ಪರಿಷತ್ನಲ್ಲಿನ ಬೆಳವಣಿಗೆಯಿಂದ ಬೇಸರ; ರಾಜೀನಾಮೆಗೆ ಮುಂದಾಗಿದ್ದ ಬಸವರಾಜ ಹೊರಟ್ಟಿ ಮನವೊಲಿಸಿದ ನಾಯಕರು
ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮನವೊಲಿಕೆ ಮಾಡಿದ್ದಾರೆ. ನಂತರ ರಾಜೀನಾಮೆ ನಿರ್ಧಾರದಿಂದ ಬಸವರಾಜ ಹೊರಟ್ಟಿ ಹಿಂದೆ ಸರಿದಿದ್ದಾರೆ.
ಬೆಳಗಾವಿ: ವಿಧಾನಪರಿಷತ್ನಲ್ಲಿ ನಡೆದ ಹೈಡ್ರಾಮಾದಿಂದ ಸಭಾಪತಿ ಬಸವರಾಜ ಹೊರಟ್ಟಿ ಬೇಸರಗೊಂಡಿದ್ದಾರೆ. ಈ ಕಾರಣದಿಂದ ಸಭಾಪತಿ ಬಸವರಾಜ ಹೊರಟ್ಟಿ ರಾಜೀನಾಮೆ ಪತ್ರ ಸಿದ್ಧಪಡಿಸಿಟ್ಟಿದ್ದರು ಎಂದು ತಿಳಿದುಬಂದಿದೆ. ಪರಿಷತ್ನಲ್ಲಿನ ಬೆಳವಣಿಗೆಯಿಂದ ಬೇಸತ್ತಿದ್ದ ಸಭಾಪತಿ ಹೊರಟ್ಟಿ ಬೇಸರದಿಂದ ರಾಜೀನಾಮೆಗೆ ಮುಂದಾಗಿದ್ದರು. ಪರಿಷತ್ ಕಲಾಪ ಮುಂದೂಡಿದ ನಂತರ ರಾಜೀನಾಮೆ ಇಂಗಿತ ವ್ಯಕ್ತಪಡಿಸಿದ್ದರು ಎಂದು ತಿಳಿದುಬಂದಿದೆ.
ಬಳಿಕ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜೀನಾಮೆ ವಿಚಾರ ತಿಳಿದು ಮನವೊಲಿಸಿದ್ದರು. ಪ್ರತಿಪಕ್ಷ ನಾಯಕರಾದ ಸಿದ್ದರಾಮಯ್ಯ, ಎಸ್.ಆರ್. ಪಾಟೀಲ್, ಪರಿಷತ್ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿ ಮನವೊಲಿಕೆ ಮಾಡಿದ್ದಾರೆ. ನಂತರ ರಾಜೀನಾಮೆ ನಿರ್ಧಾರದಿಂದ ಬಸವರಾಜ ಹೊರಟ್ಟಿ ಹಿಂದೆ ಸರಿದಿದ್ದಾರೆ.
ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ: ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸದನದಲ್ಲಿ ಸಮಯ ಮೀಸಲಿಟ್ಟಿದ್ದೇವೆ. ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆ ಬಗ್ಗೆ ಚರ್ಚೆ ನಡೆದಿದೆ. ಎಲ್ಲಾ ಸದಸ್ಯರು ಸಹಕಾರ ನೀಡಿದ್ದಾರೆ. ಉತ್ತರ ಕರ್ನಾಟಕ ಬಗ್ಗೆ ದಕ್ಷಿಣ ಕರ್ನಾಟಕದವರು ಹೆಚ್ಚಾಗಿ ಚರ್ಚೆ ನಡೆಸಿದ್ದಾರೆ. ಉತ್ತರ ಕರ್ನಾಟಕ ನೀರಾವರಿ ಹಾಗೂ ಎಲ್ಲಾ ಸಮಸ್ಯೆ ಬೇಗನೇ ಬಗೆಹರಿಸುವುದುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ ಎಂದು ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿಕೆ ನೀಡಿದ್ದಾರೆ.
