ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಸು ಇದ್ದೋನೆ ಬಾಸ್, ಟಿವಿ9 ವರದಿ ಬೆನ್ನಲ್ಲೇ ಇಬ್ಬರು ಸಿಬ್ಬಂದಿ ಸಸ್ಪೆಂಡ್

| Updated By: ರಮೇಶ್ ಬಿ. ಜವಳಗೇರಾ

Updated on: Aug 10, 2023 | 10:35 AM

ಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗೆ ಸಿಬ್ಬಂದಿಯಿಂದ ಕಿರುಕುಳ, ಹಣ ಕೊಟ್ಟ ಕೈದಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ, ಕೈದಿಗಳ ನಡುವೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ, ಈ ಎಲ್ಲ ವಿಚಾರದ ಕುರಿತು ಟಿವಿ9 ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಈ ವರದಿ ಬೆನ್ನಲ್ಲೇ ಬಂಧಿಖಾನೆ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿತ್ತು. ಇದೀಗ ಇಬ್ಬರು ಜೈಲು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಕಾಸು ಇದ್ದೋನೆ ಬಾಸ್, ಟಿವಿ9 ವರದಿ ಬೆನ್ನಲ್ಲೇ ಇಬ್ಬರು ಸಿಬ್ಬಂದಿ ಸಸ್ಪೆಂಡ್
ಬೆಳಗಾವಿ ಹಿಂಡಲಗಾ ಜೈಲು
Follow us on

 ಬೆಳಗಾವಿ, (ಆಗಸ್ಟ್ 10): ಬೆಳಗಾವಿಹಿಂಡಲಗಾ ಕೇಂದ್ರ ಕಾರಾಗೃಹದಲ್ಲಿ(Belagavi Hindalga Central Jail) ಅಕ್ರಮ ನಡೆಯುತ್ತಿರುವ ಬ್ಗಗೆ ನಿಮ್ಮ ಟಿವಿ9 ಸುದ್ದಿ ಪ್ರಸಾರ ಮಾಡಿತ್ತು. ಹಣ ಕೊಟ್ಟರೆ ಜೈಲಿನಲ್ಲಿ ಮೊಬೈಲ್ ಮೊಬೈಲ್(Mobile) ಸಿಗುತ್ತೆ. ಜೊತೆಗೆ ದುಡ್ಡು ನೀಡಿದರೆ ಐಷಾರಾಮಿ ಜೀವನ ಕೂಡ ಮಾಡಬಹುದು. ಕಾಸಿದ್ರೆ ಜೈಲಲ್ಲೂ ರಾಜನಂತೆ ಮೆರೆಯಬಹುದು ಎಂದು ಟಿವಿ9 ಹಿಂಡಲಗಾ ಕೇಂದ್ರ ಕಾರಾಗೃಹದ ಅಧಿಕಾರಿಗಳ ಹಣದಾಸೆ ಏನೆಲ್ಲಾ ಮಾಡುತ್ತಿದ್ದಾರೆ ಎನ್ನುವುದನ್ನು ವಿವರವಾಗಿ ಸುದ್ದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಇದೀಗ ಟಿವಿ9 ವರದಿ ಬೆನ್ನಲ್ಲೇ ಜೈಲಿನ ಇಬ್ಬರು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಹೆಡ್ ವಾರ್ಡರ್ ಬಿ.ಎಲ್. ಮೇಳವಂಕಿ, ವಾರ್ಡರ್ ವಿ.ಟಿ ವಾಗಮೋರೆ ಅವರನ್ನು ಕಾರಾಗೃಹ ಉಪಮಹಾನಿರೀಕ್ಷಕ ಉತ್ತರ ವಯಲದ ಟಿ.ಪಿ ಶೇಷ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ತವ್ಯ ನಿರ್ವಹಣೆ ವೇಳೆ ಬೇಜವಾಬ್ದಾರಿ ಕಂಡು ಬಂದ ಹಿನ್ನೆಲೆ ಸಸ್ಪೆಂಡ್ ಮಾಡಲಾಗಿದೆ.

ಇದನ್ನೂ ಓದಿ: ಹಿಂಡಲಗಾ ಜೈಲಿನ ಅಕ್ರಮ ಬಯಲು ಮಾಡಿದ ಟಿವಿ9; ಕಾಸಿದ್ರೆ ಜೈಲಲ್ಲೂ ರಾಜನಂತೆ ಮೆರೆಯಬಹುದು

ಆಗಸ್ಟ್ 3ರಂದು ಈ ಕುರಿತು ‘ಹಿಂಡಲಗಾ ಜೈಲು ಕಾಂಡ’ ಶೀರ್ಷಿಕೆಯಡಿಯಲ್ಲಿ ಟಿವಿ9. ವಿಸ್ತೃತ ವರದಿ ಬಿತ್ತರಿಸಿತ್ತು. ಜೈಲಿನಲ್ಲಿ ಕೈದಿಗಳಿಗೆ ಸಿಬ್ಬಂದಿಯಿಂದ ಕಿರುಕುಳ, ಹಣ ಕೊಟ್ಟ ಕೈದಿಗಳಿಗೆ ಮೊಬೈಲ್ ಬಳಕೆಗೆ ಅವಕಾಶ, ಕೈದಿಗಳ ನಡುವೆ ಗಲಾಟೆ ನಡೆದು ಮಾರಣಾಂತಿಕ ಹಲ್ಲೆ, ಈ ಎಲ್ಲ ವಿಚಾರದ ಕುರಿತು ಟಿವಿ9 ಎಳೆ ಎಳೆಯಾಗಿ ಬಿಚ್ಚಿಟ್ಟಿತ್ತು. ಈ ವರದಿ ಬೆನ್ನಲ್ಲೇ ಬಂಧಿಖಾನೆ ಇಲಾಖೆಯಲ್ಲಿ ಸಂಚಲನ ಸೃಷ್ಟಿಸಿತ್ತು.

ಕಾರಾಗೃಹ ಉಪಮಹಾನಿರೀಕ್ಷಕ ಉತ್ತರ ವಯಲದ ಟಿ.ಪಿ ಶೇಷ ಅವರಿಗೆ ಪ್ರಾಥಮಿಕ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಎಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಸೂಚನೆ ನೀಡಿದ್ದು, ಕೈದಿಗಳು ಮೊಬೈಲ್ ಬಳಕೆ, ಜೈಲು ಒಳಗೆ ಮೊಬೈಲ್ ಸಿಕ್ಕಿರುವ ಕುರಿತು ತನಿಖೆ ಮುಂದುವರೆದಿದೆ. ಇದರ ಮಧ್ಯೆ ಈಗ ಇಬ್ಬರು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.

ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