ಬೆಳಗಾವಿ: ಕೊಲ್ಲಾಪುರದ ಕನ್ನೇರಿ ಸಿದ್ಧಗಿರಿ ಮಠದಲ್ಲಿ ಸಂತ ಸಮಾವೇಶಕ್ಕೆ ಸಿಎಂ ಬಸವರಾಜ ಬೊಮ್ಮಾಯಿ(Basavaraj Bommai), ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ(Karnataka Bhavan) 3 ಕೋಟಿ ರೂ. ನೀಡಿದ್ದು, ಕೆಲಸ ಪ್ರಾರಂಭ ಮಾಡಬೇಕು. ಮುಂಬರುವ ದಿನಗಳಲ್ಲಿ ಕರ್ನಾಟಕ ಭವನದೊಳಗಿನ ಕೆಲಸ ಕಾರ್ಯಕ್ಕೆ ಎರಡು ಕೋಟಿ ನೀಡುತ್ತೇನೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
ಸಮಾವೇಶ ಚಾಲನೆಗೂ ಮುನ್ನ ಸಚಿವ ಪ್ರಹ್ಲಾದ್ ಜೋಶಿ ಸಿದ್ಧಗಿರಿ ಮಠದ ಗೋಶಾಲೆ ಉದ್ಘಾಟಿಸಿದರು. ಸಮಾವೇಶದಲ್ಲಿ ಕನ್ನೇರಿಯ ಸಿದ್ಧಗಿರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ, ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರ.ಕಾರ್ಯದರ್ಶಿ, B.L.ಸಂತೋಷ್ ಭಾಗಿಯಾಗಿದ್ದರು. ಇದನ್ನೂ ಓದಿ: ಐದು ವರ್ಷಗಳ ನಂತರ ಮಹಿಳೆಯ ಹೊಟ್ಟೆಯಿಂದ ಕತ್ತರಿ ಹೊರತೆಗೆದ ಕೇರಳದ ವೈದ್ಯರು
ಕರ್ನಾಟಕ ಭವನಕ್ಕೆ 3 ಕೋಟಿ ನೀಡಲಾಗಿದೆ, ಕೆಲಸ ಪ್ರಾರಂಭಿಸಿ
ಮಹಾರಾಷ್ಟ್ರದ ಕೊಲ್ಹಾಪುರ ಕನ್ನೇರಿ ಮಠದಲ್ಲಿ ಸಂತ ಸಮಾವೇಶದಲ್ಲಿ ಭಾಷಣ ಮಾಡಿದ ಸಿಎಂ, ಇಂದು ಸಹೃದಯಿ ಸಂತರ ಸಮಾವೇಶ ನಡೆಯುತ್ತಿರುವುದು ಸಂತಸದ ಸಂಗತಿ. ಇಲ್ಲಿ ಪ್ರಥಮ ಬಾರಿ ಬರ್ತಿದ್ದೇನೆ, ಭಕ್ತಿ ಭಾವ ಕಾರ್ಯಕ್ರಮ ಮಠದ ಸೇವೆ ನೋಡಿದಾಗ ಇದು ಆದರ್ಶ ಮಠ ಅನಿಸುತ್ತೆ. ತಮ್ಮದೇ ಆದ ಆದರ್ಶ ಇಟ್ಟುಕೊಂಡು ಭಕ್ತರಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ಕ್ರಾಂತಿಯನ್ನು ಮೂಡಿಸುವ ಕಾರ್ಯ ಕನ್ನೇರಿ ಮಠ ಮಾಡ್ತಿದೆ ಎಂದರು.
