವವೇನು? ದುರ್ಗಾದೇವಿಗೆ ಅರ್ಪಿತವಾದ ಈ ಹಬ್ಬವನ್ನು ಏಕೆ ಆಚರಿಸಲಾಗುತ್ತೆ?

ನವರಾತ್ರಿಯ 9 ರಾತ್ರಿಗಳಲ್ಲಿ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ ಪೂಜೆಯಿಂದ ಆರಂಭಗೊಂಡು ನಂತರ ಬ್ರಹ್ಮಚಾರಿ, ಚಂದ್ರಘಂಟ, ಕುಶ್ಮಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಲರಾತ್ರಿ, ಮಹಾ ಗೌರಿ ಹಾಗೂ ಸಿದ್ಧಿಧಾತ್ರಿ ರೂಪದಲ್ಲಿ ದೇವಿ ಪೂಜೆ ಮಾಡಲಾಗುತ್ತೆ.

Navratri 2021: ನವರಾತ್ರಿಯ ಮಹತ್ವವೇನು? ದುರ್ಗಾದೇವಿಗೆ ಅರ್ಪಿತವಾದ ಈ ಹಬ್ಬವನ್ನು ಏಕೆ ಆಚರಿಸಲಾಗುತ್ತೆ?
ದುರ್ಗಾ ದೇವಿ
Follow us
TV9 Web
| Updated By: ಆಯೇಷಾ ಬಾನು

Updated on: Sep 27, 2021 | 7:01 AM

ನವರಾತ್ರಿ ಹಬ್ಬ ಮುಖ್ಯವಾಗಿ ದುರ್ಗಾ ದೇವಿಗೆ ಅರ್ಪಿಸಿರುವ ಹಬ್ಬ, ಒಂಬತ್ತು ದಿನಗಳ ಕಾಲ ದುರ್ಗಾ ದೇವಿಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ನವರಾತ್ರಿ ಆಚರಣೆಯ ಹಿಂದೆ ಹಲವು ನಂಬಿಕೆಗಳಿವೆ. ಈ ಬಾರಿ ಅಕ್ಟೋಬರ್ 7 ರಿಂದ ಆರಂಭವಾಗಿ ಅಕ್ಟೋಬರ್ 15ರ ವರೆಗೆ ನವರಾತ್ರಿ ಆಚರಣೆ ಮಾಡಲಾಗುತ್ತೆ. ಈ ಒಂಬತ್ತು ದಿನಗಳಲ್ಲಿ ದುರ್ಗಾ ದೇವಿಯನ್ನು ಏಕೆ ಪೂಜಿಸಲಾಗುತ್ತದೆ ಎಂಬುದನ್ನು ಇಲ್ಲಿ ಓದಿ ತಿಳಿಯಿರಿ.

ನವರಾತ್ರಿಯ ಮಹತ್ವ ನವರಾತ್ರಿಯ 9 ರಾತ್ರಿಗಳಲ್ಲಿ ದುರ್ಗೆಯ ಒಂಬತ್ತು ಅವತಾರಗಳನ್ನು ಪೂಜಿಸಲಾಗುತ್ತದೆ. ಮೊದಲ ದಿನ ಶೈಲಪುತ್ರಿ ಪೂಜೆಯಿಂದ ಆರಂಭಗೊಂಡು ನಂತರ ಬ್ರಹ್ಮಚಾರಿ, ಚಂದ್ರಘಂಟ, ಕುಶ್ಮಂಡ, ಸ್ಕಂದ ಮಾತಾ, ಕಾತ್ಯಾಯಿನಿ, ಕಲರಾತ್ರಿ, ಮಹಾ ಗೌರಿ ಹಾಗೂ ಸಿದ್ಧಿಧಾತ್ರಿ ರೂಪದಲ್ಲಿ ದೇವಿ ಪೂಜೆ ಮಾಡಲಾಗುತ್ತೆ. 9 ದಿನಗಳ ನವರಾತ್ರಿಯ ಪ್ರತಿ ದಿನವೂ ತನ್ನದೇ ಆದ ಮಹತ್ವವನ್ನು ಪಡೆದಿದೆ. ಶಿವನ ಸಂಗಾತಿಯಾದ ದುರ್ಗಾ ದೇವಿಯು ಶಕ್ತಿ ಅಥವಾ ಸ್ತ್ರೀ ಶಕ್ತಿಯನ್ನು ಪ್ರತಿನಿಧಿಸುತ್ತಾಳೆ.

