ನಕ್ಕವನ ಕಥೆ ಮುಗಿಸಿ, ಹೆಂಡತಿಗೂ ಚಟ್ಟ ಕಟ್ಟಿದ ಗಂಡ! ಅಷ್ಟಕ್ಕೂ ಆ ನಗುವಿನ ಹಿಂದೆ ಇದ್ದ ಕಹಾನಿ ಎನು?
ಹೆಂಡತಿಯನ್ನ ಜಮೀನಿನಲ್ಲಿ ಎನೂ ಪ್ರಶ್ನೆ ಮಾಡದೇ ಮನೆಗ ಬಂದ ಯಲ್ಲಪ್ಪ ಅಂದು ಎನೂ ಗೊತ್ತೇ ಇಲ್ಲ ಅನ್ನೋ ರೀತಿ ಉಳಿದುಕೊಂಡಿದ್ದಾನೆ. ಇದಾದ ಬಳಿಕ ಎರಡು ದಿನ ಅಂದ್ರೇ ಜು. 4ರಂದು ಬೆಳಗ್ಗೆ ಯಲ್ಲಪ್ಪ ಮನೆ ಮುಂದೆ ಕುಳಿತಾಗ ಆತನ ಮನೆ ಮುಂದೆ ಹೋಗುತ್ತಿದ್ದ ಮಲ್ಲಿಕಾರ್ಜುನ ನೋಡಿ ನಕ್ಕಿದ್ದಾನೆ. ಈ ನಗುವೇ ಯಲ್ಲಪ್ಪನಿಗೆ ರೊಚ್ಚಿಗೇಳುವಂತೆ ಮಾಡಿದೆ.
ಅವರಿಬ್ಬರದ್ದೂ ಒಂದೇ ಬೀದಿ, ಮೇಲಾಗಿ ಆತನಿಗೆ ಸಹಾಯ ಆಗಲಿ ಅಂತಾ ದೇವಸ್ಥಾನದ ಪೂಜಾರಿ ಕೆಲಸವನ್ನೂ ಆತ ಹಚ್ಚಿ ಕೊಟ್ಟಿರುತ್ತಾನೆ. ಇದಾದ ಕೆಲವೇ ದಿನಗಳಲ್ಲಿ ಅದೊಂದು ವಿಚಾರ ಗೊತ್ತಾಗಿ ಪೂಜಾರಿ ಮೇಲೆ ಕೊತ ಕೊತ ಕುದಿಯುತ್ತಿರುತ್ತಾನೆ. ಅದೊಂದು ಬೆಳಗ್ಗೆ ನೋಡಿ ನಕ್ಕದಷ್ಟೇ, ಮಧ್ಯಾಹ್ನ ಆಗುವಷ್ಟರಲ್ಲಿ ನಕ್ಕವನ ಕಥೆಯನ್ನೇ ಮುಗಿಸಿ ಹೆಂಡತಿಗೂ ಚಟ್ಟ ಕಟ್ಟಿದ್ದಾನೆ ಗಂಡ. ಅಷ್ಟಕ್ಕೂ ಆ ನಗುವಿನ ಹಿಂದೆ ಇದ್ದ ಕಹಾನಿ ಎನು? ಜೋಡಿ ಕೊಲೆಯ ರಹಸ್ಯವೇನೂ ಅನ್ನೋ ಮಾಹಿತಿ ಇಲ್ಲಿದೆ ನೋಡಿ.. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಅಕ್ಕತಂಗೇರಹಾಳ ಗ್ರಾಮದ ಜನ ಜುಲೈ 4ರಂದು ಅಕ್ಷರಶಃ ಬೆಚ್ಚಿ ಬಿದ್ದಿದ್ದರು. ಮಳೆ ಆಗದ ಹಿನ್ನೆಲೆ ಕೂಲಿ ಕೆಲಸ ಮಾಡಲು ಹೋಗಿದ್ದವರು ಮಧ್ಯಾಹ್ನವೇ ಓಡೋಡಿ ಊರಿಗೆ ಬಂದಿದ್ದರು. ಒಂದೇ ಬೀದಿಯಲ್ಲಿ ಜೋಡಿ ಕೊಲೆ ನೋಡಿದವರು ಶಾಕ್ ಆಗಿದ್ರೇ ಕುಟುಂಬಸ್ಥರ ಗೋಳಾಟ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಬಂದ ಅಂಕಲಗಿ ಪೊಲೀಸರು ಕೂಡಲೇ ಶವವನ್ನ ಬಿಮ್ಸ್ ಆಸ್ಪತ್ರೆ ಶವಾಗಾರಕ್ಕೆ ರವಾನೆ ಮಾಡಿದ್ರೇ, ಇತ್ತ ಅಲ್ಪಸ್ವಲ್ಪ ಜೀವ ಇದ್ದ ಮಹಿಳೆಯನ್ನ ಜಿಲ್ಲಾಸ್ಪತ್ರೆಗೆ ಶಿಫ್ಟ್ ಮಾಡಿದ್ದರು. ಆದ್ರೇ ಮಾರ್ಗ ಮಧ್ಯದಲ್ಲಿ ಆಕೆಯೂ ಉಸಿರು ಚೆಲ್ಲಿದ್ದು ಸಂಜೆ ಐದು ಗಂಟೆ ವೇಳೆ ಇಡೀ ಗ್ರಾಮಕ್ಕೆ ಗ್ರಾಮವೇ ಸ್ತಬ್ಧವಾಗಿ ಹೋಗಿತ್ತು.
ಅಷ್ಟಕ್ಕೂ ಇಲ್ಲಿ ಕೊಲೆಯಾದ ಮಹಿಳೆಯ ಹೆಸರು ರೇಣುಕಾ ಮಾಳಗಿ ಅಂತಾ ವಯಸ್ಸು 42 ವರ್ಷ, ಅದೇ ಬೀದಿಯ ಮಲ್ಲಿಕಾರ್ಜುನ ಜಾಗದಾರ್ ಅಂತಾ 45 ವರ್ಷದ ವ್ಯಕ್ತಿ ಇಲ್ಲಿ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದ. ಇಲ್ಲಿ ರೇಣುಕಾಳನ್ನ ಆಕೆಯ ಮನೆಯ ಒಳಗೆ ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ್ರೇ, ಇವರ ಐದನೇ ಮನೆಯಲ್ಲಿದ್ದ ಮಲ್ಲಿಕಾರ್ಜುನನ್ನ ಮನೆಯಂಗಳದಲ್ಲಿ ಸ್ನಾನ ಮಾಡುವ ವೇಳೆ ಅರೆಬೆತ್ತಲೆಯಾಗಿದ್ದಾಗಲೇ ಅದೇ ಕುಡಗೋಲಿನಿಂದ ಕೊಲೆ ಮಾಡಿ ಗಂಡ ಎಸ್ಕೇಪ್ ಆಗಿದ್ದ. ಕೊಲೆಯಾದ ರೇಣುಕಾ ಹಾಗೂ ಮಲ್ಲಿಕಾರ್ಜುನ ಸಂಬಂಧಿಕರು ಅಲ್ಲಾ, ಇಬ್ಬರಿಗೂ ತೀರಾ ಹಚ್ಚಿಕೊಂಡಿದ್ದ ಕುಟುಂಬಸ್ಥರು ಅಲ್ಲಾ, ಹೀಗಾಗಿ ಇವರಿಬ್ಬರ ಸಾವಿಗೆ ಕಾರಣ ಎನೂ ಅಂತಾ ಗ್ರಾಮಸ್ಥರಲ್ಲೆ ಗೊಂದಲ ಶುರುವಾಗಿತ್ತು.