ಜನ್ಮಕೊಟ್ಟ ತಾಯಿ, ಸಲಹುವ ತಾಯಿ ಎರಡನ್ನೂ ಪೋಷಿಸಿದಾಗ ನಮ್ಮ ಜನ್ಮ ಸಾರ್ಥಕ. ಬೇರೆ ದೇಶಕ್ಕೂ ನಮಗೂ ಇರುವ ವ್ಯತ್ಯಾಸ ನಮ್ಮ ಸಂಸ್ಕೃತಿ, ಸಂಸ್ಕಾರ. ಅದು ನಮ್ಮ ದೇಶದ ಮಠ ಮಂದಿರಗಳಲ್ಲಿ ಸಿಗುತ್ತೆ. ನಾಗರೀಕತೆ ಮತ್ತು ಸಂಸ್ಕೃತಿ ಮಧ್ಯದ ವ್ಯತ್ಯಾಸ ಮರೆತಿದ್ದೇವೆ. ನಾಗರೀಕತೆಯನ್ನೇ ನಾವು ಸಂಸ್ಕೃತಿ ಅಂದುಕೊಂಡಿದ್ದೇವೆ. ನಾವು ಹಿಂದೆ ಏನಾಗಿದ್ದೆವೋ ಅದು ನಾಗರಿಕತೆ, ನಾವೇನ್ ಆಗಬೇಕಲ್ಲ ಅದು ನಮ್ಮ ಸಂಸ್ಕೃತಿ. ನಾಗರಿಕತೆ, ಸಂಸ್ಕೃತಿ ಇವತ್ತಿನ ಆಧುನೀಕರಣ ದಿಂದ ಬೇರ್ಪಡುತ್ತಿವೆ. ಇದು ಸರಿಯಾದ ಬೆಳವಣಿಗೆಯಲ್ಲ ಎಂದರು.
ಸತ್ಯ, ಧರ್ಮ, ನ್ಯಾಯದಿಂದ ಸಂಸ್ಕೃತಿ ಬರುತ್ತೆ, ಇವು ಮಠಮಾನ್ಯಗಳಲ್ಲಿ ಸಿಗುತ್ತೆ. ಭಾರತ ಸಂಸ್ಕಾರ, ಸಂಸ್ಕೃತಿಯಿಂದ ಕೂಡಿದ ದೇಶ. ನಿರಂತರ ಭಕ್ತಿಯ ಚಳವಳಿ ಆದ ದೇಶ ಭಾರತ. ಇಲ್ಲಿ ಆಧ್ಯಾತ್ಮದ ಚಿಂತನೆ, ಆಧ್ಯಾತ್ಮರು ನಮ್ಮ ದೇಶದಲ್ಲಿ ಇರೋದು. ಕನ್ನೇರಿ ಮಠದ ದೊಡ್ಡ ಮಠ ಕರ್ನಾಟಕದಲ್ಲಿಯೂ ಸ್ಥಾಪನೆ ಮಾಡಿ. ಅದಕ್ಕೆ ಸಂಪೂರ್ಣ ಸಹಕಾರ, ಜಾಗ ಸರ್ಕಾರದ ವತಿಯಿಂದ ಒದಗಿಸುತ್ತೇವೆ. ನಮ್ಮ ರಾಜ್ಯದಲ್ಲಿ ಪುಣ್ಯಕೋಟಿ ಯೋಜನೆ ಮಾಡಿದ್ದೇವೆ. ನೂರು ಕೋಟಿ ರೂಪಾಯಿ ಇದೇ ತಿಂಗಳು ಕಲೆಕ್ಟ್ ಆಗ್ತಿದೆ. ಒಂದು ಲಕ್ಷ ಗೋವುಗಳನ್ನು ಜನರ ದುಡ್ಡಿನಿಂದ ರಕ್ಷಣೆ ಮಾಡ್ತೀವಿ. ಎಕಾನಾಮಿ ಅಂದ್ರೆ ದುಡ್ಡು ಅಲ್ಲ ದುಡಿಮೆ. ದುಡ್ಡೇ ದೊಡ್ಡಪ್ಪ ಅಲ್ಲ, ದುಡಿಮೆಯೇ ದೊಡ್ಡಪ್ಪ ಈ ಮಠದಲ್ಲಿ ಇದು ಕಾರ್ಯಗತವಾಗುತ್ತಿದೆ. ಕನ್ನೇರಿ ಮಠದಲ್ಲಿ ಕರ್ನಾಟಕ ಭವನ ನಿರ್ಮಾಣಕ್ಕೆ ಮೂರು ಕೋಟಿ ನೀಡಿದ್ದು ಕೆಲಸ ಪ್ರಾರಂಭ ಮಾಡಿ. ಮುಂಬರುವ ದಿನಗಳಲ್ಲಿ ಕರ್ನಾಟಕ ಭವನದೊಳಗಿನ ಕೆಲಸ ಕಾರ್ಯಕ್ಕೆ ಎರಡು ಕೋಟಿ ನೀಡ್ತೇನೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದರು.
Published On - 2:56 pm, Mon, 10 October 22