AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿಗೂ ಕಾಲಿಟ್ಟ ಗಾಂಜಾ ಚಾಕೊಲೇಟ್ ಮಾರಾಟ ಜಾಲ; ಓರ್ವ ಆರೋಪಿ ಬಂಧನ

ಉತ್ತರ ಪ್ರದೇಶದಿಂದ ಗಾಂಜಾ ಚಾಕೊಲೇಟ್ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಹೋದ ಆರ್​​ಎಂಸಿ ಯಾರ್ಡ್ ಪೊಲೀಸರು ಓರ್ವ ಆರೋಪಿ ಶಮೀಮ್ ಅಖ್ತರ್ ಎಂಬುವವರನ್ನು ಬಂಧಿಸಿದ್ದಾರೆ. ಜೊತೆಗೆ 6 ಲಕ್ಷ ಮೌಲ್ಯದ ಗಾಂಜಾ ಚಾಕೊಲೇಟ್​ನ್ನು ಜಪ್ತಿ ಮಾಡಿದ್ದಾರೆ.

ಬೆಂಗಳೂರಿಗೂ ಕಾಲಿಟ್ಟ ಗಾಂಜಾ ಚಾಕೊಲೇಟ್ ಮಾರಾಟ ಜಾಲ; ಓರ್ವ ಆರೋಪಿ ಬಂಧನ
ಬೆಂಗಳೂರಿನಲ್ಲಿ ಗಾಂಜಾ ಚಾಕೋಲೇಟ್​ ಮಾರಾಟ ಮಾಡುತ್ತಿದ್ದ ಆರೋಪಿ ಬಂಧನ
Jagadisha B
| Edited By: |

Updated on: Aug 24, 2023 | 2:59 PM

Share

ಬೆಂಗಳೂರು, ಆ.24: ರಾಜ್ಯದಲ್ಲಿ ಮಾದಕ ವಸ್ತು ಪ್ರಕರಣಗಳ ತಡೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಅದರಂತೆ ಮಾಲು ಸಮೇತ ಅನೇಕ ಆರೋಪಿಗಳನ್ನು ಸೆರೆಹಿಡಿದು ಜೈಲಿಗಟ್ಟಿದ್ದಾರೆ. ಹೌದು, ಜುಲೈ 21ರಂದು ಮಂಗಳೂರಿ (Mangalore) ನಲ್ಲಿ ಮಾದಕವಸ್ತು ಮಿಶ್ರಿತ ಚಾಕೊಲೇಟ್​(Chocolate) ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಬಳಿಕ ಆಗಸ್ಟ್​ 2 ರಂದು ಗಾಂಜಾ ಚಾಕೋಲೆಟ್ ಮಾರಾಟ ಮಾಡುವ ಗ್ಯಾಂಗ್​ ರಾಯಚೂರಿನಲ್ಲಿ ಪತ್ತೆಯಾಗಿದ್ದು, ಇಬ್ಬರನ್ನು ಅರೆಸ್ಟ್​ ಮಾಡಿದ್ದರು. ಇದೀಗ ಬೆಂಗಳೂರಿಗೂ(Bengaluru) ಗಾಂಜಾ ಚಾಕೊಲೇಟ್ ಮಾರಾಟ ಜಾಲ ಕಾಲಿಟ್ಟಿದೆ.

ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನ

ಹೌದು, ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಯತ್ನಿಸಿದ್ದರು. ಈ ಕುರಿತು ಮಾಹಿತಿ ಸಿಗುತ್ತಿದ್ದಂತೆ ಸ್ಥಳಕ್ಕೆ ಹೋದ ಪೊಲೀಸರು ಆರ್​​ಎಂಸಿ ಯಾರ್ಡ್ ಪೊಲೀಸರು ಓರ್ವ ಆರೋಪಿ ಶಮೀಮ್ ಅಖ್ತರ್ ಎಂಬುವವರನ್ನು ಬಂಧಿಸಿದ್ದಾರೆ. ಜೊತೆಗೆ 6 ಲಕ್ಷ ಮೌಲ್ಯದ ಚಾಕೊಲೇಟ್​ನ್ನು ಜಪ್ತಿ ಮಾಡಿದ್ದಾರೆ. ಇನ್ನು ತನಿಖೆ ವೇಳೆ ‘ಮಹಾಕಾಲ್, ಆನಂದ್, ಚಾರ್​ಮಿನಾರ್ ಹೆಸರಲ್ಲಿ ಗಾಂಜಾ ಚಾಕೊಲೇಟ್​ನ್ನು ಮಾರಾಟ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ. ಆರೋಪಿ ಶಮೀಮ್​ನಿಂದ ಚಾಕೊಲೇಟ್ ಪಡೆಯುತ್ತಿದ್ದ ಸಂಜಯ್, ಗೋವಿಂದ ಮತ್ತು ವಿನೋದ್​ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ:ಮಂಗಳೂರು: ಗಾಂಜಾ ಮತ್ತಲ್ಲಿ ಸಾರ್ವಜನಿಕರಿಗೆ ಕಿರ್ಪಾನ್ ತೋರಿಸಿ ಹೆದರಿಸುತ್ತಿದ್ದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ ರೀತಿ ರೋಚಕ!

ಇತ್ತೀಚೆಗೆ ಹೆಚ್ಚಾಗಿ ಬೆಳಕಿಗೆ ಬರುತ್ತಿದೆ ಮಾದಸಕ ವಸ್ತು ಪ್ರಕರಣಗಳು

ಇತ್ತೀಚೆಗೆ ಇಂತಹ ಪ್ರಕರಣಗಳು ಕಂಡು ಬರುತ್ತಿದ್ದು, ಈ ದಂಧೆಕೋರರು ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿದ್ದಾರೆ. ಇದನ್ನು ಮಕ್ಕಳು ತಿನ್ನುವ ಚಾಕೋಲೆಟ್ ಮಾದರಿಯಲ್ಲಿಯೇ ಗಾಂಜಾವನ್ನು ಬಳಸಿ ಚಾಕೋಲೆಟ್ ರೆಡಿ ಮಾಡಿದ್ದರು. ಜೊತೆಗೆ ಪ್ರತಿ ಚಾಕೋಲೆಟ್​ಗೆ 50ರಿಂದ60 ರೂಪಾಯಿಗೆ ಮಾರಾಟ ಮಾಡುತ್ತಿದ್ದರು. ಇನ್ನು ಬೆಂಗಳೂರು ಸೇರಿ ಒಟ್ಟಿನಲ್ಲಿ ರಾಜ್ಯದ ಮೂರು ಕಡೆ ಇಂತಹ ಪ್ರಕರಣಗಳು ಬೆಳಕಿಗೆ ಬಂದಂತಾಗಿದೆ.

ಮತ್ತಷ್ಟು ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ಯಶ್​ಗೆ ಗಜಕೇಸರಿ ಯೋಗ ಇದೆ: ‘ಟಾಕ್ಸಿಕ್’ ಯಶಸ್ಸಿನ ಬಗ್ಗೆ ಕೆ. ಮಂಜು ಭವಿಷ್ಯ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