ಜೋಡಿ ಕೊಲೆ ಮಾಡಿದ್ಯಾರು ಅದ್ಯಾವ ಕಾರಣಕ್ಕೆ ಕೊಲೆ ಮಾಡಿದ್ದು ಅನ್ನೋದನ್ನ ನೋಡುವುದಾದರೆ ಈ ಮಲ್ಲಿಕಾರ್ಜುನ ಯಾರು ಜತೆಗೆ ರೇಣುಕಾ ಯಾರು ಇವರಿಬ್ಬರ ನಡುವೆ ಇದ್ದ ಸಂಬಂಧ ಆದ್ರೂ ಎಂತಹದ್ದು ಅಂತಂದರೆ… ಮಲ್ಲಿಕಾರ್ಜುನ ಜಾಗದಾರ್ ಗೆ 45 ವರ್ಷ, ಈತನಿಗೆ ನಾಲ್ಕು ಜನ ಮಕ್ಕಳಿದ್ದು ಇದರಲ್ಲಿ ಮೂರು ಜನ ಹೆಣ್ಣು ಮಕ್ಕಳು. ಜೂನ್ 29ರಂದು ಇದೇ ಗ್ರಾಮದ ಯುವಕನಿಗೆ ಮಗಳನ್ನ ಕೊಟ್ಟು ಮದುವೆ ಮಾಡಿರುತ್ತಾನೆ. ಅದ್ದೂರಿ ಮದುವೆ ಮಾಡಿದ್ದ ಮಲ್ಲಿಕಾರ್ಜುನ ಕೊಲೆಯಾಗುವ ಹಿಂದಿನ ದಿನ ಮಗಳನ್ನ ಹೊಸದಾಗಿ ಗಂಡನ ಮನೆಗೆ ಕಳುಹಿಸಿರುತ್ತಾನೆ. ಇನ್ನು ನೆಲ ಅಗೆಯುವ ಕೆಲಸ ಮಾಡುತ್ತಿದ್ದ ಮಲ್ಲಿಕಾರ್ಜುನ ಅದರ ಜತೆ ಜತೆಗೆ ಅವರಿದ್ದ ಬೀದಿಯಲ್ಲೇ ಇದ್ದ ರೇಣುಕಾ ಯಲ್ಲಮ್ಮ ದೇವಿಯ ಪೂಜಾರಿಕೆ ಕೆಲಸವನ್ನ ಕಳೆದ ಆರು ತಿಂಗಳಿಂದ ಮಾಡುತ್ತಿರುತ್ತಾನೆ.
ಇನ್ನು ರೇಣುಕಾಗೆ ಮದುವೆಯಾಗಿ 25 ವರ್ಷವಾಗಿದ್ದು ಎರಡು ಗಂಡು ಮಕ್ಕಳಿದ್ದಾರೆ. ಅದರಲ್ಲಿ ಎರಡು ವರ್ಷದ ಹಿಂದೆ ಮೊದಲನೇ ಮಗನಿಗೆ ಮದುವೆ ಮಾಡಿದ್ದ, ಮೊಮ್ಮಗನನ್ನ ಆಡಿಸುತ್ತಾ ಮನೆ ನೋಡಿಕೊಂಡು ಹೋಗುತ್ತಿದ್ದಳು. ಇನ್ನು ಎರಡು ಮಕ್ಕಳಲ್ಲಿ ಓರ್ವ ಕೆಲಸ ಮಾಡಿದ್ರೆ, ಮತ್ತೋರ್ವ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿ ಮನೆ ನಡೆಸುತ್ತಿದ್ದರು. ಈಕೆಯ ಗಂಡ ಯಲ್ಲಪ್ಪ ಮಾಳಗಿಗೆ ನಾಲ್ಕು ಆಡುಗಳನ್ನ ಕೊಡಿಸಲಾಗಿತ್ತು ಆತ ಖಾಲಿ ಇರುವ ಬದಲು ಆಡುಗಳನ್ನ ಮೇಯಿಸುತ್ತಾ ಆರಾಮಾಗಿ ಕಾಲ ಕಳೆಯುತ್ತಿದ್ದ. ಹೀಗೆ ಒಂದು ಕಡೆ ಮಲ್ಲಿಕಾರ್ಜುನ ಕುಟುಂಬ ಮತ್ತೊಂದು