ಬೆಳಗಾವಿ: ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ

ಬೆಳಗಾವಿಯ ತಾಲೂಕಿನ ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಹೋಗುತ್ತಿದ್ದ ಬಸ್‌ನಲ್ಲಿ ಸೀಟ್‌ಗಾಗಿ ಯುವಕರ ನಡುವೆ ಜಗಳ ನಡೆದು ಚಾಕು ಇರಿತ ಸಂಭವಿಸಿರುವಂತಹ ಘಟನೆ ನಡೆದಿದೆ. ಬೆಳಗಾವಿ ಬಿಮ್ಸ್​ ಆಸ್ಪತ್ರೆ ಐಸಿಯುನಲ್ಲಿ ಯುವಕನಿಗೆ ಚಿಕಿತ್ಸೆ ನೀಡಲಾಗಿದೆ. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಳಗಾವಿ: ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ ಯುವಕರ ಮಧ್ಯೆ ಗಲಾಟೆ, ಚಾಕು ಇರಿತ
ಪ್ರಾತಿನಿಧಿಕ ಚಿತ್ರ
Edited By:

Updated on: Jun 18, 2025 | 1:38 PM

ಬೆಳಗಾವಿ, ಜೂನ್​ 18: ತಾಲೂಕಿನ ಪಂಚಬಾಳೇಕುಂದ್ರಿ ಗ್ರಾಮದಿಂದ ಸಿಬಿಟಿಗೆ ಬರುತ್ತಿದ್ದ ಬಸ್​ನಲ್ಲಿ ಕಿಟಕಿ ಪಕ್ಕದ ಸೀಟ್​ಗಾಗಿ (window seat) ಯುವಕರ ಮಧ್ಯೆ ಗಲಾಟೆ ನಡೆದಿದ್ದು, ಓರ್ವ ಯುವಕನಿಗೆ ಚಾಕು (stabbing) ಇರಿಯಲಾಗಿದೆ. ಗ್ರಾಮದ ಮಜ್ಜು ಸನದಿ(20) ಎಂಬ ಯುವಕ ಎದೆ ಭಾಗಕ್ಕೆ ಯುವಕರ ಗ್ಯಾಂಗ್​ ಒಂದು ಚಾಕು ಇರಿದು ಪರಾರಿ ಆಗಿದೆ. ಬೆಳಗಾವಿ ಬಿಮ್ಸ್​ ಆಸ್ಪತ್ರೆ ಐಸಿಯುನಲ್ಲಿ ಮಜ್ಜುಗೆ ಚಿಕಿತ್ಸೆ ನೀಡಲಾಗಿದೆ. ಸ್ಥಳಕ್ಕೆ ಡಿಸಿಪಿ ರೋಹನ್​ ಜಗದೀಶ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಲಾಡ್ಜ್​​ನಲ್ಲಿ ರೂಮ್ ನೀಡದಿದ್ದಕ್ಕೆ ಕಲ್ಲು ತೂರಿ ಕಿಡಿಗೇಡಿಗಳ ಅಟ್ಟಹಾಸ

ರೂಮ್ ನೀಡದಿದ್ದಕ್ಕೆ ಕಿಡಿಗೇಡಿಗಳು ರಾತ್ರಿ‌ ಲಾಡ್ಜ್​​ಗೆ ಕಲ್ಲು ತೂರಿ ಅಟ್ಟಹಾಸ ಮೆರೆದಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಜೂನ್​ 15ರಂದು ನಡೆದಿದ್ದ ತಡವಾಗಿ ಬೆಳಕಿಗೆ ಬಂದಿದೆ. ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಅಣ್ಣನ ಕೊಂದು ನಾಟಕವಾಡಿದ್ದ ತಮ್ಮ: ಮಾಲೀಕನ ಕೊಲೆ ಸುಳಿವು ಕೊಟ್ಟ ನಾಯಿ, ಕುರಿಗಳು

ನಗರದ ಬೃಂದಾವನ ಲಾಡ್ಜ್​ಗೆ ಬಂದ ಮೂವರು ಯುವಕರ ತಂಡ ರೂಮ್ ಕೇಳಿದ್ದಾರೆ. ಯುವಕರು ಕುಡಿದಿದ್ದ ಕಾರಣಕ್ಕೆ ಮಾಲೀಕ ಲಾಡ್ಜ್​​ ನೀಡಲು ನಿರಾಕರಿಸಿದ್ದಾರೆ. ಇದರಿಂದ ಸಿಟ್ಟಿಗೆದ್ದ ಯುವಕರ ಗುಂಪಿನಿಂದ ಲಾಡ್ಜ್​ ಮೇಲೆ ಕಲ್ಲು ತೂರಾಟ ಮಾಡಲಾಗಿದೆ. ಲಾಡ್ಜ್​​ ಸೇರಿದಂತೆ 1 ಕಾರು ಮತ್ತು 5ಕ್ಕೂ ಹೆಚ್ಚು ಬೈಕ್​ಗಳ ಮೇಲೆ ಕಲ್ಲು ತೂರಾಟ ಮಾಡಲಾಗಿದ್ದು, ಬೈಕ್​ ಹಾಗೂ ಕಾರಿನ ಗಾಜುಗಳು ಪುಡಿ ಪುಡಿ ಆಗಿವೆ.

ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ಕೃಷ್ಣಾ ನದಿಗೆ ಬಿದ್ದು ನಾಪತ್ತೆ

ಬಾಗಿನ ಅರ್ಪಿಸಲು ಹೋಗಿದ್ದ ಮಹಿಳೆ ಕೃಷ್ಣಾ ನದಿಗೆ ಬಿದ್ದು ನಾಪತ್ತೆ ಆಗಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ನಡೆದಿದೆ. ಸಂಗೀತಾ ಮಾಂಜರೇಕರ್(40) ನಾಪತ್ತೆ ಆದ ಮಹಿಳೆ. ಅಂಕಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ಅಹಮದಾಬಾದ್ ವಿಮಾನ ದುರಂತದಲ್ಲಿ ಮೃತಪಟ್ಟ ಪ್ರತೀಕ್ ಜೋಶಿಗೆ ಇತ್ತು ಕೋಲಾರ, ಬೆಳಗಾವಿ ನಂಟು

ಸಂಗೀತಾ ತುಂಬಿ ಹರಿಯುತ್ತಿದ್ದ ನದಿಗೆ ಬಾಗಿನ ಅರ್ಪಿಸಲು ಹೋಗಿದ್ದರು. ಈ ವೇಳೆ ಕಾಲು ಜಾರಿ ಬಿದ್ದು ಕೊಚ್ಚಿಹೋಗಿದ್ದಾರೆ. ಸ್ಥಳಕ್ಕೆ ಚಿಕ್ಕೋಡಿ ತಹಶೀಲ್ದಾರ್ ಹಾಗೂ ಉಪವಿಭಾಗಾಧಿಕಾರಿ ಭೇಟಿ ನೀಡಿದ್ದು,
ನಾಪತ್ತೆಯಾದ ಸಂಗೀತಾಗಾಗಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಶೋಧ ಕಾರ್ಯ ನಡೆಯುತ್ತಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.