ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಎಟಿಎಂ ಕಟರ್ ಗ್ಯಾಂಗ್ ಸಕ್ರಿಯ: 30 ಲಕ್ಷಕ್ಕೂ ಅಧಿಕ ಹಣ ಲೂಟಿ
ಅಂಕಲಿ ಗ್ರಾಮದ ಆ್ಯಕ್ಸಿಸ್ ಬ್ಯಾಂಕ್ನ ಎಟಿಎಂನಲ್ಲಿ ಎರಡು ದಿನಗಳ ಹಿಂದೆ ಸುಮಾರು 17 ಲಕ್ಷ ಹಣ ಡಿಪಾಜಿಟ್ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಫ್ಎಸ್ಎಲ್ ತಂಡ, ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಎಸ್ಪಿ ಎಂ.ವೇಣುಗೋಪಾಲ್ ಭೇಟಿ ನೀಡಿದ್ದು ಆರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತಂಡ ರಚಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಚಿಕ್ಕೋಡಿ, ನವೆಂಬರ್ 9: ಕರ್ನಾಟಕ ಮಹಾರಾಷ್ಟ್ರ ಗಡಿಯಲ್ಲಿ ಎಟಿಎಂ (ATM Theft) ಕಟರ್ ಗ್ಯಾಂಗ್ ಸಕ್ರಿಯವಾಗಿದೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ (Chikkodi) ತಾಲೂಕಿನ ಎರಡು ಕಡೆ ಗ್ಯಾಸ್ ಕಟರ್ನಿಂದ ಎಟಿಎಂ ಕತ್ತರಿಸಿ ಲಕ್ಷಾಂತರ ಹಣ ಲೂಟಿ ಮಾಡಿ ವಂಚಕರು ಪರಾರಿಯಾಗಿದ್ದಾರೆ. ಪ್ರಕರಣದಿಂದ ಚಿಕ್ಕೋಡಿ ಜನ ಬೆಚ್ಚಿಬಿದ್ದಿದ್ದಾರೆ. ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮಕ್ಕೆ ಮೊದಲು ಬಂದ ಖದೀಮರು ಅಂಕಲಿ ಬಸ್ ನಿಲ್ದಾಣದ ಎದುರು ಇರುವ ಎಕ್ಷಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿದ್ದಾರೆ. ಎಟಿಎಂ ಕೇಂದ್ರದ ಹೊರಗೆ ಇದ್ದ ಸಿಸಿ ಕ್ಯಾಮರಾಗೆ ಕಪ್ಪು ಬಣ್ಣ ಸ್ಪ್ರೇ ಮಾಡಿ ಗ್ಯಾಸ್ ಕಟರ್ನಿಂದ ಎಟಿಎಂ ಕತ್ತರಿಸಿ ಹಣ ಲೂಟಿ ಮಾಡಿದ್ದಾರೆ.
ಬಳಿಕ ನೇರವಾಗಿ ಚಿಕ್ಕೋಡಿ ಪಟ್ಟಣಕ್ಕೆ ಆಗಮಿಸಿದ ಕಳ್ಳರು ಮೊದಲು ಇಂಡಿಯನ್ ಓವರ್ಸೀಸ್ ಬ್ಯಾಂಕ್ ಎಟಿಎಂ ಕೇಂದ್ರದ ಶಟರ್ ಅನ್ನು ಗ್ಯಾಸ್ ಕಟರ್ ಬಳಸಿ ಕತ್ತರಿಸಲು ಯತ್ನಿಸಿದ್ದಾರೆ. ಆದ್ರೆ ಅದು ಸಾಧ್ಯವಾಗದೇ ಇದ್ದಾಗ ಪಕ್ಕದಲ್ಲೇ ಇದ್ದ ಎಸ್‌ಬಿಐ ಎಟಿಎಂಗೆ ನುಗ್ಗಿ ಸಿಸಿ ಕ್ಯಾಮರಾಗೆ ಬ್ಲ್ಯಾಕ್ ಸ್ಪ್ರೇ ಮಾಡಿ ಎಟಿಎಂ ಕತ್ತರಿಸಿ ಎಸ್‌ಬಿಐ ಎಟಿಎಂನಲ್ಲಿದ್ದ 23 ಲಕ್ಷ ಹಣ ದೋಚಿ ಪರಾರಿಯಾಗಿದ್ದಾರೆ.
