ಬೆಳಗಾವಿ: ಹತ್ಯೆಯಾದ ಉದ್ಯಮಿಯ ಹಾರ್ಡ್ ಡಿಸ್ಕ್​ನಲ್ಲಿವೆ ಮಹಿಳೆಯರ ಜೊತೆಗಿನ ಖಾಸಗಿ ಕ್ಷಣದ ವಿಡಿಯೋಗಳು!

ಅಕ್ಟೋಬರ್​ 9 ರಂದು ಬೆಳಗಾವಿಯ ಮಹಾಂತೇಶ ನಗರದ ನಿವಾಸಿಯಾದ ಉದ್ಯಮಿ ಸಂತೋಷ ಪದ್ಮಣ್ಣನ್ನವರ ಮೃತಪಟ್ಟಿದ್ದರು. ತಂದೆಯ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪುತ್ರಿ, ದೂರು ದಾಖಲಿಸಿದ್ದಾಳೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪೊಲೀಸರಿಗೆ ಹಲವು ವಿಚಾರ ತಿಳಿದಿವೆ.

ಬೆಳಗಾವಿ: ಹತ್ಯೆಯಾದ ಉದ್ಯಮಿಯ ಹಾರ್ಡ್ ಡಿಸ್ಕ್​ನಲ್ಲಿವೆ ಮಹಿಳೆಯರ ಜೊತೆಗಿನ ಖಾಸಗಿ ಕ್ಷಣದ ವಿಡಿಯೋಗಳು!
ಉದ್ಯಮಿ ಸಂತೋಷ ಪದ್ಮಣ್ಣನ್ನವರ
Follow us
Sahadev Mane
| Updated By: ವಿವೇಕ ಬಿರಾದಾರ

Updated on:Oct 20, 2024 | 3:10 PM

ಬೆಳಗಾವಿ, ಅಕ್ಟೋಬರ್​ 20: ಪತ್ನಿಯಿಂದ ಉದ್ಯಮಿ ಸಂತೋಷ ಪದ್ಮಣ್ಣನ್ನವರ (Businessman Santhosh Padmanannavara) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ತನಿಖೆ ವೇಳೆ ಹಲವು ವಿಚಾರಗಳು ಬೆಳಕಿಗೆ ಬಂದಿವೆ. ಪೊಲೀಸರು (Police) ಅವರ ಮನೆ ತಪಾಸಣೆ ನಡೆಸುತ್ತಿದ್ದ ವೇಳೆ ಬರೋಬ್ಬರಿ 13 ಹಾರ್ಡ್ ಡಿಸ್ಕ್​​ಗಳು ಸಿಕ್ಕಿದ್ದು, ಜಪ್ತಿ ಮಾಡಿದ್ದಾರೆ. ಹಾರ್ಡ್ ಡಿಸ್ಕ್​ನಲ್ಲಿ (Hard Disk) ನೂರಾರು ಹೆಣ್ಣು‌ಮಕ್ಕಳ ಜೊತೆಗೆ ತಾನು ಕಳೆದ ಖಾಸಗಿ ಕ್ಷಣದ ವಿಡಿಯೋಗಳು ಇವೆ ಎಂದು ಪೊಲೀಸ್​ ಮೂಲಗಳಿಂದ ಮಾಹಿತಿ ತಿಳಿದು ಬಂದಿದೆ.

ಉದ್ಯಮಿ ಸಂತೋಷ್​ ನೂರಾರು ಮಹಿಳೆಯರೊಂದಿಗೆ ಕಳೆದ ಖಾಸಗಿ ಕ್ಷಣವನ್ನು ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು. ನಂತರ ಅವುಗಳನ್ನು ಹಾರ್ಡ್​​ ಡಿಸ್ಕ್​ನಲ್ಲಿ ಸಂಗ್ರಹಿಸಿ ಇಡುತ್ತಿದ್ದರು. ಪೊಲೀಸರು 13 ಹಾರ್ಡ್ ಡಿಸ್ಕ್, ಮನೆಯ ಸಿಸಿಟಿವಿ ಡಿವಿಆರ್, ಮೂರು ಪೆನ್ ಡ್ರೈವ್​​ಗಳನ್ನು ವಶಕ್ಕೆ ಪಡೆದು, ಎಫ್‌ಎಸ್‌ಎಲ್‌ಗೆ ಕಳುಹಿಸಿದ್ದಾರೆ.

