ಬೆಳಗಾವಿ: ಇಲ್ಲಿನ ಶಿವಸಾಗರ ಸಕ್ಕರೆ ಕಾರ್ಖಾನೆ ಆರಂಭಿಸದಂತೆ ರೈತರು, ಕಾರ್ಖಾನೆ ಮಾಜಿ ನಿರ್ದೇಶಕರಿಂದ ಪ್ರತಿಭಟನೆ ನಡೆಸಲಾಗಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಉದುಪಡಿಯಲ್ಲಿರುವ ಶಿವಸಾಗರ ಸಕ್ಕರೆ ಕಾರ್ಖಾನೆಯನ್ನು ಆರಂಭಿಸದಂತೆ ಪ್ರತಿಭಟನೆ ನಡೆಸಲಾಗಿದೆ. 21 ಕೋಟಿ ರೂ. ರೈತರ ಕಬ್ಬಿನ ಬಾಕಿ ಬಿಲ್ ನೀಡಬೇಕು. ಷೇರುದಾರರಿಗೆ ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಲಾಗಿದೆ. ಬೇಡಿಕೆ ಈಡೇರಿಸುವವರೆಗೆ ಕಾರ್ಖಾನೆ ಆರಂಭಿಸಬಾರದು ಎಂದು ಪ್ರತಿಭಟನೆ ವ್ಯಕ್ತವಾಗಿದೆ.
ಪ್ರತಿಭಟನೆ ಹಿನ್ನೆಲೆ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಕಾರ್ಖಾನೆ ಅವ್ಯವಹಾರದ ಬಗ್ಗೆ ಸಿಐಡಿಯಿಂದ ತನಿಖೆ ನಡೆಸಬೇಕು. ರೈತರ ಬಾಕಿ ಬಿಲ್ ಕೊಡುವುದಾಗಿ ಭರವಸೆ ನೀಡಲಾಗಿತ್ತು. ಬಾಕಿ ಹಣ ನೀಡಿ ಕಾರ್ಖಾನೆ ಆರಂಭಿಸಲು ಪ್ಲ್ಯಾನ್ ಮಾಡಲಾಗಿತ್ತು. ಆದರೆ, ಬಾಕಿ ಬಿಲ್ ನೀಡಲು ಸ್ಥಳೀಯ ಶಾಸಕರ ವಿರೋಧ ಎಂಬ ಆರೋಪ ಕೇಳಿಬಂದಿದೆ. ಶಾಸಕ ಮಹಾದೇವಪ್ಪ ಯಾದವಾಡ ಇದನ್ನು ವಿರೋಧಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವೈಯಕ್ತಿಕ ಲಾಭಕ್ಕಾಗಿ ಕಾರ್ಖಾನೆ ಆರಂಭಕ್ಕೆ ವಿರೋಧ ವ್ಯಕ್ತವಾಗಿದೆ. ಶಿವಸಾಗರ ಸಕ್ಕರೆ ಕಾರ್ಖಾನೆಗೆ ಆರಂಭಕ್ಕೆ ವಿರೋಧ ಕೇಳಿಬಂದಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದ್ದಾರೆ. ರಾಮದುರ್ಗದಲ್ಲಿ ಶಾಸಕರ ಒಡೆತನದ ಸಕ್ಕರೆ ಕಾರ್ಖಾನೆ ಇದೆ. ಶಾಸಕರಿಗೆ ಧನಲಕ್ಷ್ಮೀ ಸಕ್ಕರೆ ಕಾರ್ಖಾನೆ ಇರುವುದರಿಂದ, ಶಿವಸಾಗರ ಕಾರ್ಖಾನೆ ಆರಂಭಿಸಿದರೆ ತಮಗೆ ಲಾಸ್ ಆಗುತ್ತದೆ. ತಮಗೆ ಲಾಸ್ ಆಗುತ್ತೆ ಅನ್ನೋ ಕಾರಣಕ್ಕೆ ವಿರೋಧ ವ್ಯಕ್ತವಾಗಿದೆಯಾ ಎಂಬ ಪ್ರಶ್ನೆ ಕೇಳಿಬಂದಿದೆ.
ಮಂಡ್ಯ: ನಿವೇಶನ ನೀಡುವಂತೆ ಡಿಸಿ ಕಚೇರಿ ಬಳಿ ಪ್ರತಿಭಟನೆ
ನಿವೇಶನ ನೀಡುವಂತೆ ಡಿಸಿ ಕಚೇರಿ ಬಳಿ ಬೂದನೂರು ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಮಂಡ್ಯ ಡಿಸಿ ಕಚೇರಿ ಬಳಿ ಗ್ರಾಮಸ್ಥರು ಧರಣಿ ನಡೆಸಿದ್ದಾರೆ. ಆಶ್ರಯ ಯೋಜನೆ ಭೂಮಿ ಬಗ್ಗೆ ತಪ್ಪು ಮಾಹಿತಿ ನೀಡಿದೆ. ತಾಲೂಕು ಆಡಳಿತ ತಪ್ಪು ಮಾಹಿತಿ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. 8 ವರ್ಷಗಳಿಂದ ಧರಣಿ ಮಾಡುತ್ತ ಬಂದ್ರೂ ನಿವೇಶನ ನೀಡಿಲ್ಲ. 130 ನಿವೇಶನರಹಿತರಿಗೆ ವಂಚನೆಯಾಗಿದೆ ಎಂದು ಆರೋಪ ಕೇಳಿಬಂದಿದೆ. ತಕ್ಷಣವೇ ನಿವೇಶನ ನೀಡುವಂತೆ ಗ್ರಾಮಸ್ಥರಿಂದ ಒತ್ತಾಯ ಮಾಡಲಾಗಿದೆ.
ಇದನ್ನೂ ಓದಿ: ಕಬ್ಬಿನ ಬಾಕಿ ಬಿಲ್ ನೀಡಲು ಒತ್ತಾಯಿಸಿ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ
ಇದನ್ನೂ ಓದಿ: ಎಕ್ಸ್ಪ್ರೆಷನ್ ಆಫ್ ಇಂಟರೆಸ್ಟ್ ಮೇರೆಗೆ ಸಕ್ಕರೆ ಕಾರ್ಖಾನೆ ಮಾರಾಟಕ್ಕೆ ತೀರ್ಮಾನ: ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್