AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿಮ್ಮ ಬಗ್ಗೆ ಬರುವ ಆರೋಪವನ್ನು ಧೈರ್ಯದಿಂದ ಎದುರಿಸುವಿರಿ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ವರ್ಷ ಋತುವಿನ ಶ್ರಾವಣ ಮಾಸ ಕೃಷ್ಣ ಪಕ್ಷದ ಷಷ್ಠೀ ತಿಥಿ ಗುರುವಾರ ಅವಿವೇಕಿತನ, ಭಯ ದೂರ, ಲೋಪದಿಂದ ಕೋಪ, ಮಹತ್ಕಾರ್ಯಕ್ಕೆ ಧನ ಸಂಗ್ರಹ, ಉತ್ತಮ‌ವಸ್ತುವಿಗೆ ಅತಿಮೌಲ್ಯ, ಸಂಗಾತಿಯ ಜೊತೆ ಸುತ್ತಾಟ ಇವೆಲ್ಲ ಇಂದಿನ ವಿಶೇಷ. ಇಂದು ಯಾವ ರಾಶಿಗಳ ಜನರ ಭವಿಷ್ಯ ಹೇಗಿರಲಿದೆ ಎಂಬುದರ ಬಗ್ಗೆ ಮಾಹಿತಿ

ನಿಮ್ಮ ಬಗ್ಗೆ ಬರುವ ಆರೋಪವನ್ನು ಧೈರ್ಯದಿಂದ ಎದುರಿಸುವಿರಿ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ವಿವೇಕ ಬಿರಾದಾರ|

Updated on: Aug 14, 2025 | 1:39 AM

Share

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು: ವರ್ಷ, ಚಾಂದ್ರ ಮಾಸ: ಶ್ರಾವಣ, ಸೌರ ಮಾಸ: ಕರ್ಕಾಟಕ, ಮಹಾನಕ್ಷತ್ರ: ಆಶ್ಲೇಷಾ, ವಾರ: ಗುರು, ತಿಥಿ: ಷಷ್ಠೀ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ಸುಕರ್ಮ, ಕರಣ: ಕೌಲವ, ಸೂರ್ಯೋದಯ – 06 : 19 am, ಸೂರ್ಯಾಸ್ತ – 06 : 54 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:12 – 15:46 ಗುಳಿಕ ಕಾಲ 09:29 – 11:03 ಯಮಗಂಡ ಕಾಲ 06:20 – 07:54

ಮೇಷ ರಾಶಿ: ಅವಿವೇಕಿತನದಿಂದ ನೀವೇ ಮೂರ್ಖರಾಗಬಹುದು. ಅಧಿಕಾರಯುತವಾದ ಮಾತಿನಿಂದ ನಿಮ್ಮ ಕೆಲಸವನ್ನು ಸಾಧಿಸಿಕೊಳ್ಳುವಿರಿ. ಮನಸ್ಸಿನ ಚಾಂಚಲ್ಯವನ್ನು ಕಡಿಮೆ‌ಮಾಡಿಕೊಳ್ಳಲು ಪ್ರಯತ್ನಿಸುವಿರಿ. ಇಂದು ನೀವು ಕೆಲವು ಸಂದರ್ಭದಲ್ಲಿ ಮೌನ ವಹಿಸುವುದು ಉತ್ತಮ. ಬಳಕೆಯಲ್ಲಿ ಇಲ್ಲದೇ ನಿಮ್ಮ ಸಂಬಂಧಗಳು ಸಡಿಲಾಗಬಹುದು. ಎಷ್ಟೇ ಎಚ್ಚರಿಕೆಯಿಂದ ಇದ್ದರೂ ಯಾಮಾರುವ ಸನ್ನಿವೇಶ ಬರಬಹುದು. ತಾವಾಡಬೇಕಾದ ಮಾತನ್ನು ನಿಮ್ಮಿಂದ ಆಡಿಸುವರು. ಇಂದು ವ್ಯಾಪಾರವನ್ನು ಬಹಳ ನಾಜೂಕಾಗಿ ಮಾಡಬೇಕಿದೆ. ನಿಮ್ಮ ಸುಳ್ಳು ಮಾತುಗಳಿಂದಲೇ ನಿಮಗೆ ತೊಂದರೆಯಾಗಬಹುದು. ಮಾತಿನ‌ ಮೇಲೆ‌ ಗಮನ ಇರಬೇಕಾಗುವುದು. ನಿಮ್ಮಿಂದ ಹಣದ ಸಹಾಯವನ್ನು ಬಯಸುವವರು ವಂಚಿಸಲೂ ಸಾಧ್ಯವಿದೆ. ಬೇಡವಾದುದ್ದೇ ನಿಮ್ಮನ್ನು ಹೆಚ್ಚು ಆಕರ್ಷಿಸುವುದು. ನಿಮ್ಮ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಿ ಅನುಕೂಲತೆಯು ಕೆಲವು ಸಂದರ್ಭಗಳಲ್ಲಿ ಸಿಕ್ಕಿ ಸಂತೋಷವಾಗುವುದು. ಹಳೆಯ ಹಣಕಾಸಿನ ವ್ಯವಹಾರವನ್ನು ನೀವು ತೀರಿಸಿಕೊಳ್ಳುವಿರಿ.