ಮಹಿಷಾಸುರ ಎಂಬ ರಾಕ್ಷಸನನ್ನು ಮರ್ದಿಸಿದರಿಂದ ಅವಳನ್ನು ಮಹಿಷಾಸುರಮರ್ದಿನಿ ಎಂದು ಕರೆಯಲಾಗುತ್ತದೆ. ಹತ್ತನೆಯ ದಿನ ಮಹಿಷಾಸುರನ ವಿರುದ್ಧ ನಡೆದ ಯುದ್ಧದಲ್ಲಿ ದುರ್ಗಾ ದೇವಿ ಮಹಿಷಾಸುರನನ್ನು ವಧೆ ಮಾಡುತ್ತಾಳೆ. ಆದ್ದರಿಂದ ಈ ದಿನ ವಿಜಯ ದಶಮಿ ಆಚರಿಸಲಾಗುತ್ತೆ.

ಶೈಲಪುತ್ರಿ ಅವತಾರ ಮೊದಲ ದಿನವು ದೇವಿಯನ್ನು ಶೈಲ ಪುತ್ರಿಯ ಅವತಾರದಲ್ಲಿ ಪೂಜಿಸಲಾಗುತ್ತದೆ ಪರ್ವತರಾಜ ಹಿಮವಂತನ ಪುತ್ರಿಯಾದ್ದರಿಂದ ಈಕೆಯನ್ನು ಶೈಲಪುತ್ರಿ ಎನ್ನಲಾಗುತ್ತೆ. ಶೈಲಪುತ್ರಿಯ ರೂಪ ಅತ್ಯಂತ ಸುಂದರ. ಪಾರ್ವತಿದೇವಿಯ ಪ್ರತಿರೂಪವಾದ ಶೈಲಪುತ್ರಿ ವೃಷಭವಾಹನೆ. ಬಲಗೈಯಲ್ಲಿ ತ್ರಿಶೂಲ, ಎಡಗೈಯಲ್ಲಿ ಕಮಲವನ್ನು ಹಿಡಿದಿದ್ದಾಳೆ. ಸರಳ ವ್ಯಕ್ತಿತ್ವ, ಸೌಮ್ಯ ರೂಪ ಈಕೆಯದ್ದು. ಶಿವಪುರಾಣದ ಪ್ರಕಾರ, ಸತಿದೇವಿ ದಕ್ಷಪ್ರಜಾಪತಿಯ ಯಜ್ಞಕುಂಡಕ್ಕೆ ಹಾರಿ ಭಸ್ಮವಾಗ್ತಾಳೆ. ಸತಿ ದೇವಿಯೇ ಮುಂದಿನ ಜನ್ಮದಲ್ಲಿ ಶೈಲರಾಜ ಹಿಮವಂತನಿಗೆ ಪುತ್ರಿಯಾಗಿ ಜನಿಸಿ, ಶೈಲಪುತ್ರಿಯಾದಳು. ನಂತರ ಶೈಲಪುತ್ರಿ ಕಠಿಣ ತಪಸ್ಸು ಮಾಡಿ ಶಿವನೊಂದಿಗೆ ವಿವಾಹವಾದಳು.

