Border Dispute: ಬೆಳಗಾವಿಯಲ್ಲಿ ಎಂಇಎಸ್​ ಪುಂಡರಿಗೆ ಎಡಿಜಿಪಿ ಅಲೋಕ್​ಕುಮಾರ್ ಖಡಕ್​ ವಾರ್ನಿಂಗ್​

| Updated By: ರಮೇಶ್ ಬಿ. ಜವಳಗೇರಾ

Updated on: Nov 29, 2022 | 4:22 PM

MES ಪುಂಡಾಟ ನಿಲ್ಲುತ್ತಿಲ್ಲ. ಕಾಲು ಕೆರೆದು ಕಿರಿಕ್ ಮಾಡ್ತಿರೋದು ತಪ್ಪುತ್ತಿಲ್ಲ.. ಗಡಿ ನೆಪದಲ್ಲಿ ಪದೇಪದೆ ತಂಟೆಗೆ ಬರ್ತಿರೋ ಮಹಾನೀಚರ ವಿರುದ್ಧ ಕನ್ನಡಪಡೆ ಕೆರಳಿ ನಿಂತಿದೆ. ಆಕ್ರೋಶದ ಬೆಂಕಿ ಹೊತ್ತಿ ಉರೀತಿದೆ. ಇದರ ಮಧ್ಯೆ ಎಡಿಜಿಪಿ ಎಂಇಎಸ್ ಕಾರ್ಯಕರ್ತರಿಗೆ ಖಡ್ ವಾರ್ನಿಂಗ್ ಕೊಟ್ಟಿದ್ದಾರೆ.

Border Dispute: ಬೆಳಗಾವಿಯಲ್ಲಿ ಎಂಇಎಸ್​ ಪುಂಡರಿಗೆ ಎಡಿಜಿಪಿ ಅಲೋಕ್​ಕುಮಾರ್ ಖಡಕ್​ ವಾರ್ನಿಂಗ್​
Alok Kumar, ADGP
Follow us on

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ (Maharashtra-Karnataka border dispute) ದಿನೇದಿನೆ ತಾರಕಕ್ಕೇರುತ್ತಿದೆ. ಎಂಇಎಸ್ ಸಂಘಟನೆ ಕಾರ್ಯಕರ್ತರು ಕರ್ನಾಟಕದ ಬಸ್​ಗಳಿಗೆ ಮಸಿ ಬಳಿದು ಕಲ್ಲು ತೂಡುತ್ತಿದ್ದಾರೆ. ಇದರಿಂದ ಪುಂಡರ ವಿರುದ್ಧ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ. ಇನ್ನು ಈ ಬಗ್ಗೆ ಎಡಿಜಿಪಿ ಅಲೋಕ್ ​ಕುಮಾರ್​ (Alok Kumar)​ ಬೆಳಗಾವಿಗೆ ಭೇಟಿ ನೀಡಿ ಎಂಇಎಸ್ (MES)​ ಪುಂಡರಿಗೆ ಖಡಕ್ ವಾನಿಂಗ್ ಕೊಟ್ಟಿದ್ದಾರೆ.

ಗಡಿ ವಿವಾದದ ಕಿಚ್ಚಿನ ಮಧ್ಯೆ ಇದೇ ಡಿಸೆಂಬರ್ 3ರಂದು ಬೆಳಗಾವಿಗೆ(Belagavi) ಮಹಾರಾಷ್ಟ್ರ ಸಚಿವದ್ವಯರ ಭೇಟಿ ನೀಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂಜಾಗ್ರತಾವಾಗಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕಾನೂನು ಸುವ್ಯವಸ್ಥೆ ಪರಿಶೀಲಿಸಲು ಎಡಿಜಿಪಿ ಅಲೋಕ್​ಕುಮಾರ್ ಇಂದು(ನವೆಂಬರ್ 29) ಬೆಳಗಾವಿಗೆ ಭೇಟಿ ನೀಡಿದರು.

ಇದನ್ನೂ ಓದಿ: ಎಂಇಎಸ್ ಆಹ್ವಾನ ಸ್ವೀಕರಿಸಿದ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ; ಡಿ 3ಕ್ಕೆ ಬೆಳಗಾವಿಗೆ ಆಗಮನ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂಇಎಸ್ ಪುಂಡರೇ ಇರಲಿ ಯಾವುದೇ ಎಸ್ ಪುಂಡರೇ ಇರಲಿ ತರ್ಲೆ ಮಾಡಿದರೆ ಕ್ರಮ. ಏನಾದರೂ ತರ್ಲೆ ಮಾಡಲು ಬಂದ್ರೆ ಖಂಡಿತ ಕ್ರಮ ಕೈಗೊಳ್ಳುತ್ತೇವೆ. ಯಾರ ಮನೆಯಲ್ಲೋ ಊಟ ಮಾಡೋಕೆ, ಯಾರದ್ದೋ ಮದುವೆ ಅಥವಾ ಸಮಾಲೋಚನೆ ಮಾಡಲು ಬಂದ್ರೆ ಏನು ಮಾಡಲ್ಲ. ಆದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರಲು ಯತ್ನಿಸಿದರೆ ಕಠಿಣ ಕ್ರಮ ಎಂದು ಖಡಕ್ ಎಚ್ಚರಿಕೆ ನೀಡಿದರು.