ವೃಷಭ ರಾಶಿ: ಪಠ್ಯೇತರ ಚಟುವಟಿಕೆಗೆ ತೋರಿಸುವ ಆಸಕ್ತಿ ಕಲಿಕೆಯಲ್ಲಿ ಕಾಣಿಸದು. ಇಂದು ನೀವು ಸ್ತ್ರೀಯರ ವಿಚಾರದಲ್ಲಿ ಸೂಕ್ಷ್ಮಮತಿಗಳಾಗುವಿರಿ. ನೀವು ಸಮಸ್ಯೆಗೆ ಪರಿಹಾರ ಹುಡುಕಲು ಹೋಗಿ ಇನ್ನಷ್ಟು ಸಮಸ್ಯೆಯನ್ನು ಮಾಡಿಕೊಳ್ಳುವಿರಿ. ಆದರೆ ನಿಮ್ಮ ನಿರ್ಧಾರವು ಅಚಲವಾಗಿರಲಿ. ಎಂದೋ ಆರಂಭವಾದ ಕಾರ್ಯವು ಕುಂಟುತ್ತಾ ಸಾಗವುದು. ವಿರುದ್ಧ ಪ್ರಯತ್ನದಿಂದ ನಿಮಗೆ ಶ್ರಮವೇ ಅಧಿಕ. ಆದರೂ ಅದರಲ್ಲಿಯೇ ಆಸಕ್ತಿ ಹೆಚ್ಚು. ಜಾಡ್ಯವನ್ನು ದೂರ ಮಾಡಿಕೊಳ್ಳುವತ್ತ ಗಮನವಿರಲಿದೆ. ಹೊಸ ವಸ್ತುಗಳ ಮೇಲೆ ವ್ಯಾಮೋಹ ಕಾಣಿಸುವುದು. ನೂತನ ವಸ್ತುಗಳನ್ನು ಖರೀದಿಸುವಲ್ಲಿ ಮೋಸವಾಗಬಹುದು. ಸಣ್ಣ ವಿಷಯವನ್ನು ನೀವು ದೊಡ್ಡ‌ ಮಾಡುವುದು‌ ಬೇಡ. ಏಕಾಂತವು ನಿಮಗೆ ಹಿತವೆನಿಸಬಹುದು. ಫಲಾಪೇಕ್ಷೆಯಿಲ್ಲದೇ ಕರ್ತವ್ಯಗಳನ್ನು ಮಾಡಿರಿ. ಹೆಚ್ಚು ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ. ಆಲೋಚನೆ ಮಾಡುವಷ್ಟರಲ್ಲಿ ಕೆಲಸವೇ ಮುಗಿಯಬಹುದು. ಹಿತಶತ್ರುಗಳನ್ನು ದೂರವಿರಿಸುವುದು ಕಷ್ಟವಾದೀತು.

