ಚಿಕ್ಕೋಡಿ: ರಸ್ತೆ ಅಪಘಾತದಲ್ಲಿ ಬೆಳಗಾವಿ ಮೂಲದ ಬಿಎಸ್ಎಫ್ ಯೋಧ(BSF jawan) ಸಾವನ್ನಪ್ಪಿದ್ದಾರೆ. ಸೂರಜ್ ಸುತಾರ್(32) ಅಪಘಾತದಲ್ಲಿ ಸಾವನ್ನಪ್ಪಿದ ಯೋಧ. ನಾಳೆ ಪಶ್ಚಿಮ ಬಂಗಾಳದಿಂದ, ಸ್ವಗ್ರಾಮ ಯಡೂರುವಾಡಿಗೆ ಪಾರ್ಥಿವ ಶರೀರ ಬರಲಿದ್ದು ನಾಳೆ ಸ್ವಗ್ರಾಮದಲ್ಲಿ ಯೋಧ ಸೂರಜ್ ಅಂತ್ಯ ಸಂಸ್ಕಾರ ನೆರವೇರಲಿದೆ.
ಕಳೆದ 10 ವರ್ಷದಿಂದ ಬಿಎಸ್ಎಫ್ನಲ್ಲಿದ್ದ ಯೋಧ. ಸದ್ಯ ಪಶ್ಚಿಮ ಬಂಗಾಳದಲ್ಲಿ ಬಿಎಸ್ಎಫ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಆದ್ರೆ ಆಟೋದಿಂದ ಇಳಿದು ರಸ್ತೆ ದಾಟುವಾಗ ಲಾರಿ ಡಿಕ್ಕಿಯಾಗಿ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರುವಾಡಿ ಗ್ರಾಮದ ನಿವಾಸಿಯಾಗಿದ್ದ ಸೂರಜ್, ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಮದುವೆಯಾಗಿದ್ದರು. ನಾಳೆ ಪಶ್ಚಿಮ ಬಂಗಾಳದಿಂದ, ಸ್ವಗ್ರಾಮ ಯಡೂರುವಾಡಿಗೆ ಪಾರ್ಥಿವ ಶರೀರ ಬರಲಿದ್ದು ನಾಳೆ ಸ್ವಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ.
ಬಸ್ ಕಾರು ಡಿಕ್ಕಿ, ಓರ್ವ ಸಾವು
ಕೋಲಾರ: ಬಸ್ ಹಾಗೂ ಕಾರ್ ನಡುವೆ ಡಿಕ್ಕಿ ಸಂಭವಿಸಿದ್ದು ಕಾರ್ ನಲ್ಲಿದ್ದ ಓರ್ವ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ ಮತ್ತೊಬ್ಬನ ಸ್ಥಿತಿ ಚಿಂತಾಜನಕವಾಗಿದೆ. ಕೋಲಾರ ತಾಲೂಕು ಚಾಕರಸನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಹೋಂಡಾ ಕಂಪನಿಗೆ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಬಸ್, ಹಾಗೂ ತಿರುಪತಿಯಿಂದ ಬರುತ್ತಿದ್ದ ಕಾರ್ ನಡುವೆ ಡಿಕ್ಕಿಯಾಗಿದೆ. ಮೃತರ ಮಾಹಿತಿ ಇನ್ನು ಸಿಕ್ಕಿಲ್ಲ. ಸ್ಥಳಕ್ಕೆ ವೇಮಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.