ವಿಡಿಯೋ ಮಾಹಿತಿ ಬೆಳಕಿಗೆ ಬಂದಿದ್ದು ಹೇಗೆ?

ಅಕ್ಟೋಬರ್​ 9 ರಂದು ಬೆಳಗಾವಿಯ ಮಹಾಂತೇಶ ನಗರದ ನಿವಾಸಿಯಾದ ಉದ್ಯಮಿ ಸಂತೋಷ ಪದ್ಮಣ್ಣನ್ನವರ ಮೃತಪಟ್ಟಿದ್ದರು. ಸಂತೋಷ ಪದ್ಮಣ್ಣನ್ನವರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಅಂತ ಕುಟುಂಬಸ್ಥರು ಅಂತ್ಯಸಂಸ್ಕಾರ ಮಾಡಿ ಮುಸಿಸಿದ್ದರು. ಆದರೆ, ತಂದೆಯ ಸಾವಿನ ಬಗ್ಗೆ ಪುತ್ರಿಗೆ ಅನುಮಾನ ಬಂದಿದೆ.

ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಬಿಯರ್​ ಕುಡಿಸಿ ಉಪನ್ಯಾಸಕರಿಂದ ಕಿರುಕುಳ

ಬಳಿಕ, ಉದ್ಯಮಿ ಸಂತೋಷ ಪದ್ಮಣ್ಣನ್ನವರ ಪುತ್ರಿ ಬೆಳಗಾವಿ ಮಾಳಮಾರುತಿ ಪೊಲೀಸ್​ ಠಾಣೆಯಲ್ಲಿ ತಾಯಿ ಉಮಾ ವಿರುದ್ಧ ದೂರು ದಾಖಲಿಸುತ್ತಾರೆ. ಪ್ರಕರಣ ದಾಖಲಿಸಿಕೊಂಡು ಉಮಾ ಅವರನ್ನು ಮಾಳಮಾರುತಿ ಠಾಣೆ ಪೊಲೀಸರು ವಿಚಾರಣೆಗೆ ಒಳಪಡಿಸುತ್ತಾರೆ. ಆಗ ಉಮಾ, ತಾನು ಮತ್ತು ಫೇಸ್​ಬುಕ್​ ಗೆಳೆಯರು ಸೇರಿಕೊಂಡು ಕೊಲೆ ಮಾಡಿರುವುದಾಗಿ ಬಾಯಿ ಬಿಡುತ್ತಾರೆ.

ವಿಚಾರಣೆ ವೇಳೆ ಪತಿ ಸಂತೋಷ ಪದ್ಮಣ್ಣನ್ನವರ ಕಾಮಕಾಂಡವನ್ನು ಪತ್ನಿ ಪೊಲೀಸರ ಮುಂದೆ ಹೇಳಿದ್ದಾಳೆ. ಅಲ್ಲದೇ, ಹಾರ್ಡ್ ಡಿಸ್ಕ್​ನಲ್ಲಿರುವ ಅಶ್ಲೀಲ ವಿಡಿಯೋಗಳ ಬಗ್ಗೆಯೂ ಮಾಹಿತಿ ನೀಡಿದ್ದಾಳೆ. ಜೊತೆಗೆ, ಪತಿ ಸಂತೋಷ ಪದ್ಮಣ್ಣನ್ನವರ ಮಕ್ಕಳ ಎದುರು ಬೆತ್ತಲಾಗಿ ಓಡಾಡುತ್ತಿದ್ದರು ಅಂತ ಪೊಲೀಸರ ಮುಂದೆ ಹೇಳಿದ್ದಾಳೆ. ಈ ವಿಡಿಯೋಗಳನ್ನು ಕೂಡ ಉಮಾ ಪೊಲೀಸರಿಗೆ ನೀಡಿದ್ದಾಳೆ. ಕೊಲೆಯಾದ ಸಂತೋಷ ನಿಜ ರೂಪ ತಿಳಿದು ಪೊಲೀಸರು ದಂಗಾಗಿದ್ದಾರೆ. ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 3:09 pm, Sun, 20 October 24

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