
ಬೆಳಗಾವಿ, ಜೂನ್ 02: ಬಾಲಕಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದ್ದ ಇಬ್ಬರು ಬಾಲಕರು ಸೇರಿದಂತೆ ಐವರು ಆರೋಪಿಗಳನ್ನು ಎಪಿಎಂಸಿ ಠಾಣೆ ಪೊಲೀಸರು (APMC Police Station Belagavi) ಬಂಧಿಸಿದ್ದಾರೆ. ಪ್ರಕರಣದ ಆರೋಪಿಗಳಾದ ಶ್ಯಾಮ್ ನಾಯಕ್, ರಾಜು ಕಲ್ಕಿ, ಅಭಿಷೇಕ್ನನ್ನು ಪೊಲೀಸರು ಬೆಳಗಾವಿ (Belagavi) ಫೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಸದ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಡಿಸೆಂಬರ್ನಲ್ಲಿ ನವರಾತ್ರಿ ದಾಂಡಿಯಾ ಆಡುವ ಸಂದರ್ಭದಲ್ಲಿ ಬಾಲಕಿಗೆ ಎ1 ಬಾಲಕ ಪರಿಚಯವಾಗುತ್ತಾನೆ. ಬಾಲಕಿ ಜೊತೆಗೆ ಸ್ನೇಹ ಕೂಡ ಬೆಳಸಿದ್ದನು. ಬಳಿಕ ಬಾಲಕಿಗೆ ತನ್ನ ಸ್ನೇಹಿತರನ್ನೂ ಪರಿಚಯ ಮಾಡಿಕೊಟ್ಟಿದ್ದನು. ನಂತರ ಒಂದು ದಿನ ಹೊರಗೆ ಸುತ್ತಾಡಲು ಹೋಗೋಣ ಬಾ ಅಂತ ಬಾಲಕಿಯನ್ನು ನಗರದ ಹೊರ ವಲಯದ ಗುಡ್ಡದ ಮೇಲೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿಗೆ ಹೋಗುತ್ತಿದ್ದಂತೆ ಬಾಲಕಿ ಮೇಲೆ ಆರೋಪಿಗಳು ಸಾಮೂಹಿಕವಾಗಿ ಅತ್ಯಾಚಾರ ಮಾಡಿ, ಅದನ್ನು ಮೊಬೈಲ್ನಲ್ಲಿ ವಿಡಿಯೋ ರೇಕಾರ್ಡ್ ಮಾಡಿಕೊಂಡಿದ್ದಾರೆ.
ಇದಾದ ಬಳಿಕ ಈ ವಿಡಿಯೋ ಇಟ್ಟುಕೊಂಡು ಜನವರಿ ತಿಂಗಳಲ್ಲಿ ಮತ್ತೆ ಬಾಲಕಿಯನ್ನು ಹೊರಗೆ ಬರುವಂತೆ ಆರೋಪಿ ಕರೆದಿದ್ದಾರೆ. ಆರೋಪಿಯ ಬ್ಲ್ಯಾಕ್ಮೇಲ್ಗೆ ಭಯಗೊಂಡು ಬಾಲಕಿ ಆರೋಪಿಗಳ ಜೊತೆಗೆ ಹೋಗಿದ್ದಾಳೆ. ಈ ವೇಳೆಯೂ ಮೂರು ಜನ ಸೇರಿ ಮತ್ತೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಇಷ್ಟಾದರೂ ಸಹಿಸಿಕೊಂಡಿದ್ದ ಬಾಲಕಿಗೆ ಆರೋಪಿ ಮತ್ತೆ ಕರೆ ಮಾಡಿದ್ದಾರೆ. ತಾವು ಕರೆದ ಜಾಗಕ್ಕೆ ಬರುವಂತೆ ಆರೋಪಿ ಹೇಳಿದ್ದಾರೆ. ಬರದಿದ್ದರೇ ವಿಡಿಯೋ ಲೀಕ್ ಮಾಡುತ್ತೇವೆ, ಜೊತೆಗೆ ಸಾಯಿಸುತ್ತೇವೆ ಅಂತ ಜೀವ ಬೆದರಿಕೆ ಹಾಕಿದ್ದಾನೆ. ಯಾವಾಗಾ ಬಾಲಕಿಗೆ ಮತ್ತೆ ಮತ್ತೆ ಕರೆ ಬರಲು ಆರಂಭಿಸಿತು ಅಗ ಭಯಗೊಂಡ ಬಾಲಕಿ ಪೋಷಕರಿಗೆ ವಿಚಾರ ತಿಳಿಸಿದ್ದಾಳೆ.
ಆಗ, ಪೋಷಕರು ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಆರು ಮಂದಿಯ ವಿರುದ್ಧ ದೂರು ನೀಡಿದ್ದಾರೆ. ತಕ್ಷಣ ಅಲರ್ಟ್ ಆದ ಎಪಿಎಂಸಿ ಠಾಣೆ ಪೊಲೀಸರು ಕೂಡಲೇ ಇಬ್ಬರು ಬಾಲ ಆರೋಪಿಗಳು ಸೇರಿದಂತೆ ಐದು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಮೂರು ಜನ ಆರೋಪಿಗಳಾದ ಶ್ಯಾಮ್ ನಾಯಕ್, ಅಭಿಷೇಕ್, ರಾಜು ಕಲ್ಕಿಯನ್ನು ಪೊಲೀಸರು ಫೋಕ್ಸೊ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಆರೋಪಿಗಳನ್ನು 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿದ್ದು, ಮೂರು ಜನ ಹಿಂಡಲಗಾ ಜೈಲು ಸೇರಿದ್ದಾರೆ. ಇಬ್ಬರು ಬಾಲಾ ಆರೋಪಿಗಳನ್ನು ಬಾಲ ಭವನಕ್ಕೆ ಕಳುಹಿಸಲಾಗಿದೆ. ಆರೋಪಿಗಳ ಪೋನ್ ಅನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಆರೋಪಿಗಳ ಮೊಬೈಲ್ಗಳನ್ನು ಎಫ್ಎಸ್ಎಲ್ಗೆ ರವಾನೆ ಮಾಡಿದ್ದಾರೆ.
ಇದನ್ನೂ ಓದಿ: ರಾ.ಹೆ 4ರಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ಹರಿದ ಟ್ಯಾಂಕರ್, 3 ಸಾವು
ಸದ್ಯ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ಇದರಲ್ಲಿ ನಾಪತ್ತೆಯಾಗಿರುವ ಮತ್ತೋರ್ವ ಆರೋಪಿಗೆ ಶೋಧ ಕಾರ್ಯ ನಡೆಸುತ್ತಿದ್ದಾರೆ. ಇತ್ತ ಬಾಲಕಿಗೆ ಕೌನ್ಸಿಲ್ ಕೂಡ ಮಾಡಲು ಮುಂದಾಗಿದ್ದು ಆಕೆಗೆ ಪೊಲೀಸರು ಧೈರ್ಯ ತುಂಬುವ ಕೆಲಸ ಕೂಡ ಆಗುತ್ತಿದೆ.
Published On - 9:24 pm, Mon, 2 June 25