ಬೆಳಗಾವಿ: ರೈಲಿನಲ್ಲಿ ಪ್ರಯಾಣಿಸುವವರೇ ಎಚ್ಚರ, ಮತ್ತೆ ಆ್ಯಕ್ಟೀವ್ ಆಗಿದೆ ಚಾಕೊಲೇಟ್ ಗ್ಯಾಂಗ್; ಇಲ್ಲಿದೆ ವಿವರ
ಹೌದು, ಈ ಗ್ಯಾಂಗ್ ಕಳೆದ ಎರಡು ದಿನಗಳ ಹಿಂದೆ ಇದೇ ಮಾದರಿಯಲ್ಲಿ ಪ್ರಯಾಣಿಕರಿಗೆ ಗ್ಯಾಂಗ್ವೊಂದು, ಗೋವಾದಿಂದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಚೇರ್ವಾ ಗ್ರಾಮಕ್ಕೆ ಹೊರಟ್ಟಿದ್ದ ಎಂಟು ಜನ ಪ್ರಯಾಣಿಕರಿಗೆ ಯಾಮಾರಿಸಿದೆ. ಅವರಿಂದ ಮೊಬೈಲ್, ಐವತ್ತು ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ಬೆಳಗಾವಿ, ಸೆ.13: ರಾಜ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿರುವ ಬೆನ್ನಲ್ಲೇ ಇದೀಗ ಬೆಳಗಾವಿ-ಗೋವಾ (Belagavi-Goa) ನಡುವೆ ಸಂಚರಿಸುವ ರೈಲಿನಲ್ಲಿ ಮತ್ತೆ ಚಾಕೊಲೇಟ್ ಗ್ಯಾಂಗ್ ಆ್ಯಕ್ಟೀವ್ ಆಗಿದೆ. ಹೌದು, ಇವರು ಮೂರು ವರ್ಷದ ಹಿಂದೆ ಬೆಳಗಾವಿ ರೇಲ್ವೆ ಪೊಲೀಸರ(Railway Police) ಖೆಡ್ಡಾಗೆ ಬಿದ್ದಿದ್ದರು. ಇದೇ ಗ್ಯಾಂಗ್ ಮಾದರಿಯಲ್ಲಿ ಮತ್ತೊಂದು ಖತರ್ನಾಕ್ ಗ್ಯಾಂಗ್ವೊಂದು ಕಳ್ಳತನಕ್ಕಿಳಿದಿದೆ. ಪ್ರಯಾಣಿಕರ ಸೋಗಿನಲ್ಲಿರುವ ಈ ಗ್ಯಾಂಗ್, ಬೋಗಿಯಲ್ಲಿ ಸಹ ಪ್ರಯಾಣಿಕರ ಪರಿಚಯ ಬೆಳಸುತ್ತೆ. ಪ್ರಜ್ಞೆ ತಪ್ಪುವ ಕೆಮಿಕಲ್ ಹಾಕಿ ಚಾಕೊಲೇಟ್ ತಯಾರಿಸಿ ಅದನ್ನು ಪ್ರಯಾಣಿಕರ ನೀಡುವ ಖದೀಮರು, ಚಾಕೊಲೇಟ್ ತಿಂದು ಮೂರ್ಛೆ ಹೋಗುತ್ತಿದ್ದಂತೆ ಪ್ರಯಾಣಿಕರ ಮೊಬೈಲ್, ಹಣ ಕಳ್ಳತನ ಮಾಡುತ್ತಾರೆ.