ಕಡೆ ರೇಣುಕಾ ಕುಟುಂಬ ಯಾವುದಕ್ಕೂ ಕಡಿಮೆ ಇಲ್ಲದಂತೆ ಬದುಕು ನಡೆಸುತ್ತಿದ್ದರು. ಒಂದೇ ಓಣಿಯಲ್ಲಿ ಮನೆಗಳಿದ್ದ ಕಾರಣ ಒಬ್ಬರಿಗೊಬ್ಬರು ಪರಿಚಯವಿದ್ರೂ ಆದ್ರೇ ಅಷ್ಟೊಂದು ಕ್ಲೋಸ್ ಆಗಿ ಇರಲಿಲ್ಲ. ಊರಲ್ಲಿ ಎರಡು ಕುಟುಂಬದ್ದೂ ಒಳ್ಳೆಯ ಹೆಸರು ಕೂಡ ಇತ್ತು. ಹೀಗಿದ್ದಾಗಲೇ ಎರಡು ಕೊಲೆಯಾಗಿದ್ದು ಗ್ರಾಮಸ್ಥರು, ಸಂಬಂಧಿಕರನ್ನ ಶಾಕ್ ಆಗುವಂತೆ ಮಾಡಿತ್ತು.
ಮಲ್ಲಿಕಾರ್ಜುನನ್ನ ಕೊಲೆ ಮಾಡಿ ಓಡಿ ಹೋಗುವುದನ್ನ ನೋಡಿದ್ದ ಆತನ ಹೆಂಡತಿ ಮಾಲಾ ಕೊಲೆ ಮಾಡಿದ್ಯಾರು ಅನ್ನೋದನ್ನ ನೆರೆದಿದ್ದ ಜನರ ಮುಂದೆ ಹೇಳಿದ್ದಳು. ಹೌದು ಇಲ್ಲಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದು ಅವರ ಮನೆಯಿಂದ ಐದನೇ ಮನೆಯಲ್ಲಿ ವಾಸ ಮಾಡುತ್ತಿದ್ದ ಯಲ್ಲಪ್ಪ ಮಾಳಗಿ ಅನ್ನೋದು. ಹೌದು ಇಲ್ಲಿ ಮಲ್ಲಿಕಾರ್ಜುನ ಬೀದಿಯಲ್ಲಿ ಹೆಣವಾಗಿದ್ದನ್ನ ಕಂಡು ಜನ ಸೇರ್ತಿದ್ದಂತೆ ಯಲ್ಲಪ್ಪನ ಮನೆಯವರು ಕೂಡ ಕಿರುಚಲಾರಂಭಿಸಿದ್ದರು. ಆತನ ಮನೆಯಲ್ಲಿ ಹೆಂಡತಿ ರೇಣುಕಾ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನ ಕಂಡ ರೇಣುಕಾ ಸೊಸೆ ಮಂಜುಳಾ ಅಲ್ಲಿದ್ದ ಜನರನ್ನ ಕೂಗಿ ಕರೆದಿದ್ದಳು. ತಕ್ಷಣ ಅಕ್ಕಪಕ್ಕದ ಜನ ಬಂದು ಇನ್ನೂ ಜೀವ ಇದ್ದ ರೇಣುಕಾಗೆ ಕೂಡಲೇ ಆ್ಯಂಬುಲೆನ್ಸ್ ನಲ್ಲಿ ಬೆಳಗಾವಿ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ಇತ್ತ ಮಲ್ಲಿಕಾರ್ಜುನ ಸ್ಥಳದಲ್ಲೇ ಜೀವ ಚೆಲ್ಲಿದ್ದು ಅಂಕಲಗಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು…