ಡಿ. 3ರಂದು ಬೆಳಗಾವಿಗೆ ಮಹಾ ಸಚಿವರು

ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಗೆ ಆಗಮಿಸುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿಗೆ ಎಂಇಎಸ್ ಪತ್ರ ಬರೆದಿತ್ತು. ಈ ಪತ್ರಕ್ಕೆ ಈಗ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. ಡಿ. 3ರಂದು ಬೆಳಗಾವಿಗೆ ಬರೋದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಬಸ್ ಮೇಲೆ ಕಲ್ಲು ತೂರಿ ಮಸಿ ಬಳಿದ ಎಂಇಎಸ್ ಸಂಘಟನೆ ವಿರುದ್ಧ ಕರ್ನಾಟಕದಲ್ಲಿ ಭುಗಿಲೆದ್ದ ಆಕ್ರೋಶ

ಕರ್ನಾಟಕ ಮತ್ತು ಮಹರಾಷ್ಟ್ರ ರಸ್ತೆ ಸಾರಿಗೆ ಸೇವೆ ಆರಂಭ

ಎರಡು ದಿನಗಳಿಂದ ಬಂದ್ ಆಗಿದ್ದ ಕರ್ನಾಟಕ ಮತ್ತು ಮಹರಾಷ್ಟ್ರ ರಸ್ತೆ ಸಾರಿಗೆ ಸೇವೆ ಭಾನುವಾರಿಂದ ಮತ್ತೆ ಆರಂಭವಾಗಿದೆ.. ಮಹಾರಾಷ್ಟ್ರ ಬಸ್​ಗೆ ಮಹಾರಾಷ್ಟ್ರ ಗಡಿವರೆಗೂ ಓರ್ವ ಪೊಲೀಸರನ್ನ ಬಸ್​ನಲ್ಲೇ ಕಳುಹಿಸಿ ಭದ್ರತೆ ನೀಡಿದೆ.. ಮಹಾರಾಷ್ಟ್ರ ಸರ್ಕಾರ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಬೇಕು ಎಂದು ಕನ್ನಡಿಗರು ಆಗ್ರಹಿಸಿದ್ದಾರೆ.

ಕರ್ನಾಟಕ ಮಹಾರಾಷ್ಟ್ರ ಗಡಿ ವಿವಾದ ದಿನೇದಿನೆ ತಾರಕಕ್ಕೇರುತ್ತಿದ್ದು, ಕರ್ನಾಟಕದ ಬಸ್​ಗಳಿಗೆ ಮಸಿ ಬಳಿದು ಕಲ್ಲು ತೂರಿದ ಪುಂಡರ ವಿರುದ್ಧ ಕನ್ನಡ ಪರ ಸಂಘಟನೆಗಳು ಸಿಡಿದೆದ್ದಿವೆ. ಮೊನ್ನೇ ಅಷ್ಟೇಕರವೇ ಬಣದ ಕಾರ್ಯಕರ್ತರು ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಕಿಡಿ ಕಾರಿದ್ದರು.. ಪ್ರಚೋದನಾಕಾರಿ ಹೇಳಿಕೆ ನೀಡ್ತಿರೋ ಸಿಎಂ ಏಕನಾಥ ಶಿಂಧೆ-ಡಿಸಿಎಂ ದೇವೇಂದ್ರ ಫಡ್ನವೀಸ್‌ ಪ್ರತಿಕೃತಿಗಳ ಅಣಕು ಶವಯಾತ್ರೆ ಮಾಡಿ ಇಬ್ಬರ ಭಾವಚಿತ್ರಕ್ಕೆ ಕಪ್ಪು ಮಸಿ ಹಚ್ಚಿ ಪ್ರತಿಕೃತಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲದೇ ಮಹಾರಾಷ್ಟ್ರದ ಗೂಡ್ಸ್‌ ವಾಹನಕ್ಕೆ ಕಪ್ಪು ಮಸಿ ಬಳಿದು ತಿರುಗೇಟು ನೀಡಿದ್ದರು.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