ಬ್ರಹ್ಮಚಾರಿಣಿ ಅವತಾರ ಬ್ರಹ್ಮಚಾರಿಣಿಯದ್ದು ಸಾತ್ವಿಕ ಮತ್ತು ಸುಂದರ ರೂಪ. ಬ್ರಹ್ಮಚಾರಿಣಿ ಪೂರ್ಣ ಜ್ಯೋತಿರ್ಮಯ ಸ್ವರೂಪಿಯಾಗಿದ್ದಾಳೆ. ಬಲಗೈಯಲ್ಲಿ ಜಪಮಾಲೆ ಹಿಡಿದಿರುತ್ತಾಳೆ. ಎಡಗೈಯಲ್ಲಿ ಕಮಂಡಲವಿರುತ್ತೆ. ಸದಾ ಧ್ಯಾನದಲ್ಲಿ ತಲ್ಲೀನಳಾಗ್ತಾಳೆ. ಪುರಾಣಗಳ ಪ್ರಕಾರ, ಶಿವನನ್ನು ಪಡೆಯಲು ಬ್ರಹ್ಮಚಾರಿಣಿ ನಾರದರ ಉಪದೇಶದಂತೆ ಅಖಂಡ ತಪಸ್ಸು ಮಾಡ್ತಾಳೆ. ಅಖಂಡ ತಪಸ್ಸನ್ನು ಮಾಡಿದ ಸಲುವಾಗೇ ಈಕೆ ಸದಾ ಧ್ಯಾನದಲ್ಲಿ ತಲ್ಲೀನಳಾಗಿರ್ತಾಳೆ. ನವರಾತ್ರಿಯ ಎರಡನೇ ದಿನ ಈ ತಾಯಿಯನ್ನು ಪೂಜಿಸಿದ್ರೆ ವಿಶೇಷ ವರಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ. ಸದಾ ಧ್ಯಾನ ಮಗ್ನಳಾದ ಬ್ರಹ್ಮಚಾರಿಣಿಗೆ ಭಕ್ತರ ಮೇಲೆ ಅಪಾರ ಕಾಳಜಿ. ನಿಷ್ಕಲ್ಮಷ ಮನಸ್ಸಿನಿಂದ ನವರಾತ್ರಿಯಲ್ಲಿ ಇವಳನ್ನು ಪೂಜಿಸಿದ್ರೆ ಬೇಡಿದ ವರಗಳನ್ನು ಕರುಣಿಸ್ತಾಳೆ ಎಂಬ ನಂಬಿಕೆ ಇದೆ.

ಚಂದ್ರಘಂಟ ಅವತಾರ ಮೂರನೇ ದಿನ ಚಂದ್ರಘಂಟ ರೂಪದಲ್ಲಿ ದೇವಿಯನ್ನು ಪೂಜಿಸಲಾಗುತ್ತೆ. ದೇವಿಯ ಹಣೆಯ ಮೇಲೆ ಅರ್ಧ-ಚಂದ್ರನಿದ್ದು, ಸೌಂದರ್ಯ ಮತ್ತು ಧೈರ್ಯದ ಸಂಕೇತವಾಗಿ ದೇವಿ ಇರುತ್ತಾಳೆ.

ಕೂಷ್ಮಾಂಡ ದೇವಿ ಅವತಾರ ನವದುರ್ಗೆಯರಲ್ಲಿ ಕೂಷ್ಮಾಂಡ ದೇವಿ ನಾಲ್ಕನೇಯವಳು. ಈಕೆ ತನ್ನ ಮಧುರ ನಗುವಿನಿಂದ ಬ್ರಹ್ಮಾಂಡವನ್ನು ರಚಿಸಿದ ಕಾರಣ ಇವಳನ್ನು ಕೂಷ್ಮಾಂಡ ದೇವಿ ಎನ್ನಲಾಗುತ್ತೆ. ಇವಳು ಆದಿಶಕ್ತಿಯ ಪ್ರತಿರೂಪ. ಇವಳ ವಾಹನ ಸಿಂಹ. ತೇಜೋಮಯಿ ರೂಪ ಹೊಂದಿರುವ ಕೂಷ್ಮಾಂಡ ದೇವಿ ಅಷ್ಟಭುಜಗಳನ್ನು ಹೊಂದಿದ್ದಾಳೆ. ತನ್ನ ಅಷ್ಟಭುಜಗಳಲ್ಲಿ ಕಮಂಡಲ, ಧನಸ್ಸು, ಬಾಣ, ಕಮಲ, ಅಮೃತ ತುಂಬಿದ ಕಲಶ, ಚಕ್ರ, ಗದೆಯನ್ನು ಹಿಡಿದಿದ್ದಾಳೆ. ಕೂಷ್ಮಾಂಡ ದೇವಿಯ ಪ್ರಭೆ ಸೂರ್ಯನಿಗೆ ಸಮಾನ ಎಂದು ಹೇಳಲಾಗುತ್ತೆ.

ಸ್ಕಂದ ಮಾತಾ ಅವತಾರ ಪಾತಾಳಲೋಕದಲ್ಲಿರುವ ತಾರಕಾಸುರ ಎಂಬ ರಾಕ್ಷಸನನ್ನು ವಧೆ ಮಾಡಲು, ದೇವಿ ಸ್ಕಂದನಿಗೆ ಜನ್ಮ ಕೊಡ್ತಾಳೆ. ಆದ್ದರಿಂದ ಈಕೆಯನ್ನು ಸ್ಕಂದಮಾತಾ ಅಂತಾ ಕರೆಯಲಾಗುತ್ತೆ. ಸ್ಕಂದಮಾತೆಯ ರೂಪ ಅತ್ಯಂತ ವಿಶಿಷ್ಟ. ಈ ದೇವಿ ಸಿಂಹದ ಮೇಲೆ ಕುಳಿತಿರುತ್ತಾಳೆ. ಶ್ವೇತವರ್ಣಳಾಗಿ ಸುಂದರವಾಗಿ ಕಾಣುತ್ತಾಳೆ. ನಾಲ್ಕು ಭುಜಗಳನ್ನು ಹೊಂದಿದ್ದು, ಎರಡು ಕೈಗಳಲ್ಲಿ ಕಮಲಗಳನ್ನು ಹಿಡಿದಿರುತ್ತಾಳೆ. ಇನ್ನು ತಾಯಿಯ ಬಲ ತೊಡೆಯ ಮೇಲೆ ತಾನು ಜನ್ಮ ನೀಡಿದ ಸ್ಕಂದನನ್ನು ಕೂರಿಸಿಕೊಂಡಿರ್ತಾಳೆ.

ಕಾತ್ಯಾಯಿನಿ ಅವತಾರ ನವರಾತ್ರಿಯ ಆರನೇ ದಿನ ಕಾತ್ಯಾಯಿನಿ ಆರಾಧನೆ ಮಾಡಲಾಗುತ್ತೆ. ನವದುರ್ಗೆಯರಲ್ಲಿ ಕಾತ್ಯಾಯಿನಿಯದ್ದು ಆರನೇ ರೂಪ. ತ್ರಿಮೂರ್ತಿಗಳ ಅಂಶವೇ ಈ ದೇವಿ. ಈಕೆಯನ್ನು ಮೊದಲು ಕಾತ್ಯಾಯನ ಋಷಿ ಪೂಜಿಸಿದ್ದರಿಂದ ಇವಳಿಗೆ ಕಾತ್ಯಾಯಿನಿ ಎಂಬ ಹೆಸರು ಬಂತು. ಕಾತ್ಯಾಯಿನಿ ಅಂದ್ರೆ ಪರೋಪಕಾರದ ಪ್ರತಿರೂಪ. ಈ ದೇವಿಯದ್ದು ಅತ್ಯಂತ ಭವ್ಯ ಸ್ವರೂಪ. ಇವಳು ಸದಾ ಬಂಗಾರದಂತೆ ಹೊಳೆಯುತ್ತಾಳೆ. ಈ ದೇವಿಗೆ ನಾಲ್ಕು ಭುಜಗಳಿವೆ. ಬಲಗಡೆಯ ಮೇಲಿನ ಕೈ ಅಭಯ ಮುದ್ರೆಯಲ್ಲಿದೆ. ಬಲಗಡೆಯ ಕೆಳಗಿನ ಕೈ ವರಮುದ್ರೆಯಲ್ಲಿದೆ. ಎಡಗಡೆಯ ಮೇಲಿನ ಕೈಯಲ್ಲಿ ಖಡ್ಗವಿದೆ. ಎಡಗಡೆಯ ಕೆಳಗಿನ ಕೈಯಲ್ಲಿ ಕಮಲವಿದೆ. ಕಾತ್ಯಾಯಿನಿ ದುಷ್ಟರನ್ನು ಸಂಹರಿಸುವ, ಶಿಷ್ಟರ ಉದ್ಧಾರ ಮಾಡುವ ಶಕ್ತಿದೇವತೆ. ಈಕೆಯನ್ನು ಮಂತ್ರ ಸಹಿತವಾಗಿ ಆರಾಧಿಸಿದ್ರೆ ದುಷ್ಟಶಕ್ತಿಗಳು ನಾಶವಾಗುತ್ತವೆ ಎಂಬ ನಂಬಿಕೆ ಇದೆ.