ಮಿಥುನ ರಾಶಿ: ನಿಮ್ಮ ಬಳಕೆ ಮಾಡಿಸ ವಸ್ತುಗಳನ್ನು ದಾನವಾಗಿ ಕೊಡುವಿರಿ. ನಕಾರಾತ್ಮಕ ಯೋಚನೆಗಳು ನಿಮ್ಮನ್ನು ಸುಮ್ಮನಿರಲು ಬಿಡದು. ಗುರುಸನ್ನಿಧಿಯನ್ನು ನೀವು ಇಂದು ಬಯಸುವಿರಿ. ದೇವರಿಗೆ ಸಂಬಂಧಿಸಿದ ವಿಚಾರದಲ್ಲಿ ನಿಮ್ಮ ಆಸಕ್ತಿ ಹೆಚ್ಚಾಗಬಹುದು. ಕೃಷಿಕರೆ ಆತಂಕ ಬರುವ ಸಂಭವ ಇದೆ. ಸ್ನೇಹಿತರು ಜಗಳವಾಡಿ ನಿಮ್ಮನ್ನು ಬಿಟ್ಟುಹೋಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಲು ಕಷ್ಟಪಡುವರು. ಪ್ರೀತಿಯನ್ನು ಒಪ್ಪಿಕೊಳ್ಳುವ ಮೊದಲು ಹತ್ತು ಬಾರಿ ಯೋಚಿಸಿ. ಮಕ್ಕಳು ದಾರಿ ತಪ್ಪಬಹುದು. ಅವರಿಗೆ ಸರಿಯಾದ ಮಾರ್ಗದರ್ಶನ ಅಗತ್ಯ. ತಾಯಿಯ ಜೊತೆ ಕಲಹ ಮಾಡಿಕೊಳ್ಳುವಿರಿ. ನಿಮ್ಮನ್ನು ನೆಚ್ಚುವವರು ಹೆಚ್ಚಾಗಬಹುದು. ಅಧಿಕ ಮಾತನ್ನಾಡಯವುದು ಬೇಡ. ನಿಮ್ಮ ದುರ್ವರ್ತನೆಯು ಸಾಕ್ಷಿ ಸಹಿತ ಸಿಗಲಿದೆ. ಮನೆಯಲ್ಲಿ ಸಂತೋಷಕೂಟವು ನಿರ್ಮಾಣವಾಗುವುದು. ಶ್ರಮಕ್ಕೆ ಯೋಗ್ಯವಾದ ಫಲವು ಲಭಿಸುವುದು. ಅಪರೂಪದ ವಸ್ತುವು ನಿಮಗೆ ಲಾಭವಾಗಲಿದೆ. ನೀವೇ ಮಾಡಿದ ಕಾರ್ಯವಾದರೂ ಪರಿಶೀಲನೆ ಮುಖ್ಯ.

