AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೋಕಾಕ: ಸರ್ವೆಗೆ ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ

ಒತ್ತುವರಿ ಭೂಮಿ ಸರ್ವೇಗೆ ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಗೋಕಾಕ ತಾಲೂಕಿನ ಏಳಪಟ್ಟಿ ಗ್ರಾಮಸ್ಥರು ಕಲ್ಲು ತೂರಾಟ ಮಾಡಿದ್ದು, ಅರಣ್ಯ, ಪೊಲೀಸ್ ಇಲಾಖೆ ವಾಹನಗಳು ಸೇರಿದಂತೆ ಖಾಸಗಿ ವಾಹನಗಳು ಜಖಂಗೊಂಡಿವೆ.

ಗೋಕಾಕ: ಸರ್ವೆಗೆ ಹೋಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ
ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಕಲ್ಲು ತೂರಾಟ
Follow us
Sahadev Mane
| Updated By: ವಿವೇಕ ಬಿರಾದಾರ

Updated on:Oct 09, 2023 | 8:52 AM

ಬೆಳಗಾವಿ ಅ.09: ಗೋಕಾಕ (Gokak) ತಾಲೂಕಿನ ಏಳಪಟ್ಟಿ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿರುವ ಅರಣ್ಯ ಭೂಮಿಯನ್ನು ಸರ್ವೆ ಮಾಡಲು ಹೋದವರ ಮೇಲೆ ಗ್ರಾಮಸ್ಥರು ಕಲ್ಲು ತೂರಾಟ (Stone Pelting) ಮಾಡಿದ್ದಾರೆ. ಗೋಕಾಕ​​ನ​ ಆರ್​ಎಫ್​ಒ ಸೇರಿ ಐವರು ಅರಣ್ಯ ಇಲಾಖೆ (Forest Department) ಸಿಬ್ಬಂದಿಗೆ ಗಾಯಗಳಾಗಿವೆ. ಕಲ್ಲು ತೂರಾಟದಿಂದ ಅರಣ್ಯ ಸಿಬ್ಬಂದಿ ವಾಹನ, ಪೊಲೀಸ್ ವಾಹನ, ಎರಡು ಖಾಸಗಿ ವಾಹನಗಳು ಸೇರಿದಂತೆ 10ಕ್ಕೂ ಹೆಚ್ಚು ಬೈಕ್​ಗಳು ಜಖಂಗೊಂಡಿವೆ.

ಖನಗಾಂವ್​​ ಕಾಯ್ದಿಟ್ಟ ಅರಣ್ಯ ಪ್ರದೇಶ ಸರ್ವೆ ಮಬರ್ 477, 718/ಎ ಮತ್ತು 580ಎ ನ 500 ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿ ಮಾಡಿದ ಜಮೀನನ್ನು ಸರ್ವೆ ಮಾಡಲು ಹೋಗಿದ್ದರು. ಈ ವೇಳೆ ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ತಾರಕಕ್ಕೇರಿದ್ದು, ಗ್ರಾಮಸ್ಥರು ಏಕಾಏಕಿ ಕಲ್ಲು ತೂರಾಟ ಮಾಡಿದ್ದಾರೆ. ಹೀಗಾಗಿ ಗೋಕಾಕ್ ಪೊಲೀಸ್​​​ ಠಾಣೆಯಲ್ಲಿ 30ಕ್ಕೂ ಹೆಚ್ಚು ಜನರ ಮೇಲೆ ಎಫ್​ಐಆರ್ ದಾಖಲಾಗಿದೆ.

ಖಾನಾಪುರದಲ್ಲಿ ಕರಡಿ ದಾಳಿಗೆ ರೈತ ಸಾವು

ಖಾನಾಪುರ ತಾಲೂಕಿನ ಘೋಶೆ ಬುದ್ರುಕ ಗ್ರಾಮದಲ್ಲಿ ಕರಡಿ ದಾಳಿಗೆ ರೈತ ಸಾವಿಗೀಡಾಗಿದ್ದಾನೆ. ಭೀಕಾಜಿ ಮಿರಾಶಿ (63) ಮೃತ ರೈತ. ಶವ ಎರಡು ಕಿಲೋ ಮೀಟರ್ ದೂರದ ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ರೈತ ಭೀಕಾಜಿ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಕರಡಿ ದಾಳಿ ಮಾಡಿದೆ. ಬಳಿಕ ಶವ ಎಳೆದೊಯ್ದಿದೆ. ಖಾನಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:17 am, Mon, 9 October 23