ಸ್ಥಳಕ್ಕೆ ಬಂದ ಪೊಲೀಸರು ಕೊಲೆಯಾದ ಯಲ್ಲಪ್ಪನ ಹೆಂಡತಿ ಬಳಿಯಿಂದ ಮಾಹಿತಿ ಪಡೆದು ಕೊಲೆ ಮಾಡಿದ್ಯಾರು ಅನ್ನೋದನ್ನ ತಿಳಿದುಕೊಂಡಿದ್ದರು. ಆಗ ಕೊಲೆಗೂ ಮುನ್ನ ನಡೆದಿದ್ದು ಎನೂ ಅನ್ನೋದನ್ನ ಮಾಲಾ ಬಿಡಿಸಿ ಹೇಳಿದ್ದಳು. ಜು. 4ರಂದು ಜಾತ್ರೆಗೆ ಹೋಗಬೇಕು ಅಂತಾ ಬೆಳಗ್ಗೆ ಬೇಗ ಕೆಲಸ ಹೋಗಿ ಒಂದು ಗಂಟೆ ಹೊತ್ತಿಗೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಿದ್ದ. ಹೀಗೆ ಬಂದ ಮಲ್ಲಿಕಾರ್ಜುನ ಎಂದಿನಂತೆ ಮನೆಯ ಹೊರಗಡೆ ಸ್ನಾನ ಮಾಡಲು ಕುಳಿತಿದ್ದ. ಹೆಂಡತಿ ಊಟ ಮಾಡಿ ಸ್ನಾನ ಮಾಡಿ ಅಂತಾ ಹೇಳಿದ್ರೂ ಇಲ್ಲಾ ಸ್ನಾನ ಮಾಡಿ ಊಟ ಮಾಡ್ತೇನಿ ಅಂತಾ ಹೇಳಿ ಸ್ನಾನ ಮಾಡಲು ಶುರು ಮಾಡಿದ್ದ. ಈ ವೇಳೆ ಹೆಂಡತಿ ಮಾಲಾ ಟವೆಲ್ ತರಲು ಮನೆ ಒಳಗೆ ಹೋಗಿದ್ದಾಳೆ, ಈ ವೇಳೆ ಹಿಂದಿನಿಂದ ಬಂದ ಯಲ್ಲಪ್ಪ ಕುಡಗೋಲಿನಿಂದ ಕೊಚ್ಚಿ ಕೊಂದು ಓಡಿ ಹೋಗಿದ್ದಾನೆ ಅಂತಾ ಹೇಳಿರುತ್ತಾರೆ…
ಕೂಡಲೇ ಮಲ್ಲಿಕಾರ್ಜುನ ಕುಟುಂಬಸ್ಥರಿಂದ ಕೇಸ್ ತೆಗೆದುಕೊಂಡ ಪೊಲೀಸರು ತನಿಖೆಯನ್ನ ಆರಂಭಿಸುತ್ತಾರೆ. ಇಲ್ಲಿ ಹೆಂಡತಿ ಮತ್ತು ಪಕ್ಕದ ಮನೆಯವನನ್ನ ಕೊಂದು ಓಡಿ ಹೋಗಿದ್ದ ಯಲ್ಲಪ್ಪ ಅಂಕಲಗಿ ಪೊಲೀಸರಿಗೆ ಶರಣಾಗಿದ್ದ, ಸ್ಥಳ ಪರಿಶೀಲನೆ ಬಳಿಕ ಠಾಣೆಗೆ ಬಂದ ಪೊಲೀಸರು ಯಲ್ಲಪ್ಪನನ್ನ ವಿಚಾರಣೆ ನಡೆಸಿದಾಗ ಅದೊಂದು ಕೊಲೆಗೆ ಕಾರಣ ಬಾಯಿ ಬಿಟ್ಟಿದ್ದಾನೆ. ಇತ್ತ ವಿಚಾರ ತಿಳಿಯುತ್ತಿದ್ದಂತೆ ಎಸ್ಪಿ ಡಾ. ಸಂಜೀವ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ. ಇತ್ತ ಠಾಣೆಯಲ್ಲಿದ್ದ ಆರೋಪಿಯಿಂದಲೂ ಕಾರಣ ತಿಳಿದುಕೊಂಡಿದ್ದಾರೆ.
