ಸಿಡಿ ಸಂತ್ರಸ್ತೆಯಿಂದ ಮತ್ತೊಂದು ವಿಡಿಯೋ ಅಸ್ತ್ರ: ಕ್ವಾರಂಟೈನ್​ ಆಗಿರುವ ರಮೇಶ್​ ಜಾರಕಿಹೊಳಿಗೆ ಶುರುವಾಯ್ತಾ ಅಸಲಿ ಪರೀಕ್ಷೆ?

Skanda

Skanda | Edited By: Ayesha Banu

Updated on: Apr 13, 2021 | 8:05 AM

ಕೊರೊನಾ ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕಾಗಿ ಹೋಮ್​ ಕ್ವಾರಂಟೈನ್ ಆಗಿರುವ ರಮೇಶ್ ಜಾರಕಿಹೊಳಿ ಸದ್ಯ ವಿಡಿಯೋ ಹೊರ ಬರುತ್ತಿದ್ದಂತೆಯೇ ಅಲರ್ಟ್​ ಆಗಿದ್ದು, ಸಹೋದರ ಬಾಲಚಂದ್ರ ಜಾರಕಿಹೊಳಿಗೆ ದೂರವಾಣಿ ಕರೆ ಮಾಡಿದ್ದಾರೆ ಎನ್ನುವುದು ತಿಳಿದುಬಂದಿದೆ.

ಸಿಡಿ ಸಂತ್ರಸ್ತೆಯಿಂದ ಮತ್ತೊಂದು ವಿಡಿಯೋ ಅಸ್ತ್ರ: ಕ್ವಾರಂಟೈನ್​ ಆಗಿರುವ ರಮೇಶ್​ ಜಾರಕಿಹೊಳಿಗೆ ಶುರುವಾಯ್ತಾ ಅಸಲಿ ಪರೀಕ್ಷೆ?
ಸಿಡಿ ಪ್ರಕರಣದ ಸಂತ್ರಸ್ತೆ ಹಾಗೂ ರಮೇಶ್ ಜಾರಕಿಹೊಳಿ


ಬೆಂಗಳೂರು: ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಯುವತಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ. ನಿನ್ನೆ ಎಸ್​ಐಟಿ ಮುಂದೆ ಯುವತಿ ಉಲ್ಟಾ ಹೊಡೆದಿದ್ದಾರೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ನಾನು ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧಳಾಗಿದ್ದೇನೆ. ಪ್ರಮುಖ ಆರೋಪಿಯನ್ನು ಕೊರೊನಾ ಸೋಂಕಿತನನ್ನು ಬಿಂಬಿಸಲಾಗುತ್ತಿದ್ದು ನನ್ನ ವಿರುದ್ಧ ಷಡ್ಯಂತ್ರ ರೂಪಿಸಲಾಗುತ್ತಿದೆ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಆರೋಪ ಮಾಡಿದ್ದಾರೆ. ಈ ವಿಡಿಯೋ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ರಮೇಶ್ ಜಾರಕಿಹೊಳಿ ತಲೆಕೆಡಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.

ಕೊರೊನಾ ಪಾಸಿಟಿವ್ ಬಂದಿದೆ ಎಂಬ ಕಾರಣಕ್ಕಾಗಿ ಹೋಮ್​ ಕ್ವಾರಂಟೈನ್ ಆಗಿರುವ ರಮೇಶ್ ಜಾರಕಿಹೊಳಿ ಸದ್ಯ ವಿಡಿಯೋ ಹೊರ ಬರುತ್ತಿದ್ದಂತೆಯೇ ಅಲರ್ಟ್​ ಆಗಿದ್ದು, ಸಹೋದರ ಬಾಲಚಂದ್ರ ಜಾರಕಿಹೊಳಿಗೆ ದೂರವಾಣಿ ಕರೆ ಮಾಡಿದ್ದಾರೆ ಎನ್ನುವುದು ತಿಳಿದುಬಂದಿದೆ. ಅಲ್ಲದೇ ಈ ವಿಚಾರವಾಗಿ ಇಂದು ವಕೀಲರ ಜೊತೆಗೆ ದೂರವಾಣಿ ಮೂಲಕವೇ ಚರ್ಚೆ ನಡೆಸುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ರಮೇಶ್ ಜಾರಕಿಹೊಳಿ ಪಾಲಿಗೆ ಯುವತಿಯ ಹೇಳಿಕೆ ಸಂಕಷ್ಟವನ್ನು ತಂದೊಡ್ಡಲಿದೆಯಾ ಎಂಬ ಮಾತುಗಳು ಕೇಳಿಬರಲಾರಂಭಿಸಿವೆ.