ಕಾಲರಾತ್ರಿ ಅವತಾರ ನವದುರ್ಗೆಯರಲ್ಲಿ ಕಾಲರಾತ್ರಿಯದ್ದು ಏಳನೇ ರೂಪ. ದುಷ್ಟರ ವಿನಾಶ ಮಾಡುವ ಈ ದೇವಿಯದ್ದು ಅತ್ಯಂತ ಭಯಂಕರ ರೂಪ. ಇವಳ ವಾಹನ ಕತ್ತೆ. ಈ ದೇವಿಯ ಶರೀರ ದಟ್ಟವಾದ ಅಂಧಕಾರದಂತೆ ಕಪ್ಪಾಗಿದೆ. ತಲೆಕೂದಲನ್ನು ಭಯಂಕರವಾಗಿ ಹರಡಿಕೊಂಡಿದ್ದಾಳೆ. ಕತ್ತು, ಕೈ ಕಾಲುಗಳಲ್ಲಿ ಮಿಂಚಿನಂತೆ ಹೊಳೆಯುವ ಮಾಲೆ ಇದೆ. ಬ್ರಹ್ಮಾಂಡದಂತಹ 3 ಕಣ್ಣುಗಳಿವೆ. ಇವಳ ಕಣ್ಣುಗಳು ಭಕ್ತರನ್ನು ಭಯಗೊಳಿಸುತ್ತೆ. ಇವಳು ಉಸಿರಾಡಿದ್ರೆ ಅಗ್ನಿ ಜ್ವಾಲೆ ಹೊರಹೊಮ್ಮುತ್ತೆ. ಇವಳಿಗೆ ನಾಲ್ಕು ಭುಜಗಳಿವೆ. ಬಲಭಾಗದ ಎರಡು ಕೈ ವರಮುದ್ರೆ, ಅಭಯ ಮುದ್ರೆಯಲ್ಲಿವೆ. ಎಡಗೈಗಳಲ್ಲಿ ಖಡ್ಗ ಮತ್ತು ಕಬ್ಬಿಣದ ಮುಳ್ಳಿನ ಅಸ್ತ್ರವಿದೆ. ನವರಾತ್ರಿಯಲ್ಲಿ ಈ ದೇವಿ ಆರಾಧನೆ ಮಾಡೋಕೆ ಒಂದು ಮಂತ್ರವಿದೆ. ಆ ಮಂತ್ರದ ಮೂಲಕ ದೇವಿ ಆರಾಧನೆ ಮಾಡಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತೆ.