ಅಂಕಲಿ ಗ್ರಾಮದ ಆ್ಯಕ್ಸಿಸ್ ಬ್ಯಾಂಕ್ನ ಎಟಿಎಂನಲ್ಲಿ ಎರಡು ದಿನಗಳ ಹಿಂದೆ ಸುಮಾರು 17 ಲಕ್ಷ ಹಣ ಡಿಪಾಜಿಟ್ ಮಾಡಲಾಗಿತ್ತು. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಎಫ್ಎಸ್ಎಲ್ ತಂಡ, ಶ್ವಾನದಳದೊಂದಿಗೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಘಟನಾ ಸ್ಥಳಕ್ಕೆ ಬೆಳಗಾವಿ ಎಎಸ್ಪಿ ಎಂ.ವೇಣುಗೋಪಾಲ್ ಭೇಟಿ ನೀಡಿದ್ದು ಆರೋಪಿಗಳ ಪತ್ತೆಗೆ ಎರಡು ಪ್ರತ್ಯೇಕ ತಂಡ ರಚಿಸಿದ್ದಾಗಿ ಮಾಹಿತಿ ನೀಡಿದ್ದಾರೆ.
ಬಿಳಿ ಬಣ್ಣದ ಹುಂಡೈ ಕ್ರೆಟಾ ಕಾರಿನಲ್ಲಿ ಬಂದ ನಾಲ್ವರು ಮುಸುಕುಧಾರಿಗಳು ದುಷ್ಕೃತ್ಯ ನಡೆಸಿದ್ದಾರೆ. ಕಳೆದ ಸೋಮವಾರದಂದು ವಿಜಯಪುರ ತಾಲೂಕಿನ ಶಿವಣಗಿ ಗ್ರಾಮದಲ್ಲೂ ಇದೇ ಮಾದರಿಯಲ್ಲಿ ಇಂಡಿಯಾ ಎಟಿಎಂ ಕತ್ತರಿಸಿ ಹಣ ಕಳ್ಳತನ ಮಾಡಲಾಗಿತ್ತು. ವಿಜಯಪುರ ಸೇರಿ ಬೇರೆ ಜಿಲ್ಲೆಗಳಲ್ಲೂ ಇದೇ ಮಾದರಿ ಕಳ್ಳತನ ಮಾಡಿದ ಬಗ್ಗೆ ವರದಿಯಾಗಿದ್ದು ಒಂದೇ ತಂಡದ ಸದಸ್ಯರೇ ಕಳ್ಳತನ ಮಾಡಿದ ಶಂಕೆ ಇದೆ. ಆರೋಪಿಗಳ ಪತ್ಗೆಗೆ ಚಿಕ್ಕೋಡಿ ಡಿವೈಎಸ್ಪಿ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚನೆ ಮಾಡಿದ್ದು ಒಂದು ತಂಡ ಚಿಕ್ಕೋಡಿ ಭಾಗದಲ್ಲಿ ಮತ್ತೊಂದು ತಂಡ ಹೊರ ರಾಜ್ಯದಲ್ಲಿ ತನಿಖೆ ಕೈಗೊಳ್ಳಲಿದೆ. ಇನ್ನು ಆರೋಪಿಗಳು ಸೆಕ್ಯೂರಿಟಿ ಗಾರ್ಡ್ಗಳು ಇರದೇ ಇರುವ ಎಟಿಎಂ ಕೇಂದ್ರಗಳನ್ನೇ ಟಾರ್ಗೆಟ್ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಎಟಿಎಂ ಕೇಂದ್ರದ ಶಟರ್ ಸಹ ಹಾಕಿರಲಿಲ್ಲ. ಇದನ್ನೇ ಲಾಭವಾಗಿಸಿಕೊಂಡ ಖದೀಮರು ಎಟಿಎಂ ಕತ್ತರಿಸಿ ಹಣ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಗ್ಯಾಸ್ ಕಟರ್ನಿಂದ SBI, ಎಕ್ಸಿಸ್ ಎಟಿಎಂ ಮಷೀನ್ ಕೊರೆದು ಲಕ್ಷಾಂತರ ರೂ. ದೋಚಿದ ಕಳ್ಳರು
ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ಎಎಸ್ಪಿ ಎಂ.ವೇಣುಗೋಪಾಲ್, ಸಿಸಿ ಕ್ಯಾಮರಾಗೆ ಬ್ಲ್ಯಾಕ್ ಸ್ಪ್ರೇ ಹೊಡೆದಿದ್ದು ಪ್ರೊಫೆಶನಲ್ ಕಳ್ಳರ ರೀತಿ ಕಾಣಿಸುತ್ತಾರೆ. ಎಸ್‌ಬಿಐ ಎಟಿಎಂನಿಂದ 23 ಲಕ್ಷ ಹಣ ಕಳ್ಳತನ ಮಾಡಿದ್ದಾರೆ. ಎಕ್ಸಿಸ್ ಬ್ಯಾಂಕ್ ಎಟಿಎಂನಲ್ಲಿ 17 ಲಕ್ಷ ಡಿಪಾಜಿಟ್ ಮಾಡಿದ್ರು ಎಷ್ಟು ಕಳ್ಳತನ ಆಗಿದೆ ಎಂಬ ಮಾಹಿತಿ ಬರಬೇಕಿದೆ. ಬ್ಯಾಂಕ್ ಸಿಬ್ಬಂದಿ ಎಟಿಎಂ ಕೆಂದ್ರಗಳಿಗೆ ಸೆಕ್ಯುರಿಟಿ ಗಾರ್ಡ್ ನೇಮಕ ಮಾಡಬೇಕಿತ್ತು. ಎಟಿಎಂ ಕೇಂದ್ರಗಳಿಗೆ ಭದ್ರತೆ ಬಗ್ಗೆ ಈ ಹಿಂದೆ ಗಮನಕ್ಕೆ ತಂದಿದ್ವಿ ಬ್ಯಾಂಕ್ ಸಿಬ್ಬಂದಿ ಎಚ್ಚೆತ್ತುಕೊಳ್ಳಬೇಕಿತ್ತು. ಸೆಕ್ಯುರಿಟಿ ಗಾರ್ಡ್ ಇಲ್ಲದೇ ಇರೋದನ್ನ ಆಬ್ಸರ್ವ್ ಮಾಡಿ ಕಳ್ಳತನ ಮಾಡಿದ್ದಾರೆ. ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದು ಆದಷ್ಟು ಬೇಗ ಆರೋಪಿಗಳ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಸೆಕ್ಯೂರಿಟಿ ಗಾರ್ಡ್ ಇಲ್ಲದೇ ಇರುವುದು, ರಾತ್ರಿ ವೇಳೆ ಎಟಿಎಂ ಕೇಂದ್ರದ ಶಟರ್ ಬೀಗ ಹಾಕದೇ ಇರೋದು ನೋಡಿದ್ರೆ ಬ್ಯಾಂಕ್ ಸಿಬ್ಬಂದಿ ನಿರ್ಲಕ್ಷ್ಯವೂ ಎದ್ದು ಕಾಣುತ್ತಿದೆ. ಎರಡು ಎಟಿಎಂ ಕೇಂದ್ರಗಳಲ್ಲಿ ಕಳ್ಳತನ ಮಾಡಿದ ಬಳಿಕ ಖದೀಮರು ಚಿಕ್ಕೋಡಿ ಮಿರಜ್ ರಸ್ತೆ ಮಾರ್ಗವಾಗಿ ಮಿರಜ್ನತ್ತ ತೆರಳಿದ ಮಾಹಿತಿ ಇದೆ. ಸದ್ಯ ಟೆಕ್ನಿಕಲ್ ಎವಿಡೆನ್ಸ್ ಕಲೆ ಹಾಕುತ್ತಿರುವ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