ತಾಜಾ ಸುದ್ದಿ

ಸಿಡಿ ಸಂತ್ರಸ್ತೆ ಹೇಳಿದ್ದೇನು?
‘ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಬದ್ಧಳಾಗಿದ್ದೇನೆ. ಎಸ್‌ಐಟಿ ಅಧಿಕಾರಿಗಳ ಮುಂದೆ ನಾನು ಉಲ್ಟಾ ಹೇಳಿಕೆ ನೀಡಿಲ್ಲ. ನಾನು ಒತ್ತಡದಿಂದ ಹೇಳಿಕೆ ನೀಡಿದ್ದೇನೆಂಬುದು ಸತ್ಯಕ್ಕೆ ದೂರವಾದ ಮಾತು. ಜಡ್ಜ್‌ ಮುಂದೆ ಮತ್ತೊಮ್ಮೆ ಹೇಳಿಕೆ ನೀಡಲು ಮನವಿ ಮಾಡಿಲ್ಲ. ಪೋಷಕರ ಜೊತೆ ಚರ್ಚಿಸಿದ ಬಳಿಕ ಮನಸ್ಸು ಬದಲಾಯಿಸಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ಮಾಹಿತಿ ನೀಡಲು ನಿನ್ನೆ ಎಸ್‌ಐಟಿ ಅಧಿಕಾರಿಗಳ ಮುಂದೆ ನಾನು ಹಾಜರಾಗಿದ್ದೆ. ಆದ್ರೆ ಎಸ್‌ಐಟಿ ಮುಂದೆ ಉಲ್ಟಾ ಹೇಳಿಕೆ ನೀಡಿಲ್ಲ. ಇನ್ನೂ ರಮೇಶ್ ಜಾರಕಿಹೊಳಿಯನ್ನು ವಿಚಾರಣೆಗೆ ಕರೆಸಿಲ್ಲ. ಈ ಬಗ್ಗೆ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ರಮೇಶ್ ಜಾರಕಿಹೊಳಿ ಕೊರೊನಾ ಪೀಡಿತರಂತೆ ನಟಿಸುತ್ತಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಈ ರೀತಿ ಸುದ್ದಿ ಸೃಷ್ಟಿಸಿ ನನ್ನ ವಿರುದ್ದ ಷಡ್ಯಂತ್ರ ಮಾಡಿರುವ ಸಾಧ್ಯತೆ ಇದೆ’ ಎಂದು ರಮೇಶ್ ಜಾರಕಿಹೊಳಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪತ್ರವನ್ನೂ ಬರೆದಿದ್ದಾರೆ. ಸದ್ಯ ಆ ಪತ್ರ ಹಾಗೂ ಹೇಳಿಕೆ ನೀಡಿರುವ ವಿಡಿಯೋ ಬಿಡುಗಡೆ ಆಗಿದೆ.

ಆರೋಪಿಯ‌ ವಿಚಾರಣೆ ನಡೆಸದಿದ್ದಕ್ಕೆ ಸಿಡಿ ಲೇಡಿ ಗರಂ
ರಮೇಶ್ ಜಾರಕಿಹೊಳಿಯನ್ನು ವಿಚಾರಣೆ ನಡೆಸದಿದ್ದಕ್ಕೆ ಸಿಡಿ ಲೇಡಿ ಗರಂ ಆಗಿದ್ದಾರೆ. ಐಸ್‌ಐಟಿಯವ್ರು ನನ್ನ ಫ್ಯಾಮಿಲಿಯನ್ನ ವಿಚಾರಣೆ ನಡೆಸಿದ್ದಾರೆ. ನನ್ನ ಫ್ರೆಂಡ್ ಆಕಾಶ್​ರಿಂದ ಸ್ಟೇಟ್​ಮೆಂಟ್ ಪಡೆದಿದ್ದಾರೆ. ನನ್ನ ಸಂಬಂಧಿಗಳಿಗೆಲ್ಲಾ ಎಸ್‌ಐಟಿ ನೋಟಿಸ್ ಕೊಟ್ಟಿದ್ದಾರೆ. ಆದ್ರೆ ಆರೋಪಿಯನ್ನು ಕೊರೊನಾ ಸೋಂಕಿತ ಅಂತ ಬಿಟ್ಟಿದ್ದಾರೆ. ಕೂಡಲೇ ಆರೋಪಿ ರಮೇಶ್‌ನನ್ನು ಎಸ್‌ಐಟಿ ವಿಚಾರಣೆ ನಡೆಸಲಿ. ರಮೇಶ್ ಕುಟುಂಬಕ್ಕೂ ನೋಟಿಸ್ ನೀಡಿ ವಿಚಾರಣೆ ನಡೆಸಲಿ ಎಂದು ಇಂದು ರಿಲೀಸ್ ಮಾಡಿದ ವಿಡಿಯೋದಲ್ಲಿ ಸಿಡಿ ಲೇಡಿ SIT ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:
ನಾನು ಉಲ್ಟಾ ಹೊಡೆದಿಲ್ಲ, ಈ ಹಿಂದೆ ನೀಡಿದ ಹೇಳಿಕೆಗೆ ಬದ್ಧಳಾಗಿದ್ದೇನೆ.. ರಿಲೀಸ್ ಆಯ್ತು ಸಿಡಿ ಲೇಡಿಯ ಮತ್ತೊಂದು ವಿಡಿಯೋ

ಕಿಂಗ್ ಪಿನ್ಸ್ ನರೇಶ್, ಶ್ರವಣ್ ವಿರುದ್ಧ ಸಿಡಿ ಲೇಡಿ ಸ್ಫೋಟಕ ಹೇಳಿಕೆ; ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಬ್ಲಾಸ್ಟಿಂಗ್ ಟ್ವಿಸ್ಟ್ 

(Will new video of CD Victim make Ramesh Jarkiholi more tense)

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada