ಬೆಳಗಾವಿ: ನಗರದಲ್ಲಿ ಬೀದಿ ನಾಯಿ (street dog) ಉಪಟಳ ಹೆಚ್ಚಾಗಿದ್ದು, ಕುಂದಾನಗರಿ ಜನರ ನಿದ್ದೆಗೆಡಿಸಿದೆ ಅದೊಂದು ಬೀದಿ ನಾಯಿ. ಜಿಲ್ಲೆಯ ಮಾರುಕಟ್ಟೆ ಪ್ರದೇಶದಲ್ಲಿ ಬೀದಿನಾಯಿ ದಾಳಿಗೆ ಜನ ಹೈರಾಣಾಗಿದ್ದು, ಮೂರು ದಿನಗಳ ಅಂತರದಲ್ಲಿ ಬರೋಬ್ಬರಿ 19 ಜನರಿಗೆ ಕಚ್ಚಿದೆ. ಬಾಪಟ ಗಲ್ಲಿ ಕಾರ್ ಪಾರ್ಕಿಂಗ್ ಸ್ಥಳ, ಖಡೇ ಬಜಾರ್, ಗಣಪತ ಗಲ್ಲಿ, ಕಡೋಲ್ಕರ್ ಗಲ್ಲಿ, ಕಿರ್ಲೋಸ್ಕರ್ ರಸ್ತೆ ಸೇರಿ ಮಾರುಕಟ್ಟೆ ಪ್ರದೇಶದಲ್ಲಿ ಬೀದಿ ನಾಯಿ ಹಾವಳಿ ಹೆಚ್ಚಾಗಿದೆ. ದೂರು ನೀಡಿದರೂ ಕೂಡ ಜಿಲ್ಲಾಡಳಿತದ ಸೂಕ್ತ ಕ್ರಮಕೈಗೊಂಡಿಲ್ಲ. ಹಾಗಾಗಿ ಜಿಲ್ಲಾಡಳಿತದ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಟಾಚಾರಕ್ಕೆ ಬಂದು ಕಚ್ಚಿದ ನಾಯಿ ಬಿಟ್ಟು ಬೇರೆ ನಾಯಿಗಳನ್ನು ಸೆರೆಹಿಡಿದು ತಗೆದುಕೊಂಡು ಹೋಗಿದ್ದಾರೆ ಎಂದು ಸ್ಥಳೀಯರು ಆರೋಪ ಮಾಡಿದ್ದಾರೆ. 19 ಜನರಿಗೆ ಕಚ್ಚಿದ ನಾಯಿ ಬಿಂದಾಸ್ ಆಗಿ ಓಡಾಡುತ್ತಿದ್ದು, ಸ್ಥಳೀಯ ನಿವಾಸಿ ವಿಡಿಯೋ ಮಾಡಿದ್ದಾರೆ. ಮಾರುಕಟ್ಟೆಗೆ ದಿನಂಪ್ರತಿ ಸಾವಿರಾರು ಜನ ಬರುತ್ತಾರೆ. ಚಿಕ್ಕ ಚಿಕ್ಕ ಮಕ್ಕಳ ಕರೆದುಕೊಂಡು ಬಂದಾಗ ನಾಯಿ ದಾಳಿ ಮಾಡಿದ್ರೆ ಯಾರು ಹೊಣೆ. ತಕ್ಷಣ ಬೀದಿ ನಾಯಿ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ, ಬಳ್ಳಾರಿಯಲ್ಲಿ ಬೀದಿನಾಯಿ ದಾಳಿಗೆ ಒಟ್ಟು ಮೂವರು ಮಕ್ಕಳ ಸಾವು: ಮತ್ತೆ ಗರಿಗೆದರಿದ ನಾಯಿ ನಿರ್ವಹಣೆ ಚರ್ಚೆ
ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಒಂದು ತಿಂಗಳಲ್ಲಿ ಸುಮಾರು 2 ಸಾವಿರ ಜನರು ನಾಯಿ ಕಡಿತಕ್ಕೆ ಒಳಗಾಗಿದ್ದಾರೆ. ಅವರಲ್ಲಿ ಕೆಲವರಿಗೆ ರೇಬಿಸ್ ಲಕ್ಷಣಗಳು ಕೂಡ ಕಂಡುಬಂದಿವೆ. ಹೀಗಾಗಿ, ಬೀದಿ ನಾಯಿಗಳನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಬೇಕೆಂದು ಬೆಂಗಳೂರಿನ ಜನರು ಒತ್ತಾಯಿಸಿದ್ದರು. ಆದರೆ, ಬೀದಿ ನಾಯಿಗಳನ್ನು ಹಿಡಿದು ಬೆಂಗಳೂರಿನ ಆಶ್ರಯ ಮನೆಗಳಿಗೆ ಸ್ಥಳಾಂತರಿಸಲು ಕರ್ನಾಟಕ ಪಶುಸಂಗೋಪನಾ ಇಲಾಖೆ ನಿರಾಕರಿಸಿದೆ. ಇದಕ್ಕೆ ಸಾರ್ವಜನಿಕರು ಅಸಮಾಧಾನ ಹೊರಹಾಕಿದ್ದಾರೆ.