ಮಹಾಗೌರಿ ಅವತಾರ ನವದುರ್ಗೆಯರಲ್ಲಿ ಮಹಾಗೌರಿಯದ್ದು ಎಂಟನೇ ರೂಪ. ಈಕೆ ಸಾಕ್ಷಾತ್ ಪರಮೇಶ್ವರನಿಗೆೇ ಶಕ್ತಿ ನೀಡಿದ ಮಹಾನ್ ತಾಯಿ. ಪಾರ್ವತಿಯ ರೂಪದಲ್ಲಿ ಶಿವನನ್ನು ಪತಿಯಾಗಿ ಪಡೆಯಲು ತಪಸ್ಸು ಮಾಡಿದ್ದಳು. ಮಹಾಗೌರಿಯನ್ನು ಆದಿಶಕ್ತಿಯ ಪ್ರತಿರೂಪ ಎನ್ನಲಾಗುತ್ತೆ. ಈ ದೇವಿಯ ರೂಪ ಅತ್ಯಂತ ವಿಶೇಷ. ಶಾಂತ ಸ್ವರೂಪಿಯಾದ ಈಕೆ ವೃಷಭವಾಹನೆ. ಶ್ವೇತವರ್ಣೆಯಾಗಿ ಕಂಗೊಳಿಸೋ ಈ ದೇವಿ ಬಿಳಿಯ ವಸ್ತ್ರಾಭರಣಗಳನ್ನು ತೊಟ್ಟಿರ್ತಾಳೆ. ಚತುರ್ಭುಜಗಳುಳ್ಳ ಮಹಾಗೌರಿ ಅಭಯಮುದ್ರೆ, ತ್ರಿಶೂಲ, ಡಮರುಗ, ವರಮುದ್ರೆ ಸ್ವರೂಪಿ. ನೋಡಲು ಸುಂದರರೂಪಿಯಾಗಿ ಕಾಣ್ತಾಳೆ. ಮಹಾಗೌರಿ ಶುಂಭ-ನಿಶುಂಭರ ವಧೆ ಮಾಡಿ, ದೇವಾನುದೇವತೆಗಳನ್ನು ರಕ್ಷಿಸ್ತಾಳೆ. ನವರಾತ್ರಿಯ ಎಂಟನೇ ದಿನ ಅಂದ್ರೆ ದುರ್ಗಾಷ್ಟಮಿಯಂದು ಮಹಾಗೌರಿ ಪೂಜೆಗೆ ವಿಶೇಷ ಮಹತ್ವ ಇದೆ. ಈ ದಿನ ಮಹಾಗೌರಿಯನ್ನು ಮಂತ್ರಸಹಿತವಾಗಿ ಪೂಜಿಸಿದ್ರೆ ವಿಶೇಷ ಫಲಗಳು ಪ್ರಾಪ್ತಿಯಾಗುತ್ತವೆ ಅನ್ನೋ ನಂಬಿಕೆ ಧರ್ಮಶಾಸ್ತ್ರದಲ್ಲಿದೆ.

ಸಿದ್ಧಿದಾತ್ರಿ ಅವತಾರ ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿ ಆರಾಧನೆಗೆ ಪ್ರಶಸ್ತವಾದ ದಿನ. ನವದುರ್ಗೆಯರಲ್ಲಿ ಸಿದ್ಧಿದಾತ್ರಿ ಕೊನೆಯವಳು. ಮಾರ್ಕಂಡೇಯ ಪುರಾಣದ ಪ್ರಕಾರ, ಸಿದ್ಧಿದಾತ್ರಿ ಎಲ್ಲ ರೀತಿಯ ಸಿದ್ಧಿಗಳನ್ನು ಕರುಣಿಸುವವಳು. ಆದ್ದರಿಂದಲೇ ಇವಳನ್ನು ಸಿದ್ಧಿದಾತ್ರಿ ಎನ್ನಲಾಗುತ್ತೆ. ಇವಳು ಕಮಲದ ಮೇಲೆ ಕುಳಿತಿದ್ದಾಳೆ, ಸಿದ್ಧಿದಾತ್ರಿಗೆ ಚತುರ್ಭುಜಗಳಿವೆ, ಮೇಲಿನ ಬಲಗೈಯಲ್ಲಿ ಚಕ್ರ, ಎಡಗೈಯಲ್ಲಿ ಶಂಖ ಹಿಡಿದಿದ್ದಾಳೆ, ಕೆಳಗಿನ ಬಲಗೈಯಲ್ಲಿ ಗದೆ, ಎಡಗೈಯಲ್ಲಿ ಕಮಲವಿದೆ. ಸಿದ್ಧಿದಾತ್ರಿ ಮಹಾಲಕ್ಷ್ಮೀಯ ಸ್ವರೂಪ. ಭಕ್ತಿಯಿಂದ ಈ ದೇವಿಯ ಬಳಿ ಬೇಡಿದ್ರೆ ಪ್ರಸನ್ನಳಾಗಿ ವರ ಕೊಡ್ತಾಳೆ ಎಂಬ ನಂಬಿಕೆ ಇದೆ. ನವರಾತ್ರಿಯ ಒಂಬತ್ತನೇ ದಿನ ಸಿದ್ಧಿದಾತ್ರಿಯನ್ನು ಮಂತ್ರ ಸಹಿತವಾಗಿ ಪೂಜಿಸುವುದು ಶ್ರೇಯಸ್ಕರ ಎನ್ನಲಾಗುತ್ತೆ.

