ಬೆಂಗಳೂರು, (ಅಕ್ಟೋಬರ್ 10): ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಗೃಹಲಕ್ಷಿಯಿಂದ ಮನೆಯ ಯಜಮಾನಿಗೆ ಪ್ರತಿ ತಿಂಗಳು 2,000 ರೂ. ಹಣವನ್ನು ನೀಡಲಾಗುತ್ತಿದೆ. ಇದರಿಂದ ಹಲವಾರು ಮಹಿಳೆಯರಿಗೆ ಅನುಕೂಲವಾಗಿರುವ ಬಗ್ಗೆ ಹಲವು ಉದಾಹರಣೆಗಳು ಇವೆ. ಬೆಳಗಾವಿಯ ಅನಿತಾ ಎಂಬ ಬಡ ಮಹಿಳೆಯೊಬ್ಬರಿಗೆ ಗೃಹಲಕ್ಷ್ಮಿ ಹಣ ನೆರವಾಗಿದ್ದು ಅವರು ಆ ಹಣದಿಂದ ತಮ್ಮ ಪತಿಯ ಕಣ್ಣಿನ ಆಪರೇಷನ್ ಮಾಡಿಸಿದ್ದರು. ಇದೀಗ ಇದೇ ಬೆಳಗಾವಿಯಲ್ಲಿ ಮಹಿಳೆಯೊಬ್ಬರು ಈ ಗೃಹ ಲಕ್ಷ್ಮಿ ಹಣದಿಂದ ತನ್ನ ಪುತ್ರನಿಗೆ ಬೈಕ್ ಬುಕ್ ಮಾಡಿದ್ದಾಳೆ. ಹೌದು… ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ಸಣ್ಣಕ್ಕಿ ಎಂಬ ಮಹಿಳೆ, ಪುತ್ರನಿಗೆ ಬೈಕ್ ಖರೀದಿಸಲು ಕೂಡಿಟ್ಟಿದ್ದ ಗೃಹ ಲಕ್ಷ್ಮಿ ಹಣವನ್ನ ಮುಂಗಡವಾಗಿ (ಡೌನ್ ಪೇಮೆಂಟ್) ಕಟ್ಟಿದ್ದಾಳೆ.
ಗೃಹಲಕ್ಷ್ಮಿ ಯೋಜನೆಯಿಂದ ಬಂದಿದ್ದ ಹಣವನ್ನು ಕೂಡಿಟ್ಟಿದ್ದ ಬಾಗವ್ವ, ಇದೀಗ ತನ್ನ ಮಗ ರಮೇಶ ನೀಲಪ್ಪನಿಗೆ ದ್ವಿಚಕ್ರ ವಾಹನ ಖರೀದಿಸಲು ನೀಡಿದ್ದಾಳೆ. ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ಮಗನಿಗೆ ತಾಯಿ ಗೃಹಲಕ್ಷ್ಮಿ ಹಣ ನೀಡಿರುವುದಕ್ಕೆ ಫುಲ್ ಖುಷಿಯಾಗಿದ್ದಾನೆ.
ಇದನ್ನೂ ಓದಿ: ಕಣ್ಣಿನ ಆಪರೇಷನ್ಗೆ ವರದಾನವಾದ ಗೃಹಲಕ್ಷ್ಮಿ ಹಣ
ಇನ್ನು ಈ ವಿಚಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗಮನಕ್ಕೆ ಬಂದಿದ್ದು, ಕೂಡಲೇ ಬಾಗವ್ವ ಸಣ್ಣಕ್ಕಿ ಅವರಿಗೆ ಪತ್ರ ಬರೆದು ಮಹಿಳೆಯ ಕಾರ್ಯಕ್ಕೆ ಶ್ಲಾಘಿಸಿದ್ದಾರೆ. ಅಲ್ಲದೇ ತಮ್ಮ ತಾಯಿಯ ಗೃಹ ಲಕ್ಷ್ಮಿ ಹಣದಿಂದಲೇ ಹೊಸ ಬೈಕ್ ಕೊಳ್ಳುತ್ತಿರುವ ರಮೇಶನಿಗೆ ಶುಭಾಶಯ ಕೋರಿದ್ದಾರೆ.
ಕರ್ನಾಟಕ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಗೃಹಲಕ್ಷ್ಮಿ ಹಣವನ್ನು ಕೂಡಿಟ್ಟು ತಮ್ಮ ಮಗನಾದ ರಮೇಶ್ ನೀಲಪ್ಪ ಸಣ್ಣಕ್ಕಿ ಅವರಿಗೆ ಬೈಕ್ ವಾಹನ ಖರೀದಿಸಲು ಮುಂಗಾಡ ಹಣವನ್ನು ತಾವು(ಬಾಗವ್ವ) ನೀಡಿರುವು ವಿಷಯ ಕೇಳಿ ಇಲಾಖೆಯ ಮಂತ್ರಿಯಾದ ನನಗೆ ಅತೀವ ಖುಷಿ ತಂದಿದೆ.
ಗೃಹಲಕ್ಷ್ಮಿ ಯೋಜನಯಿಂದ ರಾಜ್ಯದ ಮಹಿಳೆಯರು ಸಾವಲಂಬಿ ಜೀವನ ನಡೆಸುವುದರ ಜೊತೆಯಲ್ಲಿ ಮನೆಯ ಪುರಷರಿಗೆ ಆರ್ಥಿಕವಾಗಿ ಸಹಾಯ ಮಾಡುತ್ತಿರುವುದು ನಿಜಕ್ಕೂ ಮಹುಳೆಯರ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ. ವಿಜಯದಶಮಿ ಹಬ್ಬದ ಶುಭ ಸಂದರ್ಭದಲ್ಲಿ ತಮ್ಮ ಈ ಕಾರ್ಯವು ನಿಜಕ್ಕೂ ಶ್ಲಾಘನೀಯ. ಈ ಯೋಜನೆ ರೂವಾರಿಗಳಾದ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೇಲೆ ತಮ್ಮ ಪ್ರೀತಿ ವಿಶ್ವಾಸ ಹೀಗೆ ಮುಂದುವರೆಲೆಂದು ಬಯಸುತ್ತಾ, ತಮಗೆ ಈ ಮೂಲಕ ಹೊಸ ವಾಹನ ಖರೀಸುತ್ತಿರುವ ಶುಭ ಸಂದರ್ಭದಲ್ಲಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಬಾಗವ್ವಗೆ ಪತ್ರ ಬರೆದಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.