ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವೃದ್ಧೆಯನ್ನು ಕಚೇರಿಗೆ ಕರೆಸಿಕೊಂಡ ಸಿಬ್ಬಂದಿ: ಬೆಳಗಾವಿ ಸಬ್​ ರಿಜಿಸ್ಟ್ರಾರ್ ಸಿಬ್ಬಂದಿ ನಡೆಗೆ ತೀವ್ರ ಆಕ್ರೋಶ

| Updated By: ಗಂಗಾಧರ​ ಬ. ಸಾಬೋಜಿ

Updated on: Oct 01, 2022 | 1:21 PM

ಆಸ್ಪತ್ರೆಗೆ ಬಂದು ವೃದ್ಧೆ ಸಹಿ ಪಡೆಯಲು ಹಣಕ್ಕೆ ಬೇಡಿಕೆ ಆರೋಪ ಮಾಡಿದ್ದು, ಹಣ ನೀಡಲು ಒಪ್ಪದೇ ವೃದ್ಧೆಯನ್ನು ಕುಟುಂಬಸ್ಥರು ಕಚೇರಿಗೆ ಕರೆತಂದಿದ್ದಾರೆ.

ಸಾವು-ಬದುಕಿನ ನಡುವೆ ಹೋರಾಡುತ್ತಿರುವ ವೃದ್ಧೆಯನ್ನು ಕಚೇರಿಗೆ ಕರೆಸಿಕೊಂಡ ಸಿಬ್ಬಂದಿ: ಬೆಳಗಾವಿ ಸಬ್​ ರಿಜಿಸ್ಟ್ರಾರ್ ಸಿಬ್ಬಂದಿ ನಡೆಗೆ ತೀವ್ರ ಆಕ್ರೋಶ
ಸಹಿಹಾಕಲು ಸಬ್​ ರಿಜಿಸ್ಟ್ರಾರ್ ಕಚೇರಿಗೆ ವೃದ್ಧೆ ಕರೆಸಿಕೊಂಡ ಸಿಬ್ಬಂದಿ
Follow us on

ಬೆಳಗಾವಿ: ಸಾವು ಬದುಕಿನ ಮಧ್ಯೆ ಹೋರಾಡುತ್ತಿರುವ ವೃದ್ಧೆಯನ್ನು ಆಸ್ಪತ್ರೆ ಐಸಿಯುನಿಂದ ಸಹಿ ಮಾಡಲು ಸಬ್​ ರಿಜಿಸ್ಟ್ರಾರ್ ಕಚೇರಿಗೆ ಸಿಬ್ಬಂದಿ ಕರೆಸಿಕೊಂಡಂತಹ ಅಮಾನವೀಯತೆ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ. ಐಸಿಯುನಿಂದ ಸ್ಟ್ರೆಚರ್​ನಲ್ಲೇ ವೃದ್ಧೆ ಮಹಾದೇವಿ (80) ಕುಟುಂಬಸ್ಥರು ಕರೆತಂದಿದ್ದಾರೆ. ಆಸ್ತಿಹಂಚಿಕೆ, ಆಸ್ತಿಹಕ್ಕು ಪತ್ರಕ್ಕೆ ಸಹಿ ಹಾಕುವ ವಿಚಾರಕ್ಕೆ ನೋಂದಣಿ ಮಾಡಲು ಕರೆತರಲಾಗಿದೆ. ವೃದ್ಧೆ ಐಸಿಯುನಲ್ಲಿದ್ದ ಕಾರಣ ಆಸ್ಪತ್ರೆಗೆ ಬರಲು ಉಪನೋಂದಣಾಧಿಕಾರಿ ಪದ್ಮನಾಭ್ ಗುಡಿ ಅವರಿಗೆ ಮನವಿ ಮಾಡಲಾಗಿದೆ. ಆದರೆ ಮನವಿ ನಿರಾಕರಿಸಿದ್ದಾರೆ. ಆಸ್ಪತ್ರೆಗೆ ಬಂದು ವೃದ್ಧೆ ಸಹಿ ಪಡೆಯಲು ಹಣಕ್ಕೆ ಬೇಡಿಕೆ ಆರೋಪ ಮಾಡಿದ್ದು, ಹಣ ನೀಡಲು ಒಪ್ಪದೇ ವೃದ್ಧೆಯನ್ನು ಕುಟುಂಬಸ್ಥರು ಕಚೇರಿಗೆ ಕರೆತಂದಿದ್ದಾರೆ. ಆಸ್ಪತ್ರೆಯ ಬೆಡ್ ಮೇಲೆ ಕಚೇರಿಗೆ ಬಂದು ಅಜ್ಜಿ ಸಹಿ ಮಾಡುವ ವಿಡಿಯೋ ವೈರಲ್ ಆಗಿದೆ. ಸದ್ಯ ಸಾರ್ವಜನಿಕ ವಲಯದಲ್ಲಿ ಉಪನೋಂದಣಾಧಿಕಾರಿ ಕಚೇರಿ ಸಿಬ್ಬಂದಿ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನೂ ಘಟನೆ ಬಗ್ಗೆ ಪ್ರತಿಕ್ರಿಯೆಗೆ ಅಜ್ಜಿಯ ಕುಟುಂಬಸ್ಥರು ನಕಾರ ಎಂದರು.

ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಟ

ಗದಗ: ಗದಗ-ಬೆಟಗೇರಿ ಅವಳಿ ನಗರದಲ್ಲಿ ಕುಡಿಯುವ ನೀರಿಗಾಗಿ ಜನರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಗದಗ ಮುಂಡರಗಿ ರಸ್ತೆಯಲ್ಲಿ ಅವಳಿ ನಗರಕ್ಕೆ ಪೂರೈಕೆಯ 24*7 ನೀರಿನ ಪೈಪ್ ಒಡೆದು ಭಾರಿ ಪೋಲಾಗುತ್ತಿದೆ. ಒಂದು ತಿಂಗಳಿಂದ ಕುಡಿಯುವ ನೀರು ಪೂರೈಕೆ ಇಲ್ಲದೇ ಜನರು ಗೋಳಾಡುತ್ತಿದ್ದು, ನಗರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತ್ತಿದ್ದಾರೆ. ಗದಗ ಬೆಟಗೇರಿ ಅವಳಿ ನಗರದ ಜನರಿಗೆ ದಿನ ನಿತ್ಯ ನೀರಿಗೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಜಿಲ್ಲಾಡಳಿತ ನಿರ್ಲಕ್ಷ್ಯ ವಿರುದ್ಧ ಅವಳಿ ನಗರದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಸೂಲಿಗೆ ಬಂದಿದ್ದ ನಕಲಿ ಪತ್ರಕರ್ತನಿಗೆ ಮಹಿಳೆಯಿಂದ ಧರ್ಮದೇಟು 

ತುಮಕೂರು: ಪತ್ರಕರ್ತನ ಹೆಸರೇಳಿಕೊಂಡು ವಸೂಲಿಗೆ ಬಂದವನಿಗೆ ಮಹಿಳೆಯರು ಚಪ್ಪಲಿ ಏಟು ನೀಡಿರುವಂತಹ ಘಟನೆ ತುಮಕೂರಿನಲ್ಲಿ ನಡೆದಿದೆ. ನಗರ ಜೀವನೋಪಾಯ ಕೇಂದ್ರದಲ್ಲಿ ಸಿಆರ್​ಪಿ ಆಗಿ ಮಹಿಳೆ ಕೆಲಸ ಮಾಡುತ್ತಿದ್ದಳು. ಮಹಿಳೆ ಜೊತೆ ಮಾತನಾಡುತ್ತ ಲಂಚದಾಸೆ ತೋರಿಸಿ ನಕಲಿ ಪತ್ರಕರ್ತ ವಿಡಿಯೋ ಮಾಡಿಕೊಂಡಿದ್ದ. ಬಳಿಕ ವಿಡಿಯೋ ತೋರಿಸಿ ವಸೂಲಿಗೆ ಇಳಿದಿದ್ದ. ಮಹಿಳೆಗೆ ವಿಡಿಯೋ ಕಳಿಸಿ 4 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಹಣ ಕೊಡದಿದ್ದಕ್ಕೆ ನನ್ನ ಜೊತೆ ಒಂದು ರಾತ್ರಿ ಕಳಿಯಬೇಕು ಎಂದು ಮೆಸೇಜ್ ಮಾಡಿದ್ದನಂತೆ. ಮಹಿಳೆ ಕೆಲಸ ಮಾಡುವ ಜಾಗಕ್ಕೆ ಬಂದು ಬೆದರಿಕೆ ಹಾಕುತ್ತಿದ್ದಾಗ ಧರ್ಮದೇಟು ನೀಡಲಾಗಿದೆ. ಸದ್ಯ ನಾಲ್ವರಿಗೆ ಭರ್ಜರಿ ಗೂಸಾ ಬಿದಿದ್ದು, ನಾಲ್ವರನ್ನು ತುಮಕೂರು ನಗರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ದಾಖಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:10 pm, Sat, 1 October 22