ಬೆಳಗಾವಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ: ಬಾಲಕಿಯನ್ನ ಪುಸಲಾಯಿಸಿ ಕರೆದೊಯ್ದು 6 ಜನರಿಂದ ಕೃತ್ಯ

ಬೆಳಗಾವಿಯ ಹೊರವಲಯದ ರೆಸಾರ್ಟ್​​ವೊಂದರಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್​​ರೇಪ್​​ ಬೆನ್ನಲ್ಲೇ ಇದೀಗ ಜಿಲ್ಲೆಯಲ್ಲಿ ಮತ್ತೊಂದು ಗ್ಯಾಂಗ್​ರೇಪ್​​ ಪ್ರಕರಣ ಬೆಳಕಿಗೆ ಬಂದಿದೆ. 15 ವರ್ಷದ ಬಾಲಕಿಯ ಮೇಲೆ ಆರು ಜನರಿಂದ ಕೃತ್ಯವೆಸಗಲಾಗಿದೆ. ಸದ್ಯ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬೆಳಗಾವಿಯಲ್ಲಿ ಮತ್ತೊಂದು ಸಾಮೂಹಿಕ ಅತ್ಯಾಚಾರ: ಬಾಲಕಿಯನ್ನ ಪುಸಲಾಯಿಸಿ ಕರೆದೊಯ್ದು 6 ಜನರಿಂದ ಕೃತ್ಯ
ಪ್ರಾತಿನಿಧಿಕ ಚಿತ್ರ
Edited By:

Updated on: Jun 01, 2025 | 12:21 PM

ಬೆಳಗಾವಿ, ಜೂನ್​ 01: ಇತ್ತೀಚೆಗೆ ರೆಸಾರ್ಟ್​​ವೊಂದರಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್​​ರೇಪ್ (sexual assault)​​ ನಡೆದಿತ್ತು. ಈ ಪ್ರಕರಣದಲ್ಲಿ ಇಬ್ಬರು ಬಾಲಾಪರಾಧಿ ಸೇರಿ ಐವರನ್ನು ಬಂಧಸಲಾಗಿತ್ತು. ಈ ಘಟನೆ ಮಾಸುವ ಮುನ್ನವೇ  ಇದೀಗ ಜಿಲ್ಲೆಯಲ್ಲಿ ಮತ್ತೊಂದು ಗ್ಯಾಂಗ್​ರೇಪ್​​ ಪ್ರಕರಣ ಬೆಳಕಿಗೆ ಬಂದಿದೆ. ಹದಿನೈದು ವರ್ಷದ ಬಾಲಕಿ (girl) ಮೇಲೆ 6 ಜನರ ಗ್ಯಾಂಗ್​ನಿಂದ ಎರಡೆರೆಡು ಬಾರಿ ಸಾಮೂಹಿಕ ಅತ್ಯಾಚಾರವೆಸಗಿರುವಂತಹ ಘಟನೆ ನಗರದ ಹೊರ ವಲಯದ ಕಾಕತಿ ಠಾಣಾ ವ್ಯಾಪ್ತಿಯ ಗುಡ್ಡದಲ್ಲಿ ನಡೆದಿದೆ.

ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್​ ದಾಖಲಾದ ಒಂದೇ ದಿನದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಎ1 ಸೇರಿ ಉಳಿದ ಆರೋಪಿಗಳ ಪತ್ತೆಗೆ ಪೊಲೀಸರು ಶೋಧ ನಡೆಸಿದ್ದಾರೆ.

ನಡೆದಿದ್ದೇನು?

ಆರು ತಿಂಗಳ ಹಿಂದೆ ಸ್ನೇಹಿತ ಬಾಲಕಿಯನ್ನು ಪುಸಲಾಯಿಸಿ ಗುಡ್ಡಕ್ಕೆ ಕರೆದೊಯ್ದು 6 ದುರುಳರಿಂದ ಅತ್ಯಾಚಾರವೆಸಗಲಾಗಿದೆ. ಕೃತ್ಯವೆಸಗುವಾಗ ದುಷ್ಕರ್ಮಿಗಳು ವಿಡಿಯೋ ಮಾಡಿಕೊಂಡಿದ್ದಾರೆ. ಬಳಿಕ ಅದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಮತ್ತೊಮ್ಮೆ ಅತ್ಯಾಚಾರ ಮಾಡಿದ್ದಾರೆ. ಈ ವೇಳೆ ಕೂಡ ವಿಡಿಯೋ ಮಾಡಿಕೊಂಡಿದ್ದಾರೆ. ಅದೇ ವಿಡಿಯೋಗಳನ್ನು ಇಟ್ಟುಕೊಂಡು ಇದೀಗ ಮತ್ತೆ ಬಾಲಕಿಗೆ ಬೆದರಿಕೆ ಹಿನ್ನೆಲೆ ಎಪಿಎಂಸಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಇದನ್ನೂ ಓದಿ
ಬೆಳಗಾವಿ: ಲೋಕೇಶ್ವರ ಸ್ವಾಮೀಜಿ ಮೇಲೆ ಅತ್ಯಾಚಾರ ಕೇಸ್ ಬೆನ್ನಲ್ಲೇ ಮಠ ಧ್ವಂಸ
ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಅರೆಸ್ಟ್​​
ಮತ್ತು ಬರಿಸಿ ಬೆಳಗಾವಿಯ ಮೆಡಿಕಲ್​​ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ
ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ

ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಹೇಳಿದ್ದಿಷ್ಟು

ಪ್ರಕರಣ ಬಗ್ಗೆ ಬೆಳಗಾವಿ ನಗರ ಪೊಲೀಸ್ ಆಯುಕ್ತ ಬೊರಸೆ ಭೂಷಣ್ ಪ್ರತಿಕ್ರಿಯಿಸಿದ್ದು, ಪೋಕ್ಸೋ ಕಾಯ್ದೆಯಡಿ ಎಪಿಎಂಸಿ ಠಾಣೆಯಲ್ಲಿ FIR ದಾಖಲಾಗಿದೆ. ಸಂತ್ರಸ್ತ ಬಾಲಕಿಗೆ ಒಬ್ಬನಿಂದ ಇನ್ನುಳಿದವರು ಪರಿಚಯ ಆಗಿತ್ತು. ಡಿಸೆಂಬರ್​​ ತಿಂಗಳಲ್ಲಿ ಬಾಲಕಿ ಮೇಲೆ ಅತ್ಯಾಚಾರ ಆಗಿತ್ತು. ಈ ವೇಳೆ ಆರೋಪಿಗಳು ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದರು. ಜನವರಿಯಲ್ಲಿ ಅದೇ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್​ಮೇಲ್​ ಮಾಡಿದ್ದು, ಭಯದಿಂದ ಮತ್ತೆ ಬಾಲಕಿ ಹೋದಾಗ ಬೇರೊಂದು ಜಾಗಕ್ಕೆ ಕರೆದೊಯ್ದು ಮೂವರಿಂದ ಬಾಲಕಿ ಮೇಲೆ ಕೃತ್ಯವೆಸಗಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ, ಪ್ರಕರಣದ ಎ3 ಪೊಲೀಸಪ್ಪನ ಮಗ ಪರಾರಿ

ಘಟನೆ ಬಳಿಕ ಪೋಷಕರಿಗೆ ಸಂತ್ರಸ್ತ ಬಾಲಕಿ ವಿಚಾರ ಹೇಳಿಲ್ಲ. ಮತ್ತೆ ಕೆಲ ದಿನಗಳಿಂದ ಕರೆ ಮಾಡಿ ಸಂತ್ರಸ್ತೆಗೆ ಬ್ಲ್ಯಾಕ್​ಮೇಲ್​ ಮಾಡಿದ್ದು, ಬಾರದಿದ್ರೆ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಮತ್ತು ಕೊಲೆ‌ ಮಾಡುವುದಾಗಿ ಜೀವ ಬೆದರಿಕೆ ಹಾಕಿದ್ದಾರೆ. ಇದರಿಂದ ಭಯಗೊಂಡು ಬಾಲಕಿ ಪೋಷಕರ ಗಮನಕ್ಕೆ ತಂದಿದ್ದಾಳೆ. ನಿನ್ನೆ ಎಪಿಎಂಸಿ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಪೋಕ್ಸೋ ಕಾಯ್ದೆಯಡಿ ನಿನ್ನೆ ಎಫ್‌ಐಆರ್ ದಾಖಲು ಮಾಡಿದ್ದಾರೆ. ದೂರು ದಾಖಲಾದ 24 ಗಂಟೆಯಲ್ಲಿ ಐವರು ಆರೋಪಿಗಳ ಬಂಧಿಸಿದ್ದು, ಪ್ರಕರಣದಲ್ಲಿ ಇಬ್ಬರು ಬಾಲಾಪರಾಧಿ ಇದ್ದಾರೆ. ಇನ್ನೋರ್ವ ಆರೋಪಿ ಬಂಧನಕ್ಕೂ ಶೋಧ ನಡೆಸುತ್ತಿದ್ದೇವೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.

