ಬೆಳಗಾವಿ: ರೈಲಿನಲ್ಲಿ ಆ್ಯಕ್ಟೀವ್ ಆಗಿದ್ದ ಚಾಕೊಲೇಟ್ ಗ್ಯಾಂಗ್ ಕಡೆಗೂ ಲಾಕ್; ಸಿಕ್ಕಿಬಿದ್ದಿದ್ದೆ ರೋಚಕ
ಬೆಳಗಾವಿ-ಗೋವಾ ರೈಲಿನಲ್ಲಿ ಆ್ಯಕ್ಟೀವ್ ಆಗಿದ್ದ ಚಾಕೊಲೇಟ್ ಗ್ಯಾಂಗ್, ಪ್ರಯಾಣಿಕರ ಸೊಗಿನಲ್ಲಿ ಬಂದು ಸಹ ಪ್ರಯಾಣಿಕರ ಗೆಳೆತನ ಬೆಳಸಿ ದರೋಡೆ ಮಾಡುತ್ತಿದ್ದರು. ಅದರಂತೆ ಇದೆ ಸೆ.13 ರಂದು ಎಂಟು ಜನ ಪ್ರಯಾಣಿಕರಿಗೆ ಮದ್ದು ಬರುವ ಚಾಕೊಲೇಟ್ ನೀಡಿ ಹಣ, ಮೊಬೈಲ್ ದೋಚಿದ್ದರು.
ಬೆಳಗಾವಿ, ಸೆ.27: ರೈಲಿನಲ್ಲಿ ಪ್ರಯಾಣಿಸುವವರನ್ನೇ ಟಾರ್ಗೆಟ್ ಮಾಡಿ 20ದಿನಗಳ ಹಿಂದೆ ಗೋವಾ -ಬೆಳಗಾವಿ(Belagavi-Goa) ಮಾರ್ಗದಲ್ಲಿ ತಮ್ಮ ಕೈ ಚಳಕ ತೋರಿಸಿದ್ದ ಚಾಕೊಲೇಟ್ ಗ್ಯಾಂಗ್, ಇದೀಗ ಸಿಕ್ಕಿಬಿದ್ದಿದ್ದಾರೆ. ಬೆಳಗಾವಿ-ಗೋವಾ ರೈಲಿನಲ್ಲಿ ಆ್ಯಕ್ಟೀವ್ ಆಗಿದ್ದ ಚಾಕೊಲೇಟ್ ಗ್ಯಾಂಗ್, ಪ್ರಯಾಣಿಕರ ಸೊಗಿನಲ್ಲಿ ಬಂದು ಸಹ ಪ್ರಯಾಣಿಕರ ಗೆಳೆತನ ಬೆಳಸಿ ದರೋಡೆ ಮಾಡುತ್ತಿದ್ದರು. ಅದರಂತೆ ಇದೆ ಸೆ.13 ರಂದು ಎಂಟು ಜನ ಪ್ರಯಾಣಿಕರಿಗೆ ಮದ್ದು ಬರುವ ಚಾಕೊಲೇಟ್ ನೀಡಿ ಹಣ, ಮೊಬೈಲ್ ದೋಚಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೌದು, ಮಧ್ಯಪ್ರದೇಶ ಮೂಲದ ಎಂಟು ಜನರು ಮದ್ದು ಬರುವ ಚಾಕೊಲೇಟ್ ತಿಂದು, ತೀವ್ರ ಅಸ್ವಸ್ಥಗೊಂಡಿದ್ದರು. ಅವರಿಗೆ ಬೆಳಗಾವಿ ಬಿಮ್ಸ್ನಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬಳಿಕ ಪ್ರಾಣಾಪಾಯದಿಂದ ಪಾರಾಗಿದ್ದ ಅವರು, ತಮ್ಮೂರಿಗೆ ಮರಳಿದ್ದರು. ಈ ಸಂಬಂಧ ಗೋವಾ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ಬೆನ್ನತ್ತಿದ್ದ ಗೋವಾದ ಆರ್‌ಪಿಎಫ್ ಪೊಲೀಸರು, ಬಿಹಾರ ಮೂಲದ ಮೂರು ಜನ ಆರೋಪಿಗಳಾದ ಸರ್ತಾಜ್(29), ಚಂದನ್ ಕುಮಾರ್(23) ಹಾಗೂ ದಾರಾ ಕುಮಾರ್(29) ಅವರನ್ನು ಬಂಧಿಸಿದ್ದಾರೆ.
ಇದನ್ನೂ ಓದಿ:ಬೆಳಗಾವಿ: ರೈಲಿನಲ್ಲಿ ಪ್ರಯಾಣಿಸುವವರೇ ಎಚ್ಚರ, ಮತ್ತೆ ಆ್ಯಕ್ಟೀವ್ ಆಗಿದೆ ಚಾಕೊಲೇಟ್ ಗ್ಯಾಂಗ್; ಇಲ್ಲಿದೆ ವಿವರ
ಸಿಕ್ಕಿಬಿದ್ದಿದ್ದೆ ರೋಚಕ
ಒಂದೇ ರೈಲಿನಲ್ಲಿ ನಿರಂತರವಾಗಿ ಓಡಾಡುತ್ತಿದ್ದ ಇವರನ್ನು ನೋಡಿ, ಸಂಶಯ ಬಂದು ವಿಚಾರಿಸಿದಾಗ ಮೂವರು ಖೆಡ್ಡಾಗೆ ಬಿದ್ದಿದ್ದಾರೆ. ಚಾಕೊಲೇಟ್ನಲ್ಲಿ ಡ್ರಗ್ಸ್ ಮತ್ತು ನಿದ್ದೆ ಬರುವ ಮಾತ್ರೆಗಳನ್ನು ಪುಡಿ ಮಾಡಿ ಬೆರಸಿ ಇಟ್ಟುಕೊಂಡಿದ್ದ ಇವರು, ರೇಲ್ವೆಯಲ್ಲಿ ಗೆಳೆತನ ಬೆಳೆಸಿ, ಪ್ರಯಾಣಿಕರಿಗೆ ನೀಡುತ್ತಿದ್ದರು. ಅದೇ ಮಾದರಿಯ ಮದ್ದಿಲ್ಲದ ಚಾಕೊಲೇಟ್‌ನ್ನು ಖದೀಮರು ತಿನ್ನುತ್ತಿದ್ದರು. ಮದ್ದು ಬರುವ ಚಾಕೊಲೇಟ್ ತಿನ್ನುತ್ತಿದ್ದಂತೆ ಪ್ರಯಾಣಿಕರು ಮೂರ್ಛೆ ಹೋದ ತಕ್ಷಣ ಅವರ ಬಳಿ ಇದ್ದ ಹಣ, ಮೊಬೈಲ್, ಒಡವೆಗಳನ್ನು ದೋಚಿ ಎಸ್ಕೇಪ್ ಆಗುತ್ತಿದ್ದರು. ಇದೀಗ ಈ ಗ್ಯಾಂಗ್ಗೆ ಪೊಲೀಸ್ ಹೆಡೆಮುರಿ ಕಟ್ಟಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:38 am, Wed, 27 September 23