ಈ ಬಾರಿಯೂ ಕೊರೊನಾದಿಂದ ಉತ್ತರ ಕರ್ನಾಟಕದಲ್ಲಿ ಅಧಿವೇಶನ ನಡೆಯುತ್ತಾ ಅಂತ ಚರ್ಚೆಯಾಗಿತ್ತು. ಆದ್ರೆ ಉತ್ತರ ಕರ್ನಾಟಕ ಭಾಗದ ಸಿಎಂ, ಸಭಾಪತಿ, ಸಭಾಧ್ಯಕ್ಷರು ಇರುವುದರಿಂದ ನಾವು ಇಲ್ಲೇ ಮಾಡ್ಲೇಬೇಕು ಅಂತ ಚಳಿಗಾಲದ ಅಧಿವೇಶನ ಮಾಡಿದ್ದೇವೆ. ನಾನು ಸಿಎಂ ಬಳಿ ಎರಡು ವಿಚಾರದ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ. ಜಂಟಿ ಅಧಿವೇಶನ ನಡೆಸಬೇಕು ಅಥವಾ ಹೆಚ್ಚು ದಿನವಾದ್ರೂ ನಡೆಸಬೇಕು ಅಂತ ಸಿಎಂ ಬಳಿ ಪ್ರಸ್ತಾಪ ಮಾಡಿದ್ದೇನೆ. ಶಾಸಕರ ಭವನ ಹಾಗೂ ಸೆಕ್ರೆಟರಿ ಕಚೇರಿಯಾಗ್ಬೇಕು ಅಂತ ಪ್ರಸ್ತಾಪ ಮಾಡಿದ್ದೇವೆ ಎಂದು ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.
ಹೊಸದಾಗಿ ಆಯ್ಕೆಯಾಗಿರುವ ಸದಸ್ಯರಿಗೆ ಸೆಮಿನಾರ್ ಮಾಡುತ್ತೇವೆ. ಯಾವರೀತಿ ಸದನದಲ್ಲಿ ಮಾತನಾಡಬೇಕು ಅಂತಾ ತಿಳಿಹೇಳುತ್ತೇವೆ. ಆದಷ್ಟು 40 ವರ್ಷದ ದಾಟಿದ ಅನುಭವಸ್ಥರನ್ನ ಆಯ್ಕೆಮಾಡಬೇಕೆಂದು ಎಲ್ಲಾ ಪಕ್ಷಗಳು ಮನವಿ ಮಾಡುತ್ತೇವೆ. ಇದು ಚಿಂತಕರ ಚಾವಡಿಯೇ ಆಗಬೇಕು. ಕೆಲವರು ಇತ್ತೀಚಿನ ಚುನಾವಣೆಯಿಂದ ಇದನ್ನ ಮುಚ್ಚಬೇಕು ಅಂತೆಲ್ಲ ಮಾತನಾಡಿದ್ದಾರೆ. ಇದನ್ನ ಸರಿಪಡಿಸುವ ಕೆಲಸವನ್ನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಕರ್ನಾಟಕ ಹಾಗೂ ಬೇರೆ ಬೇರೆ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ: ಸಭಾಪತಿ ಬಸವರಾಜ ಹೊರಟ್ಟಿ ಹೇಳಿಕೆ
ಇದನ್ನೂ ಓದಿ: ವಿಧಾನ ಪರಿಷತ್ನಲ್ಲಿ ಮಂಡನೆ ಆಗದ ಮತಾಂತರ ನಿಷೇಧ ವಿಧೇಯಕ: ಮುಂದಿನ ಅಧಿವೇಶನದಲ್ಲಿ ಮಂಡನೆಗೆ ನಿರ್ಧಾರ
Published On - 9:24 pm, Fri, 24 December 21