ಬೆಳಗಾವಿಗೆ ಮತ್ತೆ ಕಂಟಕ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು, ದತ್ತ ಮಂದಿರಕ್ಕೆ ಜಲದಿಗ್ಬಂಧನ

ಕುಂದಾನಗರಿ ಜನರನ್ನ ಕಳೆದ ಮೂರು ವರ್ಷದಿಂದಲೂ ಪ್ರವಾಹ ಕಾಡ್ತಿದೆ. ಮೊನ್ನೆಯಷ್ಟೇ ಭೀಕರ ಪ್ರವಾಹ ಎದುರಿಸಿದ್ದ ಜಿಲ್ಲೆ ಜನರಿಗೆ ಮತ್ತೆ ಪ್ರವಾಹದ ಭೀತಿ ಎದುರಾಗಿದೆ. ದೇಗುಲಗಳನ್ನ ನದಿ ನೀರು ಸುತ್ತುವರೆದಿದ್ದು, ಬೆಳೆಗಳೆಲ್ಲ ಮಾಯವಾಗಿವೆ.

ಬೆಳಗಾವಿಗೆ ಮತ್ತೆ ಕಂಟಕ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು, ದತ್ತ ಮಂದಿರಕ್ಕೆ ಜಲದಿಗ್ಬಂಧನ
ಬೆಳಗಾವಿಗೆ ಮತ್ತೆ ಕಂಟಕ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು, ದತ್ತ ಮಂದಿರಕ್ಕೆ ಜಲದಿಗ್ಬಂಧನ
Follow us
TV9 Web
| Updated By: ಆಯೇಷಾ ಬಾನು

Updated on: Sep 16, 2021 | 7:59 AM

ಬೆಳಗಾವಿ: ಮಹಾರಾಷ್ಟ್ರದ ಕೊಂಕಣ ಪ್ರದೇಶದಲ್ಲಿ ಭಾರಿ ಮಳೆಯಾಗ್ತಿದ್ದು, ಕೃಷ್ಣಾ, ವೇದಗಂಗಾ, ದೂದಗಂಗಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಮಹಾರಾಷ್ಟ್ರದ ಕೋಯ್ನಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಕೃಷ್ಣಾ ನದಿಗೆ 50 ಸಾವಿರ ಕ್ಯೂಸೆಕ್ ನೀರು ಹೊರಬಿಟ್ಟಿದ್ದಾರೆ. ಇದ್ರ ಜೊತೆಗೆ ಮಳೆ ನೀರು ಕೂಡ ಸೇರಿದ್ದು, ಕೃಷ್ಣಾ ನದಿಯಲ್ಲಿ ಒಂದೂವರೆ ಲಕ್ಷ ಕ್ಯೂಸೆಕ್ ನಷ್ಟು ನೀರು ಹೊರ ಹೋಗ್ತಿದೆ. ಈ ಭಾರಿ ಪ್ರಮಾಣದ ನೀರಿನಿಂದಾಗಿ, ಬೆಳಗಾವಿ ಜಿಲ್ಲೆಯಲ್ಲಿ ಎಂಟಕ್ಕೂ ಅಧಿಕ ಗ್ರಾಮಗಳು ಸಂಪರ್ಕ ಕಡಿದುಕೊಂಡಿವೆ.

ವೇದಗಂಗಾ ನದಿ ನೀರಿನಿಂದಾಗಿ, ನಿಪ್ಪಾಣಿಯ ಬಾರವಾಡ‌ ಮತ್ತು ಕುಣ್ಣೂರ ಗ್ರಾಮದ ಮಧ್ಯೆ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ದೂದಗಂಗಾ ನದಿ ನೀರಿನಿಂದಾಗಿ ಬೋಜ ಮತ್ತು ಕಾರದಗಾ ಗ್ರಾಮಕ್ಕೆ ಸೇತುವೆ ಮುಳುಗಿದೆ. ಚಿಕ್ಕೋಡಿಯ ಮಲ್ಲಿಕವಾಡ ದತ್ತವಾಡ ಸೇತುವೆ ನೀರಿನಲ್ಲಿ ಮರೆಯಾಗಿದ್ದು, ಗ್ರಾಮಗಳು ಸಂಪರ್ಕ ಕಡಿತುಗೊಂಡಿವೆ. ಇನ್ನು, ಕೃಷ್ಣಾ ನದಿ ನೀರಿನಿಂದಾಗಿ, ಕಲ್ಲೋಳ ಹೊರ ವಲಯದ ದತ್ತ ಮಂದಿರಕ್ಕೆ ಜಲದಿಗ್ಬಂಧನ ಬಿದ್ದಿದೆ. ಜನರಲ್ಲೂ ಕೂಡ ಭೀತಿ ಹೆಚ್ಚಾಗಿದೆ.

