AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು; ಕುಟುಂಬಸ್ಥರ ಆರೋಪ

ಬೆಳಗಾವಿಯ ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿದ್ದು,  ಬಿಮ್ಸ್‌ ಆಸ್ಪತ್ರೆ ಎದುರು ಮಗುವಿನ ಪೋಷಕರ ಪ್ರತಿಭಟನೆ ಮಾಡುತ್ತಿದ್ದಾರೆ.

ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವು; ಕುಟುಂಬಸ್ಥರ ಆರೋಪ
ಬಿಮ್ಸ್​​ ಆಸ್ಪತ್ರೆ ಬೆಳಗಾವಿ
TV9 Web
| Edited By: ವಿವೇಕ ಬಿರಾದಾರ|

Updated on:Jul 20, 2022 | 4:57 PM

Share

ಬೆಳಗಾವಿ: ಬಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿರುವ ಆರೋಪ ಕೇಳಿಬಂದಿದ್ದು,  ಬಿಮ್ಸ್‌ ಆಸ್ಪತ್ರೆ ಎದುರು ಮಗುವಿನ ಪೋಷಕರ ಪ್ರತಿಭಟನೆ ಮಾಡುತ್ತಿದ್ದಾರೆ. ಗರ್ಭಿಣಿ ಸುನಿತಾ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡರು ವೈದ್ಯರು ನಿರ್ಲಕ್ಷವಹಿಸಿದ್ದಾರೆಂದು ಆರೋಪಿಸಲಾಗಿದೆ. ಗರ್ಭಿಣಿ ಸುನಿತಾ ನಿನ್ನೆ (ಜುಲೈ 19) ಇಡೀ ದಿನ ಹೊಟ್ಟೆನೋವಿನಿಂದ ಪರದಾಡಿದ್ದಾರೆ.

ಹೊನ್ನಿಹಾಳ ಗ್ರಾಮದ ನಿವಾಸಿ ಸುನಿತಾ ಎಂಟು ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಿನ್ನೆಯಿಂದ  ಹೊಟ್ಟೆ ನೋವಿನಿಂದ ಬಳಲುತ್ತಿದ್ದರು ವೈದ್ಯರು ನಿರ್ಲಕ್ಷ್ಯ ವಹಿಸಿದ್ದಾರೆ. ಈ ವೇಳೆ ಸಿಜೇರಿಯನ್​ ಮಾಡುವಂತೆ ಮನವಿ ಮಾಡಿದರೂ ವೈದ್ಯರು ನಿರ್ಲಕ್ಷ್ಯಹಿಸಿದ್ದಾರೆ ಎಂದು ಆರೋಪಿಸಲಾಗುತ್ತಿದೆ. ಇಂದು (ಜುಲೈ 20) ಹರಿಗೆ ವೇಳೆ ವೈದ್ಯರ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿದೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

ಒಂಬತ್ತು ತಿಂಗಳು ಒಂಬತ್ತು ದಿನ ಆದರೂ ಸೀಜರಿನ್ ಮಾಡದೇ ನಿರ್ಲಕ್ಷ್ಯ ವಹಿಸಿದ್ದಾರೆ. ಸೀಜರಿನ್ ಮಾಡದೆ ನಿರ್ಲಕ್ಷ್ಯ ತೋರಿ ಇಂದು ಮಗು ಸಾಯಿಸಿದ್ದಾರೆ. ನಮಗೆ ಜೀವಂತ ಮಗು ಕೊಡಿ ಅಂತ ಕುಟುಂಬಸ್ಥರು ಕಣ್ಣೀರಿಡುತ್ತಿದ್ದಾರೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಭೇಟಿ ನೀಡಿದ್ದಾರೆ.

ಸರ್ಕಾರಿ ಕ್ವಾಟ್ರಸ್​ನ ಸಂಪ್​​ಗೆ ಬಿದ್ದು ಮಗು ಸಾವು

ಬೆಂಗಳೂರಿನ ಎಲ್.ಆರ್‌. ನಗರ ಸಮೀಪ ಸರ್ಕಾರಿ ಕ್ವಾಟ್ರಸ್​​ನ ಸಂಪ್​​ಗೆ ಬಿದ್ದು ಮಗು ಸಾವನ್ನಪ್ಪಿದೆ. ಗುಣ ಎಂಬ 4 ವರ್ಷದ ಮಗು ಸಾವನ್ನಪ್ಪಿದೆ. ಎಲ್.ಆರ್‌. ನಗರ ಸಮೀಪದ ಸ್ಲಂ ಬೋರ್ಡ್ ಕ್ವಾಟ್ರಸ್​ನ C4 ಬ್ಲಾಕ್​​ನಲ್ಲಿ ತಮಿಳುನಾಡು ಮೂಲದ ಕುಟುಂಬ ವಾಸವಿತ್ತು.  ಮೃತ ಮಗುವಿನ ತಂದೆ ವಿನೋದ್, ತಾಯಿ ನಿರ್ಮಲಾ ಮತ್ತು ಇಬ್ಬರು ಮಕ್ಕಳು ಸೇರಿ ನಾಲ್ಕು ಜನ ವಾಸವಿದ್ದರು. ಮೊದಲ ಮಗು ಗುಣ, ಎರಡನೇ ಮಗು ಓವಿಯಾಗೆ ಒಂದೂವರೆ ವರ್ಷವಾಗಿದೆ.

