ಎಂಇಎಸ್ ಆಹ್ವಾನ ಸ್ವೀಕರಿಸಿದ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ; ಡಿ 3ಕ್ಕೆ ಬೆಳಗಾವಿಗೆ ಆಗಮನ

ಬೆಳಗಾವಿಗೆ ಬರುವಂತೆ ಎಂಇಎಸ್ ಪತ್ರದ ಮೂಲಕ ಆಹ್ವಾನಿಸಿತ್ತು. ಈ ಬಗ್ಗೆ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಟ್ವೀಟ್ ಮಾಡಿದ್ದು ಡಿ.3ರಂದು ಬರುವುದಾಗಿ ತಿಳಿಸಿದ್ದಾರೆ.

ಎಂಇಎಸ್ ಆಹ್ವಾನ ಸ್ವೀಕರಿಸಿದ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ; ಡಿ 3ಕ್ಕೆ ಬೆಳಗಾವಿಗೆ ಆಗಮನ
ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್
Follow us
TV9 Web
| Updated By: ಆಯೇಷಾ ಬಾನು

Updated on:Nov 29, 2022 | 12:10 PM

ಬೆಳಗಾವಿ: ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ವಿಚಾರಕ್ಕೆ ಸಂಬಂಧಿಸಿ ಬೆಳಗಾವಿಗೆ ಆಗಮಿಸುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಾದ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿಗೆ ಎಂಇಎಸ್ ಪತ್ರ ಬರೆದಿತ್ತು. ಈ ಪತ್ರಕ್ಕೆ ಈಗ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಟ್ವೀಟ್ ಮೂಲಕ ಉತ್ತರ ನೀಡಿದ್ದಾರೆ. ಡಿ. 3ರಂದು ಬೆಳಗಾವಿಗೆ ಬರೋದಾಗಿ ತಿಳಿಸಿದ್ದಾರೆ.

ಬೆಳಗಾವಿಗೆ ಬರುವಂತೆ ಎಂಇಎಸ್ ಪತ್ರದ ಮೂಲಕ ಆಹ್ವಾನಿಸಿತ್ತು. ಈ ಬಗ್ಗೆ ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವ ಚಂದ್ರಕಾಂತ ಪಾಟೀಲ್ ಟ್ವೀಟ್ ಮಾಡಿದ್ದು ಡಿ.3ರಂದು ಬರುವುದಾಗಿ ತಿಳಿಸಿದ್ದಾರೆ. ಬೆಳಗಾವಿಗೆ ಬಂದು ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚಿಸಲು ಆಹ್ವಾನಿಸಿದೆ. ಹೀಗಾಗಿ ಡಿ.3ರಂದು ಬೆಳಗಾವಿಗೆ ನಾವು ಆಗಮಿಸುತ್ತೇವೆ. ನಾನು ಹಾಗೂ ಸಚಿವ ಶಂಭುರಾಜ್ ದೇಸಾಯಿ ಆಗಮಿಸುತ್ತೇವೆ. ಡಿ.3ರಂದು ಇಡೀ ದಿನ ಎಂಇಎಸ್ ಕಾರ್ಯಕರ್ತರ ಜೊತೆ ಸಭೆ ಮಾಡ್ತೀವಿ ಎಂದು ಸಚಿವ ಚಂದ್ರಕಾಂತ ಪಾಟೀಲ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಗಡಿ ವಿಚಾರದಲ್ಲಿ ಎಂಇಎಸ್ ಮತ್ತೆ ಕ್ಯಾತೆ: ಬೆಳಗಾವಿಗೆ ಬರುವಂತೆ ಮಹಾರಾಷ್ಟ್ರ ಗಡಿ ಸಮನ್ವಯ ಸಚಿವರಿಗೆ ಪತ್ರ

ಸುಪ್ರೀಂಕೋರ್ಟ್‌ನಲ್ಲಿ ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ವಿಚಾರಣೆ ನಡೆಯಲಿದೆ. ಈ ವೇಳೆ ಇಬ್ಬರನ್ನು ಮಹಾರಾಷ್ಟ್ರ ಸರ್ಕಾರ ಸಮನ್ವಯ ಸಚಿವರನ್ನಾಗಿ ನೇಮಿಸಿದೆ. ಗಡಿವಿವಾದ ಅಲ್ಲದೇ ಇತರ ಸಮಸ್ಯೆಗಳ ಬಗ್ಗೆ ಎಂಇಎಸ್ ಕಾರ್ಯಕರ್ತರ ಜೊತೆ ಚರ್ಚಿಸುವುದು ಅಗತ್ಯವಿದೆ. ಹೀಗಾಗಿ ಬೆಳಗಾವಿಗೆ ಇಬ್ಬರು ಸಚಿವರು ಆಗಮಿಸಿ ಚರ್ಚಿಸಿ ಎಂದು ಮಹಾರಾಷ್ಟ್ರದ ಗಡಿ ಸಮನ್ವಯ ಸಚಿವರಿಗೆ ಪತ್ರ ಬರೆದು ನಾಡದ್ರೋಹಿ ಎಂಇಎಸ್ ಮನವಿ ಮಾಡಿದೆ.

ಮೊದಲು ಕರ್ನಾಟಕಕ್ಕೆ‌ ಸೇರಲು ಬಯಸುತ್ತಿರುವವರ ಮನವೊಲಿಸಿ

ಇನ್ನು ಡಿ.3 ಕ್ಕೆ ಗಡಿ ವಿಚಾರಕ್ಕೆ ಮಹಾರಾಷ್ಟ್ರ ಸಚಿವರು ರಾಜ್ಯಕ್ಕೆ ಆಗಮಿಸುತ್ತಿರುವ ಬಗ್ಗೆ ದೇವನಹಳ್ಳಿಯಲ್ಲಿ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ ಬೆಳಗಾವಿಗೆ ಬಂದು ಎಂಇಎಸ್ ಅವರ ಜೊತೆ ‌ಮಾತನಾಡುವುದು ಇರಲಿ. ಸಾಂಗ್ಲಿ‌ ಕಡೆ ಜನ ನಮ್ಮನ್ನ‌ ಕರ್ನಾಟಕಕ್ಕೆ‌ ಸೇರಿಸಿ ಅಂತ ಜನ ಎದ್ದಿದ್ದಾರೆ. ಅವರನ್ನ ಮನವೊಲಿಸುವ ಕೆಲಸ‌ ಮಾಡಲು‌ ಮೊದಲು ಆ ನಿಯೋಗ ಅಲ್ಲಿಗೆ ಹೋಗಲಿ. ನಂತರ ಇಲ್ಲಿ ಬಂದು ಚರ್ಚೆ ಮಾಡಲಿ ಎಂದಿದ್ದಾರೆ.

Published On - 12:00 pm, Tue, 29 November 22