ರೆಸಾರ್ಟ್​​ವೊಂದರಲ್ಲಿ ಅಪ್ರಾಪ್ತೆ ಮೇಲೆ ಗ್ಯಾಂಗ್​​ರೇಪ್: ಇಬ್ಬರ ಬಂಧನ

ವಾರದ ಹಿಂದಷ್ಟೇ ಬೆಳಗಾವಿಯ ಹೊರವಲಯದ ರೆಸಾರ್ಟ್​​ನಲ್ಲಿ ಗ್ಯಾಂಗ್​​ರೇಪ್​ ನಡೆದಿತ್ತು. ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಪುತ್ರ ಸಹಿತ ಭಾಗಿಯಾಗಿದ್ದಾನೆ ಎಂಬ ಆರೋಪ ಕೂಡ ಕೇಳಿಬಂದಿತ್ತು. ಕಾಲೇಜಿಗೆ ರಜೆ ಇದ್ದ ಕಾರಣ ಮೂವರು ವಿದ್ಯಾರ್ಥಿಗಳು ಒಂದೇ ಕಡೆ ಸೇರಿಕೊಂಡು ರೆಸಾರ್ಟ್ ಒಂದರಲ್ಲಿ ಪಾರ್ಟಿ ಮಾಡಿದ್ದಾರೆ. ಪಾರ್ಟಿಯ ಮತ್ತಿನಲ್ಲಿ ಅಪ್ರಾಪ್ತ ಬಾಲಕಿಯನ್ನ ಪುಸಲಾಯಿಸಿ ಕರೆಯಿಸಿಕೊಂಡು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದರು.

ಈ ವಿಚಾರ ಯಾರಿಗೂ ಗೊತ್ತಿರಲಿಲ್ಲ. ಆದರೆ ಬಾಲಕಿಯ ಕೊರಳಲ್ಲಿ ಇದ್ದ ಚೈನ್ ಒಂದು ಮಿಸ್ ಆಗಿತ್ತು. ಈ ಬಗ್ಗೆ ಮನೆಯಲ್ಲಿ ಪೋಷಕರು ಆಕೆಯನ್ನು ವಿಚಾರಿಸಿದ್ದಾರೆ. ಈ ವೇಳೆಯಲ್ಲಿ ಓರ್ವ ಬಾಲಕ ಸ್ನೇಹಿತನ ಬಳಿ ಚೈನ್ ಇದೆ ಅಂತಾ ಹೇಳಿದ್ದಾಳೆ. ಆತಾನ ಬಳಿ ಯಾಕೆ ಕೊಟ್ಟೆ ಅಂತಾ ಕೇಳಿದಾಗ ತನ್ನ ಸ್ನೇಹಿತರು ಎಸಗಿದ ದೌರ್ಜನ್ಯದ ಬಗ್ಗೆ ಬಾಲಕಿ ಪೋಷಕರ ಬಳಿ ಬಾಯಿ ಬಿಟ್ಟಿದ್ದಾಳೆ.

ತಕ್ಷಣವೇ ಬಾಲಕಿ ತಾಯಿ ಟಿಳಕವಾಡಿ ಪೊಲೀಸ್ ಠಾಣೆಗೆ ಬಂದು ದೂರು ದಾಖಲಿಸಿದ್ದರು. ಬಾಲಕಿ ಮಾರ್ಕೆಟ್ ಠಾಣೆ ವ್ಯಾಪ್ತಿಯಿಂದ ಸ್ನೇಹಿತರೊಂದಿಗೆ ರೆಸಾರ್ಟ್​ಗೆ ಹೋಗಿದ್ದರಿಂದ ಪ್ರಕರಣವನ್ನ ಮಾರ್ಕೆಟ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು. ಮಾರ್ಕೆಟ್ ಪೊಲೀಸರು ಫೋಕ್ಸೋ ಕಾಯ್ದೆಯಡಿ ಕೇಸ್ ದಾಖಲಿಸಿಕೊಂಡು ತನಿಖೆ ಕೈಗೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿದ್ದರು.

ಇದನ್ನೂ ಓದಿ: ಬೆಳಗಾವಿ: 17 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರ, ಸ್ವಾಮೀಜಿ ಅರೆಸ್ಟ್​​

ಇನ್ನೂ ಈ ವೇಳೆಯಲ್ಲಿ ಅಪ್ರಾಪ್ತರು ರೂಮ್ ಮಾಡಲು ಸಹಾಯ ಮಾಡಿದ್ದ ಸಾಕೀಬ್ ನಿಜಾಮಿ ಎಂಬಾತನನ್ನು ಮತ್ತು ಕಾನೂನು ಸಂಘರ್ಷಕ್ಕೆ ಒಳಗಾದ ಓರ್ವ ಬಾಲಕನನ್ನು ಸಹ ಪೊಲೀಸರು ಬಂಧಿಸಿದ್ದರು. ಆರೋಪಿಗಳ ವಿಚಾರಣೆ ವೇಳೆ ತಮ್ಮೊಟ್ಟಿಗೆ ಪೊಲೀಸ್ ಅಧಿಕಾರಿ ಮಗ ಕೂಡ ಇದ್ದ ಅನ್ನೋದನ್ನ ಬಾಯಿಬಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:58 am, Sun, 1 June 25