ನಿನ್ನೆ (ಜುಲೈ 19) ರಾತ್ರಿ 8:30ರ ಸುಮಾರಿಗೆ ಮಗು ಆಟವಾಡುತ್ತಿದ್ದ ವೇಳೆ ಸಂಪ್​​ಗೆ ಬಿದ್ದು ಸಾವನ್ನಪ್ಪಿದೆ. ಘಟನೆ ಬೆಳಗ್ಗೆ ಸಂಪ್​​ನಿಂದ ನೀರು ಸೇದುವಾಗ ಬೆಳಕಿಗೆ ಬಂದಿದೆ. ಪೋಷಕರುಜುಲೈ 1 ರಂದು ಮಗುವನ್ನು ಅಂಗನವಾಡಿಗೆ ಸೇರಿಸಿದ್ದರು. ಸದ್ಯ ಸಂಪಿನೊಳಗಿದ್ದ ಮಗುವನ್ನ ಮಧ್ಯಾಹ್ನ ಹೊರತೆಗೆಯಾಗಿದೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಪೋಷಕರು ಮಗುವಿನ ಮೃತದೇಹವನ್ನ ಸ್ವಂತ ಊರಿಗೆ ಕೊಂಡೊಯ್ದಿದ್ದಾರೆ.

ಉಡುಪಿ: ಚಾಕೊಲೇಟ್‌ ತಿನ್ನುವಾಗ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವು

ಉಡುಪಿ: ಚಾಕೊಲೇಟ್‌ ತಿನ್ನುವಾಗ ಉಸಿರುಗಟ್ಟಿ 6 ವರ್ಷದ ಬಾಲಕಿ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಬವಳಾಡಿ ಗ್ರಾಮದಲ್ಲಿ ನಡೆದಿದೆ. ಸಮನ್ವಿ(6) ಮೃತ ಬಾಲಕಿ. ಸಮನ್ವಿ ಉಪ್ಪುಂದದ ಆಂಗ್ಲ ಮಾಧ್ಯಮ ಶಾಲೆಯೊಂದರ ವಿದ್ಯಾರ್ಥಿನಿಯಾಗಿದ್ದು, ಶಾಲಾ ಬಸ್‌ಗೆ ಕಾಯುತ್ತಿದ್ದಾಗ ಚಾಕೊಲೇಟ್‌ ತಿಂದಿದ್ದಾಳೆ. ಈ ವೇಳೆ ಬಾಲಕಿ ಚಾಕಲೇಟ್ ನುಂಗಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ. ಬೈಂದೂರು ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.

ಸಮನ್ವಿ  ಶಾಲೆಗೆ ಹೋಗಲ್ಲ ಎಂದು ಹಠ ಮಾಡುತ್ತಿದ್ದಳು. ಹೀಗಾಗಿ ಪೋಷಕರು ಚಾಕಲೇಟ್ ಕೊಟ್ಟು ಶಾಲೆಗೆ ಹೋಗಲು ಒಪ್ಪಿಸಿದ್ದಾರೆ. ಬಾಲಕಿ ಚಾಕಲೇಟ್ ಬಾಯಲಿಟ್ಟುಕೊಂಡು ತಾಯಿ ಕೈಹಿಡಿದು ಹೋಗಿ, ಶಾಲಾ ಬಸ್ ಹತ್ತಿಸುತ್ತಿದ್ದಂತೆ ಬಾಲಕಿ ಕುಸಿದು ಬಿದ್ದಿದ್ದಾಳೆ. ಬಾಲಕಿ ಬೀಳುತ್ತಿದ್ದಂತೆ ಬಾಯಿಂದ ಚಾಕಲೇಟ್ ಹೊರಗೆ ಬಿದ್ದಿದೆ. ನಂತರ ಆಸ್ಪತ್ರೆ ಸಾಗಿಸುವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ. ಬಾಲಕಿ ಮೃತದೇಹ ಮಣಿಪಾಲ ಶವಾಗಾರಕ್ಕೆ ರವಾನೆಯಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿನ ನಿಖರತೆಯನ್ನು ವೈದ್ಯರು ಹೇಳಲಿದ್ದಾರೆ.

Published On - 3:32 pm, Wed, 20 July 22

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