ಅಷ್ಟಕ್ಕೂ ಇಲ್ಲಿ ಜೋಡಿ ಕೊಲೆಗೆ ಕಾರಣ ರೇಣುಕಾ ಮತ್ತು ಮಲ್ಲಿಕಾರ್ಜುನ ನಡುವೆ ಇದ್ದ ಅನೈತಿಕ ಸಂಬಂಧ. ಹೌದು ಯಲ್ಲಪ್ಪನ ಹೆಂಡತಿ ಜತೆಗೆ ಮಲ್ಲಿಕಾರ್ಜುನ ಅನೈತಿಕ ಸಂಬಂಧ ಇಟ್ಟುಕೊಂಡಿದ್ದನಂತೆ ಈ ವಿಚಾರ ಗೊತ್ತಾಗಿ ಇಬ್ಬರನ್ನ ಕೊಲೆ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ. ಹೌದು ಕೊಲೆಗೂ ಎರಡು ದಿನ ಮುನ್ನ ರೇಣುಕಾ ಬೆಳಗ್ಗೆ ಜಮೀನಿಗೆ ಹೋಗಿ ಬಂದಿದ್ದಾಳೆ. ಇದಾದ ಬಳಿಕ ಮಧ್ಯಾಹ್ನ ಮತ್ತೊಮ್ಮೆ ಜಮೀನಿಗೆ ಹೋಗಿ ಬರ್ತೇನಿ ಅಂತಾ ಗಂಡ ಯಲ್ಲಪ್ಪನಿಗೆ ಹೇಳಿದ್ದಾಳೆ, ಈ ವೇಳೆ ಬೆಳಗ್ಗೆ ಹೋಗಿದ್ದಿ ಈಗ್ಯಾಕೆ ಅಂತಾ ಗಂಡ ಕೇಳಿದ್ದಾನೆ. ಗಂಡನ ಮಾತು ಕೇಳದೇ ಜಮೀನಿನತ್ತ ರೇಣುಕಾ ತೆರಳಿದ್ದಾಳೆ, ಆಕೆಯ ಮೇಲೆ ಡೌಟ್ ಬಂದು, ಯಲ್ಲಪ್ಪ ಹಿಂಬಾಲಿಸಿದ್ದಾನೆ. ಈ ವೇಳೆ ಆತ ಹೆಂಡತಿ ಮಲ್ಲಿಕಾರ್ಜನ ಜತೆಗೆ ಚಕ್ಕಂದ ಆಡ್ತಿರುವುದನ್ನ ನೋಡಿ ಶಾಕ್ ಆಗಿದ್ದಾನೆ.