ಪಶುಸಂಗೋಪನಾ ಇಲಾಖೆ ತನ್ನ ಹಿಂದಿನ ಆದೇಶವನ್ನು ಪುನರುಚ್ಛರಿಸಿದ್ದು, ಬೆಂಗಳೂರಿನ ಬೀದಿ ನಾಯಿಗಳು ಬೀದಿಯಲ್ಲಿಯೇ ಉಳಿಯುತ್ತವೆ ಎಂದು ಹೇಳಿದೆ. ಬೆಂಗಳೂರಿನಿಂದ ನಾಯಿಗಳನ್ನು ಸ್ಥಳಾಂತರಿಸದಿರಲು ಬಿಬಿಎಂಪಿ, ಪಶುಸಂಗೋಪನಾ ಇಲಾಖೆ ನಿರ್ಧರಿಸಿದೆ. ಬೀದಿ ನಾಯಿಗಳನ್ನು ಬೇರೆಡೆ ಶಿಫ್ಟ್ ಮಾಡಲು ಬೆಂಗಳೂರಿನ ನಿವಾಸಿಗಳು ಸಾಕಷ್ಟು ದೂರು ನೀಡಿದ್ದರು. ಆದರೂ ಅದಕ್ಕೆ ಬಿಬಿಎಂಪಿ ಒಪ್ಪಿಗೆ ನೀಡಿಲ್ಲ.
ಬಳ್ಳಾರಿ: ಹುಚ್ಚುನಾಯಿ ಕಡಿತದಿಂದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಇತ್ತೀಚೆಗೆ ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 3 ವರ್ಷದ ಸುರಕ್ಷಿತಾ ಹಾಗೂ 7 ವರ್ಷದ ಶಾಂತಕುಮಾರ್ ಮೃತಪಟ್ಟ ದುರ್ದೈವಿ ಮಕ್ಕಳು. ಇಬ್ಬರು ಮಕ್ಕಳ ಸಾವಿನಿಂದ ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು, ಮಕ್ಕಳನ್ನು ಹೊರಗೆ ಕಳುಹಿಸಲು ಗ್ರಾಮಸ್ಥರು ಹೆದರುತ್ತಿದ್ದಾರೆ.
ಇದನ್ನೂ ಓದಿ: ಬಳ್ಳಾರಿಯಿಂದ ಕೆನಡಾಕ್ಕೆ ಹೊರಟ ಬೀದಿ ನಾಯಿ! ನಾಯಿಮರಿಯನ್ನು ದತ್ತು ಪಡೆದ ಕೆನಡಾದ ಮಹಿಳೆ
ಮಕ್ಕಳು ಆಟವಾಡುತ್ತಿದ್ದಾಗ ದಾಳಿ ಮಾಡಿದ್ದ ನಾಯಿ, ಸುರಕ್ಷಿತಾಳ ಮುಖಕ್ಕೆ ಹಾಗೂ ಶಾಂತಕುಮಾರ್ ಕೈಗೆ ಕಚ್ಚಿತ್ತು. ಇದರಿಂದ ತೀವ್ರ ಗಾಯಗೊಂಡಿದ್ದ ಸುರಕ್ಷಿತಾ ನವೆಂಬರ್ 21ರಂದು ಮೃತಪಟ್ಟಿದ್ದಳು. ಚುಚ್ಚು ಮದ್ದು ಹಾಕಿದರೂ ಸಹ ಸುರಕ್ಷಿತಾ ಬದುಕುಳಿಯಲಿಲ್ಲ. ಇನ್ನು ಸಕಾಲಕ್ಕೆ ಚಿಕಿತ್ಸೆ ಪಡೆಯದ ಶಾಂತಕುಮಾರ್, ನವಂಬರ್ 22ರಂದು ಸಾವನ್ನಪ್ಪಿದ್ದಾನೆ. ಇದರಿಂದ ಗ್ರಾಮಸ್ಥರು ತಮ್ಮ ಮಕ್ಕಳನ್ನು ಹೊರಗಡೆ ಆಟವಾಡಲು ಬಿಡುತ್ತಿಲ್ಲ.
ರಾಜದ್ಯ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.