ಪ್ರವಾಹದ ಪರಿಸ್ಥಿತಿ ಒಂದು ಕಡೆ ಆದ್ರೆ, 2019ರ ನೆರೆ ಸಂತ್ರಸ್ತರು ಪರಿಹಾರಕ್ಕಾಗಿ ಬೀದಿಗಿಳಿದಿದ್ದಾರೆ. ಮೂಡಲಗಿ ತಾಲೂಕಿನ ಇಪ್ಪತ್ತಕ್ಕೂ ಅಧಿಕ ಗ್ರಾಮಸ್ಥರು ನಿನ್ನೆ ಪ್ರತಿಭಟನೆ ನಡೆಸಿದ್ರು. ಚೆನ್ನಮ್ಮ ವೃತ್ತದಿಂದ ಡಿಸಿ ಕಚೇರಿ ತನಕ ಪಾದಯಾತ್ರೆ ನಡೆಸಿದ್ರು. ವಾರದೊಳಗೆ ಪರಿಹಾರ ನೀಡದಿದ್ರೆ, ಮಕ್ಕಳು ಮರಿ, ಜಾನುವಾರುಗಳೊಂದಿಗೆ ಡಿಸಿ ಕಚೇರಿಗೆ ಆಗಮಿಸಿ ಧರಣಿ ನಡೆಸುವುದಾಗಿ ಎಚ್ಚರಿಸಿದ್ದಾರೆ.

ಒಟ್ನಲ್ಲಿ, 2 ತಿಂಗಳ ಅವಧಿಯಲ್ಲಿ ಎರಡನೇ ಸಲ ಬೆಳಗಾವಿ ಜಿಲ್ಲೆಗೆ ಪ್ರವಾಹದ ಭೀತಿ ಕಾಡುತ್ತಿದೆ. ಗ್ರಾಮದ ಹತ್ತಿರಕ್ಕೆ ಬರುತ್ತಿರುವ ನದಿ ನೀರು ಕಂಡು ಜನರೆಲ್ಲ ಬೆಚ್ಚಿ ಬಿದಿದ್ದಾರೆ.

belagavi flood

ಬೆಳಗಾವಿಗೆ ಮತ್ತೆ ಕಂಟಕ; ಅಪಾಯದ ಮಟ್ಟ ಮೀರಿ ಹರಿಯುತ್ತಿವೆ ನದಿಗಳು

ಇದನ್ನೂ ಓದಿ: ಬೆಳಗಾವಿಯಲ್ಲಿ ಶುರುವಾಯ್ತು ಪ್ರವಾಹ ಭೀತಿ! ಎಚ್ಚರಿಕೆಯಿಂದಿರಲು ಜಿಲ್ಲಾಡಳಿತ ಸೂಚನೆ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಒಂದು ಆರೋಪವನ್ನೂ ಸಾಬೀತು ಮಾಡೋದು ಸರ್ಕಾರಕ್ಕೆ ಸಾಧ್ಯವಾಗಿಲ್ಲ: ಪ್ರತಾಪ್
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ಆರ್ಚರಿ ಚಾಂಪಿಯನ್‌ ಶಿಪ್‌ನಲ್ಲಿ ರಾಜ್ಯದ ಕ್ರೀಡಾಪಟುಗಳಿಂದ ಚಿನ್ನದ ಪದಕ ಬೇಟೆ
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?
ನಮ್ಮನ್ನು ಒಂಟಿಯಾಗಿ ಬಿಡ್ರಪ್ಪ ಅಂತ ಶಿವಕುಮಾರ್ ಹೇಳಿದ್ದು ಯಾಕೆ?