ಇದನ್ನೂ ಓದಿ: Navratri 2021: ನವರಾತ್ರಿಯ ಒಂಭತ್ತು ದಿನದಲ್ಲಿ ಯಾವ ದಿನ ಯಾವ ದೇವಿಗೆ ಪೂಜೆ ಇಲ್ಲಿದೆ ನವರಾತ್ರಿ ಕ್ಯಾಲೆಂಡರ್

ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
ಸಿಎಂ ಇಬ್ರಾಹಿಂ ಮತ್ತು ಜಿಟಿ ದೇವೇಗೌಡ ನೊಂದಜೀವಿ ಮತ್ತು ಸಮಾನಮನಸ್ಕರು
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
‘ಯಾರೂ ನನ್ನನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಂಗಿಲ್ಲ’: ಉಗ್ರಂ ಮಂಜು ಆಜ್ಞೆ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ಕುಮಾರಸ್ವಾಮಿ ಹೇಳಿದ್ದರಲ್ಲಿ ತಪ್ಪಿಲ್ಲ, ಮುಸ್ಲಿಂ ಮತದಾರ ಕೈಬಿಟ್ಟ: ಅಶೋಕ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ನಾನಿಲ್ಲದಿದ್ದರೂ ಕಾಂಗ್ರೆಸ್ ಅಸ್ತಿತ್ವಕ್ಕೆ ಯಾವುದೇ ತೊಂದರೆಯಿಲ್ಲ: ಡಿಕೆಶಿ
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಕ್ಯಾಪ್ಟನ್​ ಆಗೋಕೆ ಬಿಗ್ ಬಾಸ್ ಬೆಡ್​ರೂಂನಲ್ಲಿ ದೊಡ್ಡ ಡೀಲಿಂಗ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ಸಾಯೋವರೆಗೂ ಕುಮಾರಣ್ಣ ಮತ್ತು ದೇವೇಗೌಡರ ಜೊತೆ ಇರ್ತೀವಿ :ಸಾರಾ ಮಹೇಶ್
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ನೋಡ ನೋಡ್ತಿದ್ದಂತೆಯೇ ಹತ್ತಾರು ಲೀಟರ್ ಹಾಲು ರಸ್ತೆಗೆ ಸುರಿದರು!
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ವಕ್ಫ್ ಬೋರ್ಡ್ ವಿರುದ್ಧ 5 ಜಿಲ್ಲೆಗಳಲ್ಲಿ ನಡೆಯಲಿದೆ ಯತ್ನಾಳ್ ತಂಡದ ಅಭಿಯಾನ
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಪಾರ್ಕಿಂಗ್ ವಿಚಾರವಾಗಿ ಜಗಳ, ವ್ಯಕ್ತಿಗೆ ಮನಬಂದಂತೆ ಥಳಿಸಿದ ಗುಂಪು
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?
ಜನಪ್ರತಿನಿಧಿಗಳ ನಿರ್ಲಕ್ಷ್ಯ ಜಲಾಶಯದಲ್ಲಿ ಸೋರುವಿಕೆಗೆ ಕಾರಣವಾಯಿತೆ?