ಕರ್ಕಾಟಕ ರಾಶಿ: ತಪ್ಪಿತಸ್ಥ ಭಾವನೆಯಿಂದ ಆತ್ಮವಿಶ್ವಾಸವೂ ಕಳೆಗುಂದುವುದು. ನೀವು ಇಂದು ಏನನ್ನು ಕೊಡುವುದಿದ್ದರೂ ಮನಃಪೂರ್ವಕವಾಗಿ ಕೊಡುವುದು ಉತ್ತಮ. ಬೇರೆಯವರಿಗೆ ಅಪಕೀರ್ತಿ ತರಲು ಹೋಗಿ ನಿಮ್ಮ ಯಶಸ್ಸನ್ನೇ ಹಾಳುಮಾಡಿಕೊಳ್ಳಬೇಕಾಗುವುದು. ಇಂದ್ರಿಯ ಸಂಯಮವನ್ನು ಸಾಧಿಸುವುದು ಕಷ್ಟವಾದೀತು. ಒತ್ತಾಯಕ್ಕೆ ಮಣಿದು ನಿಮ್ಮ ಪೂರ್ವಯೋಜನೆಯನ್ನು ಬದಲಿಸುವಿರಿ. ಏನನ್ನೋ ಸಾಧಿಸಿದವರಂತೆ ಬೀಗುವುದು ಬೇಡ. ದೊಡ್ಡವರ ವಿಚಾರದಲ್ಲಿ ಮೂಗುತೂರಿಸುವಿರಿ. ನೂತನ ವಸ್ತ್ರಗಳನ್ನು ಧರಿಸುವಿರಿ. ಕಲಾವಿದರು ಅವಕಾಶವನ್ನು ಬಳಸಿಕೊಳ್ಳುವರು. ಹಿತಶತ್ರುಗಳು ಎಂದು ಅನ್ನಿಸಿದರೆ ಅವರನ್ನು ದೂರವಿಡುವುದು ಉತ್ತಮ. ಪಡೆದುಕೊಂಡಿದ್ದನ್ನು ಉಳಿಸಿಕೊಳ್ಳುವ ಎಚ್ಚರಿಕೆ ಬೇಕು. ಅಪರಿಚಿತ ಪ್ರದೇಶದಲ್ಲಿ ಜಾಗರೂಕತೆ ಬೇಕು. ಪಶ್ಚಾತ್ತಾಪ ಪಟ್ಟು ಪ್ರಯೋಜನವಾಗದು. ಆತ್ಮವಿಶ್ವಾಸದ ಕೊರತೆ ಎದ್ದು ಕಾಣುವುದು. ಆಕಸ್ಮಿಕ ವಿಚಾರಕ್ಕೆ ಗಲಿಬಿಲಿಯಾಗುವಿರಿ. ಪ್ರಯಾಣದ ಅಡೆತಡೆಯು ನಿಮಗೆ ಕೋಪ ತರಿಸಬಹುದು. ಸ್ವಂತಕ್ಕೆ ಪ್ರಯೋಜನವಿಲ್ಲದ ಯಾವ ಕಾರ್ಯವನ್ನೂ ನೀವು ಮಾಡಲಾರಿರಿ.

ಸಿಂಹ ರಾಶಿ: ನಿಮ್ಮ ಬಗ್ಗೆ ಬರುವ ಆರೋಪವನ್ನು ಧೈರ್ಯದಿಂದ ಎದುರಿಸುವಿರಿ. ನೀವು ನಿರ್ಲಕ್ಷ್ಯ ಮಾಡುವ ಸಂಗತಿಗಳೇ ನಿಮ್ಮ ಬಂದು ಸೇರುವುದು. ಮಕ್ಕಳಿಂದ ನಿಮಗೆ ಶುಭವಾರ್ತಯನ್ನು ನಿರೀಕ್ಷಿಸಿ. ಸರ್ಕಾರದಿಂದ ಆಗಬೇಕಾದ ಕೆಲಸವನ್ನು ನೀವು ಮಾಡಿಸಿಕೊಳ್ಳಲು ನೀವು ಶ್ರಮಪಡಬೇಕಾದೀತು. ಪ್ರಭಾವಿ ವ್ಯಕ್ತಿಗಳ ಸಂಪರ್ಕವಾಗಲಿದೆ. ವ್ಯಕ್ತಿಗತ ಕೋಪವನ್ನು ಬಿಟ್ಟು ವಿಷಯಕ್ಕೆ ಬೇಕಾದ ಮಹತ್ತ್ವವನ್ನು ನೀಡುವಿರಿ. ನಿಮ್ಮದಲ್ಲದ ವಸ್ತುವನ್ನು ಬಯಸಿ ಪಡೆದುಕೊಳ್ಳಲು ಕಷ್ಟಪಡುವಿರಿ. ಸುಂದರ ಸ್ಥಳಗಳನ್ನು ನೋಡಲು ನೀವು ಇಷ್ಟಪಡುವಿರಿ. ತಪ್ಪಿನ ಕಾರ್ಯದಿಂದ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಹೋದ್ಯೋಗಿಗಳು ಬೆಂಬಲ ಕೊಡುವುದು ಕಷ್ಟವಾದೀತು. ಇಂದು ಇಡೀ ದಿನ ಕೋಪದಿಂದ ಇರುವಿರಿ. ಪ್ರಯಾಣದ ವಿಚಾರದಲ್ಲಿ ಕಲಹವಾಗಬಹುದು. ಅನ್ನಿಸಿದ್ದನ್ನು ಹೇಳುವ ರೀತಿಯಲ್ಲಿ ಹೇಳಿ. ಇಂದು ನಿಮ್ಮವರ ಬಗ್ಗೆಯೇ ಯೋಚಿಸಲು ಸಮಯ ಸಿಗದು. ದಿನದ ಆರಂಭವು ಬಹಳ ಉತ್ಸಾಹದಿಂದ ಇರಲಿದ್ದು ಎಲ್ಲ ಜೊತೆ ಸೌಹಾರ್ದವಾಗಿ ಇರುವಿರಿ.