ಹೆಂಡತಿಯನ್ನ ಜಮೀನಿನಲ್ಲಿ ಎನೂ ಪ್ರಶ್ನೆ ಮಾಡದೇ ಮನೆಗ ಬಂದ ಯಲ್ಲಪ್ಪ ಅಂದು ಎನೂ ಗೊತ್ತೇ ಇಲ್ಲ ಅನ್ನೋ ರೀತಿ ಉಳಿದುಕೊಂಡಿದ್ದಾನೆ. ಇದಾದ ಬಳಿಕ ಎರಡು ದಿನ ಅಂದ್ರೇ ಜು. 4ರಂದು ಬೆಳಗ್ಗೆ ಯಲ್ಲಪ್ಪ ಮನೆ ಮುಂದೆ ಕುಳಿತಾಗ ಆತನ ಮನೆ ಮುಂದೆ ಹೋಗುತ್ತಿದ್ದ ಮಲ್ಲಿಕಾರ್ಜುನ ನೋಡಿ ನಕ್ಕಿದ್ದಾನೆ. ಈ ನಗುವೇ ಯಲ್ಲಪ್ಪನಿಗೆ ರೊಚ್ಚಿಗೇಳುವಂತೆ ಮಾಡಿದೆ. ಹೆಂಡತಿ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಳ್ಳುವುದಷ್ಟೇ ಅಲ್ಲದೇ ನನ್ನೇ ನೋಡಿ ನಗಲು ಆರಂಭಿಸಿದಾ ಅಂತಾ ಯಲ್ಲಪ್ಪ ಕೊಲೆ ಮಾಡುವ ನಿರ್ಧಾರಕ್ಕೆ ಬರ್ತಾನೆ. ಅದರಂತೆ ಮನೆಯಲ್ಲಿದ್ದ ಕುಡಗೋಲನ್ನ ಮಸಿದು ಸಾಣಿ ಹಿಡಿಸಿ ಸಿದ್ದವಿಟ್ಟುಕೊಳ್ತಾನೆ, ಜತೆಗೆ ಮಧ್ಯಾಹ್ನವೇ ಕುಡಿದು ನಶೆಯಲ್ಲಿರುತ್ತಾನೆ. ಮಲ್ಲಿಕಾರ್ಜುನ ಕೆಲಸ ಮುಗಿಸಿ ಬರುವುದನ್ನೇ ಕಾಯುತ್ತಿದ್ದ ಯಲ್ಲಪ್ಪ ಆತ ಬಂದು ಸ್ನಾನ ಮಾಡಲು ಕುಳಿತುಕೊಳ್ತಿದ್ದಂತೆ ಆತನನ್ನ ಕೊಂದು, ನಂತರ ಮನೆಯಲ್ಲಿದ್ದ ಹೆಂಡತಿ ರೇಣುಕಾಳನ್ನ ಕೊಂದು ಎಸ್ಕೇಪ್ ಆಗಿ ಪೊಲೀಸರಿಗೆ ಶರಣಾಗಿದ್ದಾನೆ…
ಅಷ್ಟಕ್ಕೂ ಆರು ತಿಂಗಳ ಹಿಂದಷ್ಟೇ ಮಲ್ಲಿಕಾರ್ಜುನನಿಗೆ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನದಲ್ಲಿ ಇದೇ ಯಲ್ಲಪ್ಪ, ಮಲ್ಲಿಕಾರ್ಜುನನಿಗೆ ಕೆಲಸ ಕೊಡಿಸಿರುತ್ತಾನೆ. ಇಷ್ಟೊಂದು ಸಹಾಯ ಮಾಡಿದ್ದ ಯಲ್ಲಪ್ಪನಿಗೆ ಕೊಲೆಗೂ ಎರಡು ದಿನ ಮುನ್ನ ತನ್ನ ಹೆಂಡತಿ ಜತೆಗೆ ಮಲ್ಲಿಕಾರ್ಜುನ ಸಂಬಂಧ ಇಟ್ಟುಕೊಂಡಿದ್ದಾನೆ ಅನ್ನೋ ವಿಚಾರ ಗೊತ್ತಾಗಿ ಸಹಿಸಿಕೊಳ್ಳಲು ಆಗಿಲ್ಲ. ಇದಾದ ಬಳಿಕ ಆತ ಯಲ್ಲಪ್ಪನನ್ನ ನೋಡಿ ನಕ್ಕಿದ್ದು ಬಹಳಷ್ಟು ತ್ರಾಸ ಆಗಿ ಕೊಲೆ ಮಾಡುವ ತೀರ್ಮಾನಕ್ಕೆ ಬಂದು ಈ ರೀತಿ ಇಬ್ಬರನ್ನ ಕೊಚ್ಚಿ ಕೊಲೆ ಮಾಡಿ ನಂತರ ಪೊಲೀಸರಿಗೆ ಶರಣಾಗಿದ್ದು ಇದೀಗ ಹಿಂಡಲಗಾ ಜೈಲಿಗೆ ಆತನನ್ನ ಪೊಲೀಸರು ಕಳ್ಸಿದ್ದಾರೆ.