ಬೆಳಗಾವಿ ಬೈ ಎಲೆಕ್ಷನ್: ಕೊನೆಯ ಕ್ಷಣದಲ್ಲಿ ಪ್ರಚಾರಕ್ಕೆ ಮನಸು ಮಾಡಿದ ಬಾಲಚಂದ್ರ ಜಾರಕಿಹೊಳಿ

|

Updated on: Apr 12, 2021 | 12:15 PM

ಬೆಳಗಾವಿ: ಇದೇ ವಾರಾಂತ್ಯ (ಏಪ್ರಿಲ್ 17ರಂದು) ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯಲಿದೆ. ಆಡಳಿತಾರೂಢ ಬಿಜೆಪಿ, ಪ್ರಮುಖ ವಿಪಕ್ಷ ಕಾಂಗ್ರೆಸ್​ ಸೇರಿದಂತೆ ಕಣದಲ್ಲಿ ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಹೋರಾಟ ನಡೆಸಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೊರೊನಾಗೆ ಬಲಿಯಾದ ಕಾರಣ ಬೈ ಎಲೆಕ್ಷನ್​ ನಡೆಯುತ್ತಿದ್ದು, ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್​ ಅಂಗಡಿ ಅವರ ಪತ್ನಿ ಮಂಗಳಾ ಅವರು ಸ್ಪರ್ಧಿಸಿದ್ದಾರೆ. ಈ ಮಧ್ಯೆ, ಬಿಜೆಪಿಯಲ್ಲಿ ಕೆಲ ಅನಪೇಕ್ಷಿತ ಬೆಳವಣಿಗೆಗಳು ನಡೆದಿದ್ದು, ಪಕ್ಷ ಆಮೂಲಾಗ್ರವಾಗಿ […]

ಬೆಳಗಾವಿ ಬೈ ಎಲೆಕ್ಷನ್: ಕೊನೆಯ ಕ್ಷಣದಲ್ಲಿ ಪ್ರಚಾರಕ್ಕೆ ಮನಸು ಮಾಡಿದ ಬಾಲಚಂದ್ರ ಜಾರಕಿಹೊಳಿ
ಬಾಲಚಂದ್ರ ಜಾರಕಿಹೊಳಿ
Follow us on

ಬೆಳಗಾವಿ: ಇದೇ ವಾರಾಂತ್ಯ (ಏಪ್ರಿಲ್ 17ರಂದು) ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆ ಮತದಾನ ನಡೆಯಲಿದೆ. ಆಡಳಿತಾರೂಢ ಬಿಜೆಪಿ, ಪ್ರಮುಖ ವಿಪಕ್ಷ ಕಾಂಗ್ರೆಸ್​ ಸೇರಿದಂತೆ ಕಣದಲ್ಲಿ ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಹೋರಾಟ ನಡೆಸಿದ್ದಾರೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರು ಕೊರೊನಾಗೆ ಬಲಿಯಾದ ಕಾರಣ ಬೈ ಎಲೆಕ್ಷನ್​ ನಡೆಯುತ್ತಿದ್ದು, ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್​ ಅಂಗಡಿ ಅವರ ಪತ್ನಿ ಮಂಗಳಾ ಅವರು ಸ್ಪರ್ಧಿಸಿದ್ದಾರೆ. ಈ ಮಧ್ಯೆ, ಬಿಜೆಪಿಯಲ್ಲಿ ಕೆಲ ಅನಪೇಕ್ಷಿತ ಬೆಳವಣಿಗೆಗಳು ನಡೆದಿದ್ದು, ಪಕ್ಷ ಆಮೂಲಾಗ್ರವಾಗಿ ಕಣದಲ್ಲಿ ಹೋರಾಡಬೇಕಿದೆ.

ಬೆಳಗಾವಿಯಲ್ಲಿ ರಾಜಕೀಯವಾಗಿ ಭಾರೀ ವರ್ಚಸ್ಸು ಹೊಂದಿರುವ ರಮೇಶ್ ಜಾರಕಿಹೊಳಿ ಲೈಂಗಿಕ ಸಿಡಿ ಕಳಂಕಹೊತ್ತಿದ್ದು, ಪ್ರಚಾರ ಕಣದಿಂದ ದೂರಸರಿದಿದ್ದಾರೆ. ಅವರ ಅನುಪಸ್ಥಿತಿ ಎದ್ದುಕಾಣುತ್ತಿದೆ. ಬೆಳಗಾವಿ ಜಿಲ್ಲೆಯ ರಾಜಕಾರಣದಲ್ಲಿ ಜಾರಕಿಹೊಳಿ ಬ್ರದರ್ಸ್ ಪ್ರಾಬಲ್ಯ ಹೆಚ್ಚಾಗಿರುತ್ತದೆ.​ ಸತೀಶ್ ಜಾರಕಿಹೊಳಿ ಖುದ್ದಾಗಿ ಕಾಂಗ್ರೆಸ್​ ವತಿಯಿಂದ ಸ್ಪರ್ಧಿಸುತ್ತಿದ್ದಾರೆ. ಉಳಿದ ಬ್ರದರ್ಸ್​ ಪೈಕಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ‌ ಇಂದು ಪ್ರಚಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದ ಬಸವೇಶ್ವರ್ ಕಲ್ಯಾಣ ಮಂಟಪದಲ್ಲಿ ಇಂದು ಸಂಜೆ 4 ಗಂಟೆಗೆ ಬಿಜೆಪಿ ಮುಖಂಡರ, ಕಾರ್ಯಕರ್ತರ ಸಭೆ ನಡೆಯಲಿದ್ದು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಬಾಲಚಂದ್ರ ಜಾರಕಿಹೊಳಿ‌ ಪ್ರಚಾರ ನಡೆಸಲಿದ್ದಾರೆ. ಸಿಡಿ ಪ್ರಕರಣದ ಬಳಿಕ ಚುನಾವಣಾ ಪ್ರಚಾರದಿಂದ ದೂರವೇ ಉಳಿದಿದ್ದ ಬಾಲಚಂದ್ರ ಜಾರಕಿಹೊಳಿ‌ ಕೊನೆಯ ಕ್ಷಣದಲ್ಲಿ ಪ್ರಚಾರದ ಅಖಾಡಕ್ಕಿಳಿಯುತ್ತಿರುವುದು ಕುತೂಹಲ ಕಾರಿಯಾಗಿದೆ. ಮತ್ತೊಂದು ಕುತೂಹಲದ ಸಂಗತಿಯೆಂದರೆ ಇದೇ ಸಿಡಿ ಪ್ರಕರಣ ಸಮ್ಮುಖದಲ್ಲಿ.. ಇದುವರೆಗೂ ಕಾಂಗ್ರೆಸ್​ನಲ್ಲಿದ್ದ ಲಖನ್​ ಜಾರಕಿಹೊಳಿ ಇದೀಗ ಬಿಜೆಪಿ ಪರ ವಾಲಿರುವುದು ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಎಂಬುದು ಕಾದುನೋಡಬೇಕಿದೆ.