ಕನ್ಯಾ ರಾಶಿ: ನಿಮ್ಮ ಕಾರ್ಯದ ವೇಗವನ್ನು ತಗ್ಗಿಸಲು ಒಂದಿಷ್ಟು ಕೆಲಸಗಳನ್ನು ನೀಡುವರು. ಮಹಿಳೆಯರ ಜೊತೆ ಕೆಲಸ ಮಾಡುವುದು ಕಷ್ಟವಾಗುವುದು. ಅವಮಾನದವನ್ನು ನೀವು ಅನುಭವಿಸುವ ಪ್ರಸಂಗವೂ ಬರಬಹುದು. ಪ್ರತ್ಯೇಕವಾಗಿ ನಿಮ್ಮನ್ನು ಗುರುತಿಸಿಕೊಳ್ಳಲು ಬಯಸುವಿರಿ. ನಿಮ್ಮ ಮಾತುಗಳು ನಿಮಗೆ ತಿರುಗುಬಾಣವಾಗಿ ಬರಬಹುದು.‌ ಸಂಗಾತಿಯು ಉದ್ಯಮದಲ್ಲಿ ಪ್ರವೇಶ ಮಾಡಬಹುದು. ಆಪತ್ಕಾಲದ ಸಂಪತ್ತನ್ನು ಇಂದು ಬಳಸಿಕೊಳ್ಳುವಿರಿ. ಬಂಗಾರದ ವ್ಯಾಪಾರಿಗಳು ಅಧಿಕ ಲಾಭವನ್ನು ಗಳಿಸಲಿದ್ದಾರೆ. ಆಕಸ್ಮಿಕ ಧನಲಾಭವು ನಿಮಗೆ ಸಂತೋಷವನ್ನು ಕೊಡದು. ಸ್ನೇಹಿತರ ಮೇಲೆ ಅನುಮಾನಪಟ್ಟುಕೊಂಡು ಅವರನ್ನು ದೂರವಿರಿಸುವಿರಿ. ಸರ್ಕಾರಿ ಉದ್ಯೋಗವನ್ನು ಪಡೆಯಲು ಬಹಳ ಪ್ರಯತ್ನಪಡುವಿರಿ. ನಷ್ಟವಾದುದರ ಅನುಭವವು ನಿಮಗಾಗುವುದು. ಈ ಕಾರಣಕ್ಕೆ ನಿಮಗೆ ಕೆಲಸದ ಪ್ರದೇಶದಲ್ಲಿ ಅಸ್ಥಿರತೆ ಇರುತ್ತದೆ. ಕಷ್ಟದ ಫಲವು ನಿಮಗೆ ಇಂದು ಗೊತ್ತಾಗಲಿದೆ. ಸಮಯದೊಂದಿಗೆ ಚಲಿಸುವ ಮೂಲಕ ನೀವು ಪ್ರಗತಿ ಹೊಂದುತ್ತೀರಿ.

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