ಮತ್ತೆ ಆ್ಯಕ್ಟೀವ್ ಆದ ಚಾಕೊಲೇಟ್ ಗ್ಯಾಂಗ್
ಹೌದು, ಕಳೆದ ಎರಡು ದಿನಗಳ ಹಿಂದೆ ಇದೇ ಮಾದರಿಯಲ್ಲಿ ಪ್ರಯಾಣಿಕರಿಗೆ ಗ್ಯಾಂಗ್ವೊಂದು, ಗೋವಾದಿಂದ ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯ ಚೇರ್ವಾ ಗ್ರಾಮಕ್ಕೆ ಹೊರಟ್ಟಿದ್ದ ಎಂಟು ಜನ ಪ್ರಯಾಣಿಕರಿಗೆ ಯಾಮಾರಿಸಿದೆ. ವಾಸ್ಕೋ ರೇಲ್ವೆ ನಿಲ್ದಾಣದಿಂದ ರೈಲು ಹತ್ತಿದ್ದ ನಾಲ್ಕು ಜನ ಖದೀಮರು. ಎಂಟು ಜನ ಪ್ರಯಾಣಿಕರಿಗೆ ಮಧ್ಯಪ್ರದೇಶದವರೇ ಎಂದು ಪರಿಚಯ ಮಾಡಿಕೊಂಡಿದ್ದಾರೆ. ಬಳಿಕ ಚಾಕೊಲೇಟ್, ಚಿಪ್ಸ್ ನೀಡಿ. ಅದನ್ನು ತಿನ್ನುತ್ತಿದ್ದಂತೆ ಪ್ರಜ್ಞೆ ಪ್ರಯಾಣಿಕರು ತಪ್ಪಿದ್ದಾರೆ. ಬಳಿಕ ಎಂಟು ಮೊಬೈಲ್ ಪೋನ್, ಐವತ್ತು ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.
ರೈಲಿನಲ್ಲಿ ಚಾಕೊಲೇಟ್ ತಿಂದು ಎಂಟು ಜನ ಅಸ್ವಸ್ಥ
ಸದ್ಯ ಚಾಕೊಲೇಟ್ ತಿಂದು ಪ್ರಜ್ಞೆ ತಪ್ಪಿದವರಿಗೆ ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಇನ್ನೆರಡು ದಿನದಲ್ಲಿ ಡಿಸ್ಚಾರ್ಜ್ ಆಗಿ ಹೋಗಲಿದ್ದಾರೆ. ಆರು ಜನರ ಆರೋಗ್ಯ ಸುಧಾರಣೆಯಾಗಿದ್ದು, ಇಬ್ಬರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮದ್ದು ಬರುವ ಚಾಕೊಲೇಟ್ ತಿಂದು ಅಸ್ವಸ್ಥರಾಗಿರಬಹುದು. ಫುಡ್ ಪಾಯಿಸನ್ ಆಗಿದ್ರೆ, ಈ ರೀತಿ ಲಕ್ಷಣಗಳು ಇರುತ್ತಿರಲಿಲ್ಲ. ಕೆಮಿಕಲ್ ಮಿಶ್ರಿತ ಪದಾರ್ಥ ತಿಂದು ಅಸ್ವಸ್ಥರಾಗಿದ್ದಾರೆ ಎಂದು ಬಿಮ್ಸ್ ಆಸ್ಪತ್ರೆ ಸರ್ಜನ್ ಡಾ.ಅಣ್ಣಾಸಾಹೇಬ್ ಪಾಟೀಲ್ ಹೇಳಿದ್ದಾರೆ.
ಎರಡು ರಾಜ್ಯದ ಪೊಲೀಸರ ತಿಕ್ಕಾಟದಲ್ಲಿ ಮುಚ್ಚಿ ಹೋಗ್ತಿವೆಯಾ ಕಳ್ಳತನ ಪ್ರಕರಣಗಳು
ಇನ್ನು ಎರಡು ರಾಜ್ಯದ ಪೊಲೀಸರ ತಿಕ್ಕಾಟದಲ್ಲಿ ಇಂತಹ ಕಳ್ಳತನ ಪ್ರಕರಣಗಳು ಮುಚ್ಚಿ ಹೋಗ್ತಿವೆಯಾ ಎಂಬ ಪ್ರಶ್ನೆ ಮೂಡಿದೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎರಡು ದಿನ ಕಳೆದ್ರೂ ಇನ್ನೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿಲ್ಲ. ಹೌದು, ರೈಲ್ವೆ ಪೊಲೀಸರ ವ್ಯಾಪ್ತಿಗೆ ಪ್ರಕರಣ ಬರುತ್ತೆ ಎಂದು ನಗರ ಪೊಲೀಸರು ದೂರು ದಾಖಲಿಸಿಲ್ಲ. ಗೋವಾ ರೈಲ್ವೆ ಪೊಲೀಸರ ವ್ಯಾಪ್ತಿಗೆ ಬರುತ್ತೆ ಎಂದು ಬೆಳಗಾವಿ ರೈಲ್ವೆ ಪೊಲೀಸರು ಬೇಜವಾಬ್ದಾರಿ ತೋರಿದ್ದಾರೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