ಕಬ್ಬಿನ ಬಾಕಿ ಬಿಲ್ ನೀಡಲು ಒತ್ತಾಯಿಸಿ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ರೈತರ ಮುತ್ತಿಗೆ
2017-18ರಲ್ಲಿ ಕಳುಹಿಸಿದ್ದ ಕಬ್ಬಿನ ಬಾಕಿ ಬಿಲ್ಗೆ ರೈತರು ಆಗ್ರಹಿಸಿದ್ದಾರೆ. 1,400 ರೈತರ 7 ಕೋಟಿ ಬಿಲ್ ಬಾಕಿ ಹಿನ್ನೆಲೆ ಮುತ್ತಿಗೆ ಹಾಕಿದ್ದಾರೆ. 3 ವರ್ಷವಾದರೂ ಬಾಕಿ ನೀಡದ ಹಿನ್ನೆಲೆ 3 ದಿನದಿಂದ ರೈತರು ಧರಣಿ ನಡೆಸುತ್ತಿದ್ದಾರೆ.
ಬೆಳಗಾವಿ: ಕಬ್ಬಿನ ಬಾಕಿ ಬಿಲ್ ನೀಡುವಂತೆ ಒತ್ತಾಯಿಸಿ ಮಲಪ್ರಭಾ ಸಕ್ಕರೆ ಕಾರ್ಖಾನೆಗೆ ರೈತರು ಮುತ್ತಿಗೆ ಹಾಕಿದ್ದಾರೆ. ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂ.ಕೆ. ಹುಬ್ಬಳ್ಳಿಯಲ್ಲಿರುವ ಮಲಪ್ರಭಾ ಸಕ್ಕರೆ ಕಾರ್ಖಾನೆಯ ವ್ಯವಸ್ಥಾಪಕ ನಿರ್ದೇಶಕ ವಿಶ್ವನಾಥ ಅವರಿಗೆ ತರಾಟೆ ತೆಗೆದುಕೊಂಡಿದ್ದಾರೆ. ವಿಶ್ವನಾಥ ಹಿರೇಮಠ ಅವರನ್ನು ರೈತರು ಹಿಡಿದು ಎಳೆದಾಡಿದ್ದಾರೆ. ಸಕ್ಕರೆ ಅಡವಿಟ್ಟಿರುವ ಬಗ್ಗೆ ದಾಖಲೆ ನೀಡುವಂತೆ ಒತ್ತಾಯ ಮಾಡಿದ್ದಾರೆ.
2017-18ರಲ್ಲಿ ಕಳುಹಿಸಿದ್ದ ಕಬ್ಬಿನ ಬಾಕಿ ಬಿಲ್ಗೆ ರೈತರು ಆಗ್ರಹಿಸಿದ್ದಾರೆ. 1,400 ರೈತರ 7 ಕೋಟಿ ಬಿಲ್ ಬಾಕಿ ಹಿನ್ನೆಲೆ ಮುತ್ತಿಗೆ ಹಾಕಿದ್ದಾರೆ. 3 ವರ್ಷವಾದರೂ ಬಾಕಿ ನೀಡದ ಹಿನ್ನೆಲೆ 3 ದಿನದಿಂದ ರೈತರು ಧರಣಿ ನಡೆಸುತ್ತಿದ್ದಾರೆ. ಕಬ್ಬಿನ ಬಾಕಿ ಬಿಲ್ ನೀಡುವಂತೆ ಮಲಪ್ರಭಾ ಸಕ್ಕರೆ ಕಾರ್ಖಾನೆ ಮುಂದೆ ರೈತರ ಧರಣಿ ವಿಚಾರಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಇಂದು ರಾತ್ರಿ ರೈತ ಮುಖಂಡ ಸಿದಗೌಡ ಮೋದಗಿ ನೇತೃತ್ವದಲ್ಲಿ ಕಾರ್ಖಾನೆಗೆ ಮುತ್ತಿಗೆ ಹಾಕಿದ್ದಾರೆ. ಕಾರ್ಖಾನೆ ಎಂ.ಡಿ. ವಿಶ್ವನಾಥ ಹಿರೇಮಠರನ್ನು ಹಿಡಿದು ರೈತ ಮುಖಂಡ ಸಿದಗೌಡ ಮೋದಗಿ ಎಳೆದಾಡಿದ್ದಾರೆ. ಬ್ಯಾಂಕ್ನಲ್ಲಿ ಸಕ್ಕರೆ ಅಡವಿಟ್ಟಿರುವ ಬಗ್ಗೆ ದಾಖಲೆ ನೀಡುವಂತೆ ಎಂ.ಡಿಗೆ ರೈತರು ಒತ್ತಾಯ ಮಾಡಿದ್ದಾರೆ.
ಇದನ್ನೂ ಓದಿ: ಬಾಕಿ ದರ ನಿಗದಿ ಮಾಡದ ಸಕ್ಕರೆ ಕಾರ್ಖಾನೆ: ಆವರಣದಿಂದ ಕಬ್ಬಿನ ಟ್ರ್ಯಾಕ್ಟರ್ ಹೊರತರಲು ರೈತರ ಪ್ರಯತ್ನ